ಕಮಾನು ಡಾರ್ಲಿಂಗ್‌, ಲಿಂಟಲ್ ಬದಲು ಆರ್ಚ್


Team Udayavani, Jun 18, 2018, 4:46 PM IST

arch.jpg

ಕಮಾನುಗಳು ವೈವಿಧ್ಯಮಯ ಡಿಸೈನ್‌ಗಳಲ್ಲಿ ಲಭ್ಯ. ಮಾಮೂಲಿ ಅರ್ಧ ವೃತ್ತಾಕಾರದ ಆರ್ಚ್‌ಗಳು ಹೆಚ್ಚು ಜನಪ್ರಿಯವಾಗಿದ್ದರೂ ಎಲಿಪ್ಟಿಕಲ್‌, ಚೂಪು ಕಮಾನು – ಪಾಯಿಂಟೆಡ್‌ ಆರ್ಚ್‌, ತ್ರೀಪಾಯಿಂಟ್‌ ಅಂದರೆ ಮೂರು ಕೇಂದ್ರ ಹೊಂದಿರುವ ಕಮಾನುಗಳೂ ಸಾಮಾನ್ಯವಾಗೇ ಬಳಕೆಯಲ್ಲಿದೆ. ಒಮ್ಮೆ ನಾವು ಒಂದು ಮಾದರಿಯ ವಿನ್ಯಾಸವನ್ನು ನಿರ್ಧರಿಸಿದ ಮೇಲೆ ಅದರ “ಮಾಲು’ – ಟೆಂಪ್ಲೇಟ್‌ ತಯಾರು ಮಾಡಿಕೊಳ್ಳಬೇಕು. ಇದನ್ನು ಸೆಂಟ್ರಿಂಗ್‌ ಹಾಕುವ ಬಡಗಿಗಳೂ ಮಾಡಿಕೊಡುತ್ತಾರೆ. 

ಮನೆ ಕಟ್ಟಿಸುವವರ ಆಸೆ ಬೇರೆ, ಕಟ್ಟುವವನ ಕಲ್ಪನೆ ಬೇರೆ. ಇದರ ಜೊತೆಗೆ ಈ ರೀತಿ ಯೋಜನೆಗಳ ದಿಕ್ಕುತಪ್ಪಿಸುವವರ ಮಾತುಗಳ ನಡುವೆಯೇ ಒಳ್ಳೇ ಮನೆ ಕಟ್ಟಬೇಕು. ಒಂದು ವಿಷಯ ಏನೆಂದರೆ, ಮನೆ ಕಟ್ಟುವುದು ನಮ್ಮ ಬಜೆಟ್‌ನ ಅನುಗುಣವಾಗಿ. ಆಸೆ, ಕಲ್ಪನೆಗಳಿರಬೇಕು. ನಿಜ, ಆದರೆ, ಬೇರೆ ಯಾರು ಏನೇ ಹೇಳಿದರೂ ಕದಲದ ಮನಃಸ್ಥಿತಿ ಕೂಡ ಇರಬೇಕು. 

ಸಾಮಾನ್ಯವಾಗಿ ಯಾವುದೇ ತೆರೆದ ಸ್ಥಳ ಬಂದೊಡನೆ ಮನೆ ಕಟ್ಟುವಾಗ ಲಿಂಟಲ್‌ಗ‌ಳನ್ನು ಬಳಸಲಾಗುತ್ತದೆ. ಇವುಗಳನ್ನು ಹಾಕುವುದು ಸುಲಭವೇನಲ್ಲ.  ಸೆಂಟ್ರಿಂಗ್‌ ಹಾಕಲು ಮರಗೆಲಸದವರು ಬೇಕು. ಆನಂತರ ಬಾರ್‌ ಬೆಂಡರ್‌ ಬಂದು, ಕಂಬಿ ಕಟ್ಟಿದ ನಂತರವೇ ಗಾರೆಯವರು ಕಾಂಕ್ರಿಟ್‌ ಹಾಕಲು ಆಗುವುದು. ಇದೂ ಕೂಡ ಒಂದು ದಿನ ಕ್ಯೂರ್‌ ಆದಮೇಲೆ ಮೇಲಿನ ಕಟ್ಟಡ ಕಾಮಗಾರಿ ಶುರುಮಾಡಬೇಕಾಗುತ್ತದೆ.

