ಅಸಲಿ ಆಟ ಈಗ ಶುರು!
Team Udayavani, Jul 7, 2018, 12:04 PM IST
ವಿನೂತನ ಗೇಮ್ ಶೋ ಒಂದು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಸುಪ್ತವಾದ 6ನೇ ಇಂದ್ರಿಯವನ್ನು ಬಳಸಿ ಆಡಬೇಕಾಗಿರುವ ಈ ಗೇಮ್ ಶೋ ಹೆಸರು “ಸಿಕ್ಸ್ತ್ ಸೆನ್ಸ್’. ಹೀಗಾಗಿ ವೀಕ್ಷಕರು ಇದುವರೆಗೂ ಕಂಡು ಕೇಳರಿಯದಂತಹ ಗೇಮ್ ಶೋ ಎಂದು ಸ್ಟಾರ್ ಸುವರ್ಣ ವಾಹಿನಿ ಹೇಳಿಕೊಂಡಿದೆ.
ಸೆಲಬ್ರಿಟಿಗಳೇ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು. ಅಕುಲ್ ಬಾಲಾಜಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಈ ಗೇಮ್ ಶೋ ಇಷ್ಟವಾಗಲಿದೆ ಎಂದು ಸುವರ್ಣ ವಾಹಿನಿಯ ಬಿಸಿನೆಸ್ ಹೆಡ್ ಸಾಯಿ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಾನೆಲ್: ಸ್ಟಾರ್ ಸುವರ್ಣ
ಸಮಯ: ಜುಲೈ 7ರಿಂದ, ಪ್ರತಿ ಶನಿ- ಭಾನು, ರಾತ್ರಿ 9
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.