ಹೂಡಿಕೆಗೆ 5 ಸಿಪ್
Team Udayavani, Mar 26, 2018, 6:41 PM IST
ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವವರಿಗೆ ಈ ಎಸ್.ಐ.ಪಿ ಬಗ್ಗೆ ತಿಳಿದಿರುತ್ತದೆ. ಎಸ್.ಐ.ಪಿ. ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್. ಇದನ್ನು ಅಚ್ಚಕನ್ನಡದಲ್ಲಿ ಕ್ರಮಬದ್ಧ ಹೂಡಿಕೆ ಯೋಜನೆ ಎಂದೂ ಕರೆಯಬಹುದು. ತಿಂಗಳ ಸಂಬಳದಲ್ಲಿ ಒಂದಷ್ಟು
ಮೊತ್ತವನ್ನು ಮ್ಯೂಚುವಲ್ ಫಂಡಿಗೆ ಹಾಕುವ ಅಭ್ಯಾಸ ಖಂಡಿತ ಒಳ್ಳೆಯದೇ. ಅದಕ್ಕಾಗಿಯೇ ಮ್ಯೂಚುವಲ್ ಫಂಡ್ ಗಳು ಎಸ್.ಐ.ಪಿ.ಯನ್ನು ಜಾರಿಗೆ ತಂದಿವೆ. ನಿಮ್ಮ ಬ್ಯಾಂಕಿಗೆ ಸ್ಟಾಂಡಿಂಗ್ ಇನ್‌ಸ್ಟ್ರನ್ ಕೊಟ್ಟರೆ ಸಾಕು. ಪ್ರತಿ ತಿಂಗಳೂ ನಿಗದಿಯಾದ ದಿನದಂದು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಆಯಾ ಮ್ಯೂಚುವಲ್ ಫಂಡಿಗೆ ಜಮೆಯಾಗುತ್ತದೆ. ಮತ್ತು ಅಂದಿನ ನೆಟ್ ಅಸೆಟ್ ವಾಲ್ಯೂ ಆಧಾರದಲ್ಲಿ ನಿಮ್ಮ ಎಸ್.ಐ.ಪಿ. ಮೊತ್ತಕ್ಕೆ ಅನುಗುಣವಾದ ಯುನಿಟ್‌ಗಳ ಧಾರಕರು ನೀವಾಗುತ್ತೀರಿ.
ಆದರೆ ಈ ಎಸ್.ಐ.ಪಿ. ಒಳ್ಳೆಯದೇ? ಅದರಿಂದ ಲಾಭವಿದೆಯೇ? ಈಗ ಈಕ್ವಿಟಿ ಮಾರುಕಟ್ಟೆ ಸತತ ಕುಸಿತಗಳನ್ನು ಕಾಣುತ್ತಿರುವ ಸಂದರ್ಭದಲ್ಲಿ ಎಸ್.ಐ.ಪಿ. ಮುಂದುವರಿಸಬೇಕೇ? ಬೇಡವೇ? ಎಂಬ ಪ್ರಶ್ನೆಗಳು ಕೆಲವು ಹೂಡಿಕೆದಾರರಲ್ಲಿ ಮೂಡುವುದು ಸಹಜ. ಏಕೆಂದರೆ ಇತ್ತೀಚಿನ ತಿಂಗಳುಗಳಲ್ಲಿ ಎಸ್.ಐ.ಪಿ.ಯಿಂದ ಹೂಡಿಕೆದಾರನಿಗೆ ನೆಗೆಟಿವ್ ರಿಸಲ್ಟ್ ದೊರೆಯುತ್ತಿದೆ. ಅಂದರೆ ಅವರು ಹೂಡಿದ ಮೊತ್ತ ಇಳಿಜಾರು ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡುತ್ತ ಬಂದಿದ್ದಾರೆ. ಯಾರೂ ಕೂಡ ನಷ್ಟದ ಹೂಡಿಕೆಯನ್ನು ಬಯಸುವುದಿಲ್ಲ ಅಲ್ಲವೇ? ಹಾಗಾಗಿ ಇಲ್ಲೊಂದು ಚಿಂತನ-ಮಂಥನ ಆಗಬೇಕು.
1. ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಒಂದೇ ವರುಷದಲ್ಲಿ ಲಾಭದ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಅದು ದೀರ್ಘಾವಧಿಯ ಹೂಡಿಕೆಯಾದಲ್ಲಿ ಮಾತ್ರ ಒಳ್ಳೆ ಲಾಭ ಸಿಗುತ್ತದೆ. ಈ ಹಿಂದಿನ ಟ್ರಾಕ್‌ರೆಕಾರ್ಡ್ ಗಮನಿಸಿದರೆ ಇದು ವೇದ್ಯವಾಗುತ್ತದೆ. ಅಂದರೆ 5 ರಿಂದ 10 ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟು ಫಂಡ್ ಹೂಡಿಕೆ ಮಾಡಬೇಕು. ಒಂದೇ ವರುಷದಲ್ಲಿ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ಯೋಜನೆಗಳು ಶೇ. 30-40ರಷ್ಟು ಲಾಭಾಂಶವನ್ನು ದಾಖಲಿಸಿದ್ದೂ ಇದೆ. ಆದರೆ ಇನ್ನು ಕೆಲವು ಫಂಡ್‌ಗಳು ನಷ್ಟದಲ್ಲಿ
ಮುನ್ನಡೆದಿವೆ.
2. ಹಾಗಿದ್ದರೆ ನಷ್ಟದ ಮ್ಯೂಚುವಲ್ ಫಂಡ್‌ಗಳಲ್ಲಿರುವ ಮೊತ್ತವನ್ನು ಬೇರೆ ಫಂಡ್/ ಹೂಡಿಕೆಗಳಿಗೆ ವರ್ಗಾಯಿಸಬೇಕೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸಲ್ಲದು. ಆದರೆ ನೀವು ಹೂಡಿಕೆ ಮಾಡಿ ಮೂರು ವರುಷಗಳು ಕಳೆದ ನಂತರವೂ ಆ ಫಂಡ್ ಇನ್ನೂ ಲಾಭದತ್ತ ಮುಖ ಮಾಡಿಲ್ಲ ಎಂದಾದರೆ ಬೇರೆ ಫಂಡಿನತ್ತ ಗಮನ
ಹರಿಸಿ, ನಿಮ್ಮ ಮೊತ್ತವನ್ನು ವರ್ಗಾಯಿಸಿಕೊಳ್ಳಬಹುದು. ಆದರೆ ಈ ಸಂದರ್ಭದಲ್ಲೂ ಜಾಣತನದ ಹೆಜ್ಜೆ ನಿಮ್ಮದಾಗಿರಬೇಕು. ವರ್ಗಾಯಿಸುವ ಫಂಡ್ ಟ್ರಾಕ್ ರೆಕಾರ್ಡು ನೋಡಿ, ಎಚ್ಚರದಿಂದ ಹೆಜ್ಜೆ ಇಡಬೇಕಾಗುತ್ತದೆ.
3. ನೀವು ಎಸ್.ಐ.ಪಿ.ಗೆ ಒಳಪಡುವುದಾದರೆ ಕನಿಷ್ಠ ಆರು ತಿಂಗಳಾದರೂ ಅದರಲ್ಲಿ ಹೂಡಿಕೆ ಮಾಡಬೇಕು. ಗರಿಷ್ಠ ಮಿತಿ ಇಲ್ಲ. ಫಂಡಿನಲ್ಲಿ ನೀವು ಎಷ್ಟು ವರ್ಷದ ತನಕ ಹೂಡಿಕೆ ಮಾಡಬಯಸುತ್ತೀರೋ ಅಲ್ಲಿಯತನಕವೂ ಅಂದರೆ 3,5,10 ವರ್ಷಗಳ ತನಕವೂ ಎಸ್.ಐ.ಪಿ. ಯಲ್ಲಿ ಮಾಹೆಯಾನ ಹೂಡಿಕೆ ಮಾಡುತ್ತಲೇ ಮುಂದುವರಿಯಬಹುದು. ಆಗ ಕೊನೆಯಲ್ಲಿ ಸಿಗುವ ಫಲಿತಾಂಶ ಅತ್ಯುತ್ತಮವಾಗಿರುತ್ತದೆ.
