ಅಮಿತ ಮಿಶ್ರ


Team Udayavani, Dec 25, 2017, 2:28 PM IST

amita-mishra.jpg

ಮೊದಲು ರೈತನಾಗಿದ್ದು ನಂತರ ಸರ್ಕಾರಿ ನೌಕರಿ ಸೇರಿದ ಸಾವಿರಾರು ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಸರ್ಕಾರಿ ನೌಕರರಿಗೆ ಗುಡ್‌ಬೈ ಹೇಳಿ ಯಶಸ್ವಿ- ಅತಿಯಶಸ್ವಿ ಕೃಷಿಕ ಅನಿಸಿಕೊಂಡವರು ವಿರಳ. ಅಂಥವರ ಪೈಕಿ ಗುಂಡೂರಾವ್‌ ಕುಲಕರ್ಣಿ ಪ್ರಮುಖರು. ಈ ಕೃಷಿಕ ಮಾಡದ ಕೃಷಿ ಪ್ರಯೋಗಗಳೇ ಇಲ್ಲ ಅನ್ನಬಹುದು. 

ಬೆಳೆ ವೈವಿಧ್ಯತೆ ಅಳವಡಿಸಿಕೊಂಡಲ್ಲಿ ಕೃಷಿಯಲ್ಲಿ ಸೋಲುತ್ತೇವೆಂದು ಯೋಚಿಸುವ ಅಗತ್ಯವೇ ಇಲ್ಲ. ತಾವು ಉಣ್ಣುವ ಆಹಾರ ಬೆಳೆಗಳನ್ನು ಬೆಳೆದುಕೊಳ್ಳಲು ತಮ್ಮ ಜಮೀನಿನಲ್ಲಿಯೇ ಸ್ವಲ್ಪ ಸ್ಥಳ ಮೀಸಲಿರಿಸಿಕೊಂಡು ರಾಸಾಯನಿಕ ರಹಿತವಾಗಿ ಬೆಳೆದ ಫ‌ಸಲನ್ನು ಬಳಕೆ ಮಾಡಿದರೆ, ರೈತ ಸ್ವಾವಲಂಬಿಯೂ ಆಗಬಹುದು. ಅನ್ನದಾತ, ಸ್ವಾವಲಂಬನೆಯ ಪಾಠ ಹೇಳುವ ಸಾಧಕನಾಗಬೇಕು ಎನ್ನುವ ಕಲ್ಪನೆ ಹೊಂದಿರುವ ಗುಂಡೂರಾವ್‌ ಕುಲಕರ್ಣಿ ತಾವು ಅಂದುಕೊಂಡಿರುವುದನ್ನು ಕೃಷಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ.

ನೌಕರಿ ತೊರೆದು ಕೃಷಿಗೆ: ಗುಂಡೂರಾವ್‌ ಕುಲಕರ್ಣಿ ಕೊಪ್ಪಳ ತಾಲೂಕಿನ ಕಲ್ತಾವರೆ ಗ್ರಾಮದವರು. ಸೇಡಂ ತಾಲೂಕಿನ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ತಂದೆಯ ಮರಣಾನಂತರ ತಮಗಿರುವ ಐವತ್ತು ಎಕರೆ ಜಮೀನನ್ನು ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆಗ, ನೌಕರಿ ತೊರೆದು ಕೃಷಿಗೆ ಇಳಿದರು. ತಂದೆ ಕೈಗೊಳ್ಳುತ್ತಿದ್ದ ಸಾಂಪ್ರದಾಯಿಕ ಏಕ ಬೆಳೆ ಮಾದರಿ ಕೃಷಿಯನ್ನು ಬದಿಗೊತ್ತಿ ತಮ್ಮ ಆಲೋಚನೆಗಳಿಗನುಸಾರ ಕೃಷಿ ಬೆಳೆಯಲ್ಲಿ ವೈವಿಧ್ಯತೆ ಅಳವಡಿಸಿಕೊಂಡರು. ಊಟಕ್ಕಾಗಿ ಬಳಸುವ ದೇಸೀಯ ತಳಿಯ ಭತ್ತ, ಸಿರಿಧಾನ್ಯ ಹಾರಕವನ್ನು ಬೆಳೆದುಕೊಳ್ಳುತ್ತಿರುವುದು ಇವರ ಕೃಷಿ ವಿಶೇಷತೆ. 