ಕೆಲವೊಮ್ಮೆ ಒಟ್ಟಾರೆಯಾಗಿ ಶುರುವಿನಿಂದ ನಂತರದ ಹಂತ ತಲುಪಲು ಒಂದು ವಾರವೇ ಆಗಿಬಿಡುತ್ತದೆ. ಬಡಗಿ ಬರಲಿಲ್ಲ, ಸರಳು ಕಟ್ಟುವವರು ಸಿಗಲಿಲ್ಲ ಎಂದರೆ ಮತ್ತೂ ಹೆಚ್ಚಿನ ಸಮಯ ತಗಲುವ ಸಾಧ್ಯತೆ ಇರುತ್ತದೆ.  ಆದುದರಿಂದ ನಾವು ಸಣ್ಣ ಪುಟ್ಟ ತೆರೆದ ಸ್ಥಳಗಳಿಗೆ ಮಾಮೂಲಿ ಲಿಂಟಲ್‌ ತಲೆಗಳ ಬದಲು ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳುವುದು ಇವತ್ತಿನ ಅನಿವಾರ್ಯತೆಯಾಗಿದೆ.  ಮನೆ ಎಂದರೆ ಆರ್‌ಸಿಸಿ ಬೀಮ್‌ ಹಾಗೂ ಕಾಲಂಗಳನ್ನು ಹಾಕುವುದೂ ಸಾಮಾನ್ಯ ಎನ್ನುವಂತಾಗಿದೆ.  ಗೋಡೆಗಳು ಹೇಗೂ ಭಾರವನ್ನು ಹೊರುವುದಿಲ್ಲ. ಹಾಗಾಗಿ ಏಳು ಎಂಟು ಅಡಿ ಆರ್ಚ್‌ಗಳನ್ನೂ ಕೂಡ ಹೆಚ್ಚು ಪ್ರಯಾಸವಿಲ್ಲದೆ ಹಾಕಬಹುದು. ಭಾರ ಹೊರುವ ಗೋಡೆಗಳಿರುವ ಮನೆಗಳಲ್ಲೂ ನಾಲ್ಕು ಐದು ಅಡಿಗಳಷ್ಟು ಉದ್ದದ ಕಮಾನುಗಳನ್ನು ಹಾಕಬಹುದು. ಇದಕ್ಕಿಂತ ಹೆಚ್ಚಿನ ಅಂತರವಿದ್ದರೆ, ಬಾಕಿ ಇರುವ ಗೋಡೆ ಸೈಡ್‌ ಥÅಸ್ಟ್‌, ಅಂದರೆ ಆರ್ಚ್‌ಗಳಿಗೆ ಸ್ವಾಭಾವಿಕವಾಗಿಯೇ ಅಡ್ಡ ನೂಕುವ ಗುಣವನ್ನು ಎದುರಿಸುವ ಶಕ್ತಿ ಇದೆಯೇ? ಎಂದು ಪರಿಶೀಲಿಸಿ ಮುಂದುವರೆಯುವುದು ಉತ್ತಮ. 

