ದಿ ಬ್ಯಾಟ್‌ಮ್ಯಾನ್ :ಬೌಂಡರಿಗಳ ಹಿಂದೊಬ್ಬ ಬ್ಯಾಟ್ ಡಾಕ್ಟರ್
Team Udayavani, Jul 6, 2019, 9:37 AM IST
ಟೀಂ ಇಂಡಿಯಾದ ಪ್ರತಿ ಆಟಗಾರನ ಬ್ಯಾಟ್‌ನ ಗುಟ್ಟನ್ನೂ ಚೆನ್ನಾಗಿ ಬಲ್ಲ ವರು, ಬೆಂಗಳೂರಿನ ರಾಮ್ ಭಂಡಾರಿ. ಕೊಹ್ಲಿ, ರೋಹಿತ್, ಧೋನಿ, ರಾಹುಲ್, ಎಬಿಡಿ, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್‌ರಂಥ ತಾರಾ ಆಟ ಗಾರರೆಲ್ಲ ಇವರ ಬಳಿಯೇ ತಮ್ಮ ಬ್ಯಾಟ್‌ಗೆ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ರೆ. ವಿಶ್ವಕಪ್‌ನ ಹಿನ್ನೆಲೆಯಲ್ಲಿ ಆ ಬ್ಯಾಟ್ ಲೋಕದ ಸುತ್ತ ಮುತ್ತ ಒಂದು ಬರಹ…
ಕಿರು ಬೆರಳಿನ ಗಾತ್ರದಲ್ಲಿದ್ದ ಒಂದು ಮರದ ಚೂರನ್ನು, ಭದ್ರವಾಗಿ ಎತ್ತಿ ಟ್ಟಿ ದ್ದರು ರಾಮ್ ಭಂಡಾರಿ. ಅವರ ಬ್ಯಾಟ್ ಕ್ಲಿನಿಕ್ಕಿನ ಪುಟ್ಟ ಕೋಣೆ ಯಲ್ಲಿ ನೂರಾರು ಬ್ಯಾಟುಗಳಿದ್ದವು. ಸಣ್ಣ ಪುಟ್ಟ ಮರದ ಚೂರು ಗಳು ಅಲ್ಲಿ, ಇಲ್ಲಿ ಬಿದ್ದಿದ್ದವು. ಹಾಗಿದ್ದೂ, ಈ ತುಣು ಕಿ ಗೇಕೆ ಅಷ್ಟು ರಾಜಮರ್ಯಾದೆ? ಅಂತನ್ನಿಸಿ, “ಅದ್ಯಾಕೆ ಹಾಗೆ ಕೊಹಿ ನೂರು ವಜ್ರ ದಂತೆ ಜೋಪಾನ ಮಾಡಿದ್ದೀರಿ?’- ಕೇಳಿ ದೆ. “ನನ್ನ ಮಟ್ಟಿಗೆ ಇದೂ ವಜ್ರವೇ. ಆದ ರಿದು ಭಾರ ತ ದಿಂದ ಹೋದ ದ್ದಲ್ಲ, ಇಂಗ್ಲೆಂಡಿ ನಿಂದ ಬಂದ ದ್ದು’ ಅಂತ ನಕ್ಕರು. “ಇವತ್ತು ಎಲ್ಲ ಜಾಗತಿಕ ಕ್ರಿಕೆಟಿಗರ ಕೈಯಲ್ಲಿನ ಬ್ಯಾಟು ನೋಡಿ, ಅವೆಲ್ಲವೂ ಈ ಇಂಗ್ಲಿಷ್ ವಿಲ್ಲೋ ಮರದ ಕೂಸುಗಳೇ’ ಅಂತಂದ ಕ್ಷಣದಲ್ಲೇ, ಅವರ ನೆನಪಿನ ಕ್ರೀಸಿನಲ್ಲಿ ತೆಂಡೂಲ್ಕರ್‌ನ ಚಿತ್ರ ಕ್ವಿಕ್ ಸಿಂಗಲ್ಸ್ ತೆಗೆದಿತ್ತು.
