ಬಾಹುಬಲಿ ಅಭಿಷೇಕಕ್ಕೆ ಏನು ಬಳಸುತ್ತಾರೆ ?
Team Udayavani, Feb 17, 2018, 12:13 PM IST
ಅಭಿಷೇಕಕ್ಕೆ ಬೇಕಾದ ಪರಿಕರಗಳನ್ನು 8 10 ದಿನಕ್ಕೆ ಮೊದಲು ಸಿದ್ಧಗೊಳಿಸುತ್ತಾರೆ. ಇದನ್ನು ಸಿದ್ಧ ಗೊಳಿಸುವುದು ಬೇರಾರು ಅಲ್ಲ. ಭಕ್ತರೇ. ಪಾರಂಪರಿಕ ಶೈಲಿಯಲ್ಲಿ, ಜೈನ ಸಂಪ್ರದಾಯಗಳನ್ನು ಅನುಸರಿಸಿಯೇ ಇವುಗಳನ್ನು ತಯಾರಿಸುವುದು. ಹೆಚ್ಚಾ ಕಡಿಮೆ 700 800 ಜನ ಈ ಕೆಲಸವನ್ನು ಮಾಡುತ್ತಾರಂತೆ.
ಮೊದಲ ದಿನ 500 ಕಳಸದಷ್ಟು ಮಜ್ಜನವಾಗುತ್ತದೆ. ನಂತರ ಇದರಲ್ಲಿ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಇದರಲ್ಲಿ 300ಲೀ. ಹಾಲು, 300ಲೀ. ಕಬ್ಬಿನಹಾಲು, 20ಕೆ.ಜಿ ಚಂದನದ ಪುಡಿ, ಅಷ್ಟೇ ಪ್ರಮಾಣದಲ್ಲಿ ಶ್ರೀಗಂಧದ ಪುಡಿ, ಸರಿಸುಮಾರು 1ಕೆಜಿಯಷ್ಟು ಕೇಸರಿ, 50ಕೆ.ಜಿಯಷ್ಟು ಅರಿಶಿಷಣ ಪುಡಿ, ಒಂದು ಟನ್ ನಷ್ಟು ಕಲ್ಕ ಚೂರ್ಣವನ್ನು ಬಳಸುತ್ತಾರೆ.
ಸುರಳಿಗಳೇ ಕೇಶಗಳು..
ಬಾಹುಬಲಿಯಲ್ಲಿ 64 ಕೇಶ ಸುರಳಿಗಳ ಕೇಶವಿನ್ಯಾಸದಿಂದ ಕೂಡಿದೆ. ಬಾಹುಬಲಿಯನ್ನು ಕೆತ್ತಿಸಿದ ಚಾಮುಂಡರಾಯ ಅಪ್ಪಟ ಕನ್ನಡಪ್ರೇಮಿ. ಆತ ಚಾವುಂಡರಾಯ ಪುರಾಣ ಅನ್ನೋ ಕಾವ್ಯವನ್ನೇ ಬರೆದಿದ್ದಾನೆ. ಗೊಮ್ಮಟನ ಪಾದದ ಬಳಿ ಕನ್ನಡದ ಕೆತ್ತನೆಯೂ ಇದೆ. ಗುರು ನೇಮಿಚಂದ್ರ ರಚಿಸಿದ ಗೊಮ್ಮಟಸಾರ ಕೃತಿಗೆ ಪ್ರಾಕೃತ ಭಾಷೆಯಲ್ಲಿ ಚಾಮುಂಡರಾಯ ರಚಿಸಿದ ವ್ಯಾಖ್ಯಾನಗ್ರಂಥ ವೀರಮತ್ತಂಡಿ ಅಂತ. ಹೀಗೆ ಚಾಮುಂಡರಾಯನ ಮಾತೃಭಾಷೆ ಕನ್ನಡವೇ ಆಗಿತ್ತು.
