ನಗರ ಗ್ರಾಹಕರೊಡನೆ ಕೃಷಿಕರ ಕರಾರು
Team Udayavani, Jun 25, 2018, 11:55 AM IST
ತೆಲಂಗಾಣದ ಜಹೀರ್ಬಾದ್ ಪ್ರದೇಶದ ರೈತರು ಅನುಸರಿಸುವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಸುವ ವೆಚ್ಚ ಕಡಿಮೆ. ಹಾಗಾಗಿ, ಅಲ್ಲಿನ ರೈತರು ಸಾಲದ ವಿಷವರ್ತುಲದಲ್ಲಿ ಸಿಕ್ಕಿ ಬೀಳುವುದಿಲ್ಲ. ಹಲವು ತಲೆಮಾರುಗಳಿಂದ ಬಿತ್ತುತ್ತಿರುವ ದೇಸಿ ಬೀಜಗಳನ್ನೇ ಅವರು ಈಗಲೂ ಬಿತ್ತುತ್ತಾರೆ. ಅಲ್ಲಿ ಮಣ್ಣು ಮತ್ತು ಹವಾಮಾನ ಅವಲಂಬಿಸಿ, ಯಾವ ಬೀಜ ಬಿತ್ತಬೇಕೆಂದು ಅಲ್ಲಿನ ರೈತ ಸಮುದಾಯದ ಮಹಿಳೆಯರೇ ನಿರ್ಧರಿಸುತ್ತಾರೆ.
ಚಕ್ರಿ ಬಾಯಿ ಮತ್ತು ಇತರ 250 ಕೃಷಿಕರ ಬದುಕಿನಲ್ಲಿ 17 ಜೂನ್ 2018, ಒಂದು ವಿಶೇಷ ದಿನ. ಅವರೆಲ್ಲರೂ ತೆಲಂಗಾಣದ ಜಹೀರ್ಬಾದ್ ಹತ್ತಿರದ ಅರ್ಜುನ ನಾಯಕ್ ಹಟ್ಟಿಯವರು. ಆ ದಿನ ಅವರ ಹಟ್ಟಿಗೆ 120 ಕಿ.ಮೀ ದೂರದ ರಾಜಧಾನಿ ಹೈದರಾಬಾದಿನಿಂದ ಸುಮಾರು 100 ಗ್ರಾಹಕರು ಬಂದಿದ್ದರು. ಕೃಷಿಕರು ಮತ್ತು ಗ್ರಾಹಕರ ನಡುವಣ ಕರಾರು ಪತ್ರಕ್ಕೆ ಸಹಿ ಮಾಡಲಿಕ್ಕಾಗಿ.
ಇದೇನು ಕರಾರು ಪತ್ರ ಅಂದಿರಾ? ಇದು ಗ್ರಾಹಕರಿಂದ ಕೃಷಿಕರು ನಿರ್ದಿಷ್ಟ ಹಣ ಪಡೆದು, ಅದಕ್ಕೆ ಬದಲಾಗಿ ಒಂದು ವರ್ಷದ ಅವಧಿಯಲ್ಲಿ ವಿವಿಧ ಕೃಷಿ ಉತ್ಪನ್ನಗಳನ್ನು ಒದಗಿಸುವ ಒಪ್ಪಂದದ ಕರಾರು ಪತ್ರ. ಇದರ ಅನುಸಾರ 25,000 ರೂ. ಮತ್ತು 12,500 ರೂ. ಬೆಲೆಯ ಎರಡು ಪ್ಯಾಕೇಜುಗಳಿವೆ. ಈ ಹಣಕ್ಕೆ ಬದಲಾಗಿ, 6 ವಿಧದ ಧಾನ್ಯ, 4 ವಿಧದ ದ್ವಿದಳ ಧಾನ್ಯ, ಎರಡು ವಿಧದ ಎಣ್ಣೆಕಾಳು ಮತ್ತು ಬೆಲ್ಲವನ್ನು ರೈತರು ಗ್ರಾಹಕರಿಗೆ ನೀಡುತ್ತಾರೆ. ಉದಾಹರಣೆಗೆ 25,000 ರೂ. ಪಾವತಿಸಿದ ಗ್ರಾಹಕರಿಗೆ ಒಂದು ವರ್ಷದಲ್ಲಿ ಒದಗಿಸುವ ವಸ್ತುಗಳು: 25 ಕಿ.