ದಿ ಗ್ರೇಟ್‌ ಎಸ್ಕೇಪ್‌!


Team Udayavani, Oct 14, 2017, 4:36 PM IST

96.jpg

ಚಿಕ್ಕಂದಿನಲ್ಲಿ ಆಡುತ್ತಿದ್ದ ಕಳ್ಳ ಪೊಲೀಸ್‌ ಆಟ ನೆನಪಿದೆಯಾ? ಚೀಟಿಗಳನ್ನು ಚೌಕಾಕಾರಕ್ಕೆ ಕತ್ತರಿಸಿ, ಬರೆದುಕೊಂಡು ಕಳ್ಳನನ್ನು ಊಹಿಸಬೇಕಿದ್ದ ಆಟ ತುಂಬಾ ಮಜಾ ಕೊಟ್ಟಿತ್ತು. ಈಗ ಅದೇ ಆಟವನ್ನು ಆಡಲು ಇಚ್ಛಿಸುತ್ತೀರಾ? ದೊಡ್ಡವರಾದ ಮೇಲೂ ಚಿಕ್ಕ ಮಕ್ಕಳ ಹಾಗೆ ಏನಿದು ಆಟ ಎಂದು ಅಸಡ್ಡೆ ಮಾಡದಿರಿ. ನಾವು ಇಲ್ಲಿ ಹೇಳಹೊರಟಿರುವ ಆಟ ಕಳ್ಳ ಪೊಲೀಸ್‌ ಎಂಬುದೇನೋ ನಿಜ. ಆದರೆ, ಅದರ ಸುಧಾರಿತ ಆವೃತ್ತಿ. ಇದೆಲ್ಲಾ ಸಾಧ್ಯವಾಗಿರುವುದು ನಗರದಲ್ಲಿ ಶುರುವಾಗಿರುವ “ಬ್ರೇಕೌಟ್‌ ಎಸ್ಕೇಪ್‌ ಗೇಮ್‌ ರೂಂ’ನಿಂದಾಗಿ. 

ಏನಿದು ಏಸ್ಕೇಪ್‌ ಗೇಮ್ಸ್‌?
ನಿಮಗೆ ಮಿಂಚಿನ ಓಟ ಸಿನಿಮಾ ನೆನಪಿದೆಯೇ? ಜಾಲಿನಿಂದ ಮೂವರು ಕೈದಿಗಳು ತಪ್ಪಿಸಿಕೊಳ್ಳುವ ಕತೆ ಸಿನಿಮಾದಲ್ಲಿತ್ತು. ಅದಕ್ಕಾಗಿ ಕಳ್ಳರು ಹೂಡುವ ಉಪಾಯ, ಚಾಣಾಕ್ಷತನ ಎಲ್ಲವೂ ರೋಮಾಂಚನ ಉಕ್ಕಿಸುವಂಥದ್ದು. ಇಂಥ ಆಟಗಳನ್ನೇ ಎಸ್ಕೇಪ್‌ ಗೇಮ್ಸ್‌ ಎನ್ನುತ್ತಾರೆ. ಇವುಗಳಲ್ಲಿ ನಾನಾ ವಿಧಗಳಿವೆ. ಜೈಲಿನಿಂದ ತಪ್ಪಿಸಿಕೊಳ್ಳೋದು ಅವುಗಳಲ್ಲೊಂದು. ಇದೇ ರೀತಿ ನಾನಾ ಸನ್ನಿವೇಶಗಳಿರುತ್ತವೆ. ಅವೆಲ್ಲವನ್ನೂ ಎಸ್ಕೇಪ್‌ ಗೇಮ್‌ ರೂಂ ಒಳಗೊಂಡಿರುತ್ತದೆ. ಬಂದೀಖಾನೆ, ವ್ಯಾನು (ಮಾಡೆಲ್‌), ಎಲೆಕ್ಟ್ರಾನಿಕ್‌ ಉಪಕರಣಗಳು, ಪೊಲೀಸರು, ಅಲಾರಂ- ಹೀಗೆ ನಿಜವಾದ ಜೈಲಿನಲ್ಲಿರುವುದೆಲ್ಲವೂ ಇಲ್ಲಿರುತ್ತದೆ. ಇವನ್ನು ಸಾಮಾನ್ಯವಾಗಿ ಗುಂಪಿನಲ್ಲಿ ಆಡಿದರೇ ಹೆಚ್ಚು ಮಜಾ.

