ಹೊಲ ಬಾಡಿಗೆಗೆ ಇದೆ ! ಸಾಹಸಿ ಕೃಷಿಕನೊಬ್ಬನ ಮಾದರಿ ಪ್ರಯೋಗ


Team Udayavani, Sep 11, 2017, 7:55 AM IST

hola-badige.jpg

ಹೊಲದಲ್ಲಿ ಕೃಷಿ ಮಾಡಬೇಕೆಂಬ ತುಡಿತ ಹಲವರಿಗೆ. ಮುಖ್ಯವಾಗಿ ನಗರವಾಸಿಗಳಿಗೆ. ಇಂಥವರಿಗೆ ಬಾಡಿಗೆಗೆ ಹೊಲ ಒದಗಿಸಿ, ಸಾವಯವ ಕೃಷಿಗೆ ಮಾರ್ಗದರ್ಶನ ನೀಡಿ, ಅವರ ಕನಸು ನನಸಾಗಿಸುವ ಕಾರ್ಯಕ್ರಮವನ್ನು ಶುರು ಮಾಡಿ¨ªಾರೆ ವಿಷ್ಣುವರ್ಧನ್‌.

ಇದಕ್ಕೆ ಅವರಿತ್ತ ಹೆಸರು: ರೆಂಟ್‌ ಎ- ಫಾರ್ಮ್ (ಬಾಡಿಗೆಗೊಂದು ಹೊಲ). ಆಸಕ್ತರು ಒಂದು ತಿಂಗಳ, ಮೂರು ತಿಂಗಳ ಅಥವಾ ಆರು ತಿಂಗಳ ಕಾರ್ಯಕ್ರಮದಲ್ಲಿ ಒಂದನ್ನು ಆಯ್ಕೆ ಮಾಡಿ, ಅದರ ಶುಲ್ಕ ತೆತ್ತು, ಸೇರಿಕೊಳ್ಳಬಹುದು. ವಾರಾಂತ್ಯಗಳಲ್ಲಿ ತಮ್ಮ ಜಮೀನಿಗೆ ಬಂದು ಕೃಷಿ ಕೆಲಸಗಳನ್ನು ಮಾಡುವುದು ಕಡ್ಡಾಯ. (ಈ ಕಾರ್ಯಕ್ರಮ ನಡೆಯುವ ಜಮೀನು ತಮಿಳ್ನಾಡಿನ ಕೊಯಂಬತ್ತೂರಿನ ಹತ್ತಿರದ ತೀಥಿಪಾಳಯಂನಲ್ಲಿದೆ.) ನಿಗದಿತ ಅವಧಿ ಮುಗಿದಾಗ, ಭಾಗವಹಿಸಿದವರು ತಾವು ಬೆಳೆಸಿದ ಫ‌ಸಲು ಕೊಯ್ದು ಒಯ್ಯಬಹುದು ಅಥವಾ ವಿಷ್ಣುವರ್ಧನರ ಸಂಸ್ಥೆಗೆ ಮಾರಬಹುದು. ಇದರಲ್ಲಿ ಭಾಗವಹಿಸಿದವರು ತರಬೇತಿ ಮುಗಿಯುವಾಗ, ತಾವು ಪಾವತಿಸಿದ ಶುಲ್ಕದಷ್ಟು ಬೆಲೆಯ ಫ‌ಸಲು ಪಡೆಯಲು ಸಾಧ್ಯ; ಮಾತ್ರವಲ್ಲ.  ತಾವು ಬೆಳೆದ ಫ‌ಸಲು ಮಾರಿ ಲಾಭಗಳಿಸಲೂ ಸಾಧ್ಯ ಎನ್ನುತ್ತಾರೆ ವಿಷ್ಣುವರ್ಧನ್‌.

