ರಂಗಭೂಮಿಯನ್ನು ಜನಕ್ಕೆ ಇನ್ನಷ್ಟು ಹತ್ತಿರವಾಗಿಸುತ್ತಿರುವ “ವಿಮೂವ್‌’


Team Udayavani, Feb 11, 2017, 3:35 PM IST

56544.jpg

ಬಹಳಷ್ಟು ಜನ ರಂಗಭೂಮಿ ಆಸಕ್ತರು ಇದ್ದೀರ. ಬೆಂಗಳೂರಿನಲ್ಲೋ ಅಥವಾ ಬೇರಾವುದೋ ಊರಿನಲ್ಲಿ ಪ್ರದರ್ಶನಗೊಳ್ಳುವ ನಾಟಕಗಳನ್ನು ಕುತೂಹಲದಿಂದ ಗಮನಿಸುತ್ತಿರುತ್ತೀರ. ಹಲವಾರು ನಾಟಕಗಳನ್ನು ಹೋಗಿ ನೋಡಿರುತ್ತೀರ. ಹಾಗಿದ್ದಲ್ಲಿ ನೀವು ರಂಗಭೂಮಿ ಮೇಲೆ ಷೇಕ್ಸ್‌ಫಿಯರ್‌ನ ಮರ್ಚೆಂಟ್‌ ಆಫ್ ವೆನಿಸ್‌, ಗಿರೀಶ್‌ ಕಾರ್ನಾಡರ ಹಯವದನ, ಕಂಬಾರರ ಸಾಂಬಶಿವ ಪ್ರಹಸನ ನೋಡಿದ್ದೀರ? ಬಹುತೇಕ ರಂಗಾಸಕ್ತರು ಈ ಎಲ್ಲಾ ನಾಟಕಗಳನ್ನು ರಂಗಭೂಮಿಯಲ್ಲಿ ಕುಳಿತು ನೋಡಿರುತ್ತೀರ. ನಿಮಗೆ ಯಾವತ್ತಾದರೂ, ಇತ್ತೀಚಿನ ಕೃತಿಗಳು ರಂಬಭೂಮಿ ಮೇಲೆ ಏಕೆ ಪ್ರಯೋಗವಾಗುತ್ತಿಲ್ಲ? ಅಥವಾ ಇಂದಿನ ಜನಜೀವನ, ಮುಖ್ಯವಾಗಿ ಬೆಂಗಳೂರು ಕೇಂದ್ರಿತ ನಗರ ಜೀವನ, ಇಲ್ಲಿಯ ಕಷ್ಟ ಸುಖ, ನೋವು ನಲಿವು ಏಕೆ ರಂಗಭೂಮಿ ಮೇಲೆ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಗಳು ಮೂಡಿದೆಯಾ?

ಇಂಥದೊಂದು ಕೊರತೆ ನೀಗಿಸುವ ನಿಟ್ಟಿನಲ್ಲೇ ರಂಗತಂಡವೊಂದು ಶ್ರಮಿಸುತ್ತಿದೆ. 2000 ಇಸವಿಯ ಈಚಿನ ಹೊಸ ಕೃತಿಗಳನ್ನು ರಂಗಭೂಮಿ ಮೇಲೆ ತರಲೆಂದೇ ರಂಗತಂಡವೊಂದು ಪಣ ತೊಟ್ಟಿದೆ. ಇದರ ಹೆಸರೇ “ವಿಮೂವ್‌’. ಇದರ ರೂವಾರಿಗಳು ಅಭಿಷೇಕ್‌ ಐಯ್ಯಂಗಾರ್‌ ಮತ್ತು ರಂಗರಾಜ್‌ ಭಟ್ಟಾಚಾರ್ಯ ಎಂಬ ಇಬ್ಬರು ರಂಗಭೂಮಿ ಕಲಾವಿದರು. ವಿಮೋವ್‌ ರಂಗತಂಡ ಸ್ಥಾಪನೆಯಾಗಿದ್ದು 2006ರಲ್ಲಿ. ಇದುವರೆಗೂ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳ ನಾಟಕಗಳು ಸೇರಿ ಸುಮಾರು 162ಕ್ಕೂ ಹೆಚ್ಚು ನಾಟಕಗಳನ್ನು ಈ ತಂಡ ಪ್ರದರ್ಶಿಸಿದೆ. ಸದ್ಯ ಅಮೆರಿಕದಲ್ಲಿ “ಮಾಗಡಿ ಡೇಸ್‌’ ಎಂಬ ನಾಟಕದ ಪ್ರದರ್ಶನ ನೀಡುವಲ್ಲಿ ತಂಡ ನಿರತವಾಗಿದೆ. ಇದಲ್ಲದೇ ಈ ತಂಡ ಬೆಂಗಳೂರಿನ ರಂಗಾಸಕ್ತರು, ಕಲಾವಿದರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಂಗಭೂಮಿಗೆ ಸಂಬಂಧಿಸಿದ ಸಮಗ್ರ ಮಾಹಿತಿಗಳಿರುವ ವೆಬ್‌ಸೈಟೊಂದನ್ನೂ ತಂಡ ನಡೆಸುತ್ತಿದೆ. ಇತ್ತೀಚೆಗೆ ವಿಮೂವ್‌ “ನಮ್ಮ ಮೆಟ್ರೊ’ ಎಂಬ ನಾಟಕ ಪ್ರದರ್ಶಿಸಿತ್ತು. 4 ಪಾತ್ರಗಳನ್ನಿಟ್ಟುಕೊಂಡು ರಚಿಸಿದ್ದ ಈ ನಾಟಕ ಬೆಂಗಳೂರಿನ ಸದ್ಯದ ಜೀವನವನ್ನು ಬಿಂಬಿಸಿತ್ತು. ಈ ನಾಟಕಕ್ಕೆ ಅಪಾರ ಜನಮನ್ನಣೆಯೂ ದೊರೆಯಿತು. ಅದಲ್ಲದೇ ಛಿ=ಞc2 ಎಂಬ ಥ್ರಿಲ್ಲರ್‌ ನಾಟಕ ಪ್ರದರ್ಶಿಸಿದ್ದರು. ಇದೊಂದು ವಿಭಿನ್ನ ಪ್ರಯೋಗವಾಗಿತ್ತು. ಕೇವಲ ಸಿನಿಮಾಗಳಿಗೆ ಸೀಮಿತವಾಗಿದ್ದ ಥ್ರಿಲ್ಲರ್‌ ಸಬೆjಕ್ಟನ್ನು ಇವರು ರಂಗದ ಮೇಲೆ ತಂದಿದ್ದರು. 

