ಅಲಲಲೇ ಮತ್ತಲ್ಲೇ ಶಾಪಿಂಗು
Team Udayavani, Apr 1, 2019, 6:00 AM IST
ಕುಡಿಯೋದೇ ಇಲ್ಲಿ ಬ್ಯುಸಿನೆಸ್. ಕುಡಿದ ಮೇಲೆ ಶಾಪಿಂಗ್ ಮಾಡೋದೇ ಇವರ ವೀಕ್‌ನೆಸ್. ಹೌದು, ಇದು ನಿಜ. ನಾವು ಯಾವುದಾದರೂ ವಸ್ತುಗಳನ್ನು ಕೊಳ್ಳಬೇಕೆಂದರೆ ಮೈಯೆಲ್ಲಾ ಕಣ್ಣಾಗಿ, ಬಹಳ ಎಚ್ಚರದಿಂದ ವ್ಯಾಪಾರ ಮಾಡುತ್ತೇವೆ. ಆದರೆ, ಅಮೆರಿಕದಲ್ಲಿ ಅಮಲಲ್ಲಿ ಮೈಮರೆತಾಗ ಉತ್ಪನ್ನಗಳನ್ನು ಖರೀದಿಸುವ ಹೊಸ ಟ್ರೆಂಡ್ ಶುರುವಾಗಿದೆ. ಅದನ್ನು “ಡ್ರಂಕ್ ಶಾಪಿಂಗ್’ ಅಂತ ಕರೆಯುತ್ತಾರೆ. ಈ ಸಾಲಿನಲ್ಲಿ ಈ ರೀತಿ ಕುಡಿದು ಖರೀದಿ ಮಾಡಿದ ಮೊತ್ತ ಎಷ್ಟೆಂದರೆ 15 ಬಿಲಿಯನ್ ಡಾಲರ್ !
ಭಾರತದಲ್ಲೂ “ನಶೆ ಶಾಪಿಂಗ್’ ಸಣ್ಣಗೆ ಶುರುವಾಗಿದೆಯಂತೆ.
ಮುಂಬಯಿ, ದೆಹಲಿಗಳಲ್ಲಿ ಕಂಡೂ ಕಾಣದಂತೆ ನಡೆಯುತ್ತಿದೆಯಂತೆ. ಇಲ್ಲಿಯದು ಬಿಡಿ, ಅಮೆರಿಕದಲ್ಲಿ ನಡೆಯುವ ನಶೆ ಶಾಪಿಂಕ್‌ಗೆ ಸ್ಫೂರ್ತಿಯಾರು? ಅಂತ ಹುಡುಕ ಹೊರಟರೆ ಸಿಗುವುದ ಅಲ್ಲಿನ ಸಿನಿಮಾ, ಪಂದ್ಯಗಳು. ಕುಡಿತದ ಅಮಲಿನಲ್ಲೇ ತೂರಾಡುತ್ತಾ ಶಾಪಿಂಗ್ ಮಾಡುವುದು ಪ್ರಸ್ಟೀಜ್ ಆಗಿರುವುದರಿಂದ ಅದು ಉದ್ಯಮದ ರೂಪ ಪಡೆದಿದೆ. ಹಾಗಂತ, ಕುಡಿದು ಇವರೇನು ಕೊಳ್ಳಬಹುದು? ಹೆಚ್ಚಾಗಿ ಬಟ್ಟೆ, ಶೂಗಳನ್ನು ಖರೀದಿ ಮಾಡುವುದನ್ನು ಬಿಟ್ಟರೆ ಮತ್ತೇನೂ ಇಲ್ಲ.
ಇದನ್ನು ಮೀರಿ ಕೊಳ್ಳುತ್ತಾರೆ ಎಂದರೆ ಅದಕ್ಕೆ ಕಾರಣ ಸಿನಿಮಾ. ಸಿನಿಮಾ ನೋಡುವಾಗ ಯಾವುದಾದರೂ ವಸ್ತುವಿನೊಂದಿಗೆ ಕ್ರಶ್ ಆದರೆ ಅದನ್ನು ಕೊಳ್ಳುತ್ತಾರಂತೆ.
ಶೇ.85ರಷ್ಟು ಜನ ಈ ನಶೆ ಶಾಪಿಂಗ್ ಮಾಡುವುದು ಅಮೆಜಾನ್‌ನಲ್ಲಿ.
ಶೇ.21ರಷ್ಟು ಇ.ಬೇ, ವಾಲ್‌ಮಾರ್ಟ್ ಶೇ. 5ರಷ್ಟಂತೆ. ಕುಡಿಯಲು ಹೋದರೆ, ಅಲ್ಲಿನ ಬಾರ್‌ನವರೇ “ಒಂದೇ ಒಂದು ಸಾರಿಯಾದರೂ ನಶೆಯ ಶಾಪಿಂಗ್’ ಮಾಡಿ ಅಂತ ಪ್ರೇರೇಪಿಸುವುದರಿಂದ ಅಮೆರಿಕದಲ್ಲಿ ಒಬ್ಬ ವ್ಯಕ್ತಿ ವಾರ್ಷಿಕವಾಗಿ ಕನಿಷ್ಠ 444ಡಾಲರ್ ಅನ್ನು ನಶೆಶಾಪಿಂಗ್‌ಗಾಗಿ ವಿನಿಯೋಗಿಸುತ್ತಿದ್ದಾನಂತೆ.
ಇನ್ನೊಂದು ವಿಶೇಷ ಅಂದರೆ, ನಶೆ ಶಾಪಿಂಗ್‌ನಲ್ಲಿ ಮಹಿಳೆಯರದ್ದೇ ಎತ್ತಿದ ಕೈ . ಇವರು ಶೇ.80ರಷ್ಟು ವ್ಯಾಪಾರ ಮಾಡಿದ್ದರೆ, ಪುರುಷರ ಪಾಲು ಶೇ. 72ರಷ್ಟು. ಕುಡಿದು ಕುಡಿದು ಹಾಳಾಗಬೇಡಿ ಅನ್ನೋ ನಮ್ಮ ಸಂಸ್ಕೃತಿಗೆ ಇದು ಪೂರ್ತಿ ಉಲ್ಟಾ. ಕುಡಿದೇ ವ್ಯವಹಾರ ಮಾಡಿ ಅನ್ನೋದು ಇವರ ಮಂತ್ರ.
ನಮ್ಮಲ್ಲಿ ಅಮಲೇರಿಸಿಕೊಳ್ಳುವುದು (ಲಿಕ್ಕರ್) ಬ್ಯುಸಿನೆಸ್, ಅಲ್ಲಿ ಅಮಲೇರಿಸಿಕೊಂಡಾಗಲೇ ಬ್ಯುಸಿನೆಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.