ಆರ್ಚ್‌ ವಿನ್ಯಾಸಗಳು
 ಕಮಾನುಗಳು ವೈವಿಧ್ಯಮಯ ಡಿಸೈನ್‌ಗಳಲ್ಲಿ ಲಭ್ಯ. ಮಾಮೂಲಿ ಅರ್ಧ ವೃತ್ತಾಕಾರದ ಆರ್ಚ್‌ಗಳು ಹೆಚ್ಚು ಜನಪ್ರಿಯವಾಗಿದ್ದರೂ ಎಲಿಪ್ಟಿಕಲ್‌, ಚೂಪು ಕಮಾನು – ಪಾಯಿಂಟೆಡ್‌ ಆರ್ಚ್‌, ತ್ರೀಪಾಯಿಂಟ್‌ ಅಂದರೆ ಮೂರು ಕೇಂದ್ರ ಹೊಂದಿರುವ ಕಮಾನುಗಳೂ ಸಾಮಾನ್ಯವಾಗೇ ಬಳಕೆಯಲ್ಲಿದೆ. ಒಮ್ಮೆ ನಾವು ಒಂದು ಮಾದರಿಯ ವಿನ್ಯಾಸವನ್ನು ನಿರ್ಧರಿಸಿದ ಮೇಲೆ ಅದರ “ಮಾಲು’ – ಟೆಂಪ್ಲೇಟ್‌ ತಯಾರು ಮಾಡಿಕೊಳ್ಳಬೇಕು. ಇದನ್ನು ಸೆಂಟ್ರಿಂಗ್‌ ಹಾಕುವ ಬಡಗಿಗಳೂ ಮಾಡಿಕೊಡುತ್ತಾರೆ. ಒಮ್ಮೆ ಒಂದು ಅಗಲದ (ಮಾಲು)ಆಧಾರ ತಯಾರು ಆದಮೇಲೆ, ಅದನ್ನು ಅನೇಕಬಾರಿ ಉಪಯೋಗಿಸಬಹುದು. ಪ್ರತಿಬಾರಿಯೂ ಬಡಗಿಗಳನ್ನು ಕರೆಯುವ ಅಗತ್ಯ ಇರುವುದಿಲ್ಲ. ಗಾರೆಯವರೇ ಸೂಕ್ತ ಆಧಾರ ಕಲ್ಪಿಸಿ, ಅದರ ಮೇಲೆ ಇಟ್ಟಿಗೆ ಗಳನ್ನು ಇಟ್ಟು ಕಟ್ಟಿಕೊಂಡು ಹೋಗುತ್ತಾರೆ. ಆರ್‌ಸಿಸಿ ಲಿಂಟಲ್‌ಗ‌ಳಂತೆ ಇದಕ್ಕೆ ಸ್ಟೀಲ್‌ ಕಂಬಿಗಳ ಲಿಂಟಲ್‌ ಅಗತ್ಯ ಇರುವುದಿಲ್ಲ. ಹಾಗೆಯೇ, ಆರ್ಚ್‌ ಕಟ್ಟುತ್ತಿದ್ದಂತೆಯೇ ಮೇಲೆ ಗೋಡೆಗಳನ್ನೂ ಮುಂದುವರಿಸಿಕೊಂಡು ಹೋಗಬಹುದು. ಲಿಂಟಲ್‌ಗ‌ಳಿಗೆ ಬೇಕಾಗುವ ರೀತಿಯಲ್ಲಿ ವಿಶೇಷ ಕ್ಯೂರಿಂಗ್‌ ಏನೂ ಬೇಕಾಗುವುದಿಲ್ಲ. ಮಾಮೂಲಿ ಗೋಡೆಗಳಂತೆಯೇ ಈ ಕಮಾನುಗಳಿಗೂ ಕ್ಯೂರಿಂಗ್‌ ಮಾಡಿದರೆ ಸಾಕು.