ಇದೆಲ್ಲ ಶುರುವಾದದ್ದು ಅಕ್ಟೋಬರ್‌ 2015ರಲ್ಲಿ. ಆಗ ವಿಷ್ಣುವರ್ಧನ್‌ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ವಿನ್ಯಾಸ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಮಂಡ್ಯದಲ್ಲಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಅವರ ಮನ ಕಲಕಿತು. ಈ ದುರಂತಕ್ಕೆ ಕಾರಣವಾದ ವ್ಯವಸ್ಥೆಯನ್ನು ಬದಲಾಯಿಸಲು ಅವರು ಆಗಲೇ ನಿರ್ಧರಿಸಿದರು.

“ವಾರಾಂತ್ಯಗಳಲ್ಲಿ ನಾನು ರೈತರೊಂದಿಗೆ ಮಾತನಾಡಲು ಶುರುವಿಟ್ಟೆ. ಕಷ್ಟಪಟ್ಟು ಬೆಳೆ ಬೆಳೆಸುವ ರೈತರಿಗೆ ತಮ್ಮ ಫ‌ಸಲಿನ ಮಾರಾಟದಿಂದ ಲಾಭ ಸಿಗುತ್ತಿಲ್ಲ ಎಂಬುದನ್ನು ತಿಳಿದುಕೊಂಡೆ. ಆದರೆ, ಅವರ ಫ‌ಸಲನ್ನು ಗ್ರಾಹಕರು ಹೆಚ್ಚಿನ ಬೆಲೆಗೇ ಖರೀದಿಸುತ್ತಿದ್ದರು. 

ಈ ವ್ಯವಹಾರದಲ್ಲಿ ಮಧ್ಯವರ್ತಿಗಳನ್ನು ಹೊರಗಿಡುವುದು ಅಗತ್ಯ ಅನಿಸಿತು. ಆದರೆ ರೈತರಿಗೆ ತಮ್ಮ ಫ‌ಸಲನ್ನು ಒಳ್ಳೇ ರೇಟಿಗೆ ಮಾರಾಟ ಮಾಡುವುದೇ ಸಮಸ್ಯೆಯಾಗಿತ್ತು. ಆದ್ದರಿಂದ, ರೈತರಿಗೆ ಲಾಭ ಆಗಬೇಕು ಎಂಬ ಉದ್ದೇಶದಿಂದ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಶುರುಮಾಡಿದೆವು ಎಂದು ವಿವರಿಸುತ್ತಾರೆ ವಿಷ್ಣುವರ್ಧನ್‌.

ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡುವ ಮುಂಚೆ ವಿಷ್ಣುವರ್ಧನ್‌ ಮಾಡಿದ ಕೆಲಸ: ಇಂಡಿಯನ್‌ ಸೂಪರ್‌ ಹೀರೋಸ್‌ ಎಂಬ ಸಂಘಟನೆ ಸ್ಥಾಪಿಸಿದ್ದು. ಇದು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ಸರಕಾರೇತರ ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳ ಸಂಘಟನೆ. ಈ ಸಂಘಟನೆಯು ಕಡಿಮೆ ಜಮೀನು ಹೊಂದಿದ ಸಾವಯವ ರೈತರೊಂದಿಗೆ ಮತ್ತು ಇತರ ರೈತರೊಂದಿಗೆ ಸೇರಿಕೊಂಡು ಕೆಲಸ ಮಾಡಲಿಕ್ಕಾಗಿ ಸಹಕಾರಿ ಸಂಸ್ಥೆಯೊಂದನ್ನು ಸ್ಥಾಪಿಸಿತು.