ಅಂದ್ಯಾವತ್ತೋ ರಭ ಸದ ಚೆಂಡಿಗೆ, ಬ್ಯಾಟಿನ ಚೂರು ಸಿಡಿದು, ಕ್ರೀಸಿನ ಮಧ್ಯೆ ಬಿದ್ದಿತ್ತು. ತೆಂಡೂಲ್ಕರ್ ಅದನ್ನು ಜೇಬಿನಲ್ಲಿ ಟ್ಟು ಕೊಂಡು, ಬ್ಯಾಟ್ ರಿಪೇರಿಗನ ಬಳಿ ತಂದಿದ್ದರಂತೆ! ಇಂಗ್ಲಿಷ್ ವಿಲ್ಲೋ ಮರ ಅಷ್ಟರ ಮಟ್ಟಿ ಗೆ ಕ್ರಿಕೆಟಿಗರ ಪಾಲಿನ ಕಲ್ಪವೃಕ್ಷ. ಪ್ರತಿ ಆಟಗಾರನೂ ಅದರ ಆರಾ ಧ ಕ. ಆ ಮರದ ಒಂದು ತುಣುಕೂ ವ್ಯರ್ಥ ವಾಗದಂತೆ, ಬ್ಯಾಟ್ ಸಿದ್ಧಪಡಿ ಸುವ, ರಿಪೇರಿ ಮಾಡುವ ಚಾಣಾಕ್ಷರೂ ಜಗತ್ತಿನಲ್ಲಿ ಬೆರಳೆಣಿಕೆ. ಅವರಲ್ಲಿ ಬೆಂಗ ಳೂರಿನ ರಾಮ್ ಭಂಡಾರಿಯೂ ಒಬ್ಬರು. ಈ ಜಕ್ಕಣ, ರಿಪೇರಿ ಮಾಡಿದ ಬ್ಯಾಟ್‌ನಿಂದಲೇ ಅಂದು ಸಚಿ ನ್, ಕಳಪೆ ಫಾರ್ಮ್ ನಿಂದ ಎದ್ದು ಬಂದಿದ್ದರೆನ್ನುವುದು, ಇವರ ವೃತ್ತಿ ಬದುಕಿನ ಅಚ್ಚಳಿಯದ ಒಂದು ರೆಕಾರ್ಡು. ಇಂದು ರೋಹಿತ್, ಥೇಮ್ಸ್ ನದಿಯ ತೀರದಲ್ಲಿ ನಿಂತು ಕ್ರಿಕೆ ಟ್‌ನ ಜೇಮ್ಸ್ ಬಾಂಡ್ ನಂತೆ ಪರಾ ಕ್ರಮ ಮೆರೆ ಯು ತ್ತಿ ದ್ದರೆ, ಕೊಹ್ಲಿ ಚುರು ಕ್ಕೆನ್ನುವ ಸ್ಟ್ರೋಕ್ ಬಾರಿ ಸಿ, ರನ್ ಕೊಳ್ಳೆ ಹೊಡೆ ಯು ತ್ತಿ ದ್ದರೆ, ಧೋನಿ ಹೆಲಿ ಕಾ ಪ್ಟರ್ ಶಾಟ್ ಸಿಡಿಸಿ, “ಒಮ್ಮೆ ಆಕಾಶ ನೋಡ್ರ ಪ್ಪಾ’ ಅಂತ ಸಿಕ್ಸರ್ ಅಟ್ಟುತ್ತಿದ್ದರೆ, ಆ ಬಿರುಬೀಸಿನ ಆಟದ ಹಿಂದೆ, ಭಂಡಾ ರಿಯವರ ಕುಸುರಿ ಕೆಲಸವೂ ಇದೆ ಎನ್ನುವುದನ್ನು ಒಪ್ಪಲೇಬೇ ಕು.
