ವೀಕೆಂಡ್‌ ವಿತ್‌ ಲಾಲ್‌ಬಾಗ್‌ ಭೋಜನ!


Team Udayavani, Sep 2, 2017, 3:12 PM IST

7.jpg

ಲಾಲ್‌ಬಾಗ್‌ ಎಂದರೆ ದುಂಬಿಗಳಿಗೆ ಭರ್ಜರಿ ಭೋಜನ ತಾಣ. ಅಲ್ಲಿ ಅರಳಿದ ಸಹಸ್ರಾರು ಬಗೆಯ ಹೂವುಗಳ ಮೇಲೆ ಕುಳಿತು, ಅವು ಮಕರಂದ ಹೀರುತ್ತಾ, ನಮಗ್ಯಾರಿಗೂ ಕೇಳದ ಸದ್ದಿನಲ್ಲಿ ತೇಗುತ್ತಾ ಇರುವುದನ್ನು ನೋಡುವುದೇ ಒಂದು ಚೆಂದ. ಆದರೆ, “ಅವನ್ನು ನೋಡಿ ನಮಗೇಕೆ ಹೊಟ್ಟೆಕಿಚ್ಚು? ನಾವೂ ಆ ಲಾಲ್‌ಬಾಗ್‌ಗೆ ಹೋಗಿ, ಆ ಮರಗಳ ಕೆಳಗೆ ಕುಳಿತು, ಭರ್ಜರಿ ಉಂಡು ಬರೋಣ’ ಎನ್ನುವ ಧ್ವನಿಯೊಂದು ಈಗೀಗ ಜೋರಾಗಿದೆ. ಅದು “ಉದ್ಯಾನ ಭೋಜನಪ್ರಿಯ’ರ ಉತ್ಸಾಹದ ಸ್ವರ.

ಹೌದು, ವೀಕೆಂಡಿನಲ್ಲಿ ಲಾಲ್‌ಬಾಗ್‌ ಕೇವಲ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿ ಮಾತ್ರವೇ ಉಳಿದಿಲ್ಲ. ಅದೀಗ ಭೋಜನಶಾಲೆ. ಅಲ್ಲಿ ಹೂವುಗಳ ಪರಿಮಳ ಮಾತ್ರ ಮೂಗಿಗೆ ತಾಕುವುದಿಲ್ಲ. ಬಗೆ ಬಗೆಯ ಖಾದ್ಯ, ಒಗ್ಗರಣೆಯ ಪರಿಮಳವೂ ಪ್ರವಾಸಿಗರ ಮೂಗನ್ನು ಅರಳಿಸುತ್ತದೆ. ಬೆಂಗಳೂರಿನ ಯಾವುದೇ ಫೈವ್‌ಸ್ಟಾರ್‌ ಹೋಟೆಲ್‌ ಕೊಡದ ಭೋಜನ ಸಂತೃಪ್ತಿ, ಲಾಲ್‌ಬಾಗ್‌ನ ವೀಕೆಂಡ್‌ ಭೋಜನದಲ್ಲಿ ಸಿಗುತ್ತದೆ!

ಅರೆ, ಇದೇನು ಅಂತೀರಾ? ಇಲ್ಲಿ ಕೇಳಿ… ವಾರಾಂತ್ಯದಲ್ಲಿ ಜನ ಇಲ್ಲಿಗೆ ಬಂದು, ಇಲ್ಲಿನ ಶಾಂತ ವಾತಾವರಣದಲ್ಲಿ ಕಾಲ ಕಳೆಯುತ್ತಾರೆ. ಮನೆಯಿಂದ ಕಟ್ಟಿಕೊಂಡ ಬಗೆಬಗೆಯ ಭಕ್ಷ್ಯಗಳ ಡಬ್ಬಿಗಳನ್ನು ತೆರೆದು, ಸ್ನೇಹಿತರೊಂದಿಗೆ, ಕುಟುಂಬದವರ ಜೊತೆ ಇಲ್ಲಿಯೇ ಊಟ ಸವಿಯುತ್ತಾರೆ. ಮಹಾನಗರದಲ್ಲಿ ಈ ಟ್ರೆಂಡ್‌ ಪ್ರತಿವಾರ ಹೆಚ್ಚಾಗುತ್ತಿದ್ದು, “ಉದ್ಯಾನ ಭೋಜನ’ ಅಂತಲೇ ಫೇಮಸ್ಸಾಗಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಇರುವ ವನಭೋಜನದಂತೆ ಇದು ಕೂಡ ಸಿಟಿಯಲ್ಲಿ ನಡೆಯುವ ವನಭೋಜನ! ಇಲ್ಲಿ ವನ ಕಾಣಸಿಗುವುದು ಅಪರೂಪವಾದರೂ, ಇರುವಂಥ ಮರಗಳ ಕೆಳಗೆ, ಅದೇ ಕಾಡೆಂದು ತಿಳಿದು, ಧ್ಯಾನಸ್ಥರಾಗುವ ಗುಣ ಮಹಾನಗರದ ಮಹಾಜನಕ್ಕೆ ದಕ್ಕಿದೆ.

