ಉನ್ನತ ವ್ಯಾಸಂಗ ಸಾಲ ಸೌಲಭ್ಯಗಳು
Team Udayavani, Feb 17, 2020, 5:15 AM IST
ಭಾರತದಲ್ಲಿ ವಿದ್ಯಾಭ್ಯಾಸಕ್ಕೆ ಸಿಗುವ ಸಾಲದ ಗರಿಷ್ಠ ಮೊತ್ತ 10 ಲಕ್ಷ ರೂಪಾಯಿಗಳು.ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಿಗುವ ಸಾಲದ ಮೊತ್ತ, ಆಯಾಯ ಬ್ಯಾಂಕುಗಳು ನಿರ್ಧರಿಸಿದಂತಿರುತ್ತದೆ. ಇದಕ್ಕೆ, ಜೀವವಿಮೆ, ಎನ್.ಎಸ್.ಸಿ ಮತ್ತು ಭೂ ಅಡಮಾನದಂಥ ಭದ್ರತೆಯನ್ನು ಒದಗಿಸಬೇಕು.
– ವಿ.ಸೂ.: ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಇನ್ನೂ ಹೆಚ್ಚಿನ ಸಾಲ ಪಡೆಯಲು ಹೆಚ್ಚಿನ ಭದ್ರತೆ ಕೊಟ್ಟಲ್ಲಿ, ಭದ್ರತೆಗೆ ಅನುಗುಣವಾಗಿ ಬ್ಯಾಂಕುಗಳು ಹೆಚ್ಚಿನ ಸಾಲ ಒದಗಿಸುತ್ತವೆ.
– ಉನ್ನತ ವಿದ್ಯಾಭ್ಯಾಸದ ವಯೋಮಿತಿ 16- 40 ವರ್ಷಗಳು. ವಿದ್ಯಾರ್ಥಿ ಅಪ್ರಾಪ್ತ ವಯಸ್ಕನಾಗಿದ್ದಲ್ಲಿ ಸಾಲವನ್ನು ಹೆತ್ತವರ ಹೆಸರಿನಲ್ಲಿ ಪಡೆಯಲು ಅವಕಾಶವಿದೆ.
– ಸಾಲದ ಮೇಲಿನ ಬಡ್ಡಿದರವನ್ನು ಆಯಾಯ ಬ್ಯಾಂಕುಗಳು ನಿರ್ಧರಿಸುತ್ತವೆ. ಪ್ರತಿಯೊಂದು ಬ್ಯಾಂಕೂ ಸಹಾ ಎಜುಕೇಷನ್ ಲೋನ್‌ಗೆ ಕಡಿಮೆ ಬಡ್ಡಿದರ ವಿಧಿಸುವ ಸಂಪ್ರದಾಯವನ್ನು ಹೊಂದಿದೆ. ಈ ಕ್ರಮವನ್ನು ಪಿ.ಎಲ್.ಆರ್(ಪ್ರೈಮ್ ಲೆಂಡಿಂಗ್ ರೇಟ್) ಎಂದು ಕರೆಯುತ್ತಾರೆ.
– ಹೀಗೆ ಪಡೆದ ಸಾಲವನ್ನು ವ್ಯಾಸಂಗ ಮುಗಿದ ಒಂದು ವರ್ಷದೊಳಗೆ ಅಥವಾ ಕೆಲಸ ದೊರೆತ ಆರು ತಿಂಗಳೊಳಗೆ ಮರುಪಾವತಿಸಲು ಆರಂಭಿಸಬೇಕು. ಅದಕ್ಕಿಂತ ಮುಂಚಿತವಾಗಿಯೂ ಹಣವನ್ನು ತುಂಬಿ ಸಾಲ ತೀರಿಸಬಹುದು.
– ವಿದ್ಯಾಭ್ಯಾಸಕ್ಕೆ ನೀಡುವ ಸಾಲದ ಮೊತ್ತವನ್ನು ಬ್ಯಾಂಕುಗಳು ನಿರ್ಧರಿಸಿ, ಅವಶ್ಯಕತೆಗೆ ಅನುಗುಣವಾಗಿ ಹಣವನ್ನು ಬಿಡುಗಡೆ ಮಾಡುತ್ತವೆ. ಕಾಲೇಜು ಫೀಸು, ಪುಸ್ತಕ ಖರೀದಿ, ಉಪಕರಣ ಖರೀದಿ ಹಾಗೂ ಹಾಸ್ಟೆಲ್ ಬಿಲ್ಲು ಮುಂತಾದವುಗಳನ್ನು ಭರಿಸಲು ಆಯಾಯ ಸಮಯದಲ್ಲಿಯೇ ಹಣವನ್ನು ಬಿಡುಗಡೆ ಮಾಡುತ್ತಾರೆ. ಇದರಿಂದ ಪಡೆದಷ್ಟು ಹಣಕ್ಕೆ, ಪಡೆದ ತಾರೀಖೀನಿಂದ ಬಡ್ಡಿ ಹಾಕುವುದರಿಂದ, ಬಡ್ಡಿಯ ಹೊರೆ ಕಡಿಮೆಯಾಗುತ್ತದೆ ಹಾಗೂ ಸಾಲದ ದುರುಪಯೋಗವೂ ಆಗುವುದಿಲ್ಲ.
– ಶಿಕ್ಷಣ ಸಾಲವನ್ನು ಆದಿಯಲ್ಲಿ, ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಪಡೆಯಬಹುದು.
– ಪ್ರತೀ ವರ್ಷ ವಿದ್ಯಾರ್ಥಿಯ ಓದುವಿಕೆಯ ಪ್ರಗತಿ ಸರ್ಟಿಫಿಕೇಟ್‌ಅನ್ನು ಬ್ಯಾಂಕಿಗೆ ಸಲ್ಲಿಸಬೇಕು.
– ಶಿಕ್ಷಣ ಸಾಲದ ಮೇಲಿನ ಬಡ್ಡಿ ಆದಾಯ ತೆರಿಗೆ ಸೆಕ್ಷನ್ 80ಉ ಪ್ರಕಾರ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.