ಟ್ರಕ್‌ ಟ್ರಕ್‌ ಎನುತಿದೆ ಕಾಲ… 


Team Udayavani, Apr 14, 2018, 3:59 PM IST

296.jpg

ಆಹಾರದ ವಿಚಾರದಲ್ಲಿ ಪ್ರತಿ ನಗರಕ್ಕೂ ತನ್ನದೇ ಆದ ಸೌಂದರ್ಯವಿದೆ. ಮುಂಬೈ ಡಬ್ಟಾವಾಲಾಗಳ ತವರು; ಹೈದರಾಬಾದ್‌ನಲ್ಲಿ ಇರಾನಿ ಕೆಫೆಗಳದ್ದೇ ಚೆಲುವು; ದಿಲ್ಲಿಯಲ್ಲಿ ಪರಾಠಾ ಕೇಂದ್ರಗಳು ದಿಲ್‌ಖಷ್‌ ರುಚಿ ನಾಲಗೆಯನ್ನು ಸ್ಪರ್ಶಿಸಿದರೆ, ಬೆಂಗಳೂರಿನಲ್ಲಿ ದರ್ಶಿನಿಗಳ ಉಪಚಾರ ಮನೆಮಾತು. ಆದರೆ, ಬರುಬರುತ್ತಾ ಸಿಲಿಕಾನ್‌ ಸಿಟಿಯಲ್ಲಿ ದರ್ಶಿನಿಗಳು ಕಾಣದಾಗಿವೆ. ಪುಟ್ಟ ಪುಟ್ಟ ರೆಸ್ಟೋರೆಂಟುಗಳು, ಸ್ಟಾರ್‌ ಹೋಟೆಲ್ಲುಗಳು ಹೆಚ್ಚುತ್ತಿವೆ. ಈ ಹೊಸ ಪರಂಪರೆಯ ಹಾದಿಯಲ್ಲಿ ಟ್ರಕ್‌ ಕೆಫೆಗಳೂ ಹುಟ್ಟಿಕೊಳ್ಳುತ್ತಿವೆ.
  ಟ್ರಕ್‌ ಎಂದರೆ, ಬರೋಬ್ಬರಿ ಸರಕುಗಳನ್ನು ತುಂಬಿಕೊಂಡು ಓಡುವ ವಾಹನಗಳಲ್ಲ ಇವು. ಸ್ಮಾರ್ಟ್‌ ಆಗಿ ರಚನೆಗೊಂಡ ಟ್ರಕ್ಕು. ದಿನಪೂರ್ತಿ ನಿಂತಲ್ಲೇ ನಿಂತಿರುವ ಟ್ರಕ್ಕು. ರಾತ್ರಿಯಾದರೆ ಮೆಲ್ಲನೆ ಜಾಗ ಖಾಲಿ ಮಾಡುವ ಟ್ರಕ್ಕು. ಒಡಲೊಳಗೆ ಗ್ಯಾಸು, ಸ್ಟೌ, ದೊಡ್ಡ ದೊಡ್ಡ ಬಾಣಲೆಗಳು, ಪಾತ್ರೆಗಳು, ಬಾಣಸಿಗರನ್ನು ತುಂಬಿಕೊಂಡು, ಹಸಿವು ಎಂದು ಬರುವ ಜನರನ್ನು ಈ ಟ್ರಕ್‌ ಸ್ವಾಗತಿಸುತ್ತಿರುತ್ತೆ. ಇಲ್ಲಿ ಆಹಾರ ತಿನ್ನೋವಾಗ ಎಷ್ಟೋ ಬಾರಿ ಟೂರಿಂಗ್‌ ಟಾಕೀಸ್‌ ನೆನಪಾಗುತ್ತೆ. ಇಂದು ಭರ್ಜರಿ ಔತಣ ನೀಡಿ ರಂಜಿಸುವ ಈ ಟ್ರಕ್‌, ನಾಳೆ ಅಣತಿ ದೂರದಲ್ಲಿ ಠಿಕಾಣಿ ಹೂಡಿರುತ್ತೆ. ಅಲ್ಲಿ ಮತ್ತೂಂದಿಷ್ಟು ಜನರನ್ನು ಸಂತೃಪ್ತಿಗೊಳಿಸಲು ಕಾಯುತ್ತಿರುತ್ತೆ.
