ಅಡ್ವೆಂಚರ್ ಎಕ್ಸ್‌ಪಲ್ಸ್
Team Udayavani, Nov 19, 2018, 6:00 AM IST
ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ತನ್ನದೇ ಆದ ಬ್ರಾಂಡಿಂಗ್ ನಿರ್ಮಿಸಿಕೊಂಡಿರುವ, ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದ ಕೆಲವೇ ಕೆಲವು ಕಂಪನಿಗಳಲ್ಲಿ ಹೀರೋ ಕೂಡ ಒಂದು. ಸಂಸ್ಥೆ ಈಗ ತನ್ನ ಉತ್ಪಾದನೆಗಳ ಸ್ಟಾಟರ್ಜಿಯನ್ನು ಬದಲಾಯಿಸಿಕೊಂಡಿದೆ. ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಸ್ಪಷ್ಟ ಸಂದೇಶವನ್ನು ನೀಡಿದ್ದು, ಗ್ರಾಹಕರ ಸಂಖ್ಯೆ ದ್ವಿಗುಣಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಅಡ್ವೆಂಚರ್ ಬೈಕ್ ಕ್ಷೇತ್ರಗಳತ್ತ ದಾಪುಗಾಲಿಡಲು ಮುಂದಾಗಿರುವ ಹೀರೋ, ಇಷ್ಟರಲ್ಲಾಗಲೇ ವಿನೂತನ ವಿನ್ಯಾಸದಿಂದ ಕೂಡಿದ ಮಹತ್ವಾಕಾಂಕ್ಷೆಯ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಎರಡೂ ವೇರಿಯೆಂಟ್‌ಗಳನ್ನು ಪರಿಚಯಿಸಬೇಕಿತ್ತು. 2017ರಲ್ಲೇ, ಮಾಡೆಲ್ ಬೈಕ್ ಅನಾವರಣಗೊಳಿಸಿದ್ದ ಹೀರೋ, ಭಾರೀ ನಿರೀಕ್ಷೆಯನ್ನಿಟ್ಟುಕೊಂಡು ಈ ಎರಡು ವೇರಿಯಂಟ್‌ಗಳನ್ನು ಪರಿಚಯಿಸುವ ಲೆಕ್ಕಾಚಾರದಲ್ಲಿದೆ. ಈಗ ಸಿಕ್ಕಿರುವ ಮಾಹಿತಿಯಂತೆ ಎಕ್ಸ್‌ಪಲ್ಸ್ 200ಟಿ ವೇರಿಯಂಟ್ 2019ರ ಜನವರಿ ತಿಂಗಳಾಂತ್ಯಕ್ಕೆ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಎಕ್ಸ್‌ಪಲ್ಸ್ ಬೈಕ್ ಅಡ್ವೆಂಚರ್ ರೈಡ್ ಇಷ್ಟಪಡುವ ಯುವಕರ ಹೃದಯ ಬಡಿತ ಹೆಚ್ಚಿಸುವ ಸಾಧ್ಯತೆಗಳಿವೆ. ವಿನ್ಯಾಸ ಆಕರ್ಷಣೀಯವಾಗಿದ್ದು, ಇದು ಕಂಪನಿಯ ನಿರೀಕ್ಷೆ ಹುಸಿಯಾಗಿಸದು ಎನ್ನಲಡ್ಡಿಯಿಲ್ಲ. ಇಟಲಿಯ ಮಿಲಾನ್‌ನಲ್ಲಿ ನಡೆದ ಇಐಸಿಎಂಎ-2018 ಆಟೋ ಎಕ್ಸ್‌ಪೋದಲ್ಲಿ ನೂತನ ಸೆಗೆ¾ಂಟ್ ಬೈಕ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆಗ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಕಂಪನಿ ಹೇಳಿಕೊಂಡಿದೆ.
ವಿನ್ಯಾಸಕ್ಕೆ ಮೆಚ್ಚುಗೆ
ಆಫ್ರೋಡ್ ರೇಸ್‌ಗಳಲ್ಲಿ ಬಳಕೆಯಾಗುವ ಬೈಕ್‌ಗಳ ಮಾದರಿಯಲ್ಲೇ ಎಕ್ಸ್‌ಪಲ್ಸ್ ಸೆಗೆ¾ಂಟ್ ಬೈಕ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಪೆಟ್ರೋಲ್ ಟ್ಯಾಂಕ್‌ನ ವಿನ್ಯಾಸ ಆಕರ್ಷಣೀಯವಾಗಿದೆ. ಡಿಜಿಟಲ್ ಸ್ಪೀಡೋ ಮೀಟರ್ ರೈಡರ್ ಸ್ನೇಹಿಯಾಗಿದೆ. ಎಲ್‌ಇಡಿ ಹೆಡ್ ಲೈಟ್, ನಾಕಲ್ ಗಾರ್ಡ್, ಲಗೇಜ್ ರಾಕ್ ಅಲ್ಲದೇ ವಿಂಡ್‌ಶೀಲ್ಡ್ ವಿನ್ಯಾಸವೂ ಭಿನ್ನವೆನಿಸುತ್ತದೆ. ಗಮನಿಸಲೇಬೇಕಾದ ಅಂಶವೇನೆಂದರೆ ಟರ್ನ್ ಬೈ ಟರ್ನ್ ನೇವಿಗೇಷನ್ ಡಿವೈಸ್ ಅಳವಡಿಸಲಾಗಿದೆ. ಇಂಥ ಆಧುನಿಕ ಡಿವೈಸ್ ಅಳವಡಿಸಲಾದ ಮೊದಲ ಬೈಕ್ ಇದಾಗಿದೆ.
ಎಂಜಿನ್ ಸಾಮರ್ಥ್ಯ
ಎಕ್ಸ್‌ಪಲ್ಸ್ 200 ಟಿ ಬೈಕ್ ಸಾಮರ್ಥ್ಯದಲ್ಲಿ ಯಾವ ಆಫ್ರೋಡ್ ಬೈಕ್‌ಗೂ ಕಡಿಮೆಯೇನಿಲ್ಲ. 200ಟಿ ಬೈಕ್ 198ಸಿಸಿ ಏರ್ ಕೂಲ್ಡ್ ಫ್ಯೂಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ. ಹೀಗಾಗಿ ಸುಲಭವಾಗಿ ಆಫ್ರೋಡ್ ರೈಡ್ ಹೊಸ ಅನುಭವ ನೀಡಲಿದೆ. 18.1ಬಿಎಚ್‌ಪಿ ಮತ್ತು 17.1ಎನ್‌ಎಂ ಟಾರ್ಕ್ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು, 5ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಉಳಿದಂತೆ 190 ಮಿ.ಮೀ. ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಹಾಗೂ 170ಮಿ.ಮೀ. ಸಸ್ಪೆನÒನ್ ಹೊಂದಿದೆ.
ಎಕ್ಸ್ ಶೋ ರೂಂ ಬೆಲೆ: ಒಂದು ಲಕ್ಷಕ್ಕಿಂತ ಕಡಿಮೆ ಎನ್ನಲಾಗಿದೆ.
– ಗಣಪತಿ ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.