ಸೈನಿಕ ಹುಳುಗಳನ್ನು ಹಿಡಿಯುವ ಉಪಾಯ
Team Udayavani, Oct 7, 2019, 4:08 AM IST
ಮೆಕ್ಕೆ ಜೋಳಕ್ಕೆ ದಾಳಿ ಇಡುವ ಕೀಟಗಳಲ್ಲಿ ಸೈನಿಕ ಹುಳುಗಳದ್ದೇ ಪ್ರಾಬಲ್ಯ. ಅದನ್ನು ಹತೋಟಿಯಲ್ಲಿಡಲು ಸೂಕ್ತವಾದ ಮಾರ್ಗಗಳಲ್ಲೊಂದು “ಫೆರೋಮೋನ್ ಟ್ರ್ಯಾಪ್. ಫೆರೋಮೋನ್ ಎಂದರೆ ಹೆಣ್ಣು ಸೈನಿಕ ಹುಳುಗಳು ಸ್ರವಿಸುವ ಹಾರ್ಮೋನ್. ಅದರಿಂದಲೇ ಅವುಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಹೆಣ್ಣು ಸೈನಿಕಹುಳುಗಳನ್ನು ಆಕರ್ಷಿಸುವುದು. ಈ ಫೆರೋಮೋನನ್ನು ಲ್ಯಾಬ್‌ನಲ್ಲಿ ತಯಾರಿಸಿ ಟ್ರ್ಯಾಪ್ ನಿರ್ಮಿಸಿರುತ್ತಾರೆ. ಇದು ಗಂಡು ಸೈನಿಕ ಹುಳುಗಳನ್ನು ಮಾತ್ರ ಆಕರ್ಷಿಸುತ್ತದೆ. ಇದರಿಂದಾಗಿ ಸಂತಾನೋತ್ಪತ್ತಿ ಉಂಟಾಗದೆ ಅವುಗಳ ಸಂಖ್ಯೆ ಕುಗ್ಗುತ್ತಾ ಹೋಗುತ್ತದೆ. ಈ ಫೆರೋಮೋನ್ ಟ್ರ್ಯಾಪ್ ಮೇಲ್ಭಾಗದಲ್ಲಿ ಕೊಳವೆ ಇರುತ್ತದೆ. ಅದರ ಕೆಳ ಭಾಗವನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿರುತ್ತದೆ. ಒಮ್ಮೆ ಕೊಳವೆಯನ್ನು ಪ್ರವೇಶಿಸಿ ಪ್ಲಾಸ್ಟಿಕ್ ಕವರಿನೊಳಗೆ ಬಂದು ಬೀಳುವ ಹುಳುಗಳು ಅಲ್ಲೇ ಬಂಧಿಯಾಗಿಬಿಡುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.