  ಮೊದಲೆಲ್ಲ ಬೀದಿ ಬದಿಯಲ್ಲಿ ಬರೀ ಕೈಗಾಡಿಗಳದ್ದೇ ಕಾರುಬಾರು. ತದನಂತರ ಗೂಡ್ಸ್‌ ಆಟೋಗಳು, ಓಮ್ನಿಗಳು ರೆಡಿಮೇಡ್‌ ಫ‌ುಡ್‌ ಅನ್ನು ತಂದು ಬಡಿಸಿ, ಫ‌ುಡ್‌ ಸ್ಟ್ರೀಟ್‌ ಪರಿಕಲ್ಪನೆಗೆ ನಾಂದಿ ಹಾಡಿದ್ದವು. ಆದರೆ, ಟ್ರಕ್ಕುಗಳು ಫ‌ುಡ್‌ ಸ್ಟ್ರೀಟ್‌ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ದಾರಿ ಬದಿಯಲ್ಲಿ, ಒಂದೊಳ್ಳೆ ಪರಿಸರದಲ್ಲಿ ಇವು ನಿಂತಿರುತ್ತವೆ. ತಾಜಾ ತಾಜಾವಾಗಿ ತಿನಿಸುಗಳನ್ನು ರೆಡಿಮಾಡಿ ಕೊಡುತ್ತಾ, ಗ್ರಾಹಕರಿಗೆ ಅಚ್ಚುಮೆಚ್ಚಿನ ಕೇಂದ್ರಗಳಾಗಿರುತ್ತವೆ. 
  ಇಂಥ ಟ್ರಕ್‌ಗಳಲ್ಲಿ ದಕ್ಷಿಣ ಭಾರತೀಯ ತಿನಿಸುಗಳು ಬಹಳ ಕಡಿಮೆ. ಎಲ್ಲೋ ಕೆಲವು ಟ್ರಕ್ಕುಗಳಲ್ಲಷ್ಟೇ ದೋಸೆಗಳನ್ನು ಹೊಯ್ದು ಕೊಡುತ್ತಾರೆ. ಅದುಬಿಟ್ಟರೆ ಇಲ್ಲಿ, ಚೈನೀಸ್‌, ವಿದೇಶಿ ಶೈಲಿಯ ಖಾದ್ಯಗಳದ್ದೇ ಮೇಲುಗೈ. ಈ ಟ್ರಕ್ಕುಗಳ ಸುತ್ತಮುತ್ತ ಹೆಚ್ಚಾಗಿ ಐಟಿ ಮಂದಿಯೇ ಮುತ್ತಿರುತ್ತಾರೆ. ಈ ಟ್ರಕ್‌ ಮುಂದೆ ತಟ್ಟೆಹಿಡಿದು ನಿಂತು, ಲೋಕಾಭಿರಾಮವಾಗಿ ಆಕಾಶ ನೋಡುತ್ತಾ, ಅಕ್ಕಪಕ್ಕದ ಸ್ವತ್ಛಂದ ಪರಿಸರ ನೋಡುತ್ತಾ ಆಹಾರ ಸೇವಿಸುವ ಮಜಾವೇ ಬೇರೆ.

