ಅಮರ ಕೆಮರ ಕ್ಷಣ


Team Udayavani, Aug 19, 2018, 6:00 AM IST

z-10.jpg

ಬೆಂಗಳೂರಿನ ಯೂತ್‌ ಫೋಟೊಗ್ರಾಫಿಕ್‌ ಸೊಸೈಟಿ (YPS)ಯ ಬಗ್ಗೆ ಎಲ್ಲರಿಗೂ ಗೊತ್ತು. ಇನ್ನು ಮೂರು ವರ್ಷ ಕಳೆದರೆ ಈ ಸಂಸ್ಥೆಗೆ 50 ವರ್ಷಗಳಾಗುತ್ತವೆ. ಕರ್ನಾಟಕ ಸರಕಾರ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಕೆಲವು ಉತ್ಸಾಹಿ ಛಾಯಾಗ್ರಾಹಕರು ಅಂದು ಈ ಸಂಸ್ಥೆಯನ್ನು ಆರಂಭಿಸಿದ್ದರು. ಈಗ (YPS) ಸಂಸ್ಥೆಯು ಅನೇಕ ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಿ ಅನೇಕ ಯುವ ಪ್ರತಿಭಾವಂತ ಛಾಯಾಗ್ರಾಹಕರು ವೇದಿಕೆಗೆ ಬರುವ ಅವಕಾಶ ಒದಗಿಸಿದೆ. ಇತ್ತೀಚೆಗೆ ಹತ್ತನೆಯ ವರ್ಷದ  ಇಂಟರ್‌ನ್ಯಾಷನಲ್‌ Yಕಖ ಸಲಾನ್‌-2018 ಸ್ಪರ್ಧೆಯನ್ನು ಏರ್ಪಡಿತ್ತು. ಈ ಸ್ಫರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನ ಬಂದ ಛಾಯಾಚಿತ್ರಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

ಫೊಟೊ : ಶಿವರುದ್ರಯ್ಯ ಕೆ.

ಈ ಸ್ಪರ್ಧೆಯಲ್ಲಿ 16 ದೇಶಗಳಿಂದ 3639 ಪ್ರವೇಶಿಕೆಗಳು ಬಂದಿದ್ದವು. ಒಟ್ಟು 86 ಫೋಟೊಗಳನ್ನು ವಿವಿಧ ವಿಭಾಗಗಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೋಟೊಗ್ರಫಿಯ ಬಗ್ಗೆ ಮಾತನಾಡುವಾಗಲೆಲ್ಲ ಎರಡು ಸ್ಪಷ್ಟವಾದ ಪ್ರವೃತ್ತಿಗಳು ಗಮನ ಸೆಳೆಯುತ್ತವೆ. ನಮ್ಮಂಥ ಹಿರಿಯರಿಗೆ ಡಾರ್ಕ್‌ರೂಮಿನಲ್ಲಿ ಮಾಡಿದ ಕೆಲಸವೇ ನೆನಪಿಗೆ ಬರುತ್ತದೆ. ಆಗ ರಾತ್ರಿ ಇಡೀ ಕೆಲಸ ಮಾಡಿ ಒಂದು ಫೋಟೊವನ್ನು ಪ್ರಿಂಟ್‌ ಹಾಕಿಸುವುದು ಸಾಧ್ಯವಾಗುತ್ತಿತ್ತು. ಆ ಪ್ರಿಂಟ್‌ನಲ್ಲಿಯೂ ಮ್ಯಾನುವಲ್‌ ಆಗಿ ಅನೇಕ ಕರೆಕ್ಷನ್‌ಗಳನ್ನು ಮಾಡುತ್ತಿದ್ದೆವು. ಅದು, ತಾತ್ವಿಕವಾಗಿ ಸ್ವೀಕೃತವಾದ ಎಡಿಟಿಂಗ್‌ ಆಗಿತ್ತು. ಒಂದು ರೀತಿ ಶಿಲ್ಪವನ್ನು ಕೆತ್ತಿ ರೂಪಿಸಿದ ಹಾಗೆ. “ಸ್ಕಿಲ್‌’ಗೆ ಸಂಬಂಧಿಸಿದ ಕೆಲಸ ಇದು. ಒಂದು ಮೂರ್ತಿಯನ್ನು  ಒಬ್ಬ ಒಮ್ಮೆ ಕೆತ್ತಿ ರೂಪಿಸಿದರೆ ಅದನ್ನು ಮತ್ತೂಬ್ಬ ಕಾಪಿ ಮಾಡಲಾರ. ಮಾಡಿದರೂ ಅದು ಅನುಕರಣೆ ಮಾತ್ರವಾದೀತು. ಆಗಿನ ಕಾಲದ ಫೋಟೊ ಕೂಡಾ ಹಾಗೆಯೇ. ಒಬ್ಬ ಛಾಯಾಗ್ರಾಹಕ ತೆಗೆದ ಫೋಟೊ ಎಕ್ಸ್‌ ಕ್ಲೂಸಿವ್‌ ಆಗಿರುತ್ತಿತ್ತು. ಅವನು ಡಾರ್ಕ್‌ರೂಮಿನಲ್ಲಿ ಮಾಡುವ ಕೆಲಸ ಅವನಿಗೇ ಸಾಧ್ಯವಾಗುವಂಥಾದ್ದು. ಅನ್ಯರಿಗೆ ಅಂಥ ಫೋಟೊ ರೂಪಿಸುವುದು ಅಸಾಧ್ಯ.