ಏನಿದು ಉದ್ಯಾನ ಭೋಜನ?
ಉದ್ಯಾನ ಭೋಜನ ಎಂದರೆ, ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ ಅಲ್ಲಿನ ಆ ವಾತಾವರಣದಲ್ಲಿ ಎಲ್ಲರೂ ಒಂದಾಗಿ ಆಹಾರವನ್ನು ಸವಿಯುವುದೇ ಆಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ವನಭೋಜನ ನಡೆಸುತ್ತಾರೆ. ಆದರೆ, ಇಲ್ಲಿ ಯಾರೂ ಅಂಥ ವಿಶೇಷ ಸಂದರ್ಭಗಳಿಗೆ ಕಾಯುವುದಿಲ್ಲ. ಶನಿವಾರ, ಭಾನುವಾರ ಬಂತೆಂದರೆ, ಬುತ್ತಿಗಳನ್ನು ಕೊಂಡೊಯ್ದು, ಅಲ್ಲಿ ಊಟ ಸವಿಯುತ್ತಾರೆ.

ಮುಖ ದರ್ಶನ ಭಾಗ್ಯ!
ಬೆಂಗಳೂರಿನ ಈ ಒತ್ತಡದ ಬದುಕಿನಲ್ಲಿ ಕುಟುಂಬದವರ ಮುಖ ನೋಡುತ್ತಾ, ಊಟ ಮಾಡುವುದೇ ಕಡಿಮೆಯಾಗಿದೆ. ಅಂಥದ್ದರಲ್ಲಿ ಉದ್ಯಾನ ಭೋಜನ ಈ ಮುಖದರ್ಶನ ಭಾಗ್ಯವನ್ನೂ ಕಲ್ಪಿಸುತ್ತಿದೆ. ಅಲ್ಲದೇ, ಇಲ್ಲಿ ಮನೆಯ ಹಿರಿಯರು ಕೈತುತ್ತು ಕೊಡುವ ದೃಶ್ಯಗಳನ್ನೂ ಕಾಣಬಹುದಾಗಿದೆ. ಗಿಡಮರಗಳ ಆ ತಂಪುಗಾಳಿ, ಹಕ್ಕಿಗಳ ಚಿಲಿಪಿಲಿ ಸದ್ದುಗಳು, ಉದ್ಯಾನ ಭೋಜನಕ್ಕಾಗಿಯೇ ಹಾಕಿದ ನಿಸರ್ಗದ ಸಂಗೀತ ಎಂಬಂತಿದೆ

ಲಾಲ್‌ಬಾಗ್‌ ಮಾತ್ರವಲ್ಲ!
ಅಂದಹಾಗೆ, ಉದ್ಯಾನ ಭೋಜನದ ಈ ಟ್ರೆಂಡ್‌ ಕೇವಲ ಲಾಲ್‌ಬಾಗ್‌ನಲ್ಲಿ ಮಾತ್ರವೇ ಕಾಣಸಿಗುವುದಿಲ್ಲ. ಕಬ್ಬನ್‌ ಪಾರ್ಕ್‌, ಜೆ.ಪಿ. ಪಾರ್ಕ್‌, ಜಿಂಕೆ ಪಾರ್ಕ್‌ಗಳಲ್ಲೂ ಇಂಥ ದೃಶ್ಯಗಳು ಸಾಮಾನ್ಯವಾಗಿರುತ್ತವೆ. ಕೆಲಸದೊತ್ತಡವನ್ನು ಮರೆಯುತ್ತಾ, “ನಗುವೇ ಈ ನಗರಿಯ ನಗದು ಬಹುಮಾನ’ ಎಂಬಂಥ ಖುಷಿಯಲ್ಲಿ ಎಲ್ಲರೂ ತೇಲುತ್ತಿರುತ್ತಾರೆ. ಅನೇಕ ಸಲ ಮಳೆಗೂ ಅಂಜದೇ, ಈ ಉದ್ಯಾನ ಭೋಜನ ಭರ್ಜರಿಯಾಗಿ ಸಾಗುವುದನ್ನು ನೀವು ನೋಡಬಹುದು.

ವಾರಾಂತ್ಯದಲ್ಲಿ ಲಾಲ್‌ಬಾಗ್‌ ವಿಶೇಷವಾಗಿ ಕಳೆಗಟ್ಟುತ್ತದೆ. ಆ ಎರಡು ದಿನ ಸುಮಾರು ಆರೇಳು ಸಾವಿರ ಜನರು ಬರುತ್ತಾರೆ. ಆದರೆ, ಈಗೀಗ ಅನೇಕ ಕುಟುಂಬಗಳು ಊಟದ ಡಬ್ಬಿಗಳನ್ನು ಮನೆಯಿಂದ ತಂದು, ಇಲ್ಲಿಯೇ ಸವಿಯುತ್ತಾರೆ.
– ಚಂದ್ರಶೇಖರ್‌, ಉಪನಿರ್ದೇಶಕರು, ಲಾಲ್‌ಬಾಗ್‌

ನಾವು ಲಾಲ್‌ಬಾಗ್‌ಗೆ ತಿಂಗಳಲ್ಲಿ ಒಮ್ಮೆಯಾದರೂ ಊಟ ಕಟ್ಟಿಕೊಂಡು ಬರುತ್ತೇವೆ. ಕುಟುಂಬದೊಡನೆ, ಈ ಹಸಿರ ನಿಸರ್ಗದ ನಡುವೆ, ಶಾಂತ ವಾತಾವರಣದಲ್ಲಿ ಊಟ ಸವಿಯುವ ಖುಷಿಯೇ ಬೇರೆ.
– ಪ್ರಭಾಕರ್‌, ಮಲ್ಲೇಶ್ವರಂ ನಿವಾಸಿ

ಸೌಮ್ಯಶ್ರೀ ಎನ್‌.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.