10 ರೂ. ಕೊಟ್ರೆ 5 ಇಡ್ಲಿ,3 ರೂ. ಕೊಟ್ರೆ ಖಡಕ್‌ ಚಹ


Team Udayavani, Aug 27, 2018, 6:20 AM IST

hotel-2.jpg

ಈ ಹೋಟೆಲ್‌ ನೋಡುವುದಕ್ಕೆ ಬಡವರ ಮನೆಯಂತೆ ಕಾಣುತ್ತೆ, ಆದರೆ, ಇಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಇಡ್ಲಿ ತಿಂದು ಹೋಗುತ್ತಾರೆ. ಬೆಲೆ ಕೇಳುವುದೇ ಬೇಡ, ದೊಡ್ಡ ಹೋಟೆಲ್‌ಗ‌ಳಲ್ಲಿ ಕೊಡುವ ಟಿಪ್ಸ್‌ಗಿಂತ ಕಡಿಮೆಯೇ. ಅಂಥಾ ಒಂದು ಇಡ್ಲಿ ಹೋಟೆಲ್‌ ಬರದನಾಡು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಕೇಂದ್ರದಲ್ಲಿದೆ.

ಕನಕಗಿರಿ ಪಟ್ಟಣದ ಅಂಬೇಡ್ಕರ್‌ ಸರ್ಕಲ್‌ನಲ್ಲಿರುವ ಈ ಹೋಟೆಲ್‌ ಇಡ್ಲಿಗೆ ಫೇಮಸ್ಸು. ರೈತರು, ಕೂಲಿ ಕಾರ್ಮಿಕರು, ಬಡಜನರ ಹಸಿವು ನೀಗಿಸಲು ಲಕ್ಷ್ಮಣ ಮಡಿವಾಳ್‌ ಸುಮಾರು 26 ವರ್ಷಗಳ ಹಿಂದೆ ಕನಕಗಿರಿಯಲ್ಲಿ ಪುಟ್ಟ ಹೋಟೆಲ್‌ ಅನ್ನು ಪ್ರಾರಂಭಿಸಿದ್ದರು. ಇವರು ವೃತ್ತಿಯಲ್ಲಿ ಹೋಟೆಲ್‌ ಉದ್ಯಮಿಯಲ್ಲ. ಬಡ ಕುಟುಂಬದಲ್ಲೇ ಹುಟ್ಟಿದ್ದ ಇವರು, ಜನರ ಹಸಿವು ನೀಗಿಸುವ ಸಲುವಾಗಿ ಹೋಟೆಲ್‌ ಆರಂಭಿಸಿದ್ದರು. ಶುಚಿ, ರುಚಿಯಾಗಿ ಮನೆಯಲ್ಲೇ ಮಾಡಿದ ಇಡ್ಲಿ ಹಾಗೂ ಶೆಂಗಾ ಚಟ್ನಿಯನ್ನು ಗ್ರಾಹಕರಿಗೆ ಕೊಡ್ತಾರೆ. ಜೊತೆಗೆ ಚಹವನ್ನೂ…

10 ರೂ.ಗೆ 5 ಇಡ್ಲಿ:
ಮೊದಲು ಉಪಾಹಾರ ಸೇವಿಸಿ ನಂತರ ದುಡ್ಡು ಕೊಡಿ ಎಂಬುದು ಲಕ್ಷ್ಮಣರ ಮಾತು. ಲಾಭದ ದೃಷ್ಟಿ ಹೊಂದಿರದ ಇವರು, ಬೆಳಗ್ಗಿನ ಉಪಾಹಾರಕ್ಕೆ ಬಿಸಿಬಿಸಿಯಾದ ಮತ್ತು ಶುಚಿಯಾದ ಇಡ್ಲಿ, ಶೇಂಗಾ ಚಟ್ನಿ ಕೊಡ್ತಾರೆ. ಇಲ್ಲಿ 10 ರೂ.ಗೆ ಚಿಕ್ಕಗಾತ್ರದ ಐದು ಇಡ್ಲಿಗಳು ಲಭ್ಯ. ಇಡ್ಲಿ ತಿಂದ್ರೆ ಸಾಕು, ಹೊಟ್ಟೆ ತುಂಬುತ್ತೆ. ಜೊತೆಗೆ 3 ರೂ. ಕೊಟ್ರೆ ಖಡಕ್‌ ಚಹಾ ಕೂಡ ಸಿಗುತ್ತೆ. 