ಏನೇನಿದೆ ವಿಶೇಷತೆ?: ಐವತ್ತು ಎಕರೆ ಜಮೀನಿನಲ್ಲಿ ಕೃಷಿ ಹೊಂದಾಣಿಕೆಯಲ್ಲಿ ಜಾಣ್ಮೆ ಅಳವಡಿಸಿಕೊಂಡಿದ್ದಾರೆ. ಎಂಟು ಎಕರೆ ಮೆಕ್ಕೆ ಜೋಳ, ನಾಲ್ಕು ಎಕರೆ ತೊಗರಿ, ಆರು ಎಕರೆ ಕಬ್ಬು, ಹತ್ತು ಎಕರೆ ಮಾವು, ಎರಡು ಎಕರೆ ಭತ್ತ, ಒಂದು ಎಕರೆ ಹಾರಕ, ಐದು ಎಕರೆ ಸಜ್ಜೆ, ಸಜ್ಜೆಯ ಮಧ್ಯೆ ಅಕ್ಕಡಿಯಾಗಿ ಹೆಸರು, ಉದ್ದು ಬೆಳೆಗಳ ವೈವಿಧ್ಯತೆ ಅಳವಡಿಸಿಕೊಂಡಿದ್ದಾರೆ.

ಮುಂಗಾರು ಬೆಳೆ ಕೊಯ್ಲಿನ ನಂತರ ಹಿಂಗಾರಿನಲ್ಲಿ ಶೇಂಗಾ ಬೆಳೆಗೆ ಪ್ರಾಶಸ್ತ. ಹೆಸರು, ಉದ್ದು, ಕಡಲೆ ಮತ್ತಿತರ ಬೆಳೆಗಳನ್ನು ಅಕ್ಕಡಿಯಾಗಿ ಬೆಳೆದುಕೊಳ್ಳುತ್ತಾರೆ. ಸಿರಿಧಾನ್ಯ ಹಾರಕಕ್ಕೂ ಸ್ಥಾನ ಮೀಸಲಿಡುತ್ತಾರೆ. ಈಗ ಮುಂಗಾರಿನ ಬೆಳೆ ಕಟಾವು ಪೂರೈಸಿದ್ದಾರೆ. ಶೇಂಗಾ ಎಕರೆಯಿಂದ ಹತ್ತು ಕ್ವಿಂಟಾಲ್‌, ಕಡಲೆ ಒಂದು ಕ್ವಿಂಟಾಲ್‌, ಹೆಸರು ಒಂದು ಕ್ವಿಂಟಾಲ್‌, ಉದ್ದು ಒಂದು ಕ್ವಿಂಟಾಲ್‌, ಜೋಳ ಎಕರೆಯಿಂದ ಇಪ್ಪತ್ತೆ„ದು ಕ್ವಿಂಟಾಲ್‌,

ಸಜ್ಜೆಯ ಮಧ್ಯೆ ಬೆಳೆದ ತೊಗರಿಯಿಂದ ನಾಲ್ಕು ಕ್ವಿಂಟಾಲ್‌, ಸಜ್ಜೆ ಏಳು ಕ್ವಿಂಟಾಲ್‌ ಇಳುವರಿ ಪಡೆದಿದ್ದಾರೆ. ನಾಲ್ಕು ಎಕರೆಯಲ್ಲಿ ಪ್ರತ್ಯೇಕವಾಗಿ ಬೆಳೆದ ತೊಗರಿ ಎಕರೆಗೆ ಎಂಟು ಕ್ವಿಂಟಾಲ್‌ನಂತೆ  ಇಳುವರಿ ದೊರೆತಿದೆ. ಹತ್ತು ಎಕರೆ ಮಾವಿನ ತೋಟ ಸೃಷ್ಟಿಸಿದ್ದು ದಷ್ಟಪುಷ್ಟವಾಗಿ ಬೆಳೆದ ಮರಗಳು ಉತ್ತಮ ಫ‌ಸಲನ್ನೇ ನೀಡುತ್ತಿವೆ. ಕಳೆದ ಬಾರಿ ಮಾವು ಕೃಷಿಯದಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಕೂಡ ಗಳಿಸಿದ್ದಾರೆ. 

ದೇಸಿ ಧಾನ್ಯದ ಸೊಬಗು: ತಾವು ಬಳಕೆ ಮಾಡುವ ಭತ್ತವನ್ನು ಸ್ವತಃ ತಾವೇ ಬೆಳೆದುಕೊಳ್ಳುತ್ತಾರೆ. ದೊಡ್ಡಿಗ ತಳಿಯ ದೇಸೀ ತಳಿಯ ಭತ್ತವನ್ನು ಜುಲೈ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದಾರೆ. ಎರಡು ಎಕರೆಯಲ್ಲಿ ಕೂರಿಗೆ ಸಹಾಯದಿಂದ ಬಿತ್ತನೆ ಕೈಗೊಂಡಿದ್ದು ಸಾಲಿನ ನಡುವೆ ಒಂದು ಅಡಿಯಷ್ಟು ಅಂತರ ಕಾಯ್ದುಕೊಂಡಿದ್ದಾರೆ. ತೆಳುವಾಗಿ ಬಿತ್ತನೆ ಮಾಡಿದ್ದು ಗಿಡಗಳ ಮಧ್ಯೆ ಅರ್ಧ ಅಡಿ ಅಂತರದಲ್ಲಿ ಗಿಡಗಳು ಮೇಲೆದ್ದು ನಿಂತಿವೆ.