ಫೊಟೊ : ನಿಖೀಲ್‌ ಭಕ್ತವತ್ಸಲ್‌

ಡಿಜಿಟಲ್‌ ಟೆಕ್ನಾಲಜಿ ಬಂದ ಮೇಲೆ ಇಂಥ “ಕ್ರಿಯೇಟಿವ್‌ ಡೆಫಿನಿಶನ್‌’ಗಳು ಅಲ್ಲಾಡಿಬಿಟ್ಟಿವೆ. ಒಬ್ಬನಂತೆ ಇನ್ನೊಬ್ಬನಿಗೆ ಛಾಯಾಚಿತ್ರ ತೆಗೆಯುವುದು ಸುಲಭವೆನಿಸುವ ಸ್ಥಿತಿ ಬಂದಿದೆ. ಇದರಿಂದ ಛಾಯಾಗ್ರಾಹಕರು ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಧನಾತ್ಮಕ ಅಂಶವೆಂದು ಕರೆಯ ಬಹುದಾದರೂ ತಮ್ಮ “ಅನನ್ಯತೆ’ಯನ್ನು ಸ್ಥಾಪಿಸಬೇಕಾದರೆ ಯುವ ಪೋಟೊಗ್ರಾಫ‌ರ್‌ಗಳ ಮೇಲೆ ದೊಡ್ಡ ಸವಾಲೇ ಇದೆ; ಅದು ಹಿಂದಿನವರಿಗಿಂತ ದೊಡ್ಡ ಸವಾಲು. ಒಬ್ಬ ಶ್ರಮವಹಿಸಿ ಕ್ಲಿಕ್ಕಿಸಿ ಒಳ್ಳೆಯ ಫೋಟೊ ತೆಗೆದರೂ “ಇದು ಫೋಟೊಶಾಪ್‌ನಲ್ಲಿ ಮಾಡಿರಬೇಕು’ ಎಂದು ಹೀಗಳೆದು ಉದ್ಗರಿಸುವ ಮಂದಿಯೇ ಹೆಚ್ಚು. ಹಾಗಾಗಿ “ಇದು ನನ್ನ ಕೌಶಲದಿಂದಲೇ ತೆಗೆದ ಫೋಟೊ’ ಎಂದು ಸ್ಥಾಪನೆ ಮಾಡಲು ಫೋಟೊಗ್ರಾಫ‌ರ್‌ ತುಂಬ ಪ್ರಯತ್ನ ಪಡಬೇಕಿದೆ.