ಅವರು ಬ್ಯಾಟ್ ಡಾಕ್ಟರ್…
ಬಿಹಾ ರ ಮೂಲದ ಭಂಡಾರಿ ಅವರು ಬೆಂಗಳೂರಿಗೆ ಬಂದಿದ್ದು, ಹೊಟ್ಟೆಪಾಡಿಗಾಗಿ. ಅಲ್ಲಿ ತಾತಾ ಕಾರ್ಪೆಂಟರ್ ಕೆಲಸ ಮಾಡುತ್ತಿ ದ್ದರಂತೆ. ಅದರ ಸಣ್ಣ ಪುಟ್ಟ ಕೆಲಸ ಗೊತ್ತಿದ್ದ ಭಂಡಾರಿ, ಕ್ರಿಕೆಟನ್ನೂ ಬಲ್ಲವರಾಗಿದ್ದರಿಂದ, ಬೆಂಗಳೂರಿನಲ್ಲಿ ಬ್ಯಾಟ್ ರಿಪೇರಿ ಆರಂಭಿಸಿದರು. ಇವರು ರಿಪೇರಿ ಮಾಡಿ ಕೊಟ್ಟ, ಬ್ಯಾಟ್‌ನಿಂದಲೇ ತೆಂಡೂಲ್ಕರ್ ಮರಳಿ ಫಾರ್ಮ್ ಪಡೆದು, 14 ಶತಕ ಬಾರಿಸಿದರೆನ್ನುವುದು, ಇತಿ ಹಾ ಸ ವೇ ಆದರೂ, ಇಂದು ಆ ಜನಪ್ರಿಯತೆಯೇ ಇವರನ್ನು ಜಗತ್ತಿನ ಶ್ರೇಷ್ಠ ಬ್ಯಾಟ್ ಚಿಕಿತ್ಸಕರ ಸಾಲಿನಲ್ಲಿ ನಿಲ್ಲಿ ಸಿದೆ. ಕೊಹ್ಲಿ, ರೋಹಿತ್, ಧೋನಿ, ರಾಹು ಲ್, ಎಬಿಡಿ, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್‌ರಂಥ ತಾರಾ ಆಟಗಾರರೆಲ್ಲ ಇವರ ಬಳಿಯೇ ತಮ್ಮ ಬ್ಯಾಟ್‌ಗೆ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ.
ಬ್ಯಾಟಿನ ತೂಕವೂ, ಅದರ ರಹಸ್ಯವೂ…
“ಟೀಂ ಇಂಡಿ ಯಾ ದಲ್ಲಿ ಧೋನಿಯ ಬ್ಯಾಟ್ ಹೆಚ್ಚು ತೂಕ ದ್ದು, ಅಂದರೆ 1260 ಗ್ರಾಮ್’ ಅಂತಾರೆ, ಭಂಡಾರಿ. ತೂಕ ಇದ್ರೇನೇ, ಬೌಂಡರಿ ಲೈನಿನ ಫೀಲ್ಡ ರ್‌ನ ತಲೆ ಮೇಲೆ ಹೊಡೆ ಯಲು ಸಾಧ್ಯ ಅಂತ ಇವರ ಬಳಿ ಧೋನಿ ರಹಸ್ಯ ತೆರೆದಿಟ್ಟಿದ್ದರಂತೆ. ರೋಹಿತ್ ಬಳ ಸುವ ಬ್ಯಾಟು ಕೂಡ 1200 ಗ್ರಾಮ್ ಮೀರಿದ್ದು. ವೃತ್ತಾಕಾರದ ಹ್ಯಾಂಡಲ್ ಅವರ ಭರ್ಜರಿ ಹೊಡೆ ತ ಗಳ ಹಿಂದಿನ ಗುಟ್ಟು. ವಿರಾಟ್ ಕೊಹ್ಲಿ ಬ್ಯಾಟ್‌ನ ತೂಕ 1150 ಗ್ರಾಮ್ ನಷ್ಟು. ಓವಲ್ ಹ್ಯಾಂಡಲ್ (ಅಂಡಾಕಾರ) ಇಷ್ಟಪಡುವ ಕೊಹ್ಲಿಗೆ, ಆ ಬ್ಯಾಟು ಕಂಪ್ಲೀಟ್ ಆಗಿ ಕೈಯನ್ನು ಲಾಕ್ ಮಾಡು ವಂತೆ ಇರ ಬೇ ಕಂತೆ. ಎಲ್ಲ ಆಟಗಾರರ, ಹ್ಯಾಂಡಲ್ ಮಾದರಿಯನ್ನೂ ಇಟ್ಟುಕೊಂಡಿರುವ ಭಂಡಾರಿ, ಸ್ಥಳೀಯ ಆಟಗಾರರಿಗೂ ಅದೇ ಮಾದರಿಯಲ್ಲೇ ಬ್ಯಾಟ್ ರೂಪಿಸುತ್ತಾರೆ.
ಇಂಗ್ಲೆಂಡ್ ವಿಲ್ಲೋ, ಭಾರತದಲ್ಲಿ ಎಲ್ಲೋ?
