ಸೈನ್ಯದ ಶಿಸ್ತು, ಕೃಷಿಗೂ ಬಂತು
Team Udayavani, Jun 11, 2018, 11:30 AM IST
ಕೃಷಿಯಲ್ಲಿ ಲಾಭವಿದೆಯೇ? ಎಂಬ ಕೊನೆಯ ಪ್ರಶ್ನೆಗೆ, 19 ವರುಷಗಳಿಂದ ಕೃಷಿಯನ್ನೇ ಬದುಕಾಗಿಸಿರುವ ಶೆಣೈ ಅವರಿತ್ತ ನೇರ ಉತ್ತರ: ಯಾಕಿಲ್ಲ? ಮೈ ಬಗ್ಗಿಸಿ ಕೆಲಸ ಮಾಡಿದರೆ ಕೈತುಂಬ ಆದಾಯವಿದೆ.
ಅಂದು ನಾವು ರಾಮಕೃಷ್ಣ ಶೆಣೈಯವರ ತೋಟ ಪ್ರವೇಶಿಸಿದಾಗ ಮಧ್ಯಾಹ್ನ 2 ಗಂಟೆ ದಾಟಿತ್ತು. ಆಗಷ್ಟೇ ಮಳೆ ಸುರಿದು ನಿಂತಿತ್ತು. ಆ ದಿನ ಮಂಗಳೂರಿನಿಂದ ವಾಹನದಲ್ಲಿ ಹೊರಟು ಮೂಡಬಿದಿರೆ ದಾಟಿ, ಕಾರ್ಕಳ ರಸ್ತೆಯಲ್ಲಿ 15 ನಿಮಿಷ ಸಾಗಿ, ತಲಪಿದ್ದು ಬೆಳ್ವಾಯಿ . ಅಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ ಕ್ರಮಿಸಿ, ಸಾವಯವ ಕೃಷಿಕ ಶೆಣೈಯವರ ಮನೆ ಮುಟ್ಟಿ¨ªೆವು.
“ಬನ್ನಿ, ನನ್ನ ತೋಟದಲ್ಲಿ ಏನುಂಟು, ಏನಿಲ್ಲ? ಅಡಿಕೆ, ಬಾಳೆ, ತೆಂಗು, ಕೊಕ್ಕೋ, ಕರಿಮೆಣಸು, ಹಲಸು, ಜಾಯಿಕಾಯಿ, ಪಪ್ಪಾಯಿ, ಗೇರು’ ಎಲ್ಲವೂ ಉಂಟು ಎನ್ನುತ್ತಾ ತೋಟಕ್ಕೆ ಕರೆದೊಯ್ದರು ಶೆಣೈ. ಅವರ ದನದ ಕೊಟ್ಟಿಗೆಯ ಪಕ್ಕದಲ್ಲಿ ಹಾದು ಹೋಗುವಾಗ, ಅಲ್ಲಿದ್ದ ನಾಲ್ಕು ದನಗಳÇÉೊಂದು ಸಗಣಿ ಹಾಕಿದ್ದನ್ನು ಗಮನಿಸಿದರು ಶೆಣೈ. ತಕ್ಷಣವೇ ಬಾಗಿ, ಆ ಸೆಗಣಿ ಬಾಚಿ, ಪಕ್ಕದ ತೊಟ್ಟಿಗೆ ಹಾಕಿದರು. ಇವರು ಎಲ್ಲ ಕೆಲಸಕ್ಕೂ ಸೈ ಎನಿಸಿತು.