ಆರ್ಚ್‌ಗಳಿಗೆ ಆಧಾರ 
ಕಮಾನುಗಳು ಗಟ್ಟಿಗೊಳ್ಳುವವರೆಗೂ ಹಾಗೂ ಅವುಗಳನ್ನು ವಿಶೇಷ ಆಕಾರದಲ್ಲಿ ನಿರ್ಮಿಸಲು ಮಾಲುಗಳು ಬೇಕಾಗುತ್ತದೆ. ಈ ಆಧಾರಗಳನ್ನು ಮಾರನೇ ದಿನ ತೆಗೆಯ ಬಹುದು. ಹೀಗೆ ತೆಗೆಯಲು ಅನುಕೂಲ ಆಗುವ ರೀತಿಯಲ್ಲಿ ಈ ಮಾಲುಗಳು ಸುಲಭದಲ್ಲಿ ಸಡಿಲ ಆಗುವ ರೀತಿಯಲ್ಲಿ ಸಣ್ಣ ಸಣ್ಣ ಬೆಣೆಗಳನ್ನು ಮಾಲುಗಳ ಕೆಳಗೆ ನೀಡಿ, ಬೆಣೆಗಳನ್ನು ಬಿಡಿಸಿದಾಗ, ಕಡೇ ಪಕ್ಷ ಅರ್ಧ ಇಂಚಿನಷ್ಟಾದರೂ ಸಂಧಿ ಸಿಗುವಂತೆ ಹಾಗೂ ಈ ಮೂಲಕ ಮಾಲನ್ನು ಸುಲಭದಲ್ಲಿ ತೆಗೆಯುಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಮಾಲುಗಳನ್ನು ಸಾಮಾನ್ಯವಾಗಿ ಮರ ಇಲ್ಲವೇ ಉಕ್ಕಿನ ಆ್ಯಂಗಲ್‌ಗ‌ಳಿಂದ ತಯಾರು ಮಾಡಲಾಗುತ್ತದೆ. ಒಮ್ಮೆ ತಯಾರು ಮಾಡಿದರೆ, ಅನೇಕ ಬಾರಿ ಇವನ್ನು ಬಳಸಿ ಲಿಂಟಲ್‌ಗ‌ಳಿಗೆ ಪಯಾರ್ಯವಾಗಿ ಬಳಸಬಹುದು. ಕೆಲವೊಮ್ಮೆ ಒಂದೆರಡು ಕಮಾನುಗಳು ಮಾತ್ರ ಬೇಕೆಂದಿದ್ದರೆ, ಮಾಲು ಮಾಡುವುದು ಅನುಕೂಲಕರವಲ್ಲದಿದ್ದರೆ, ಇಟ್ಟಿಗೆ ಇಲ್ಲವೇ ಕಾಂಕ್ರಿಟ್‌ ಬ್ಲಾಕ್‌ಗಳನ್ನು ಬಳಸಿ ಮಾಲುಗಳನ್ನು ತಯಾರು ಮಾಡಬಹುದು. ಮಾಮೂಲಿಯಾಗಿ ಗೋಡೆ ಕಟ್ಟುವ ರೀತಿಯಲ್ಲಿ ಸಿಮೆಂಟ್‌ ಬಳಸಿ ಕಟ್ಟುವ ಬದಲು ಸಂಧಿ ಬಿಟ್ಟು “ಜಾಲಿ’ ಗೋಡೆ ಮಾದರಿಯಲ್ಲಿ ಒಂದು ಬಿಟ್ಟು ಒಂದು ಬ್ಲಾಕ್‌ ಕಟ್ಟಿ, ಮೇಲೆ ಮಾತ್ರ ನಮಗೆ ಬೇಕಾದ ಆಕಾರ ಬರುವಂತೆ ಗಾರೆಯಲ್ಲಿ ಮೂಡಿಸಿ, ನಂತರ ಇದರ ಮೇಲೆ ಆರ್ಚ್‌ ಕಟ್ಟಿಕೊಳ್ಳಬಹುದು. ಒಮ್ಮೆ ಆರ್ಚ್‌ ಕೆಲಸ ಆದಮೇಲೆ, ತಾತ್ಕಾಲಿಕವಾಗಿ ಕಟ್ಟಿರುವ ಈ ಆಧಾರ ಗೋಡೆಗಳನ್ನು ಆನಂತರ ತೆಗೆದುಬಿಡಬಹುದು.

ಕಮಾನುಗಳಿಂದ ಸೌಂದರ್ಯ ವರ್ಧನೆ
ಮನೆ ಕಟ್ಟುವವರಿಗೆ ತಮ್ಮ ಮನೆ ಸುಂದರವಾಗಿ ಮೂಡಿಬರಬೇಕು, ನೋಡಿದವರು ನಾಲ್ಕು ಜನ ಹೊಗಳಬೇಕು ಎಂಬ ದೊಡ್ಡ ಆಸೆ ಇರುತ್ತದೆ. ಈ ಆಸೆಯಿಂದಲೇ ಮನೆ ಖರ್ಚು ಎದ್ವಾತದ್ವಾ ಏರಿಬಿಡುತ್ತದೆ ಅನ್ನೋದು ಮನೆ ಕಟ್ಟಿದ ನಂತರ ತಿಳಿಯುತ್ತದೆ. ಚೆನ್ನಾಗಿ ಕಾಣಬೇಕು ಅನ್ನುವ ಕಾರಣಕ್ಕೆ ಮನೆಯ ಕೆಲಸವೆಲ್ಲಾ ಮುಗಿಯುವ ವೇಳೆಯಲ್ಲಿ, ಕೈಯಲ್ಲಿನ ಕಾಸೆಲ್ಲ ಮುಗಿಯುತ್ತಿದ್ದರೂ ಹೆಚ್ಚುವರಿಯಾಗಿ ಖರ್ಚು ಮಾಡಿ, ಡೆಕೊರೇಟ್‌ ಮಾಡಲು ಮುಂದಾಗುತ್ತಾರೆ. ಇದಕ್ಕೆ ಬದಲಾಗಿ ಇನ್ನೊಂದು ಕೆಲಸ ಮಾಡಬಹುದು. ನಾವು ಮನೆ ಕಟ್ಟುವಾಗಲೇ ವಿವಿಧ ಆರ್ಚ್‌ ನಮೂನೆಗಳನ್ನು ಕಲಾತ್ಮಕವಾಗಿ ವಿನ್ಯಾಸ ಮಾಡಿ ಅಳವಡಿಸಿಕೊಂಡರೆ, ಸೌಂದರ್ಯ ಸಹಜವಾಗಿಯೇ ಮೂಡಿಬರುತ್ತದೆ. ಹೆಚ್ಚುವರಿಯಾಗಿ “ಎಲಿವೇಶನ್‌’ ಗೆಂದು ಹಣ ಖರ್ಚು ಮಾಡುವ ಅಗತ್ಯ ಇರುವುದಿಲ್ಲ. 