“ಇಂಗ್ಲೆಂಡಿನಲ್ಲಿ ಒಂದು ಇಂಗ್ಲಿಷ್ ವಿಲ್ಲೋ ಕಡಿದರೆ, 2 ಮರ ನೆಡ ಬೇ ಕೆನ್ನುವ ಹೊಸ ರೂಲ್ಸ್ ಇದೆ. ಒಂದೆರಡು ಶತಮಾನದ ಹಿಂದೆ, ಭಾರತ ದಲ್ಲಿ ಕ್ರಿಕೆಟ್ ಬೇರೂರುವಾಗ, ಕಾಶ್ಮೀರದಲ್ಲಿ ವಿಲ್ಲೋ ಮರಗಳನ್ನು ನೆಡ ಲಾಯಿತು. ಇವತ್ತಿಗೂ ಅಲ್ಲಿ ಮರಗಳಿಗೆ, ಬ್ಯಾಟ್ ಫ್ಯಾಕ್ಟರಿಗಳಿವೆ. ಆದರೆ, ಇಂಗ್ಲೆಂಡಿ ನಲ್ಲಿ ಹುಟ್ಟಿ ಬೆಳೆದ ಮರ ಸ್ವಲ್ಪ ಮೃದು. ಹ್ಯಾಂಡಲ್ ವೈಬ್ರೇ ಶನ್ನೂ ಜಾಸ್ತಿ ಆಗೋಲ್ಲ. ಆದರೆ, ಭಾರ ತದ ವಿಲ್ಲೋ ಬ್ಯಾಟು ಗಳ ಸದ್ದು ಹೆಚ್ಚು. ಶಾಟ್ ಹೊಡೆ ದಾಗ ಢಗ್ ಅಂತೆಳಿ ಸದ್ದು ಬರು ತ್ತೆ. ಕೈ ಭಾರದ ತೂಕ. ಇದಕ್ಕೆ ಕಾರ ಣವೂ ಉಂಟು. ಇಂಗ್ಲೆಂಡಿ ನಲ್ಲಿ 12 ತಿಂಗಳೂ ಒಂದೇ ರೀತಿಯ ವೆದರು. ಬ್ರೆಡ್ ನಿಂದ ಮನು ಷ್ಯರ ತನಕ ಎಲ್ಲರೂ ಅಲ್ಲಿ ಸಾಫ್ಟ್. ಆದರೆ, ನಮ್ಮಲ್ಲಿ 4 ವಿಭಿನ್ನ ಋತು ಗಳು. ಮರ ಗಳು ಬಹಳ ಗಟ್ಟಿ. ತೂಕ ಹೆಚ್ಚು. ಆ ಕಾರಣ ನಮ್ಮ ಕ್ರಿಕೆಟಿಗರು ಈ ಬ್ಯಾಟುಗಳನ್ನು ಬಳಸೋದಿಲ್ಲ’ ಅಂತ ಕಾರಣ ಬಿಚ್ಚಿಟ್ಟರು ಬ್ಯಾಟ್ ತಜ್ಞ.
“ಸ್ಟಾರ್ ಆಟಗಾರರಿಗೆ ಬರುವ ಕಂಪನಿಯ ವಿಲ್ಲೋ ಬ್ಯಾಟ್‌ಗಳಲ್ಲಿ ಎಲ್ಲವೂ ಸರಿ ಇರೋದಿಲ್ಲ. ಅದಕ್ಕಾಗಿ ನನಗೆ ಬ್ಯಾಲೆನ್ಸ್ ರೂಪಿಸಿಕೊಡಲು ಕೊಡುತ್ತಾರೆ’ ಎನ್ನುತ್ತಾ, ತಮ್ಮ ಚಿಕಿತ್ಸಾ ಕ್ರಮಗಳನ್ನೂ ಹೇಳುತ್ತಾ ಹೋದರು. ಬ್ಯಾಟ್ ನಲ್ಲಿ ಬ್ಯಾಲೆನ್ಸ್ ಫೀಲ್ ಹುಟ್ಟಿಸುವುದು, ಕರ್ವ್ ಪರಿಶೀಲನೆ, ಬೆನ್ನಿನ ಮುಂಭಾಗಕ್ಕೆ ಬಲ ತುಂಬುವುದು, ಪ್ರಸ್ಸಿಂಗ್ ಮಾಡುವುದು… ಇವೆ ಲ್ಲವೂ ಇರುತ್ತೆ. ದೇಶ ಕ್ಕಾಗಿ ಆಡುವ ನಮ್ಮ ಆಟ ಗಾ ರರ ಕೈಯಲ್ಲಿ ಯಾರಿಂದಲೂ ಇಷ್ಟೇ ಶುಲ್ಕ ಅಂತ ವಿಧಿಸುವುದಿಲ್ಲ. 5 ರೂ. ಕೊಟ್ಟರೂ ಖುಷಿಯಿಂದ ಸ್ವೀಕರಿಸಿದ್ದೇನೆ. ಟೀಂ ಇಂಡಿಯಾ ಆಟ ಗಾ ರರ ಆರ್ಡರ್ ಬಂದಾಗ, ಬೇರೆ ಕೆಲಸಗಳನ್ನು ಬದಿ ಗೊತ್ತಿ ಒಂದೇ ದಿನದಲ್ಲಿ ರಿಪೇರಿ ಮಾಡಿ ಕೊಟ್ಟಿದ್ದೇನೆ’ ಎನ್ನುವ ಮಾತು, ಅವರ ವೃತ್ತಿ ಬದ್ಧತೆಯನ್ನು ಪುಟ್ಟದಾಗಿ ಪರಿಚಯಿಸಿತ್ತು.
