ಗಲಾಟೆಯಿಂದ ಲಾಭ ಜಾಸ್ತಿ
ಇದು ಸೇವಂತಿಗೆ ಹೋಲುವ ಹೂವು
Team Udayavani, Apr 29, 2019, 12:40 PM IST
ಬಸವನ ಬಾಗೇವಾಡಿಯ ಗುರು ಸಿದ್ಧಪ್ಪನವರು ಗಲಾಟೆ ಹೂವನ್ನು ಬೆಳೆಯುತ್ತಿದ್ದಾರೆ. ಕೈತುಂಬ ಫಸಲು, ಜೇಬಿನ ತುಂಬ ಲಾಭ ಗಳಿಸುತ್ತಿರುವ ಇವರು ಮಾದರಿ ರೈತರಾಗಿದ್ದಾರೆ.
ಬರದ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಬಿಸಿಲ ತಾಪಮಾನ ಗರಿಷ್ಠ 35ರಷ್ಟು ಇದೆ. ಹೀಗಿದ್ದರೂ, ಜಿಲ್ಲೆಯಯ ರೈತರು ಸುಮ್ಮನೆ ಕೂತಿಲ್ಲ. ಬಸವನ ಬಾಗೇವಾಡಿ ತಾಲೂಕಿನ ಗುರುಸಿದ್ದಪ್ಪ ಹೂಗಾರರನ್ನೇ ತಗೊಳ್ಳಿ. ಇವರಿಗೆ ಬದುಕಿನಲ್ಲಿ ಯಾವ “ಗಲಾಟೆ’ಯೂ ಇಲ್ಲ. ಏಕೆಂದರೆ, ಇವರು ನಂಬಿರುವ ಗಲಾಟೆ ಹೂ ಕೈ ತುಂಬ ಲಾಭ ತಂದು ಕೊಡುತ್ತಿದೆ.
ಮೊದಲು ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯುತ್ತಿದ್ದರು. ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಂಡರು. ಗೆಳೆಯನ ಸಲಹೆಯಂತೆ ಅರ್ಧ ಎಕರೆಯಲ್ಲಿ ಬೆಳೆದ ಗಲಾಟೆ ಹೂವಿನಿಂದ ಮಾದರಿ ರೈತರಾಗಿದ್ದಾರೆ. ಇವರು ಮಾಸ್ಟರ್ ಆಫ್ ಆರ್ಟ್ಸ್ನಲ್ಲಿ ಡಿಪ್ಲೊಮೋ ಪದವಿ ಪಡೆದಿದ್ದಾರೆ. ಕೆಲಸ ಸಿಗದೇ ಇದ್ದುದರಿಂದ ಕೃಷಿ ಕಡೆ ವಾಲಿದರು. ಗುರುಸಿದ್ದಪ್ಪ ಅವರ ತೋಟದಲ್ಲಿ ಕಾರಣ ಎರಡು ಕೊಳವೆ ಬಾವಿ ಪೈಕಿ ಒಂದರಲ್ಲಿ ಮಾತ್ರ ನೀರಿದೆ. ಇದರಿಂದ ದೀರ್ಘಾವಧಿ ಬೆಳೆ ಬೆಳೆಯಲು ಅಸಾಧ್ಯವೆಂದು ತಿಳಿದು ಕೇವಲ ಅರ್ಧ ಎಕರೆಯಲ್ಲಿ ಮಾತ್ರ ಗಲಾಟೆ ಹೂವನ್ನು ಬೆಳೆಯಲು ನಿರ್ಧರಿಸಿದರು.
70 ರೂ.ಗೆ 100 ಸಸಿಯಂತೆ 5 ಸಾವಿರ ಸಸಿ ಖರೀದಿಸಿ ನಾಟಿ ಮಾಡಿದರು. ಹತ್ತು ದಿನದ ನಂತರ ಹಾಯಿಸುವ ನೀರಿನೊಂದಿಗೆ ಸಾವಯವ ಗೊಬ್ಬರ ಅಥವಾ ಡಿಎಪಿ ಗೊಬ್ಬರವನ್ನ ನೀಡಿದ್ದಾರೆ. ಎರಡು ತಿಂಗಳವರೆಗೆ ಸಸಿಗಳಿಗೆ 3 ದಿನಕ್ಕೆ ಒಂದು ಸಾರಿಯಾದರೂ ಈ ರೀತಿ ನೀರು ಹಾಯಿಸಬೇಕಂತೆ. 60 ದಿನಗಳ ನಂತರ ಸಸಿಗಳು ಹೂ ಬಿಡಲು ಆರಂಭಿಸುತ್ತವೆ.
