ಎಲ್ಲ ಕಾಲವೂ ವಸಂತವಲ್ಲ


Team Udayavani, Mar 12, 2018, 3:20 PM IST

vasantakala.jpg

ಬೋಳಾದ ಮರ ನೋಡು ನೋಡುತ್ತಲೇ ಚಿಗುರಿ ಬಿಡುತ್ತದೆ. ಆದರೆ ನಮಗೆ ಹಾಗಲ್ಲ. ಹಿಂದಕ್ಕೆ ಓಡಲು ಸಾಧ್ಯವಿಲ್ಲ. ನಾವು ನಿನ್ನೆಗೆ ಹೋಗಲೂ ಸಾಧ್ಯವಿಲ್ಲ. ಕಾಲ ಎನ್ನುವುದು, ವೇಳೆ ಎನ್ನುವುದು ಅಂಗೈಯೊಳಗಿನ ನೀರಿನಷ್ಟೇ ಸಹಜವಾಗಿ ಜಾರುತ್ತಿದೆ. ಕಾಲ ಜಾರುವುದನ್ನು ಅರಿತಾಗ ಮಾತ್ರ ವೇಳೆಯನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ.

ಎಲ್ಲ ಕಾಲವೂ ವಸಂತವಲ್ಲ ಎನ್ನುವುದನ್ನು ವಸಂತ ಮಾಸದಲ್ಲಿಯೇ ಮತ್ತೆ ಮತ್ತೆ ಹೇಳಿಕೊಳ್ಳಬೇಕು.  ಅಂದರೆ ಜೀವನ ಒಂದೇ ರೀತಿಯಲ್ಲಿ ಇರುವುದಿಲ್ಲ ಎನ್ನುವುದನ್ನು ನಾವು ಎಲ್ಲ ರೀತಿಯಿಂದಲೂ ಚೆನ್ನಾಗಿರುವಾಗಲೇ ಹೇಳಿಕೊಳ್ಳಬೇಕು.

ದುಡಿಯಲು ಶಕ್ತಿ ಇರುವಾಗ, ಉತ್ತಮ ಕೆಲಸ ಇರುವಾಗ, ಮುಖ್ಯವಾಗಿ ಯೌವನದ ಕಾಲದಲ್ಲಿ, ಆರ್ಥಿಕ ಅನುಕೂಲಗಳು ಇರುವಾಗ, ಇದನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು. ಮನುಷ್ಯ ಪ್ರಕೃತಿಯ ಭಾಗವಾದರೂ ಮರಗಿಡಗಳಿಗೆ ಮಾತ್ರ ಮತ್ತೆ ಮತ್ತೆ ಚಿಗುರುವ ಭಾಗ್ಯ. ಹಣ್ಣೆಲೆಯ ನೆನಪಿಲ್ಲದ ಹಾಗೆ ಹಸಿರೆಲೆಗಳು, ಚಿಗುರೆಲೆಗಳು ಮೈ ತುಂಬ ಹೊದ್ದು ನಿಲ್ಲುತ್ತವೆ. ಬೋಳಾದ ಮರ ನೋಡು ನೋಡುತ್ತಲೇ ಚಿಗುರಿ ಬಿಡುತ್ತದೆ. ಆದರೆ ನಮಗೆ ಹಾಗಲ್ಲ. ಹಿಂದಕ್ಕೆ ಓಡಲು ಸಾಧ್ಯವಿಲ್ಲ. ನಾವು ನಿನ್ನೆಗೆ ಹೋಗಲೂ ಸಾಧ್ಯವಿಲ್ಲ. ಕಾಲ ಎನ್ನುವುದು, ವೇಳೆ ಎನ್ನುವುದು ಅಂಗೈಯೊಳಗಿನ ನೀರಿನಷ್ಟೇ ಸಹಜವಾಗಿ ಜಾರುತ್ತಿದೆ. ಕಾಲ ಜಾರುವುದನ್ನು ಅರಿತಾಗ ಮಾತ್ರ ವೇಳೆಯನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ. ಹಣಕಾಸು ವಿಚಾರದಲ್ಲಂತೂ ಕಾಲಕ್ಕೆ ಎಷ್ಟು ಮಹತ್ವ ನೀಡಿದರೂ ಸಾಲದು.
ಜೀವನ ಚಕ್ರದ ಅಗತ್ಯಗಳು.