1. ದಿ ಸ್ಪಿಟ್‌ಫೈರ್‌ ಟ್ರಕ್‌
ವಿದೇಶಿ ಆಹಾರಗಳ ರುಚಿ ನೋಡುವವರಿಗೆ ಇದು ಒಳ್ಳೇ ಆಯ್ಕೆ. ನ್ಯೂಯಾರ್ಕ್‌ ಶೈಲಿಯ ಹಾಟ್‌ ಡಾಗ್ಸ್‌ ಇಲ್ಲಿನ ಸ್ಪೆಷೆಲ್‌. ಚಿಲ್ಲಿ ಚಿಕನ್‌, ಚಿಕನ್‌ ಮಂಚೂರಿಯನ್‌ನ ಮಸ್ತ್ ರುಚಿಯನ್ನೂ ಇಲ್ಲಿ ಸವಿಯಬಹುದು.
ಎಲ್ಲೆಲ್ಲಿ ಓಡಾಡುತ್ತೆ?: ಫ್ರೆàಜರ್‌ ಟೌನ್‌, ಕಮ್ಮನಹಳ್ಳಿ, ಇಂದಿರಾನಗರ, ಸಹಕಾರ ನಗರ
facebook: @thespitfirebbqtruck

2. ಕಾಫಿ ಬೋರ್ಡ್‌ ಟ್ರಕ್‌
ಬೆಳಗ್ಗೆ ಹೊತ್ತಿನಲ್ಲಿ ಅವೆನ್ಯೂ ರಸ್ತೆಯಲ್ಲಿ ಸಂಚರಿಸುವವವರಿಗೆ ಕಾಫಿ ಬಣ್ಣದ ಟ್ರಕ್‌ ಕಣ್ಣಿಗೆ ಬಿದ್ದೇಬೀಳುತ್ತೆ. ಕಾಫಿ ಬೋರ್ಡ್‌ನ ನಿವೃತ್ತ ನೌಕರರೆಲ್ಲ ಸೇರಿ, ಈ ಟ್ರಕ್‌ ಕೆಫೆ ನಿರ್ಮಿಸಿದ್ದಾರೆ. ಬಿಸಿಬಿಸಿ ಉಪ್ಪಿಟ್ಟು, ಘಮ್ಮೆನ್ನುವ ಅದ್ಭುತ ರುಚಿಯ ಕಾಫಿ ಇಲ್ಲಿನ ಪ್ರಧಾನ ಆಕರ್ಷಣೆ.
ಎಲ್ಲಿ ನಿಂತಿರುತ್ತೆ?: ಅವೆನ್ಯೂ ರಸ್ತೆ, ಕಬ್ಬನ್‌ಪೇಟೆ

3. ಸ್ಕ್ವೇರ್‌ ರುತ್‌
ಮೀನಿನ ಖಾದ್ಯಕ್ಕೆ ಈ ಟ್ರಕ್‌ ಹೆಸರುವಾಸಿ. ಫಿಶ್‌ ಫ್ರೈ, ಫಿಶ್‌ ಚಿಪ್ಸ್‌, ಚಿಕನ್‌ ಬರ್ಗರ್‌ಗಳ ಜತೆಗೆ ಬ್ರೇಕ್‌ಫಾಸ್ಟ್‌ ಕೂಡ ಇಲ್ಲಿ ಸಿಗುತ್ತೆ. ಪ್ಯಾನ್‌ಕೇಕ್‌, ಫ್ರೆಂಟ್‌ ಟೋಸ್ಟ್‌ಗಳ ರುಚಿಯನ್ನೂ ಇಲ್ಲಿ ಸವಿಯಬಹುದು. 
ಎಲ್ಲೆಲ್ಲಿ ಓಡಾಡುತ್ತೆ?: ಎಚ್‌ಎಸ್‌ಆರ್‌ ಲೇ ಔಟ್‌, ಔಟರ್‌ ರಿಂಗ್‌ರೋಡ್‌ facebook: @Square-RUTH-Food-Truck 

4. ಫ‌ುಡಿಪಾ
ಚಾಟ್ಸ್‌ಪ್ರಿಯರ ನೆಚ್ಚಿನ ಟ್ರಕ್‌ ಇದು. ಸಮೋಸ, ಕಚೋರಿ, ಸೇವ್‌ಪುರಿಗಳಲ್ಲದೆ ಪರಾಠಾ, ಹಾಟ್‌ ಡಾಗ್‌ ಮತ್ತು ಬರ್ಗರ್‌ಗಳು ಇಲ್ಲಿನ ಹೈಲೈಟ್ಸ್‌. ಅಂದಹಾಗೆ, ಇದು ಪಂಜಾಬಿ ಮತ್ತು ಸಿಂಧ್‌ ಶೈಲಿಯ ಮನೆರುಚಿ. ಹಾಗಾಗಿ, ಲಸ್ಸಿಯ ರುಚಿಯನ್ನೂ ಇಲ್ಲಿ ಮಿಸ್‌ ಮಾಡುವ ಹಾಗಿಲ್ಲ.
ಎಲ್ಲೆಲ್ಲಿ ಓಡಾಡುತ್ತೆ?: ಬಸವನಗರ, ಇಂದಿರಾನಗರ, ವೈಟ್‌ಫೀಲ್ಡ್‌ facebook: @ Foodipa

5. ಜಸ್ಟ್‌ ಬೇಕ್‌ ಡೆಸರ್ಟ್‌ ಮೊಬೈಲ್‌
ಲಘುವಾಗಿ ಉಪಾಹಾರ ಬಯಸುವವರಿಗೆ ಇಲ್ಲಿ ಥರಹೇವಾಗಿ ಬಿಸ್ಕತ್ತುಗಳು ನಾಲಿಗೆಯನ್ನು ಚಪ್ಪರಿಸುವಂತೆ ಮಾಡುತ್ತವೆ. ಕೇಕ್‌, ಬ್ರೌನೀಸ್‌, ಚಾಕ್ಲೆಟ್‌, ಲೆಮನ್‌ ಮಿನಿ ಟಾರ್ಟ್ಸ್, ಸ್ಯಾಂಡ್‌ವಿಚ್‌, ಮಫಿನ್ಸ್‌ಗಳಲ್ಲದೇ ವೈವಿಧ್ಯಮಯ ಚಹಾಗಳೂ ಇಲ್ಲಿ ಲಭ್ಯ.
ಎಲ್ಲೆಲ್ಲಿ ಓಡಾಡುತ್ತೆ?: ಬಾಗಮನೆ ಟೆಕ್‌ ಪಾರ್ಕ್‌, ಬಸವನಗರ, ಕೋರಮಂಗಲ