ಅಂದ ಹಾಗೆ, ಕೊಹ್ಲಿ- ರೋಹಿತ್ ಸಿಡಿಸುವ ಸಿಕ್ಸರ್, ಸ್ಟೇಡಿಯಂ ಮೀರ ಬಹುದು. ಆದರೆ, ನಿಮಗೆ ಗೊತ್ತಿರಲಿ… ಭಂಡಾರಿ ಅವರು ಬ್ಯಾಟ್ ರಿಪೇರಿ ಮಾಡುವ ಕೋಣೆ ಎಷ್ಟು ಪುಟ್ಟದೆಂದರೆ, ಅದು ಕೇವಲ ಟೆನ್ ಬೈ ಟೆನ್ ಮಾತ್ರವೇ!
ಲಗಾನ್‌ನಿಂದ ಇಲ್ಲಿಯ ತನಕ…
ನೀವು ಲಗಾನ್‌ನ ಆ ದೃಶ್ಯವನ್ನು ಕಣ್ಣೆ ದುರು ನಿಲ್ಲಿಸಿಕೊಳ್ಳಿ. ನಾಳೆಯೇ ಪಂದ್ಯ… ಅಮೀರ್ ಖಾನ್ ಹುಡುಗರು ಕ್ರೀಸಿನಲ್ಲಿ ನಿಲ್ಲಬೇಕು. ಆದರೆ, ಗಟ್ಟಿ ಮು ಟ್ಟಾದ ಬ್ಯಾಟ್ ಬೇಕಲ್ಲ! ಲಗಾನ್ ಹುಡುಗರ ಈ ದೈನಾ ವಸ್ಥೆ ಕಂಡು, ಬ್ರಿಟಿಷ್ ಸುಂದರಿ ಎಲಿಜಬೆತ್, ಒಂದು ಬ್ಯಾಟ್ ಅನ್ನು ನಾಯಕನ ಕೈಗಿಡುತ್ತಾಳೆ. ಅದು ಇಂಗ್ಲೆಂಡಿನ ಬ್ಯಾಟು. ಎಂಥ ಚೆಂಡಿಗೂ, ಅದರ ಎದೆ ಬಿರಿ ಯದು. ಅದೇ ಬ್ಯಾಟ್ ನಿಂದಲೇ ಲಗಾನ್ ಹುಡುಗರು ಗೆಲ್ಲುತ್ತಾರೆ. ಆ ಸಿನಿಮಾವೇ ಏಕೆ? ಇಂದಿಗೂ ಭಾರತೀಯ ಕ್ರಿಕೆಟಿಗರು ಅವಲಂಬಿಸಿರುವುದು ಇಂಗ್ಲೆಂಡ್ ಮರದ ಬ್ಯಾಟುಗಳನ್ನೇ ಎನ್ನು ವುದು ವಾಸ್ತವದ ಚಿತ್ರ.
ಬ್ಯಾಟ್‌ನ ತೂಕ
ಎಂ.ಎಸ್. ಧೋನಿ- 1260 ಗ್ರಾಮ್
ರೋಹಿತ್ ಶರ್ಮಾ- 1200 ಗ್ರಾಮ್
ವಿರಾಟ್ ಕೊಹ್ಲಿ- 1150 ಗ್ರಾಮ್
ಕೆ.ಎಲ್. ರಾಹುಲ್- 1150 ಗ್ರಾಮ್
– ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.