ಕಿಟಕಿ ದುಬಾರಿ ಆದರೆ
ಕಮಾನುಗಳನ್ನು ಮನೆಗೆ ಅಳವಡಿಸಿದರೆ ಕಿಟಕಿ ಬಾಗಿಲುಗಳೂ ಇದೇ ರೀತಿಯಲ್ಲಿ ಇರಬೇಕು ಎಂದೇನೂ ಇಲ್ಲ. ಆರ್ಚ್‌ ಕಟ್ಟುವಾಗ, ಒಂದೆರಡು ಸರಳುಗಳನ್ನು ಮಧ್ಯದಿಂದ ಕೆಳಕ್ಕೆ ಬಿಟ್ಟುಕೊಂಡಿದ್ದರೆ, ನಂತರ ಇವನ್ನು ಮಟ್ಟಸ ವಾಗಿರುವ ಬಾಗಿಲು ಕಿಟಕಿಗಳ ಮೇಲೆ ಮೆಶ್‌ ನೊಂದಿಗೆ ಹೊಂದಿಸಿ ಕಟ್ಟಿ, ಸಿಮೆಂಟ್‌ ಗಾರೆ ಬಳಿದು, ಮ್ಯಾಚ್‌ ಮಾಡಿಕೊಳ್ಳಬಹುದು. ಹೀಗೆ ಕಂಬಿ ಕಟ್ಟಿ ಮೆಶ್‌ ಮೆತ್ತಿ “ಫೆರೊ’ ಸಿಮೆಂಟ್‌ ಮಾದರಿಯಲ್ಲಿ ತಯಾರಾದ ಗೋಡೆಗಳು ಸುಮಾರು ಮೂರು ಇಂಚು ದಪ್ಪ ಇದ್ದು, ಮಾಮೂಲಿ ಗೋಡೆ ಎಂಟು ಇಂಚು  ಅಂದರೆ ಆರು ಇಂಚು ಬ್ಲಾಕ್‌ ಗೋಡೆಗೆ ಪ್ಲಾಸ್ಟರ್‌ ಮಾಡಿದ ನಂತರ ಸುಮಾರು ಎಂಟು ಇಂಚು ಆಗುವುದರಿಂದ, ನಮಗೆ ನಿರಾಯಾಸವಾಗಿ ಒಂದು ಗೂಡು- ನಿಶ್‌ ಕೂಡ ಸಿಗುತ್ತದೆ. ಇದರಲ್ಲಿ ನಾವು ಕಲಾತ್ಮಕವಾದ ವಸ್ತುಗಳನ್ನು ಇಟ್ಟು ಮನೆಯ ಅಂದವನ್ನು ಮತ್ತೂ ಹೆಚ್ಚಿಸಿಕೊಳ್ಳಬಹುದು.