ಮಕ್ಕಳೂ ಆಡಬಹುದು…
ಬ್ರೇಕೌಟ್‌ನಲ್ಲಿ ಮಕ್ಕಳಿಗೆಂದು ಒಂದು ಪುಟ್ಟ ಕಾಡಿನ ಮಾಯಾಲೋಕವನ್ನು ಸೃಷ್ಟಿಸಿದ್ದಾರೆ. ಅಲ್ಲಿ ಮರವಿದೆ, ಗುಹೆಯಿದೆ, ಪುಟ್ಟ ಜಲಪಾತವಿದೆ, ಮಾತನಾಡೋ ಗೂಬೆ ಇದೆ, ಮಾಟಗಾತಿಯೂ ಇದ್ದಾಳೆ. ಮಕ್ಕಳು, ಸಮಯಪ್ರಜ್ಞೆಯಿಂದ ಒಂದೊಂದೇ ಹಂತವನ್ನು ದಾಟಿ ಮುಂದಕ್ಕೆ ಸಾ ಗಬೇಕು. ಈ ಪಂದ್ಯದಲ್ಲಿ ಅವರು ಜಯಶಾಲಿಯಾದರೆ ಬಹುಮಾನವೂ ಇದೆ. ಅಂದಹಾಗೆ, ಬಹುಮಾನ ಮಕ್ಕಳಿಗೆ ಮಾತ್ರ. ಈ ಆಟವನ್ನು ಕೂಡಾ ಮಕ್ಕಳು ಮಾತ್ರ ಆಡಬಹುದು!

ಇದುವೇ ವಿಶೇಷ
ಇಲ್ಲಿರುವ ತಂತ್ರಜ್ಞಾನ ಐ.ಒ.ಟಿ (ಇಂಟರ್‌ನೆಟ್‌ ಆಫ್ ಥಿಂಗ್ಸ್‌). ಬಹಳಷ್ಟು ವಸ್ತುಗಳು, ಕಣ್ಣಿಗೆ ಕಾಣದ ಬಟನ್ನುಗಳು, ಹಿಡನ್‌ ಕ್ಯಾಮೆರಾಗಳು, ಸೆನ್ಸಾರ್‌ಗಳು, ನೆಲದಲ್ಲಿ ಹುದುಗಿಸಿದ ಲ್ಯಾಂಡ್‌ ಮೈನುಗಳು, ಮಾತಾಡೋ ಗೂಬೆ- ಹೀಗೆ ಅನೇಕ ವಸ್ತುಗಳು ಆಟಗಾರರಿಗೆ ಮಾಯಾಲೋಕವನ್ನು ಹೊಕ್ಕ ಅನುಭವ ನೀಡುತ್ತದೆ.