ನಮ್ಮದೇ ರಾಜ್ಯದ ಇಂಗ್ಲಿಷ್‌ ಸಾಹಿತಿ ಆರ್‌.ಕೆ. ನಾರಾಯಣ್‌ರ ಜನಪ್ರಿಯ ಕಾದಂಬರಿ ಮಾಲ್ಗುಡಿ ಡೇಸ್‌ ಕೃತಿಯನ್ನು “ಮಾಲ್ಗುಡಿ ಎಕ್ಸ್‌ಪ್ರೆಸ್‌’ ಎಂಬ ಹೆಸರಿನಲ್ಲಿ ಪ್ರಪ್ರಥಮವಾಗಿ ರಂಗಭೂಮಿಗೇರಿಸಿದ ಕೀರ್ತಿಯೂ ಇವರದ್ದೇ. 

ಅಭಿಷೇಕ್‌ ಐಯ್ಯಂಗಾರ್‌

ವಿಮೂವ್‌ ತಂಡದ ರೂವಾರಿಗಳಲ್ಲೊಬ್ಬರು ಇವರು. ಮೂಲತಃ ಇವರು ಇಂಜಿನಿಯರಿಂಗ್‌ ವಿದ್ಯಾರ್ಥಿ. ಬಾಲ್ಯ ಕಳೆದಿದ್ದು ಮೈಸೂರಿನಲ್ಲಿ, ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಅಮೆರಿಕದ ಬಾಸ್ಟನ್‌ ಡಬ್ಲ್ಯುಎಚ್‌ ಥಿಯೇಟರ್‌ನಲ್ಲಿ ಫ‌ುಲ್‌ ಸ್ಕಾಲರ್‌ಷಿಪ್‌ ಪಡೆದು, ಅಡ್ವಾನ್ಸ್‌ ಥಿಯೇಟರ್‌ ಕೋರ್ಸ್‌ ಪದವಿ ಪಡೆದ ಮೊದಲ ಭಾರತೀಯ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ವಿಶೇಷ ಆಸಕ್ತಿಯ ಕ್ಷೇತ್ರ. ಮೈಸೂರು ಮತ್ತು ಮೈಸೂರಿನ ರಂಗಾಯಣ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಇವರು, ರಂಗಾಯಣದ ನಾಟಕಗಳು ಮತ್ತು ಅಲ್ಲಿಯ ಕಲಾವಿರದರಿಂದ ಪ್ರಭಾವಕ್ಕೆ ಒಳಗಾದವರು.  