6. ಟು ಟು ಟಾಂಗೋ
ಬರ್ಗರ್‌, ಪಿಜ್ಜಾ ತಿನ್ನಲು ಮ್ಯಾಕಿx, ಪಿಜ್ಜಾ ಹಟ್‌ಗಳಿಗೇ ಹೋಗಬೇಕಿಲ್ಲ. ಟು ಟು ಟಾಂಗೋ ಟ್ರಕ್‌ ಬಳಿ ಹೋದರೂ ಸಾಕು, ಬಿಸಿ ಬರ್ಗರ್‌ ನಿಮ್ಮ ಬಾಯಿರುಚಿಗೆ ವಸ್ತುವಾಗುತ್ತೆ. ಬಿಬಿಕ್ಯೂ ಚಿಕನ್‌ ಬರ್ಗರ್‌, ಸ್ಪೈಸಿ ಪೆರಿಪೆರಿ ಚಿಕನ್‌ ಪಿಜ್ಜಾಗಳು ಇಲ್ಲಿ ಪ್ರಧಾನ ಆಕರ್ಷಣೆ.
ಎಲ್ಲೆಲ್ಲಿ ಓಡಾಡುತ್ತೆ?: ಕೋರಮಂಗಲ ಸುತ್ತಮುತ್ತ facebook: @ TwoToTang

7. ಫ‌ುಡ್‌ ಎಂಜಿನ್‌
ದೇಶೀ- ವಿದೇಶೀ ಆಹಾರಗಳ ಸಮಾಗಮ ಇಲ್ಲಿದೆ. ಇಂಡಿಯನ್‌, ಅಮೆರಿಕನ್‌, ಇಟಾಲಿಯನ್‌, ಚೈನೀಸ್‌ ಶೈಲಿಯ ಆಹಾರಗಳ ರುಚಿ ಇಲ್ಲಿ ಕೈಬೀಸಿ ಕರೆಯುತ್ತದೆ. ಇಲ್ಲಿಗೆ ಹೋದವರು ಬರ್ಗರ್‌, ಪಾಸ್ತಾಗಳ ರುಚಿ ನೋಡದೇ ವಾಪಸಾಗುವುದಿಲ್ಲ.
ಎಲ್ಲೆಲ್ಲಿ ಓಡಾಡುತ್ತೆ?: ಐಟಿಪಿಎಲ್‌, ಬಾಗಿಮನೆ ಟೆಕ್‌ಪಾರ್ಕ್‌, ಎಚ್‌ಎಸ್‌ಆರ್‌ ಲೇಔಟ್‌, ಮಾರತ್‌ಹಳ್ಳಿ

facebook: @ myfoodengine 

ನಮ್ಮಲ್ಲಿಗೆ 3 ವರ್ಷದ ಮಗುವಿನಿಂದ ಹಿಡಿದು 80 ವರ್ಷದ ಅಜ್ಜಂದಿರ ವರೆಗೂ ಫ‌ುಡ್‌ ಟೇಸ್ಟ್‌ ಮಾಡಲು  ಬರುತ್ತಾರೆ. ಅದರಲ್ಲಿ ಐಟಿ ಮಂದಿಯೇ ಹೆಚ್ಚು. ಪ್ರಪಂಚ ಸುತ್ತಿ, ಆಹಾರ ಸಂಸ್ಕೃತಿಯ ಬಗ್ಗೆ ಕುತೂಹಲ ಇಟ್ಟುಕೊಂಡವರೂ ಟ್ರಕ್‌ ಆಹಾರವನ್ನು ಇಷ್ಟಪಡುತ್ತಾರೆ. ಬೆಂಗಳೂರು ಈಗ ದೇಶೀ-ವಿದೇಶಿ ಆಹಾರಗಳ ಸಂಗಮ. ಟ್ರಕ್‌ ಫ‌ುಡ್‌ ಎಲ್ಲ ರುಚಿಯನ್ನೂ ಒಳಗೊಂಡಿದೆ.
– ಗೌತಮಿ ಶಂಕರ್‌, ದಿ ಸ್ಪಿಟ್‌ಫೈರ್‌ ಟ್ರಕ್‌

ಟಾಪ್ ನ್ಯೂಸ್

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.