ಇದು ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವ ರೈತರನ್ನು ಸಂಪರ್ಕಿಸಿ, ಅವರು ಶೂನ್ಯ ಬಂಡವಾಳ ಸಮಗ್ರ ಸಾವಯವ ಕೃಷಿ ವಿಧಾನಕ್ಕೆ ಬದಲಾಗಲು ಮಾರ್ಗದರ್ಶನ ನೀಡತೊಡಗಿತು. ಕೃಷಿಯಲ್ಲಿ ರಾಸಾಯನಿಕ ಪೀಡೆನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ನಿಲ್ಲಿಸುವುದು ಮೊದಲ ಹೆಜ್ಜೆ; ಇವುಗಳ ಬದಲಾಗಿ ಕೃಷಿತ್ಯಾಜ್ಯ, ದನದ ಸಗಣಿ, ಮೂತ್ರ ಮತ್ತು ಹಸಿರುಸೊಪ್ಪನ್ನು ಗೊಬ್ಬರವಾಗಿ ಬಳಸುವುದು ಎರಡನೇ ಹೆಜ್ಜೆ. ಹೊಲಕ್ಕೆ ಹಾಕುವ ಎಲ್ಲ ಒಳಸುರಿಗಳೂ ಹೊಲದಿಂದಲೇ ಬರುತ್ತವೆ. ಹಾಗಾಗಿ, ಯಾವುದೇ ವೆಚ್ಚವಿಲ್ಲ. ಈ ವಿಧಾನದ ಕೃಷಿಗಾಗಿ ಯಾವುದನ್ನೂ ಹೊರಗಿನಿಂದ ಖರೀದಿಸಬೇಕಾಗಿಲ್ಲ. ಇದುವೇ ಶೂನ್ಯಬಂಡವಾಳ ಕೃಷಿ ಎಂದು ಮಾಹಿತಿ ನೀಡುತ್ತಾರೆ ವಿಷ್ಣುವರ್ಧನ್‌.

ಸಾವಯವ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆ ಇಲ್ಲದಿರುವುದು ಇನ್ನೊಂದು ಸಮಸ್ಯೆ. ಇದಕ್ಕೆ ಪರಿಹಾರ: ಒಂದು ವೆಬ್‌ಸೈಟ್‌ ಶುರು ಮಾಡಿ, ಗ್ರಾಹಕರಿಗೆ ನೇರವಾಗಿ ಆನ್‌ಲೈನ್‌ ಮಾರಾಟ ಮಾಡುವುದು; ಹೀಗೆ ಮಾಡಿದರೆ, ಮಧ್ಯವರ್ತಿಗಳನ್ನು ದೂರವಿಡಲು ಸಾಧ್ಯ ಎಂಬುದು ವಿಷ್ಣುವರ್ಧನರಿಗೆ ಚೆನ್ನಾಗಿ ಅರ್ಥವಾದ ಸಂಗತಿ. 

ಅಂತೂ ಫೆಬ್ರವರಿ, 2017ರಲ್ಲಿ ಅವರ ವೆಬ್‌ಸೈಟ್‌ಗೆ ಚಾಲೂ. ತಮಿಳುನಾಡಿನ ಇಬ್ಬರು ರೈತರ ಉತ್ಪನ್ನಗಳನ್ನು ಆನ್‌ಲೈನಿನಲ್ಲಿ ಮಾರಾಟ ಮಾಡುವ ಮೂಲಕ ವ್ಯವಹಾರದ ಆರಂಭವಾಯಿತು.  ಈಗ ಇಂಡಿಯನ್‌ ಸೂಪರ್‌ ಹೀರೋಸ್‌ ಸಂಘಟನೆ ಇಂಡಿಯನ್‌ ಆರ್ಗಾನಿಕ್‌ ಸ್ಟೋರ್‌ ಎಂಬ ವೆಬೆÕ„ಟ್‌ ಮೂಲಕ 823 ಸಾವಯವ ಕೃಷಿಕುಟುಂಬಗಳ ಉತ್ಪನ್ನಗಳನ್ನು ಮಾರುತ್ತಿದೆ. 

ಹೆಚ್ಚೆಚ್ಚು ರೈತರನ್ನು ಸಂಪರ್ಕಿಸಿ, ಅವರು ಬೆಳೆಸಿದ್ದನ್ನು ನೇರವಾಗಿ ರೈತರಿಗೆ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಬಹುದೆಂದು ವಿವರಿಸಿದ್ದು; ಸಾವಯವ ಕೃಷಿಯಲ್ಲಿ ಯಾವುದೇ ವೆಚ್ಚ ಇರುವುದಿಲ್ಲವೆಂದು ತಿಳಿಸಿದ್ದು,  ಇದು 800ಕ್ಕಿಂತ ಜಾಸ್ತಿ ರೈತಕುಟುಂಬಗಳ ಮನವೊಲಿಸಲು ಅವರು ಅನುಸರಿಸಿದ ವಿಧಾನ. 