ಗ್ರಾಂ. ಸಣ್ಣಜೋಳ ಅಥವಾ ಸಜ್ಜೆ ಹಿಟ್ಟು, 30 ಕಿ.ಗ್ರಾಂ ರಾಗಿ ರವೆ, 40 ಕಿ.ಗ್ರಾಂ ತೊಗರಿ ಬೇಳೆ, 40 ಕಿ.ಗ್ರಾಂ ಹೆಸರು ಬೇಳೆ, 25 ಕಿ.ಗ್ರಾಂ. ಉದ್ದು, 8 ಕಿ.ಗ್ರಾಂ. ಬೆಲ್ಲ ಹಾಗೂ ಇನ್ನೂ ಕೆಲವು ಕೃಷಿ ಉತ್ಪನ್ನಗಳು. 12,500ರೂ. ಪಾವತಿಸಿದ ಗ್ರಾಹಕರಿಗೆ ಇವೆಲ್ಲದರ ಅರ್ಧ ಭಾಗದಷ್ಟು ಕೃಷಿ ಉತ್ಪನ್ನಗಳ ಸರಬರಾಜು.
ನಾನು ನಿಮ್ಮೊಂದಿಗಿದ್ದೇನೆ ಎಂಬ ಸಂದೇಶವನ್ನು ಈ ಕರಾರು ಪತ್ರದ ಮೂಲಕ ನಮ್ಮ ರೈತರಿಗೆ ನೀಡುತ್ತಿದ್ದೇನೆ ಎನ್ನುತ್ತಾರೆ ತೆಲುಗು ಟಿವಿ ರಂಗದ ಝಾನ್ಸಿ ರಾಣಿ. ಇದು ಹಣ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುವ ವ್ಯವಹಾರವಲ್ಲ. ಕೇವಲ ಗ್ರಾಹಕಳಾಗಿ ಈ ಸಂಬಂಧಕ್ಕೆ ನಾನು ಕೈ ಹಾಕಿಲ್ಲ. ರೈತರಿಗೆ ಬೆಂಬಲ ನೀಡಲಿಕ್ಕಾಗಿ ನಾನೂ ಅವರ ಜೊತೆಗೂಡಿದ್ದೇನೆ. ಆಹಾರಪದ್ಧತಿ ಬದಲಾಯಿಸಬೇಕೆಂಬ ಬಯಕೆಯೂ ನನ್ನಲ್ಲಿದೆ ಎಂಬುದು ಅವರ ವಿವರಣೆ.
ಆರೋಗ್ಯಪೂರ್ಣ ಜೀವನದ ಬಯಕೆ ಈ ಯೋಜನೆಯ ಮೂಲದಲ್ಲಿದೆ. ಭಾರತೀಯರು ಅಕ್ಕಿ ಮತ್ತು ಗೋಧಿ ಸೇವನೆ ಕಡಿಮೆ ಮಾಡಬೇಕಾಗಿದೆ; ಅವುಗಳ ಬದಲಾಗಿ ಹೆಚ್ಚು ಆರೋಗ್ಯದಾಯಕ ಧಾನ್ಯಗಳನ್ನು ಸೇವಿಸುವುದು ಒಳ್ಳೆಯದು. ಅಂತಹ ಧಾನ್ಯಗಳನ್ನು ಬೆಳೆಸಲು ಕಡಿಮೆ ನೀರು ಮತ್ತು ಕಡಿಮೆ ಗೊಬ್ಬರಗಳು ಸಾಕೆಂಬುದು ಗಮನಾರ್ಹ. ಮುಖ್ಯವಾಗಿ, ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ಆಹಾರ ಬದಲಾಯಿಸಿದರೆ, ಆರೋಗ್ಯಪೂರ್ಣ ಬದುಕಿಗೆ ಸಹಾಯ.