ಸಾಲದ ಅಡವು
ಒಡೆಯರ ಕಾಲದಲ್ಲಿ ಗೋಮ್ಮಟೇಶ್ವರಿಗೆ ಸೇರಿದ ಭೂಮಿಯನ್ನು ಕೆಲವುರ ಸಾಲಕ್ಕಾಗಿ ಅಡವಿಟ್ಟಿದ್ದರಂತೆ. ವಿಷಯ ತಿಳಿದ ಚಾಮರಾಜ ಒಡೆಯರು ಅಡವಿಟ್ಟುಕೊಂಡಿದ್ದವರನ್ನು ಕರೆಸಿ ಅಡವಿಟ್ಟ ಸಾಲವನ್ನು ತೀರಿಸುತ್ತೇವೆ ಎಂದಾಗ ಅವರು ಭೂಮಿಯನ್ನು ಬಿಟ್ಟಕೊಟ್ಟರಂತೆ.
ಅಮೆರಿಕದಲ್ಲಿ ಅತ್ಯಂತ ಹಳೆಯ ಬಾಹುಬಲಿ
ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟಿನ್ ವಸ್ತು ಸಂಗ್ರಾಹಾಲಯದಲ್ಲಿ ಸುವರ್ಣ ಲೇಪಿತ ಪಂಚಲೋಹದ ಬಾಹುಬಲಿಯ ಮೂರ್ತಿಯೊಂದಿದೆ. 11.1 ಸೆಂ.ಮೀ ಇರುವ ಈ ಮೂರ್ತಿಯನ್ನು ಸ್ಯಾಮ್ಯೂಯಲ್ ಎಲಿನ್‌ಬರ್ಗ್ ಎಂಬುವವರು 1987ರಲ್ಲಿ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಸ್ತು ಸಂಗ್ರಹಾಲಯದ ದಾಖಲೆಗಳ ಪ್ರಕಾರ, ಈ ಮೂರ್ತಿಯು ಕರ್ನಾಟಕದಿಂದ ಬಂದಿದ್ದು, ಬಾದಾಮಿ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದ್ದು ಎಂದಿದೆ. 6-7ನೆಯ ಶತಮಾನದ್ದೆಂದು ಹೇಳಲಾಗಿದೆ.
ಈ ಮೂರ್ತಿಯ ಬಗ್ಗೆ ಅಧ್ಯಯನ ಮಾಡಿದ ನಾಡೋಜ ಪೊ›. ಹಂ.ಪ ನಾಗರಾಜಯ್ಯನವರು ಇದು “ಇದುವರೆಗೂ ಉಳಿದು ಬಂದಿರುವ ಬಾಹುಬಲಿ ಮೂರ್ತಿಗಳಲ್ಲಿಯೇ ಅತ್ಯಂತ ಪ್ರಾಚೀನತಮ ಎಂದಿದ್ದಾರೆ. ಅವರು ಸಂಶೋಧಿಸಿದ ಪ್ರಕಾರ ಮೂರ್ತಿಯ ಕಾಲ ಐದು-ಆರನೆಯ ಶತಮಾನಕ್ಕೆ ಸಲ್ಲುತ್ತದೆ. ಈ ಆಧಾರದ ಮೇಲೆ ಮೂರ್ತಿಯ ಕಾಲವನ್ನು ಕದಂಬರ ಆಡಳಿತದ ಕೊನೆಯ ಹಾಗೂ ಬಾದಾಮಿ ಚಾಲುಕ್ಯರ ಆಡಳಿತದ ಪ್ರಾರಂಭದ ಕಾಲಘಟ್ಟ ಎಂದು ಗುರುತಿಸಬಹುದು.