4. ಲಾಭ ಜಾಸ್ತಿ ಬಂತು. ಮುಂದೇನು ಅಂದಿರಾ? ಆಗ, ಎಸ್.ಐ.ಪಿ. ಮೊತ್ತವನ್ನು ಹೆಚ್ಚಿಸಬಹುದು. ಮಾಸಿಕ ವೇತನ ಪಡೆಯುವವರಿಗೆ ವರ್ಷಕ್ಕೊಮ್ಮೆ ಸಹಜವಾಗಿ ವೇತನ ಏರಿಕೆ ಆಗುತ್ತಿರುತ್ತದೆ. ಆಗ ಹೂಡಿಕೆಗೆಂದು ನಿಗದಿಪಡಿಸಿಟ್ಟ ಮೊತ್ತವನ್ನು ಏರಿಸುತ್ತ ಹೋಗಬಹುದು. ಇದು ಒಳ್ಳೆಯ ನಿರ್ಧಾರ.
5. ಒಂದೇ ಬಾರಿ ದೊಡ್ಡ ಮೊತ್ತವನ್ನು ಅದೇ ಫಂಡಿಗೆ ಹೂಡಬಹುದು. ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿಯಾದ ಮೊತ್ತ ಪ್ರತಿ ತಿಂಗಳೂ ಕಟಾವಣೆ ಯಾಗಿ ಎಸ್.ಐ.ಪಿ,. ಮಾರ್ಗದಲ್ಲಿ ಹೂಡಿಕೆಯಾಗುತ್ತಿದಾಗ್ಯೂ, ನಿಮಗೆ ಬೇರೆ ಮೂಲದಿಂದ ದೊಡ್ಡ ಮೊತ್ತವೊಂದು ಕೈಸೇರಿದರೆ ಅದನ್ನು ಒಂದೇಬಾರಿಗೆ ಅದೇ ಫಂಡಿಗೆ ಹೂಡಿಕೆ ಮಾಡಬಹುದು. ಹೀಗೆ ಮಾಡುವುದರಿಂದ ತಪ್ಪೇನೂ ಇಲ್ಲ. ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ತುಂಬಿಟ್ಟರೆ ಕೆಲವು ಹಾಳಾಗಿ ಹೋಗುವ ಸಾಧ್ಯತೆ ಇದ್ದೇ ಇರುತ್ತದೆ ತಾನೆ? ಹೂಡಿಕೆಯ ವಿಚಾರವೂ ಅಷ್ಟೆ. ನಿಮ್ಮ ಎಲ್ಲ ಮೊತ್ತವನ್ನೂ ಒಂದೇ ಬಗೆಯ ಹೂಡಿಕೆಯಲ್ಲಿ ತೊಡಗಿಸುವುದು ಜಾಣ ನಿರ್ಧಾರವಲ್ಲ.
ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಕ್ಷಮತೆಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ಸುರಕ್ಷಿತ ಹೂಡಿಕೆಗಳಲ್ಲಿ ಹಣ ತೊಡಗಿಸುವುದು ಉತ್ತಮ ನಿರ್ಧಾರ. ಈ ನಿಟ್ಟಿನಲ್ಲಿ ಎಸ್.ಐ.ಪಿ. ಒಂದು ಒಳ್ಳೆಯ ಮಾರ್ಗ.
ನಿರಂಜನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.