ಅವರ ತೋಟದಲ್ಲಿ ಅಲ್ಲಲ್ಲಿ ಜೇನು ಪೆಟ್ಟಿಗೆಗಳು. ಒಟ್ಟು 12 ಜೇನು ಕುಟುಂಬಗಳನ್ನು ಸಾಕಿ¨ªಾರೆ. ಜೇನ್ನೊಣಗಳಿಂದ ಜೇನೂ ಸಿಗುತ್ತಿದೆ. ತೋಟದ ಇಳುವರಿಯೂ ಹೆಚ್ಚಾಗುತ್ತಿದೆ. ಒಳ್ಳೆಯ ಆದಾಯವೂ ಬರುತ್ತಿದೆ. ನಾನು ಜೇನು ಮಾರುವುದು ಕಿ.ಲೋಗೆ 500 ರೂಪಾಯಿಗೆ ಎಂದು ತಿಳಿಸಿದರು. ಜೇನ್ನೊಣ ಸಾಕಣೆ ತರಬೇತಿಗೆ ಹೋಗಿದ್ರಾ? ಎಂಬ ಪ್ರಶ್ನೆಗೆ ಅವರ ಉತ್ತರ- “ಎರಡು ತರಬೇತಿಗಳಿಗೆ ಹೋಗಿದ್ದೇನೋ ಹೌದು. ಆದರೆ, ಜೇನ್ನೊಣ ಸಾಕಣೆ ಹೇಗಂತ ನಾನು ಕಲಿತ¨ªೆÇÉಾ ನನ್ನ ಪ್ರಯತ್ನದಿಂದಲೇ’ ಅಂದರು. ನೊರೆಕಾಯಿ (ಅಂಟುವಾಳ)ದಂತಹ ಒಂದೇ ಸಸ್ಯದ ಹೂವಿನ ಜೇನು ಉತ್ಪಾದನೆ ಅವರ ವಿಶೇಷತೆ. ಈಗ ಸುತ್ತಮುತ್ತಲೂ ರಬ್ಬರ್ ತೋಟವಿಲ್ಲ. ಯಾರಾದರೂ ಇಲ್ಲಿ ರಬ್ಬರ್ ತೋಟ ಬೆಳೆಸಿದರೆ, ನಾನು ಇಂತಹ ಜೇನು ಉತ್ಪಾದಿಸಲಿಕ್ಕೆ ಆಗೋದಿಲ್ಲ. ಯಾಕೆಂದರೆ, ಜೇನ್ನೊಣಗಳು ಆ ರಬ್ಬರ್ ಮರಗಳ ರಸ ಹೀರಿ ಬಂದರೆ, ಒಂದೇ ಸಸ್ಯದ ಹೂವಿನ ಜೇನು ಸಿಗೋದಿಲ್ಲ ಎಂದು ವಿವರಿಸಿದರು.
ಕೆಲವು ವರ್ಷಗಳ ಮುಂಚೆ, ರಾಮಕೃಷ್ಣ ಶೆಣೈ 8-10 ದನಗಳನ್ನು ಸಾಕಿದ್ದರು. ಆದರೆ ಕಳೆದ ಎರಡು ವರುಷಗಳಲ್ಲಿ ಕೆಲವು ದನಗಳಿಗೆ ಸೋಂಕು ತಗಲಿ ಬಹಳ ತೊಂದರೆಯಾಯಿತು. ಈಗ ಇರುವುದು ನಾಲ್ಕು ದನ ಮಾತ್ರ. ಅವೆಲ್ಲವೂ ಮಿಶ್ರತಳಿಯ ದನಗಳು. ದೇಸಿ ತಳಿಯ ದನಗಳನ್ನು ಸಾಕುವುದು ಸುಲಭವಲ್ಲ. ಯಾಕೆಂದರೆ, ಅವನ್ನು ಮೇಯಿಸಬೇಕು. ಆದರೆ, ಹಸು ಮೇಯಿಸಲು ಈಗ ಹಳ್ಳಿಗಳಲ್ಲಿ ಗೋಮಾಳ ಇಲ್ಲ ಎಂದು ವಿವರಣೆ ನೀಡಿದರು. ತಮ್ಮ ದನಗಳ ಮೇವಿಗಾಗಿ ಅವರು ಜೋಳ ಬೆಳೆಯುತ್ತಾರೆ. ಹಾಲನ್ನು ಅವರು ಡೈರಿಗೇ ಒಯ್ದು ಮಾರುತ್ತಾರೆ ವಿನಃ ಬೇರೆ ಯಾರಿಗೂ ಮಾರುವುದಿಲ್ಲ.