ಜನರಿಗೆ, ಅವರ ಜೀವನಕ್ಕೆ ಹತ್ತಿರವಾಗುವಂಥ ನಾಟಕಗಳನ್ನು ನೀಡುವುದೇ ನಮ್ಮ ಧ್ಯೇಯ ಎಂದು ಸಂಸ್ಥಾಪಕರೊಲ್ಲೊಬ್ಬರಾದ ಅಭಿಷೇಕ್‌ ಐಯ್ಯಂಗಾರ್‌ ಹೇಳುತ್ತಾರೆ. ನಾವು ವಿದೇಶಿ ಬರಹಗಾರರ ಕೃತಿಗಳ ಆಧಾರಿತ ನಾಟಕ ಮಾಡುವುದಿಲ್ಲ. ಭಾರತೀಯ ಬರಹಗಾರರ ಕೃತಿಗಳಿಗೇ ನಾವು ಪ್ರಾಮುಖ್ಯತೆ ನೀಡುವುದು. ಅದರಲ್ಲೂ ಆದಷ್ಟೂ ಹೊಸ  ಬರಹಗಳನ್ನು ನಾವು ಆಯ್ದುಕೊಳ್ಳುತ್ತೇವೆ. ನಾವು ಆರಿಸಿಕೊಳ್ಳುವ ಕೃತಿಗಳು ಜನರ ಜೀವನಕ್ಕೆ ಹತ್ತಿರವಿರಬೇಕು. ವೇದಿಕೆ ಮೇಲೆ ತಮ್ಮನ್ನು ತಾವೇ ನೋಡಿಕೊಂಡ ಅನುಭೂತಿ ಜನರಿಗೆ ಸಿಗಬೇಕು ಎನ್ನುತ್ತಾರೆ ಅಭಿಷೇಕ್‌. ಆದಷ್ಟು ಹೊಸತನದ ನಾಟಕಗಳನ್ನು  ನೀಡುವುದು ಈ ತಂಡದ ಧ್ಯೇಯಗಳಲ್ಲೊಂದು. ವಿಮೂವ್‌ ತಂಡ ಈಗ ಪ್ರದರ್ಶಿಸಿರುವ ಹಲವಾರು ನಾಟಕಗಳನ್ನು ಅಭಿಷೇಕ್‌ ಅವರೇ ರಚಿಸಿದ್ದಾರೆ. 

ಥಿಯೇಟರ್‌ ಸರ್ಕಿಟ್‌: 
ಅಭಿಷೇಕ್‌ ಮತ್ತು ವಿಮೂವ್‌ ತಂಡದ ಮತ್ತೂಂದು ಕೊಡುಗೆ ಠಿಜಛಿಠಿrಛಿcಜಿrcuಜಿಠಿ.ಜಿn  ಎಂಬ ವೆಬ್‌ಸೈಟ್‌. ಬೆಂಗಳೂರಿನ ರಂಗಭೂಮಿ ಕುರಿತ ಸಮಗ್ರ ಮಾಹಿತಿ ಈ ವೆಬ್‌ಸೈಟಲ್ಲಿ ಅಡಕವಾಗಿದೆ. ರಂಗಾಸಕ್ತರಿಗೆ ನಾಟಕ ಪ್ರದರ್ಶನ ಕುರಿತು ತಿಳಿಯಲು ಇದೊಂದು ಅತ್ಯುತ್ತಮ ವೆಬ್‌ಸೈಟ್‌. ಯಾವ ನಾಟಕಗಳು ಎಲ್ಲಿ ಪ್ರದರ್ಶನಗೊಳ್ಳುತ್ತಿವೆ. ನಾಟಕ ಕುರಿತ ಮಾಹಿತಿ. ಯಾವೆಲ್ಲ ಕಲಾವಿದರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಜೊತೆ ನಾಟಕದ ವಿಮರ್ಶೆಯನ್ನು ಇಲ್ಲಿ ಓದಬಹುದು. ಅಲ್ಲದೇ ನೀವೂ ಕೂಡ ನೀವು ನೋಡಿದ ನಾಟಕದ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಇಲ್ಲಿ ಅವಕಾಶ ಇದೆ. ನೋಡುಗರಿಗಷ್ಟೇ ಅಲ್ಲ ಕಲಾವಿದರು, ರಂಗತಂಡಗಳಿಗೂ ಅಗತ್ಯ ಮಾಹಿತಿ ಇಲ್ಲಿ ಲಭ್ಯ. ನಾಟಕ ಪ್ರದರ್ಶಿಸಲು ಸಭಾಂಗಣಗಳ ಕುರಿತ ಮಾಹಿತಿ. ನಾಟಕಕ್ಕೆ ಅಗತ್ಯವಿರುವ ಪ್ರಸಾಧನ, ವಸ್ತುಗಳು ಎಲ್ಲಿ ದೊರಕುತ್ತವೆ ಮತ್ತು ಕಲಾವಿದರುಗಳ ಕುರಿತ ಮಾಹಿತಿ ಕೂಡ ಈ ವೆಬ್‌ಸೈಟ್‌ನಲ್ಲಿದೆ.

-ಚೇತನ. ಜೆ.ಕೆ.

ಟಾಪ್ ನ್ಯೂಸ್

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.