ಕೃಷಿಕರು ಒಂದು ಅಥವಾ ಎರಡು ವಿಧದ ಧಾನ್ಯ ಅಥವಾ ದ್ವಿದಳಧಾನ್ಯ ಮಾತ್ರ ಒದಗಿಸುತ್ತೇವೆಂದು ಒಪ್ಪಂದ ಮಾಡಿಕೊಳ್ಳಬಹುದಾಗಿತ್ತು. ಆದರೆ, ನಮ್ಮ ಗ್ರಾಮೀಣ ಪ್ರದೇಶಗಳ ಕೃಷಿಯ ತಳಿವೈವಿಧ್ಯವನ್ನು ಮತ್ತು ಬಹುಬೆಳೆಗಳನ್ನು ನಗರವಾಸಿಗಳ ಊಟದ ಬಟ್ಟಲಿಗೆ ವರ್ಗಾಯಿಸುವುದು ಮತ್ತು ಅಗ್ಗದ ಅಕ್ಕಿಯನ್ನೇ ತಿನ್ನುತ್ತಿರುವ ಗ್ರಾಹಕರಿಗೆ ಉತ್ತಮ ಬದಲಿ ಆಹಾರ ಒದಗಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ಡೆಕ್ಕನ್ ಡೆವಲಪೆ¾ಂಟ… ಸೊಸೈಟಿಯ ನಿರ್ದೇಶಕರಾದ ಪಿ.ವಿ.ಸತೀಶ್. ಈ ಒಪ್ಪಂದ ಆ ಸೊಸೈಟಿಯದೇ ಯೋಜನೆ.
ಮಳಿಗೆಯಲ್ಲಿ ಸಾವಯವ ಆಹಾರ ಖರೀದಿಸುವಾಗ ನಮ್ಮಲ್ಲಿ ಸುರಕ್ಷಿತ ಆಹಾರ ಖರೀದಿಸಿದ್ದೇವೆಂಬ ಭಾವ. ಆದರೆ ಈ ಯೋಜನೆಯಲ್ಲಿ ಪಾಲ್ಗೊಳ್ಳುವುದು ಅದಕ್ಕಿಂತಲೂ ಮಿಗಿಲಾದ ಅನುಭವ. ಇಂತಹ ಯೋಜನೆಯನ್ನು ಮುಂಚೆಯೇ ಶುರು ಮಾಡಬೇಕಿತ್ತು. ಇದು ನಮ್ಮ ದೇಶದಲ್ಲಿ ಕೃಷಿಕ-ಗ್ರಾಹಕ ಸಂಬಂಧಕ್ಕೊಂದು ಹೊಸ ಮಾದರಿ; ಯಾಕೆಂದರೆ, ಈ ಮಾದರಿಯಲ್ಲಿ ರೈತರಿಗೆ ನೇರವಾಗಿ ಬೆಂಬಲ ಸೂಚಿಸುವ ಮೂಲಕ ಗ್ರಾಹಕರು ಹೆಚ್ಚಿನ ಬದ್ಧತೆ ತೋರಿಸುತ್ತಿ¨ªಾರೆ ಎನ್ನುವುದು ಹೈದರಾಬಾದ್ ವಿಶ್ವವಿದ್ಯಾಲಯದ ಪೊ›ಫೆಸರ್ ವಿನೋದ್ ಪವರಾಲ ಅವರ ಅಭಿಪ್ರಾಯ.
ತೆಲಂಗಾಣದ ಜಹೀರ್ಬಾದ್ ಪ್ರದೇಶದ ರೈತರು ಅನುಸರಿಸುವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಸುವ ವೆಚ್ಚ ಕಡಿಮೆ. ಹಾಗಾಗಿ, ಅಲ್ಲಿನ ರೈತರು ಸಾಲದ ವಿಷವರ್ತುಲದಲ್ಲಿ ಸಿಕ್ಕಿ ಬೀಳುವುದಿಲ್ಲ. ಹಲವು ತಲೆಮಾರುಗಳಿಂದ ಬಿತ್ತುತ್ತಿರುವ ದೇಸಿ ಬೀಜಗಳನ್ನೇ ಅವರು ಈಗಲೂ ಬಿತ್ತುತ್ತಾರೆ. ಅಲ್ಲಿ ಮಣ್ಣು ಮತ್ತು ಹವಾಮಾನ ಅವಲಂಬಿಸಿ, ಯಾವ ಬೀಜ ಬಿತ್ತಬೇಕೆಂದು ಅಲ್ಲಿನ ರೈತ ಸಮುದಾಯದ ಮಹಿಳೆಯರೇ ನಿರ್ಧರಿಸುತ್ತಾರೆ. ಗಮನಿಸಿ: ಅಲ್ಲಿನ ರೈತರೊಂದಿಗೆ ಕಳೆದ ಮುವತ್ತು ವರುಷಗಳಿಂದ ಡೆಕ್ಕನ್ ಡೆವಲಪೆ¾ಂಟ… ಸೊಸೈಟಿ ಕೆಲಸ ಮಾಡುತ್ತಿದೆ; ಈ ಅವಧಿಯಲ್ಲಿ ಅಲ್ಲಿ ಸಾಲದ ಹೊರೆಯಿಂದ ಒಬ್ಬನೇ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ.
ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿರುವ ಮೇಡಕ್ ಮತ್ತು ವಾರಂಗಲ್ ಜಿÇÉೆಗಳಲ್ಲಿ ಪರಿಸ್ಥಿತಿ ತದ್ವಿರುದ್ಧ. ಅಲ್ಲಿ ಪ್ರತಿ ವರ್ಷ ಹಲವಾರು ರೈತರ ಆತ್ಮಹತ್ಯೆ. ಅಂಕೆಸಂಖ್ಯೆಗಳ ಪ್ರಕಾರ, ರೈತರ ಆತ್ಮಹತ್ಯೆಯಲ್ಲಿ ತೆಲಂಗಾಣ ರಾಜ್ಯಕ್ಕೆ ದೇಶದಲ್ಲಿ ಮೂರನೇ ಸ್ಥಾನ. ಆ ಜಿÇÉೆಗಳ ರೈತರಿಗೆ ಹೋಲಿಸಿದಾಗ, ಜಹೀರ್ಬಾದ್ ಪ್ರದೇಶದ ರೈತರು, ಮುಖ್ಯವಾಗಿ ಮಹಿಳೆಯರು, ಕೃಷಿಯ ಅಂತಃಸತ್ವವನ್ನು ಉಳಿಸಿಕೊಂಡಿ¨ªಾರೆ.
ನಮ್ಮ ದೇಶದ ಬಹುಪಾಲು ಪ್ರದೇಶದಲ್ಲಿ ಇಂದು ನಾವು ಕಾಣುತ್ತಿರುವುದು ವಿಷಮಯ ಕೃಷಿ; ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳನ್ನು ಮಣ್ಣಿಗೆ ಸುರಿಯುತ್ತಾ, ಭೂಮಿಗೆ ನೇರವಾಗಿ ವಿಷ ತುಂಬಿಸಲಾಗುತ್ತಿದೆ. ಆದರೆ ಇಂದು ನಮಗೆ ಬೇಕಾಗಿರುವುದು ವಿಷಮುಕ್ತ ಕೃಷಿ ಮತ್ತು ವಿಷಮುಕ್ತ ಆಹಾರ.
ಈ ನಿಟ್ಟಿನಲ್ಲಿ, ವಿಷಮುಕ್ತ ಆಹಾರಕ್ಕಾಗಿ ಮಾಲ್ ಹಾಗೂ ಮಳಿಗೆಗಳನ್ನು ಅವಲಂಬಿಸುವ ಬದಲಾಗಿ, ವಿಷಮುಕ್ತ ಆಹಾರ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಕೃಷಿಕರ ಜೊತೆಗಾರರಾಗಲು ನಗರವಾಸಿಗಳು ಮುಂದಾದದ್ದು ಐತಿಹಾಸಿಕ ಬೆಳವಣಿಗೆ. ಭಾರತದÇÉೇ ಮೊದಲನೆಯದಾದ ತೆಲಂಗಾಣದ ಈ ನಗರವಾಸಿ ಗ್ರಾಹಕರು ಬೆಂಬಲಿಸುವ ವಿಷಮುಕ್ತ ಕೃಷಿ ಇತರ ರಾಜ್ಯಗಳಿಗೂ ಮಾದರಿಯಾಗಲಿ.
ಅಡ್ಕೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ
Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.