ನಾನು ಗಮನಿಸಿದಂತೆ, ಇಂಥ ಹೊಸಕಾಲದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲ್ಲಿ ವೈಪಿಎಸ್‌ನ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಡಿಜಿಟಲ್‌ಕ್ರಾಂತಿ ಎಲ್ಲೆಡೆ ಹಬ್ಬಿರುವ ಈ ದಿನಗಳಲ್ಲಿಯೂ ಕೆಲವು ದೇಶಗಳಲ್ಲಿ ಈಗಲೂ “ಪ್ರಿಂಟ್‌’ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ ಎಂದರೆ ನೀವು ನಂಬುತ್ತೀರಾ? ಸಾಫ್ಟ್ ಕಾಪಿಗಿಂತ ಮುದ್ರಿತ ಪ್ರತಿಗಳನ್ನೇ ಅವರು ಇಷ್ಟಪಡುತ್ತಾರೆ. ಹಾಗಾಗಿ, ಈ ಸಲದ ಸ್ಪರ್ಧೆಯಲ್ಲಿ ಮುದ್ರಿತ ಮತ್ತು ಡಿಜಿಟಲ್‌- ಎರಡೂ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಬಂದ ಪ್ರತಿಕ್ರಿಯೆಯೂ ಅತ್ಯುತ್ತಮವಾಗಿತ್ತು.

ಫೊಟೊ : ಪ್ರೇಮಾ ಕಾಕಡೆ

ಅಂತೂ ಎಲ್ಲ ಕ್ಷೇತ್ರಗಳಂತೆ ಫೋಟೊಗ್ರಫಿಯೂ ಒಂದು ಸಂಕ್ರಮಣ ಸ್ಥಿತಿಯಲ್ಲಿದೆ. ಕಾರ್ಖಾನೆಗಳಲ್ಲಿ ಪ್ಲಾಸ್ಟರ್‌ ಆಫ್ ಫ್ಯಾರಿಸ್‌ನ ಮೂರ್ತಿಗಳು ರಾಶಿರಾಶಿಯಾಗಿ ಉತ್ಪಾದನೆಗೊಳ್ಳುತ್ತ ಮನುಷ್ಯನ ಕರಕೌಶಲಕ್ಕೆ ಪ್ರಾಶಸ್ತ್ಯ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನಿಜವಾದ ಕ್ರಿಯೇಟಿವಿಟಿ ಇರುವ ಛಾಯಾಗ್ರಾಹಕನೂ ಒಂದು ರೀತಿಯ ತಲ್ಲಣವನ್ನು ಅನುಭವಿಸುತ್ತಿದ್ದಾನೆ. ಒಳ್ಳೆಯ ಬೆಳಕು, ವರ್ಣದ ಸಂಯೋಜನೆಯಲ್ಲಿ ಫೋಟೊ ತೆಗೆದರೂ, “ಇದು ಡಿಜಿಟಲ್‌, ಈಗ ಇದನ್ನೆಲ್ಲ ತೆಗೆಯುವುದು ಸುಲಭ’ ಎಂಬ ಮಾತನ್ನು ಕೇಳಬೇಕಾಗಿದೆ.

ಹೀಗೆ ಯೋಚಿಸುತ್ತಿರುವಾಗಲೇ ಆಗಸ್ಟ್‌ 19 ಬಂದಿದೆ. ಇಂದು ವರ್ಲ್ಡ್ ಫೋಟೊಗ್ರಫಿ ಡೇ ! ಅಂದ ಹಾಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ  YPS  ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವೂ ಇಂದು ಇದೆ. ಬಹುಮಾನಿತ ಛಾಯಾಚಿತ್ರಗಳ ಪ್ರದರ್ಶನವೂ ಇದೆ.

ಕೆ. ಎಸ್‌. ರಾಜಾರಾಮ್‌

ಟಾಪ್ ನ್ಯೂಸ್

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.