ಯಾವ್ಯಾವ ಆಟ ಇದೆ..?
1. ಬ್ಯಾಂಕ್‌ ರಾಬರಿ

ನಿಜಜೀವನದಲ್ಲಿ ಬ್ಯಾಂಕ್‌ನಿಂದ ರಾಬರಿ ಮಾಡೋ ದುಸ್ಸಾಹಸ ಯಾರಿಗೂ ಬೇಡ. ಆದರೆ, ಅದನ್ನೇ ಆಟವಾಗಿ ಆಡುವುದಾದರೆ? ಅಂಥ ಒಂದು ಅವಕಾಶವನ್ನು ಬ್ರೇಕೌಟ್‌ ಒದಗಿಸುತ್ತದೆ. ಇಲ್ಲಿನ ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನದ (ನಕಲಿ) ಗಟ್ಟಿಗಳನ್ನು ಇಟ್ಟಿರುತ್ತಾರೆ. ಅದನ್ನು ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಹಾರಿಸಿಕೊಂಡು ಹೋಗಬೇಕು. ಬ್ಯಾಂಕ್‌ ನೌಕರರ ಕಣ್ತಪ್ಪಿಸಬೇಕು, ಕಂಪ್ಯೂಟರನ್ನು ಹ್ಯಾಕ್‌ ಮಾಡಬೇಕು. ಇವೆಲ್ಲವನ್ನೂ ದಾಟಿ ಮುಂದಕ್ಕೆ ಹೋದರೆ ಲಾಕರ್‌ ಒಳಗೆ ತಲುಪುತ್ತೀರಿ. ಇಲ್ಲಿ ಲೇಸರ್‌ ಕಿರಣಗಳನ್ನು ಹಾಯಿಸಿರುತ್ತಾರೆ. ಅವುಗಳನ್ನು ಉಪಾಯದಿಂದ ದಾಟಿಕೊಂಡು ಹೋಗಬೇಕು. ನಿಮ್ಮ ಮೈ ಕೈ ಅಥವಾ ಅಂಗಿ ಲೇಸರ್‌ ಕಿರಣಗಳಿಗೆ ತಗುಲಿದರೆ ಸೈರನ್‌ ಜೋರಾಗಿ ಸದ್ದು ಮಾಡುತ್ತದೆ. ನೀವು ಅರೆಸ್ಟ್‌! ಆದರೆ, ಇಂಥ ಅನೇಕ ಸಿನಿಮೀಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದರೆ ಬ್ಯಾಂಕ್‌ ರಾಬರಿ ಪಂದ್ಯವನ್ನು ಗೆದ್ದ ಖುಷಿ ಆಟಗಾರರ ತಂಡದ್ದು.

2. ಮಮ್ಮಿಯ ಶಾಪ
ಇಲ್ಲಿ ಈಜಿಪ್ಟಿಯನ್‌ ಮಮ್ಮಿ ಕಾಲದ ಕೋಣೆಯೊಂದರ ಮಾದರಿಯಿದೆ. ಆ ಕೋಣೆಯಿಂದ ಹೊರಬರುವುದು ಆಟಗಾರರ ಮುಂದಿರುವ ಸವಾಲು. ಇಲ್ಲದೇ ಹೋದರೆ, ಮಮ್ಮಿಯ ಶಾಪಕ್ಕೆ ಆಟಗಾರರು ತುತ್ತಾಗುವರು. ಹೀಗಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಆಟಗಾರರು ಆ ಕೋಣೆಯನ್ನು ಭೇದಿಸಬೇಕು. ಅದು ಅಷ್ಟು ಸುಲಭವಲ್ಲ. ಅನೇಕ ಒಗಟುಗಳು, ರಹಸ್ಯಗಳ ಒಳಾರ್ಥಗಳನ್ನು ಬಿಡಿಸಿಕೊಂಡು, ಪ್ರಶ್ನೆಗಳಿಗೆ ಉತ್ತರಿಸಿದರೆ ಮಾತ್ರ ಮಮ್ಮಿಯ ಶಾಪದಿಂದ ಬಚಾವಾಗಬಹುದು.

3. ಆರ್ಮಿ ಬಂಕರ್‌
ಇಲ್ಲೊಂದು ಪುರಾತನ ಕಾಲದ ಪಾಳು ಬಿದ್ದ ಬಂಕರ್‌ ಇದೆ, ಸೈನಿಕರು ಯಾವುದೋ ಕಾಲದಲ್ಲಿ ಇಲ್ಲಿ ಬಿಟ್ಟು ಹೋದ ಸಮವಸ್ತ್ರ, ಹಳೆಯ ರೇಡಿಯೋ, ನಕಾಶೆ ಇನ್ನೂ ಹಳೆಯ ಪರಿಕರಗಳು ಅಲ್ಲಿವೆ. ಅಲ್ಲಿ ಆಟಗಾರರನ್ನು ಬಿಡಲಾಗುತ್ತದೆ. ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು ಬರುವ ಕೆಲಸ ಆಟಗಾರರದು. ಒಳಗೆ ಓಡಾಡುವಾಗ ನೆಲದಲ್ಲಿ ಹುದುಗಿಸಿರುವ ಬಾಂಬುಗಳ ಬಗ್ಗೆಯೂ ಎಚ್ಚರ ವಹಿಸಬೇಕು. ಅದರ ಮೇಲೆ ಕಾಲಿಟ್ಟರೆ ಬಾಂಬು ನಿಜಕ್ಕೂ ಸಿಡಿಯುವುದಿಲ್ಲ ಆದರೆ, ಲೈಟ್‌ ಬಲುº ಆನ್‌ ಆಗಿ, ಢಮಾರ್‌ ಎಂಬ ಸದ್ದು ಹೊರಡುತ್ತದೆ. 