ಕೊಟ್ಟಿಗೆಯ ತಿಪ್ಪೆಗೊಬ್ಬರ ಹೊರತುಪಡಿಸಿ ಬೇರೆ ಯಾವ ರಾಸಾಯನಿಕ ಗೊಬ್ಬರವನ್ನು ಭತ್ತದ ಕೃಷಿಗೆಂದು ಬಳಕೆ ಮಾಡದಿರುವ ಕಡ್ಡಾಯ ನಿರ್ಣಯವನ್ನು ದಶಕಗಳಿಂದ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಬಿತ್ತನೆ ಮಾಡಿದ ಇಪ್ಪತ್ತು, ಮೂವತ್ತು ಹಾಗೂ ನಲವತ್ತೆ„ದನೆಯ ದಿನಕ್ಕೆ ಗಡ್ಡೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ಕುಂಟೆಯ ಹೊಡೆತಕ್ಕೆ ಬೇರು ಹರಿದುಕೊಂಡು ಸಡಿಲಗೊಂಡ ಭೂಮಿಯಲ್ಲಿ ಗಿಡಗಳು ಒಂದಕ್ಕೊಂದು ಸ್ಪರ್ಧೆಯೊಡ್ಡುವ ರೀತಿಯಲ್ಲಿ ಬೆಳೆದುನಿಂತಿದ್ದವು.

ಮೂರುವರೆ ಅಡಿ ಎತ್ತರ ಬೆಳೆದು ನಿಂತ ಪ್ರತೀ ಗಿಡಗಳ ಬುಡದಲ್ಲಿ 10-15 ತೆಂಡೆಗಳು ಬೆಳೆದು ನಿಂತು ನೋಡುಗರ ಕಣ್‌ ಸೆಳೆಯುತ್ತಿತ್ತು. ಈಗ ಭತ್ತದ ಕಟಾವು ಮುಗಿಸಿದ್ದಾರೆ. ಹದಿನೈದು ಕ್ವಿಂಟಾಲ್‌ ಇಳುವರಿ ಪಡೆದಿದ್ದಾರೆ. ಸಾವಯವ ಭತ್ತವನ್ನು ತಪ್ಪಿಯೂ ಮಾರಾಟ ಮಾಡುವುದಿಲ್ಲ. ಅದು ಸಂಪೂರ್ಣ ಮನೆ ಬಳಕೆಗೆ ಮೀಸಲು. ದಪ್ಪನಾದ ಕಾಳುಗಳನ್ನು ಹೊಂದಿರುವ ಭತ್ತವನ್ನು ಅಕ್ಕಿ ಮಾಡಿಸಿ ಪಾಲಿಶ್‌ ಮಾಡಿಸದೇ ಬಳಕೆ ಮಾಡುತ್ತಾರೆ. ಸಿಪ್ಪೆ ದಪ್ಪನಾಗಿರುವ ಈ ಭತ್ತದಿಂದ ಅಕ್ಕಿ ತಯಾರಿಸಿದರೆ ಒಂದು ಕ್ವಿಂಟಾಲ್‌ ಭತ್ತಕ್ಕೆ ನಲವತ್ತು ಕೆಜಿ ಅಕ್ಕಿ ಸಿಗುತ್ತದೆ. 

ಸಿರಿಧಾನ್ಯ ಹಾರಕ ಕೃಷಿ: ಇವರು ಒಂದು ಎಕರೆ ಪ್ರದೇಶದಲ್ಲಿ ನಿರಂತರವಾಗಿ ಹಾರಕ ಬೆಳೆಯುತ್ತಿದ್ದಾರೆ. ಜುಲೈ ಮೊದಲನೆಯ ವಾರ ಕೂರಿಗೆಯ ಸಹಾಯದಿಂದ ಬಿತ್ತನೆ ಮಾಡಿದ್ದರು. ಸಾಲಿನ ಮಧ್ಯೆ ಅರ್ಧ ಅಡಿ ಅಂತರ ಕಾಯ್ದುಕೊಂಡಿದ್ದಾರೆ. ಬಿತ್ತನೆ ಮಾಡಿದ ಇಪ್ಪತ್ತು, ನಲವತ್ತು ಹಾಗೂ ತೊಂಭತ್ತನೆಯ ದಿನಕ್ಕೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ.