ಅವರ ತೋಟದ ಅಂಚಿನಲ್ಲಿ ಎತ್ತರಕ್ಕೆ ಬೆಳೆದ ಹಲವು ಮರಗಳಿವೆ. ಅವುಗಳ ತರಗೆಲೆ ಬಾಚಿ ತಂದು, ಅಡಿಕೆ ಇತ್ಯಾದಿ ಮರಗಳ ಬುಡದಲ್ಲಿ ರಾಶಿ ಹಾಕುತ್ತಾರೆ. ಮಳೆಗಾಲ ಶುರುವಾದಾಗ, ಆ ತರಗೆಲೆಗಳನ್ನು ಮರಗಳ ಬುಡದಲ್ಲಿ ಹರಡಿ, ಅದರ ಮೇಲೆ ಪೈಪಿನ ಮೂಲಕ ಗೋಬರ್ ಗ್ಯಾಸ್ ಪ್ಲಾಂಟಿನ ಸ್ಲರಿ ಸುರಿಯುತ್ತಾರೆ. ಕ್ರಮೇಣ ಆ ಎಲೆಗಳೆಲ್ಲ ಅÇÉೇ ಕೊಳೆತು ಗೊಬ್ಬರವಾಗುತ್ತದೆ. ಈ ರೀತಿಯಲ್ಲಿ ಬೇರೆಲ್ಲಿಯೋ ಗೊಬ್ಬರ ಮಾಡಿ, ನಂತರ ಅದನ್ನು ಹೊತ್ತು ತಂದು ಮರಗಳ ಬುಡಕ್ಕೆ ಹಾಕುವ ಕೆಲಸ ತಪ್ಪಿಸಿ¨ªಾರೆ.
ಶೆಣೈಯವರ ತೋಟದಲ್ಲಿ ಅಲ್ಲಲ್ಲಿ ಗಾಂಧಾರಿ ಮೆಣಸಿನ ಗಿಡಗಳು ಹುಟ್ಟಿ ಬೆಳೆಯುತ್ತಿವೆ. ಈ ಗಿಡಗಳ ತುಂಬ ಮೆಣಸು ಬಿಡುತ್ತದೆ.
ಎÇÉೆಲ್ಲಿಂದಲೋ ಹಕ್ಕಿಗಳು ಬಂದು ತಿನ್ನುತ್ತವೆ. ಅವು ತಿಂದು ಉಳಿದದ್ದು ನಮಗೆ ಸಾಕು ಎನ್ನುತ್ತಾರೆ. ಅವರ ಜಮೀನಿನಲ್ಲಿ ನವಿಲುಗಳ ಕಾಟ ಜೋರಾಗಿದೆ ಎಂಬುದನ್ನು ಅವರು ತಿಳಿಸುವ ಬಗೆ ಹೀಗೆ: ಒಮ್ಮೆ ಹರಿವೆ ಬೀಜ ಬಿತ್ತಿ¨ªೆ. ಅವೆಲ್ಲ ಮೊಳೆತು ಐದಾರು ಇಂಚು ಎತ್ತರಕ್ಕೆ ಬೆಳೆದಿದ್ದವು. ಮರುದಿನ ಬೆಳಗ್ಗೆ ನೋಡಿದರೆ, ಒಂದೇ ಒಂದು ಹರಿವೆ ಸಸಿ ಅಲ್ಲಿಲ್ಲ. ನವಿಲುಗಳು ರಾತ್ರಿ ಬಂದು, ಎಲ್ಲ ಸಸಿಗಳನ್ನು ಬೇರು ಸಮೇತ ಕಿತ್ತು ತಿಂದಿದ್ದವು.