ಇದರಿಂದೇನು ಲಾಭ?
ಭಾರತದಲ್ಲಿ ಈಗೀಗ ಸದ್ದು ಮಾಡುತ್ತಿರುವ ಈ ರೀತಿಯ ಗೇಮ್‌ರೂಮ್‌ಗಳು ಟೀಮ್‌ ಬಿಲ್ಡಿಂಗ್‌ಗೆ ಬಹಳ ಸಹಕಾರಿ. ಅದಕ್ಕೇ ಕಾರ್ಪೊರೇಟ್‌ ಸಂಸ್ಥೆಗಳು ತಮ್ಮ ಕಂಪನಿಯ ನೌಕರರಲ್ಲಿ ಸ್ಫೂರ್ತಿ ತುಂಬಲು, ಒಗ್ಗಟ್ಟಿನ ಬಲವನ್ನು ತಿಳಿಸಲು ಇಲ್ಲಿಗೆ ಕರೆದುಕೊಂಡು ಬರುತ್ತಾರೆ, ಇಲ್ಲಿ ಸವಾಲುಗಳನ್ನು ಗುಂಪಿನಲ್ಲಿ ಬಿಡಿಸಬೇಕಾಗಿರುವುದರಿಂದ ಹೆಚ್ಚು ಒಗ್ಗಟ್ಟಿರುವ ತಂಡವೇ ಜಯಶಾಲಿಯಾಗುತ್ತದೆ. ಜಯಶಾಲಿ ಆಗಲೇ ಬಬೇಕೆಂದೂ ಇಲ್ಲ. ತಾವು ಎಡವಿದ್ದೆಲ್ಲಿ ಎಂದು ಪರಾಮರ್ಶೆ ಮಾಡಿದರೂ ಸಾಕು, ಒಳ್ಳೆ ಪಾಠವಾಗಬಲ್ಲುದು. ಏನಿಲ್ಲದಿದ್ದರೂ ನೂರಕ್ಕೆ ನೂರು ಪ್ರತಿಶತ ಮೋಜು ಖಂಡಿತಾ. 
ಊರೀ ಕಾರ್ಪೊರೇಟ್‌ ಕಂಪನಿಗಳು ಮಾತ್ರವಲ್ಲ ಕುಟುಂಬದ ಎಲ್ಲಾ ಸದಸ್ಯರೂ ಇಲ್ಲಿಗೆ ಬಂದು ಒಟ್ಟಾಗಿ ಮೋಜು ಅನುಭವಿಸಬಹುದು. ಏಕೆಂದರೆ, ಮನೆ ಮಂದಿಯೊಡನೆ ಇಂಥ ಆಟವನ್ನು ಆಡುವುದರಲ್ಲಿರುವ ಖುಷಿ ಇ ನ್ನಾéವುದರಲ್ಲೂ ಇಲ್ಲ. ಮೊಬೈಲು ಆಟಗಳಿಂದ ಹೊರಗುಳಿದು ನಿಜಜೀವನದ ಟಾಸ್ಕ್ಗಳನ್ನು ಪರಿಹರಿಸಬೇಕಾಗಿರುವುದರಿಂದ ಮೆದುಳಿಗೂ ಕಸರತ್ತು ನೀಡಿದಂತಾಗುತ್ತದೆ.

ಎಲ್ಲಿ?: #27, ಎನ್‌.ಎಂ.ಆರ್‌ ಬಿಲ್ಡಿಂಗ್‌, ಎಚ್‌ಡಿಎಫ್ಸಿ ಬ್ಯಾಂಕ್‌ ಎದುರು, 100 ಅಡಿ ರಸ್ತೆ, ಈಜಿಪುರ, ಕೋರಮಂಗಲ
ಹೆಚ್ಚಿನ ಮಾಹಿತಿಗೆ: 9980137245

ಹವನ

ಟಾಪ್ ನ್ಯೂಸ್

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

12(1

Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.