ವರದರಾಜು ಪ್ರಶಸ್ತಿ ಪ್ರದಾನ
Team Udayavani, Feb 23, 2019, 7:20 AM IST
ಡಾ. ರಾಜ್‌ಕುಮಾರ್ ಅಭಿನಯದ ಎಲ್ಲ ಚಿತ್ರಗಳ ಕಥೆಯನ್ನು ಆಯ್ಕೆ ಮಾಡುತ್ತಿದ್ದವರೇ ಅವರ ಸೋದರ ಎಸ್.ಪಿ. ವರದರಾಜ್. ಭೂತಯ್ಯನ ಮಗ ಅಯ್ಯು, ಒಡಹುಟ್ಟಿದವರು ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದು ಅವರ ಹೆಗ್ಗಳಿಕೆ. ವರದರಾಜು ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಈ ಬಾರಿ, ರಂಗಭೂಮಿ ಕಲಾವಿದೆ ಇಂದಿರಮ್ಮ ಹಾಗೂ ಸಿನಿಮಾ ಸಾಹಿತಿ, ನಿರ್ದೇಶಕ ಚಿ. ದತ್ತರಾಜ್ ಭಾಜನರಾಗಿದ್ದಾರೆ. 6ನೇ ವರ್ಷಕ್ಕೆ ರಂಗದ ಮೇಲೆ ಬಣ್ಣ ಹಚ್ಚಿದ ಇಂದಿರಮ್ಮ, ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಡಾ.ರಾಜ್‌ಕುಮಾರ್ ಹಾಗೂ ತಂದೆ ಪುಟ್ಟಸ್ವಾಮಯ್ಯ ಅವರೊಂದಿಗೆ ಒಟ್ಟಿಗೆ ಅಭಿನಯಿಸಿದ ಹೆಗ್ಗಳಿಕೆ ಇಂದಿರಮ್ಮ ಅವರದ್ದು. ಇನ್ನು, ಸಿನಿಮಾ ಸಾಹಿತಿ, ನಿರ್ದೇಶಕ, ನಟ, ಕಂಠದಾನ ಕಲಾವಿದ ಹೀಗೆ, ಕನ್ನಡ ಚಿತ್ರರಂಗಕ್ಕೆ ಚಿ. ದತ್ತರಾಜ್ ಅವರ ಕೊಡುಗೆ ಅಪಾರ. ಸನಾದಿ ಅಪ್ಪಣ್ಣ, ಬಂಗಾರದ ಪಂಜರ, ಶ್ರೀನಿವಾಸ ಕಲ್ಯಾಣ ಮುಂತಾದ ಸಿನಿಮಾಗಳ ಹಿಂದೆ ಇವರ ಪರಿಶ್ರಮ ಇದೆ. ಚಿ. ಉದಯಶಂಕರ ಅವರ ಕಿರಿಯ ಸೋದರರಾಗಿರುವ ದತ್ತರಾಜ್, ಅದೇ ಕಣ್ಣು ಸೇರಿದಂತೆ, ರಾಜಕುಮಾರ್ ಅಭಿನಯದ ನಾಲ್ಕು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಈ ಇಬ್ಬರು ಹಿರಿಯ ಕಲಾವಿದರಿಗೆ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಉಪಸ್ಥಿತರಿರಲಿದ್ದಾರೆ.
ಎಲ್ಲಿ?: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ | ಯಾವಾಗ?: ಫೆ. 23, ಶನಿವಾರ ಸಂಜೆ 5.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.