ಸಲಹೆಯೇ ಶತ್ರು
 ವಿವಿಧ ಕುಶಲ ಕರ್ಮಿಗಳನ್ನು ಹೊಂದಿಸುವುದು, ಅವರನ್ನೆಲ್ಲಾ ಸಮಯಕ್ಕೆ ಸರಿಯಾಗಿ ಬರುವಂತೆ ಮಾಡುವುದು ದೊಡ್ಡ ತಲೆನೋವಾಗಿರುತ್ತದೆ. ಆದಷ್ಟೂ ನಮ್ಮ ಬಳಿ ದಿನನಿತ್ಯವೂ ಇರುವ ಕೆಲಸದವರು, ಅಂದರೆ-ಗಾರೆಯವರ ಮೂಲಕವೇ ಮನೆಯ ಬಹುತೇಕ ಕೆಲಸಗಳನ್ನು ಮಾಡಿಸಿದರೆ, ಕೆಲಸಗಳು ಬೇಗನೆ ಆಗಿ ಹೆಚ್ಚು ವೇಳೆ ವ್ಯಯ ಆಗುವುದಿಲ್ಲ. ನಮ್ಮಲ್ಲಿ ಆರ್ಚ್‌ಗಳ ಬಳಕೆ ನೂರಾರು ವರ್ಷಗಳಿಂದ ಇದ್ದು, ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ನೋಡಿದರೂ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.   ಕಮಾನುಗಳ ಬಳಕೆಯಿಂದ ಮನೆಯ ಒಟ್ಟಾರೆ ಸೌಂದರ್ಯದಲ್ಲಿ ವಿಶೇಷ ಮೆರಗು ಲಭ್ಯವಾಗುವುದರ ಜೊತೆಗೆ ಭಿನ್ನತೆಯನ್ನೂ ಮರೆದಂತೆ ಆಗುತ್ತದೆ ಜೊತೆಗೆ ಆರ್ಚ್‌ಗಳ ಬಳಕೆಯಿಂದ ಸಾಕಷ್ಟು ಸಮಯ ಹಾಗೂ ಹಣವನ್ನೂ ಉಳಿಸಬಹುದು.

ಎಲ್ಲದಕ್ಕಿಂತ ಮುಖ್ಯವಾಗಿ ಮನೆಕಟ್ಟುವಾಗ ಎದುರಾಗುವ ದೊಡ್ಡ ಸಮಸ್ಯೆ ಸಲಹೆಗಳದ್ದು. ಇಲಿÅà, ಇದು ಹಿಂಗಿರಬೇಕು, ಇಲ್ಲ, ಅಡುಗೆ ಮನೆಯ ಮುಖ ಆ ಕಡೆಗಿದ್ದರೆ ಚೆನ್ನ. ನೀವು ಏನೇ ಹೇಳಿ, ದೇವರಮನೆ ಅಗಲ ಇದ್ದರೆ ವಾಸ್ತುವಿಗೆ ಒಳ್ಳೇದು… ಹೀಗೆ ಪುಕ್ಕಟ್ಟೆ ಸಲಹೆ ಕೊಡುವವರು ಬೇರೆ.  ಮನೆ ಕಟ್ಟಿಸುವವರ ಆಸೆ ಬೇರೆ, ಕಟ್ಟುವವನ ಕಲ್ಪನೆ ಬೇರೆ. ಇದರ ಜೊತೆಗೆ ಈ ರೀತಿ ಯೋಜನೆಗಳ ದಿಕ್ಕುತಪ್ಪಿಸುವವರ ಮಾತುಗಳ ನಡುವೆಯೇ ಒಳ್ಳೇ ಮನೆ ಕಟ್ಟಬೇಕು. ಒಂದು ವಿಷಯ ಏನೆಂದರೆ, ಮನೆ ಕಟ್ಟುವುದು ನಮ್ಮ ಬಜೆಟ್‌ನ ಅನುಗುಣವಾಗಿ. ಆಸೆ, ಕಲ್ಪನೆಗಳಿರಬೇಕು. ನಿಜ, ಆದರೆ, ಬೇರೆ ಯಾರು ಏನೇ ಹೇಳಿದರೂ ಕದಲದ ಮನಃಸ್ಥಿತಿ ಕೂಡ ಇರಬೇಕು. ಆಗ ಮಾತ್ರ ಮನೆ ನಿರ್ಮಾಣದ ಖರ್ಚೂ ಕಡಿಮೆಯಾಗಿ ಸಾಲದ ಹೊರೆ ಇರುವುದಿಲ್ಲ. 

ಹೆಚ್ಚಿನ ಮಾತಿಗೆ: 98441 32826

ಮುಂದಿನ ಲೇಖನ – ಗೋಡೆಗಳಲ್ಲಿ ಗೂಡುಗಳು

– ಆರ್ಕಿಟೆಕ್ಟ್ ಕೆ ಜಯರಾಮ್

ಟಾಪ್ ನ್ಯೂಸ್

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಕುಟುಂಬ ಸದಸ್ಯರಿಗೆ ಆಘಾತ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

6

Accident: ಆರೋಪಿ ಸೆರೆಗೆ 200 ಕ್ಯಾಮೆರಾ ಪರಿಶೀಲನೆ

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.