ಪತ್ನಿ, ಮಕ್ಕಳೂ ಸಾಥ್‌:
ಲಕ್ಷ್ಮಣ್‌ ಅವರ ಪತ್ನಿ ರತ್ನಮ್ಮ, ಮಕ್ಕಳಾದ ಅಮರೇಶ್‌, ಚೈತ್ರಾ ಕೂಡ ಹೋಟೆಲ್‌ನಲ್ಲೇ ಕೆಲಸ ಮಾಡುತ್ತಾರೆ. ಮತ್ತೂಬ್ಬ ಮಗ ಗಣೇಶ್‌ ಗೂಡ್ಸ್‌ ವಾಹನಗಳನ್ನು ಓಡಿಸುತ್ತಾ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.

ಎಲ್ಲಾ ದಿನಗಳಲ್ಲೂ ತೆರೆದಿರುತ್ತೆ:
ಈ ಹೋಟೆಲ್‌ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ರೆ ಮಾತ್ರ ಹೋಟೆಲ್‌ ಬಂದ್‌ ಮಾಡಲಾಗುತ್ತದೆ. ಇಲ್ಲದಿದ್ರೆ ವರ್ಷ ಪೂರ್ತಿ ಹೋಟೆಲ್‌ ತೆರೆದಿರುತ್ತದೆ.

ಪೊಲೀಸರು, ಡಾಕ್ಟರ್‌ಗಳು ಬರ್ತಾರೆ:
ಕಟ್ಟಿಗೆ ಓಲೆಯಲ್ಲೇ ಇಡ್ಲಿಯನ್ನು ಬೇಯಿಸುವ ಲಕ್ಷ್ಮಣ, ಪ್ರತಿ 15 ನಿಮಿಷಕ್ಕೊಮ್ಮೆ ಒಂದು ಬಾರಿಗೆ 100 ಇಡ್ಲಿ ತಯಾರಿಸಿ ಗ್ರಾಹಕರಿಗೆ ಬಿಸಿಬಿಸಿಯಾಗಿಯೇ ಕೊಡುತ್ತಾರೆ. ಇಲ್ಲಿ ದರ ಕಡಿಮೆ ಮತ್ತು ಟೇಸ್ಟ್‌ ಕೂಡ ಚೆನ್ನಾಗಿದೆ ಎಂಬ ಕಾರಣಕ್ಕೆ ಪೊಲೀಸರು, ಸರ್ಕಾರಿ ಆಸ್ಪತ್ರೆ ವೈದ್ಯರು, ನರ್ಸ್‌ಗಳು, ಸರ್ಕಾರಿ ನೌಕರರು ಹೀಗೆ ಎಲ್ಲಾ ವರ್ಗದ ಜನರೂ ಬರ್ತಾರೆ.
 
ಲಾಭ ಮಾಡುವ ಆಸೆ ಇಲ್ಲ:
ಇಷ್ಟು ಕಡಿಮೆ ಬೆಲೆಗೆ ಇಡ್ಲಿ ಕೊಟ್ರೆ ನಿಮಗೆ ಲಾಸ್‌ ಆಗಲ್ವಾ ಅಂಥಾ ಕೇಳಿದ್ರೆ, ಇಲ್ಲ ಸಾರ್‌, ಪ್ರತಿದಿನ 2 ರಿಂದ 2500 ರೂ. ವರೆಗೆ ವ್ಯಾಪಾರ ಆಗುತ್ತದೆ. ಎಲ್ಲಾ ಖರ್ಚು ಕಳೆದು 500 ರೂ. ಉಳಿಯುತ್ತದೆ. ಅದರಲ್ಲೇ ಸಂಸಾರ ನಡೆಯುತ್ತೆ. ಅಡುಗೆಗೆ ಕಟ್ಟಿಗೆ ಬಳಸುತ್ತೇವೆ. ಹೋಟೆಲ್‌ ಕೆಲಸಕ್ಕೆ ನಮ್ಮ ಮನೆಯವರೇ ಇರುವುದರಿಂದ ಖರ್ಚು ಕೂಡ ಕಡಿಮೆ. ನಮಗೆ ಲಾಭ ಮಾಡಬೇಕೆಂಬ ಆಸೆ ಇಲ್ಲ ಸಾರ್‌, ಜನರು ಹೊಟ್ಟೆ ತುಂಬಾ ಊಟ ಮಾಡಿ ಖುಷಿ ಪಟ್ರೆ ಅದೇ ಸಮಾಧಾನ ಅನ್ನುತ್ತಾರೆ  ಲಕ್ಷ್ಮಣ. 1 ರೂ. ದಾನ ಮಾಡಲೂ ಹಿಂದೆ ಮುಂದೆ ನೋಡುವ ಜನರಿರುವ ಈ ದಿನಗಳಲ್ಲಿ ಲಕ್ಷ್ಮಣ ಅವರ ಅನ್ನ ದಾಸೋಹ ಸೇವೆ ಮೆಚ್ಚುವಂಥದ್ದು.

– ಭೋಗೇಶ ಎಂ.ಆರ್‌.

ಟಾಪ್ ನ್ಯೂಸ್

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.