ಮುಂಬೈನಲ್ಲಿ ಶ್ರವಣಬೆಳಗೊಳದ ಬಾಹುಬಲಿ ಮುಂಬೈನ ಮೆಟ್ರೋಪಾಲಿಟಿನ್ ವಸ್ತುಸಂಗ್ರಹಾಲಯದಲ್ಲಿ 8ನೆಯ ಶತಮಾನದ ಕಾಲಾವಧಿಯ ಕಾಯೋತ್ಸರ್ಗದ ಲೋಹದ ಬಾಹುಬಲಿ ಮೂರ್ತಿಯೊಂದಿದೆ. ಇದು ಶ್ರವಣಬೆಳಗೊಳದಿಂದ ತಂದಿದ್ದು ಎಂದು ಹಂ.ಪ ನಾಗರಾಜಯ್ಯನವರು ಹೇಳುತ್ತಾರೆ. ಇದೊಂದು ಸ್ವತಂತ್ರ ವಿಗ್ರಹವಾಗಿದ್ದು, ದುಂಡು ಶಿಲ್ಪದ ಮಾದರಿಯಾಗಿದೆ. ಈ ಮೂರ್ತಿಯ ಅಸ್ತಿತ್ವದಿಂದ 8ನೆಯ ಶತಮಾನದ ಹೊತ್ತಿಗಾಗಲೇ ಕರ್ನಾಟಕದಲ್ಲಿ ಅದರಲ್ಲೂ ಶ್ರವಣಬೆಳಗೊಳದಲ್ಲಿ ಲೋಹದ ಮೂರ್ತಿಗಳನ್ನು ತಯಾರಿಸುವ ಉದ್ಯಮ ಬೆಳೆದಿತ್ತು ಎಂಬುದನ್ನು ಮನಗಾಣಬಹುದು. ಬಾಹುಬಲಿ ಲೋಹದ ಬಿಂಬವು ಚಿಕ್ಕದಾದರೂ ಪ್ರಮಾಣ ಬದ್ಧವಾಗಿದೆ. ಪಾದದ ಹಿಮ್ಮಡಿಯಿಂದ ಹೊರಟ ವಲ್ಲರಿಗಳು ಮೊಣಕಾಲನ್ನು ಬಳಸಿ ತೊಡೆಯ ಮುಂಭಾಗ ಹಿಂಭಾಗವನ್ನು ಆವರಿಸಿದೆ. ಕೈಗಳಿಗೆ ನಿರಾಧಾರ ಬಳ್ಳಿಗಳನ್ನು ಚಿತ್ರಿಸಲಾಗಿದೆ. ಏರುಬಾಚಿದ ಕೂದಲು ಭುಜದ ಮೇಲೂ ಇಳಿದಿದೆ.ನೀಳಕರ್ಣ, ನಾಸಿಕ, ನಯನ, ಕದಪು, ಬಾಹುಗಳು, ಎದೆಯ ಭಾಗ, ಸೊಂಟ,ತೊಡೆ, ಕೈ ಕಾಲುಗಳ ಪ್ರಮಾಣಗಳನ್ನು ಶಿಲ್ಪಿ ಪ್ರಮಾಣಬದ್ಧವಾಗಿ ಕೆತ್ತಿದ್ದಾನೆ.
ಸಾಲದ ಅಡವು
ಒಡೆಯರ ಕಾಲದಲ್ಲಿ ಗೊಮ್ಮಟೇಶ್ವರಿಗೆ ಸೇರಿದ ಭೂಮಿಯನ್ನು ಕೆಲವರು ಸಾಲಕ್ಕಾಗಿ ಅಡವಿಟ್ಟಿದ್ದರಂತೆ. ವಿಷಯ ತಿಳಿದ ಚಾಮರಾಜ ಒಡೆಯರು ಅಡವಿಟ್ಟುಕೊಂಡಿದ್ದವರನ್ನು ಕರೆಸಿ ಅಡವಿಟ್ಟ ಸಾಲವನ್ನು ತೀರಿಸುತ್ತೇವೆ ಎಂದಾಗ ಅವರು ಭೂಮಿಯನ್ನು ಬಿಟ್ಟುಕೊಟ್ಟರಂತೆ.
ಚಿತ್ರಗಳು: ಆಸ್ಟ್ರೋಮೋಹನ್, ಯಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.