ಸರಿಯಾಗಿ 3 ತಿಂಗಳು ಆಗುವಷ್ಟರಲ್ಲಿ ಫಸಲು ಕೈಗೆ. ಈ ಹೂವು ನೋಡಲು ಸೇವಂತಿಗೆಯಂತೆ ಕಾಣುತ್ತದೆ. ಇದರಲ್ಲಿ ಹಳದಿ, ಮತ್ತು ಕೆಂಪು ಹೀಗೆ ಬೇರೆ ಬೇರೆ ಬಣ್ಣಗಳ ಹೂವಿಗೆ ಬೇಡಿಕೆ ಹೆಚ್ಚು. ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆ ಗುರುಸಿದ್ದಪ್ಪರ ಗಲಾಟೆ ಹೂ ರವಾನೆಯಾಗುತ್ತದೆ. ಒಟ್ಟಾರೆ ಈ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದರೂ ಇಲ್ಲಿಯ ರೈತರು ಸಮೃದ್ದ ಬೆಳೆ ಬೆಳೆದು ಸುಂದರ ಬದುಕನ್ನು ಕಡ್ಡಿಕೊಂಡಿದ್ದಾರೆ.
ಸಸಿ ನಾಟಿ ಮಾಡುವುದು ಹೇಗೆ ?
ಮೊದಲು ಜಮೀನನ್ನ ಹದಗೊಳಿಸಿರಬೇಕು. ಬಳಿಕ ಟ್ರ್ಯಾಕ್ಟರ್ ಮೂಲಕ 3 ಅಡಿ ಅಂತರದಲ್ಲಿ ಸಾಲುಗಳನ್ನ ಬಿಡಿಸಬೇಕು. ಅವು ಹಸಿಹಸಿಯಾಗಿರುವುದಕ್ಕೆ ನೀರು ಹಾಯಿಸಿ, 2 ಅಡಿ ಅಳತೆಗೊಂದರಂತೆ ಸಸಿ ನಾಟಿ ಮಾಡಬೇಕು. “ಜಮೀನಿನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ ಡ್ರಿಪ್ ಇರಿಗೇಷನ್ ಮಾಡುವುದು ಸೂಕ್ತ. ನೀರು ಜಾಸ್ತಿ ಇದ್ದರೆ ನಮ್ಮಂತೆ ಹಾಯಿಸುವುದರ ಮೂಲಕ ನೀರುಣಿಸಬಹುದು. 3 ದಿನಕ್ಕೆ ಒಮ್ಮೆ ನೀರು ಬಿಟ್ಟರೆ ಸಾಕು. ಸಸಿ ನಾಟಿಮಾಡಿದ 2 ತಿಂಗಳಲ್ಲಿ ಗೊಬ್ಬರ ಕೊಡಬೇಕು. 3 ತಿಂಗಳಲ್ಲಿ ಬಂಪರ್ ಬೆಳೆ ಬರುತ್ತದೆ ಎನ್ನುತ್ತಾರೆ ಗುರುಸಿದ್ದಪ್ಪ.
ಇವರಿಗೆ ಅರ್ಧ ಎಕರೆಗೆ ಅಂದಾಜು 6 ರಿಂದ 7 ಸಾವಿರ ಖರ್ಚಾಗಿದ್ದು, 60 ರಿಂದ 70 ಸಾವಿರದವರೆಗೂ ಗಳಿಸಬಹುದಂತೆ. 3 ತಿಂಗಳ ಬಳಿಕ ಹೂ ಕಟಾವು ಮಾಡಿ ಮಾರುಕಟ್ಟೆ ಸಾಗಿಸಬಹುದು. ಅಮಾವಾಸ್ಯೆ ಮತ್ತು ಹಬ್ಬ ಹರಿದಿನಗಳಲ್ಲಿ ಕೆ.ಜಿಗೆ ಅಂದಾಜು 100 ರಿಂದ 150 ರವರೆಗೂ ಮಾರಾಟವಾಗುತ್ತದೆ. ಇನ್ನುಳಿದ ದಿನಗಳಲ್ಲಿ ಕನಿಷ್ಠ 30 ರಿಂದ 60 ರೂ ವರೆಗೆ ಮಾರಾಟವಾಗುತ್ತದೆ.
— ಪ್ರಶಾಂತ್ ಜಿ. ಹೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.