ವಾಸ್ತು ಪ್ರಕಾರ ಮನೆ ವಿಭಜನೆ ಮಾಡೋದು ಹೀಗೆ…
Team Udayavani, May 22, 2017, 1:02 PM IST
ಪೂರ್ವ ಪಶ್ಚಿಮಗಳಿಗೆ ವ್ಯಾಪಿಸಿದ ಮನೆ ಇಬ್ಭಾಗವಾದಾಗ ಪೂರ್ವದ ಭಾಗವು ಒಳ್ಳೆಯ ಫಲ ಕೊಡಲು ಸಮರ್ಥವಾಗುತ್ತದೆ. ಹಾಗೆಯೇ ಉತ್ತರ ದಕ್ಷಿಣಗಳ ವಿಚಾರ ಬಂದಾಗ ಉತ್ತರ ದಿಕ್ಕಿನ ಭಾಗವೇ ಹೆಚ್ಚು ಫಲವಂತಿಕೆಯಿಂದ ಕೂಡಿರುತ್ತದೆ. ಹೀಗೆ ಭಾಗಗಳಾದಾಗ ಹಿರಿಯ ವ್ಯಕ್ತಿ ದಕ್ಷಿಣ ಭಾಗವನ್ನು ಸ್ವೀಕರಿಸುವುದು ಇದ್ದುದರಲ್ಲಿ ಕ್ಷೇಮ.
ಹಲವಾರು ಕಾರಣಗಳಿಗಾಗಿ ಇರುವ ಮನೆಯನ್ನು ವಿಭಜಿಸುವ ಸಂದರ್ಭ ಉಂಟಾಗಬಹುದು. ಅಣ್ಣತಮ್ಮಂದಿರ ನಡುವೆ
ಮನೆಯ ಒಟ್ಟೂ ವಿಸ್ತಾರವನ್ನು ವಿಭಾಗ ಮಾಡಿಕೊಳ್ಳಬೇಕಾದ ಅವಶ್ಯಕತೆ ಎದುರಾದಾಗ ಎಲ್ಲವನ್ನೂ ಅವಸರ ಅವಸರಗಳೊಂದಿಗೆ ನಿಶ್ಚಯಿಸಬಾರದು. ಮನೆಯ ಬ್ರಹ್ಮ ಕೇಂದ್ರದಲ್ಲಿ ಅಣ್ಣ ತಮ್ಮಂದಿರು ಸಮಾಧಾನ ಚಿತ್ತದಿಂದಲೇ ಪರಸ್ಪರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನೆಯ ವಿಭಜನೆ ಮಾಡಬೇಕು. ಅದು ಅನಿವಾರ್ಯವೇ ಎಂಬುದನ್ನು
ಮೊದಲು ಯೋಚಿಸಬೇಕು.
ಆಕಾಶ ತತ್ವವನ್ನು ಪ್ರತಿಪಾದಿಸುವ ಮನೆಯ ಬ್ರಹ್ಮ ಕೇಂದ್ರದಲ್ಲಿ ಶಾಂತ ಚಿತ್ತಕ್ಕಾಗಿನ ಪ್ರೇರಣೆ ಆಕಾಶಕಾಯಗಳಿಂದ ಸಿಗುವುದಾದ್ದರಿಂದ ನಿಶ್ಚಯದ ಹೊತ್ತನ್ನು ಈ ಸ್ಥಳದಲ್ಲಿಯೇ ನಿಷ್ಕರ್ಷೆ ಮಾಡಿಕೊಳ್ಳಬೇಕು. ಹಾಗೂ ಇಂದ್ರ ದಿಕ್ಕಲ್ಲಿ ಅಂದ್ರೆ ಪೂರ್ವ ದಿಕ್ಕಿನಲ್ಲಿ ಮನಯ ವಿಭಜನೆ ಹೇಗೆ, ಯಾವಾಗ, ಯಾರ ಉಪಸ್ಥಿತಿಯಲ್ಲಿ ಎಂಬುದರ ನಿರ್ಧಾರ ಆಗಬೇಕು. ವಾಸ್ತವವಾಗಿ ವಾಸ್ತು ಶಾಸ್ತ್ರ ಒಂದು ಮನೆಯ ಇಬ್ಭಾಗದ ಅಥವಾ ವಿಭಜನೆಯನ್ನು ಪುಷ್ಟೀಕರಿಸುವುದಿಲ್ಲ. ಏಕೆಂದರೆ ಯಾವುದೇ ರೀತಿಯಲ್ಲಿ ಇಬ್ಭಾಗವಾದರೂ ವಿಭಜನೆಗೊಂಡ ಭಾಗಗಳಲ್ಲಿ ಒಂದು ಭಾಗ ಮಾತ್ರ ಉತ್ತಮ ಫಲವನ್ನು ನೀಡಲು ಸಮರ್ಥವಾಗುತ್ತದೆ. ಇನ್ನೊಂದು ಭಾಗ ಸರಿ ಇರದು.