ನವೆಂಬರ್‌ ತಿಂಗಳ ಕೊನೆಯ ವಾರ ಬೆಳೆ ಕಟಾವು ಮುಗಿಸಿದ್ದಾರೆ. ಆರು ಕ್ವಿಂಟಾಲ್‌ ಇಳುವರಿ ಪಡೆದಿದ್ದಾರೆ.  ಹಾರಕ ಬೆಳೆಯನ್ನು ಮಾರಿದ ಉದಾಹರಣೆಯಿಲ್ಲ. ಅಕ್ಕಿ ಮಾಡಿಸಿ ತಾವೇ ಬಳಕೆ ಮಾಡಿಕೊಳ್ಳುತ್ತಾರೆ. ದಿನ ನಿತ್ಯದ ಆಹಾರದಲ್ಲಿ ಇವರೇ ಬೆಳೆದುಕೊಂಡ ದೇಸೀ ತಳಿಯ ಭತ್ತ ಹಾಗೂ ಹಾರಕದಕ್ಕಿಯನ್ನು ಬಳಕೆ ಮಾಡಿಕೊಳ್ಳುತ್ತಾರೆ. 

ಭೂಮಿಯ ಫ‌ಲವತ್ತತೆ ಹೀಗೆ..: ಭೂಮಿಯ ಫ‌ಲವತ್ತತೆ ವರ್ಧನೆಗೆ ವಹಿಸುವ ಕಾಳಜಿ ಕಡಿಮೆಯಾಗದಂತೆ ಗಮನ ವಹಿಸುತ್ತಾರೆ. ಎರಡು ವರ್ಷಕ್ಕೊಮ್ಮೆ ದನದ ಹಿಂಡುಗಳನ್ನು ತಿಂಗಳುಗಳ ಕಾಲ ನಿಲ್ಲಿಸುವ ರೂಢಿ ತಪ್ಪದೇ ಪಾಲಿಸುತ್ತಾರೆ. 150-200 ದನಗಳು ಜಮೀನಿನಲ್ಲಿಯೇ ತಿಂಗಳುಗಳ ಕಾಲ ಓಡಾಡಿಕೊಂಡಿರುತ್ತವೆ. ಸಗಣಿ, ಗೋಮೂತ್ರಗಳು ನೇರವಾಗಿ ಭೂಮಿಗೇ ತಲುಪುವುದರಿಂದ ಫ‌ಲವತ್ತತೆ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧ್ಯವಾಗುತ್ತದೆ ಎನ್ನುವ ಮಾತು ಇವರದು. ಇದರ ಹೊರತಾಗಿ ಕೊಟ್ಟಿಗೆಯ ತಿಪ್ಪೆ ಗೊಬ್ಬರವನ್ನು ಬಳಕೆ ಮಾಡುತ್ತಾರೆ.

ನೀರಾವರಿಗಾಗಿ ಬಾವಿ ರಚಿಸಿಕೊಂಡಿದ್ದಾರೆ. ಒರತೆ ಹೊಂದಿರುವ ಬಾವಿಯಲ್ಲಿ ಸದಾ ನೀರು ತುಂಬಿರುತ್ತದೆ. ಈ ಬಾರಿಯ ಮಳೆಯಿಂದಾಗಿ ಬಾವಿ ಪೂರ್ತಿ ತುಂಬಿಕೊಂಡಿದೆ. ಮೂವತ್ತು ಅಡಿ ವ್ಯಾಸದಲ್ಲಿ ಬಾವಿಯ ನೀರು ಸಂಗ್ರಹಗೊಂಡಿದ್ದು ಕೃಷಿಗಾಗಿ ನೀರಿನ ಬಳಕೆಯನ್ನು ಮಾಡುತ್ತಿದ್ದಾರೆ.  ಬೆಳೆದ ಬೆಳೆಯನ್ನು ಮಾರಿ ಹಣ ಗಳಿಸುವುದೊಂದೇ ರೈತರ ಕೆಲಸವಾಗಬಾರದು. ತಮಗೋಸ್ಕರವೂ ಚಿಂತನೆ ಮಾಡುವಂತಾಗಬೇಕು ಎನ್ನುವ ಗುಂಡೂರಾವ್‌ ಕುಲಕರ್ಣಿ ತಾವು ಆಡುವುದನ್ನೇ ತಮ್ಮ ಜಮೀನಿನಲ್ಲಿ ಮಾಡಿ ತೋರಿಸಿದ್ದಾರೆ. 

* ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.