ಇಂಡಿಯನ್‌ ಸೂಪರ್‌ ಹೀರೋಸ್‌ ಮಾರುತ್ತಿರುವ ಸಾವಯವ ಉತ್ಪನ್ನಗಳ ಮಾರಾಟ ಬೆಲೆ ಸಗಟು ಮಾರಾಟ ಬೆಲೆಗಿಂತ ಜಾಸ್ತಿ; ಆದರೆ ಚಿಲ್ಲರೆ ಮಾರಾಟ ಬೆಲೆಗಿಂತ ಕಡಿಮೆ. ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಗಳಿಕೆ ಹೆಚ್ಚಿಸುವುದು ಈ ಸಂಘಟನೆ ಅನುಸರಿಸುವ ಪರಿಣಾಮಕಾರಿ ವಿಧಾನ. ಉದಾಹರಣೆಗೆ, ತೆಂಗಿನಕಾಯಿಯನ್ನು ಮಾರುವ ಬದಲಾಗಿ ಅದರ ಎಣ್ಣೆ ತೆಗೆದು ಮಾರುವುದು. ತೆಂಗಿನೆಣ್ಣೆಯನ್ನು ಲೀಟರಿಗೆ 180 ರೂಪಾಯಿ ದರದಲ್ಲಿ ಮಾರಬಹುದು. ಇದರ ಬದಲಾಗಿ, ತೆಂಗಿನಕಾಯಿ ಮಾರಿದರೆ, ಖರೀದಿದಾರ ಹೇಳಿದ ಬೆಲೆಗೆ ರೈತ ಮಾರ ಬೇಕಾಗುತ್ತದೆ. ಹಾಗೆಯೇ, 5  10 ಸಿರಿಧಾನ್ಯದ ಬಿಸ್ಕಿಟನ್ನು 50 ರೂಪಾಯಿಗೆ ಮಾರಬಹುದು. ಇದರ ಬದಲಾಗಿ ಸಿರಿಧಾನ್ಯವನ್ನೇ ಮಾರಿದರೆ ರೈತನಿಗೆ ಸಿಗುವುದು ಕಿಲೋಕ್ಕೆ 50 ರೂಪಾಯಿ ಅಷ್ಟೇ ಎಂದು ಮನದಟ್ಟು ಮಾಡುತ್ತಾರೆ ವಿಷ್ಣುವರ್ಧನ್‌. 

ಕೃಷಿರಂಗದ ವ್ಯವಸ್ಥೆಯನ್ನೇ ಬದಲಾಯಿಸಬೇಕು. ಮುಂದಿನ ತಲೆಮಾರು ಕೂಡ ಕೃಷಿಯಲ್ಲಿ ತೊಡಗಬೇಕು ಎಂಬುದು ವಿಷ್ಣುವರ್ಧನರ ಆಶಯ. ತಾವು ಅನುಸರಿಸುವ ವಿಧಾನಗಳು ರೈತ ಕುಟುಂಬಗಳನ್ನು ಸುಸ್ಥಿರತೆಯತ್ತ ಒಯ್ಯುತ್ತವೆ. ಇದು ರೈತರಿಗೆ ಸಾಲ ಕೊಟ್ಟು, ಅವರನ್ನು ಅವರ ಪಾಡಿಗೆ ಬಿಡುವುದಕ್ಕಿಂತ ಉತ್ತಮ ವಿಧಾನ ಎಂಬುದು ಅವರ ದೃಢ ನಂಬಿಕೆ.
(ಸಂಪರ್ಕ 9487010698)

– ಅಡ್ಕೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.