ಪೂರ್ವ ಪಶ್ಚಿಮಗಳಿಗೆ ವ್ಯಾಪಿಸಿದ ಮನೆ ಇಬ್ಭಾಗವಾದಾಗ ಪೂರ್ವದ ಭಾಗವು ಒಳ್ಳೆಯ ಫಲ ಕೊಡಲು ಸಮರ್ಥವಾಗುತ್ತದೆ. ಹಾಗೆಯೇ ಉತ್ತರ ದಕ್ಷಿಣಗಳ ವಿಚಾರ ಬಂದಾಗ ಉತ್ತರ ದಿಕ್ಕಿನ ಭಾಗವೇ ಹೆಚ್ಚು ಫಲವಂತಿಕೆಯಿಂದ ಕೂಡಿರುತ್ತದೆ. ಹೀಗೆ ಭಾಗಗಳಾದಾಗ ಹಿರಿಯ ವ್ಯಕ್ತಿ ದಕ್ಷಿಣ ಭಾಗವನ್ನು ಸ್ವೀಕರಿಸುವುದು ಇದ್ದುದರಲ್ಲಿ ಕ್ಷೇಮ. ಇದೇ ವಿಚಾರ ಪೂರ್ವ ಪಶ್ಚಿಮದ ಕುರಿತು ಬಂದಾಗ ಪಶ್ಚಿಮದ ಭಾಗ ಹಿರಿಯನಾದವನಿಗೆ ಸೂಕ್ತ ಎಂಬುದು ವಾಸ್ತು ನಿರ್ಣಯ. ಇದ್ದ ಮನೆಯ ಸರಹದ್ದಿನಲ್ಲೇ ಸಣ್ಣಸಣ್ಣದಾಗಿ ಕಟ್ಟುವ ಗೃಹಗಳು, ಉಪಗೃಹಗಳಿದ್ದಲ್ಲಿ ಈಶಾನ್ಯ ಭಾಗವನ್ನು ಇದಕ್ಕಾಗಿ ಉಪಯೋಗಿಸಿಕೊಳ್ಳುವುದು ಸ್ವಾಗತಾರ್ಹವಲ್ಲ. ನೈರುತ್ಯ ಮೂಲೆಯನ್ನು
ಈ ವಿಚಾರವಾಗಿ ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುವುದು ಸೂಕ್ತ. ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳನ್ನು ಔಟ್‌ಹೌಸ್‌ಗಳಾಗಿ ಮೀಸಲಿಡುವುದು ಸೂಕ್ತವಾದ ವಿಚಾರ. ಒಟ್ಟಿನಲ್ಲಿ ವಾಸ್ತುವಿನ ವಿಚಾರದಲ್ಲಿ ಪ್ರತಿ ಅಂಶವೂ ವ್ಯಕ್ತಿಯ ಮತ್ತು ಅವನ/ಅವಳ ಕುಟುಂಬದ ಸದಸ್ಯರ ವಿಚಾರವಾಗಿ ವರ್ತಮಾನ ಹಾಗೂ ಭವಿಷ್ಯಗಳು ಉತ್ತಮವಾಗಿರಬೇಕು.
ಜೀವನದ ಕ್ರಮ ಜೀವನದ ಎಲ್ಲಾ ವ್ಯವಹಾರಗಳು ಸುಖ ಹಾಗೂ ನೆಮ್ಮದಿಗೆ ತಲುಪಬೇಕು ಎಂಬುದಕ್ಕಾಗಿ ತುಡಿಯುತ್ತಿರುತ್ತದೆ. ಹೀಗಾಗಿ ಮನೆಯನ್ನು ಹೋಳಾಗಿಸುವುದನ್ನು ಅದು ಹೆಚ್ಚು ಹೆಚ್ಚಾಗಿ ಸ್ವಾಗತಿಸಬಾರದು.
ಮನೆಯ ಮೇಲೆಯೇ ಸೌಧದ ವಿಸ್ತಾರವನ್ನು ಮಾಡುವ ಅಂದರೆ ಮಹಡಿ ಕಟ್ಟುವ ವಿಚಾರವಾಗಿ ಆಲೋಚನೆ ಮಾಡಬೇಕು. ಇಲ್ಲೂ ಕೂಡಾ ಅನೇಕ ಅಂಶಗಳು ಪ್ರಧಾನವಾಗುತ್ತವೆ. ಬಹುಮುಖ್ಯವಾಗಿ ತಳದ ಮಜಲಿಂದ ಮಹಡಿಗೆ ಏರಿ ಬರುವ ಮೆಟ್ಟಿಲುಗಳ ವಿಚಾರವಾಗಿ ಹೆಚ್ಚು ಆಲೋಚನಾಯುಕ್ತ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.
ದಕ್ಷಿಣದಿಂದ ಪಶ್ಚಿಮದಿಂದ ಮಹಡಿ ಹತ್ತುವಂತೆ ರೂಪಿಸಿಕೊಳ್ಳುವುದು ಹೆಚ್ಚು ಉತ್ತಮ.
ಒಟ್ಟಿನಲ್ಲಿ ಮನೆಯ ಛೇದನ ವಿಭಜನೆಗಳ ಕುರಿತು ಅವಸರ ತರವಲ್ಲ. ದೃಢ, ಶಾಂತ ಹಾಗೂ ಸದ್ವಿವೇಕಗಳೊಂದಿಗಿನ ಚಿತ್ತಗಳನ್ನು ವಿಭಜನೆಯ ಮುನ್ನ ಸಂಬಂಧಿಸಿದ ಸದಸ್ಯರು ಹೊಂದಿರಲಿ. ಸರ್ವರಿಗೂ ಒಳ್ಳೆಯದು ಆಗುವುದು ಮಾತ್ರ ಪ್ರಥಮ ಆದ್ಯತೆಯಾಗಬೇಕು. ಉಳಿದ ವಿಚಾರ ಗೌಣವಾಗಿರಲಿ.
– ಅನಂತಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.