ಬಡವನಿರಲಿ ಶ್ರೀಮಂತನಿರಲಿ, ಜೀವನದಲ್ಲಿ ಕೆಲವು ಸಂದರ್ಭಗಳು ಬಂದೇ ಬರುತ್ತವೆ. ಒಬ್ಬ ವ್ಯಕ್ತಿಯ 30 ನೇ ವರ್ಷದಿಂದ  ಸುಮಾರು 60 ನೇ ವರ್ಷದ ಅವಧಿಯ ವರೆಗೆ ಅಂದರೆ 30 ವರ್ಷಗಳ ಜೀವಿತಾವಧಿಯಲ್ಲಿ ವ್ಯಕ್ತಿ  ಆರ್ಥಿಕವಾಗಿ ದುಡಿಯುವ ಶಕ್ತಿಯನ್ನು ಪಡೆದುಕೊಂಡಿರುವ ಕಾಲ.  ತನ್ನ ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ಕಾಲವೂ ಇದಾಗಿರುತ್ತದೆ. ಈ ವಯಸ್ಸಿನಲ್ಲಿ ಎದುರಾಗಬಹುದಾದ ಸಂದರ್ಭಗಳೆಂದರೆ ಮದುವೆ, ಮಕ್ಕಳು, ಮಕ್ಕಳ ಶಿಕ್ಷಣ, ಮಕ್ಕಳ ಜವಾಬಾœರಿ, ಅವರಿಗೆ ಉತ್ತಮ ಬದುಕು ರೂಪಿಸಿಕೊಡುವುದು, ಸ್ವಂತ ಮನೆ ಹೊಂದಬೇಕೆಂಬ ಕನಸು, ಮನೆ ಇದ್ದರೆ ಅದನ್ನು ರಿಪೇರಿ ಮಾಡಿಸುವ ಅಥವಾ ಹೊಸ ಮನೆ ಕಟ್ಟುವ ಗುರಿ, ಇಳಿ ವಯಸ್ಸಿನ ತಂದೆ ತಾಯಿಯರಿಗೆ ಅನಾರೋಗ್ಯದ ಸಮಸ್ಯೆ ಎದುರಾದರೆ ವ್ಯದ್ಯಕೀಯ ವೆಚ್ಚ ಇವೆಲ್ಲವೂ ನಿರೀಕ್ಷಿತ ಖರ್ಚುಗಳಾಗುತ್ತದೆ. ಆದರೆ ಕೆಲವೊಮ್ಮ ಅಪಘಾತ, ಅನಾರೋಗ್ಯ, ವೃತ್ತಿಯಲ್ಲಿ ಏರು ಪೇರು, ಉದ್ಯಮದಲ್ಲಿ ನಷ್ಠ ಇತ್ಯಾದಿಯೂ ಎದುರಾಗಬಹುದು. ಅನಿರಿಕ್ಷಿತ ಸಂದರ್ಭಗಳನ್ನು ಶ್ರೀಮಂತರು ಹೇಗೋ ಇಂತಹ ನಿಭಾಯಿಸಬಹುದು. ಆದರೆ ಮಧ್ಯಮವರ್ಗ ಮಾತ್ರ ಇಂತಹ ಆಘಾತಗಳಿಂದ ತತ್ತರಿಸುತ್ತದೆ. ಮುಖ್ಯವಾಗಿ, ಒಂದು ಕುಟುಂಬದ ವಾತಾವರಣವೇ ಬದಲಾಗುತ್ತದೆ. ಗುಣಮಟ್ಟದ ಜೀವನ ನಡೆಸುವುದು ಕಷ್ಟವಾಗುತ್ತದೆ. ಸಂಕಷ್ಟವೆಂದರೆ ಆರ್ಥಿಕ ಸಂಕಷ್ಟವೆಂದೇ ಹೇಳಬೇಕಾದ ಕಾಲದಲ್ಲಿ ನಾವು ಇದ್ದೇವೆ. ಹೀಗೆ ಸಮಸ್ಯೆ ಆದಾಗ ಸಾಲಕ್ಕೆ ಮೊರೆ ಹೋಗುವುದು ಸಾಮಾನ್ಯ. ಹಾಗೆ ಸಾಲ ಮಾಡಿದಾಗ, ಅದೂ ಕಷ್ಟಕಾಲದಲ್ಲಿ ಒಂದೆಡೆ ಹರಿದು ಇನ್ನೊಂದೆಡೆ ಹೊಲಿದ ಹಾಗೆ. ಮತ್ತೆ ಇನ್ನೊಂದೆಡೆ ಹೊಲಿಯಲು ಮತ್ತೂಂದೆಡೆ ಹರಿಯಬೇಕು. ಸಾಲ ಎನ್ನುವುದು ಸುಳಿಯಹಾಗೆ ಎಳೆದುಕೊಳ್ಳುತ್ತದೆ.ಸಾಲದೊಂದಿಗೆ ಸಂಬಂಧಗಳನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಆರ್ಥಿಕ ಸಂಕಷ್ಠ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಸಿದುಕೊಳ್ಳುವಷ್ಟು ಸಶಕ್ತವಾಗಿರುತ್ತದೆ.

ಸುರಕ್ಷಿತ ಪ್ರಯಾಣಕ್ಕಾಗಿ ಚಾಲಕರಿಗೆ  ಉಪಯಕ್ತವಾಗಲಿ ಎಂದು ಸೂಚನಾ ಫ‌ಲಕ ಬರೆದಿರುತ್ತಾರೆ. ರಸ್ತೆಯಲ್ಲಿ ತಿರುವು ಇದೆ. ತಗ್ಗು ಇದೆ. ಶಾಲಾ ಮಕ್ಕಳು ಸಂಚರಿಸುವ ದಾರಿ, ಮುಂದೆ ಸೇತುವೆ ಇದೆ… ಹೀಗೆ ಎಚ್ಚರಿಕೆ ವಹಿಸುವುದರಿಂದ ಸುರಕ್ಷಿ$ತ ವಾಹನ ಚಾಲನೆ  ಸಾಧ್ಯ. ಹಾಗೆಯೇ ನಮ್ಮ ಬದುಕಿನಲ್ಲೂ ಸುಖಕರ ಪ್ರಯಾಣಕ್ಕೆ ಜೀವನದಲ್ಲಿ ಏನೇನು ಅಗತ್ಯಗಳು, ಜವಾಬ್ದಾರಿಗಳು ಎದುರಾಗುತ್ತವೆ ಎನ್ನುವುದನ್ನು ಮೊದಲೇ ಯೋಚಿಸಬಹುದು. ಜೀವನ ಚಕ್ರದ ಅಗತ್ಯಗಳನ್ನು ಅರಿಯುವುದರಿಂದಲೇ ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಿದ್ದತೆ ಆರಂಭವಾಗುವುದೇ ಉಳಿತಾಯದಿಂದ.

– ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

basavaraj rayareddy

Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ

ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

rohit sharma

Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

basavaraj rayareddy

Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ

ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

rohit sharma

Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.