ಕೃಷಿ, ಎರೆಹುಳ ಗೊಬ್ಬರ ತಯಾರಿ, ಅಜೋಲಾ ಬೆಳೆಸುವುದು, ಜೇನ್ನೋಣ ಸಾಕಣೆ, ಹಸುಪಾಲನೆ ಇವೆಲ್ಲದರಲ್ಲೂ ಪಳಗಿದವರು ರಾಮಕೃಷ್ಣ ಶೆಣೈ. ನಿಮ್ಮ ತೋಟದ ಕೆಲಸಕ್ಕೆ ಕೆಲಸದವರು ಸಿಗುತ್ತಾರೆಯೇ? ಎಂದು ಪ್ರಶ್ನಿಸಿದಾಗ ಅವರ ಪ್ರತಿಕ್ರಿಯೆ: ನಮ್ಮ ಮೂರೂವರೆ ಎಕ್ರೆ ತೋಟದಲ್ಲಿ ಕೆಲಸ ಮಾಡಲು ಕೆಲಸದವರು ಯಾರೂ ಇಲ್ಲ. ನಾನು ಮತ್ತು ಮನೆಯಾಕೆ ರಾಧಿಕಾ ಎಲ್ಲ ಕೆಲಸ ಮಾಡ್ತೇವೆ.
ನನಗೆ ಜಿÇÉಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಹಾಕಲು ಕೃಷಿ ಇಲಾಖೆಯ ಅಧಿಕಾರಿಗಳು ಒತ್ತಾಯ ಮಾಡಿದರು. ನಾನು ಯಾವ ಪ್ರಶಸ್ತಿಗೂ ಅರ್ಜಿ ಹಾಕುವುದಿಲ್ಲ. ನನಗೆ ಈ ಪ್ರಶಸ್ತಿಗಳ ಉಸಾಬರಿಯೇ ಬೇಡ. ಯಾಕೆಂದರೆ, ಪ್ರಶಸ್ತಿ ಕೊಟ್ಟ ನಂತರ ನನ್ನನ್ನು ಎÇÉೆಲ್ಲಿಗೋ ಭಾಷಣ ಮಾಡಲು ಕರೀತಾರೆ. ಹಾಗೆ ಹೋಗುತ್ತಿದ್ದರೆ, ನನ್ನ ತೋಟದ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ತನ್ನ ನಿಲುವನ್ನು ವಿವರಿಸುತ್ತಾರೆ ಶೆಣೈ.
ಎಲ್ಲದಕ್ಕಿಂತ ಮುಖ್ಯವಾಗಿ ಅವರದು ಅಪ್ಪಟ ಸಾವಯವ ಕೃಷಿ. ತನ್ನ ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ವಿಷಪೀಡೆನಾಶಕ ಹಾಕುವುದಿಲ್ಲ; ಯಾಕೆಂದರೆ, ಕೃಷಿ ಮಾಡಿ ಯಾರಿಗೂ ವಿಷ ಉಣಿಸಬಾರದು ಎಂಬುದು ಅವರ ಸ್ಪಷ್ಟ ನಿಲುವು. ಇಂತಹ ಶಿಸ್ತು ಮತ್ತು ಕಠಿಣ ದುಡಿಮೆ ಹೇಗೆ ಸಾಧ್ಯವಾಯಿತೆಂದು ಕೇಳಿದಾಗ ಅವರು ತಟ್ಟನೆ ಹೇಳಿದ್ದು: ನಾನು 16 ವರುಷ ಮೂರು ತಿಂಗಳು ಆರ್ಮಿಯಲ್ಲಿ ಕೆಲಸ ಮಾಡಿ ಬಂದವನು. ಅಲ್ಲಿ ಮೈಗೂಡಿಸಿಕೊಂಡ ಶಿಸ್ತನ್ನೇ ಕೃಷಿಯಲ್ಲಿ ಮುಂದುವರಿಸಿದ್ದೇನೆ.
ಕೃಷಿಯಲ್ಲಿ ಲಾಭವಿದೆಯೇ? ಎಂಬ ಕೊನೆಯ ಪ್ರಶ್ನೆಗೆ, 19 ವರುಷಗಳಿಂದ ಕೃಷಿಯನ್ನೇ ಬದುಕಾಗಿಸಿರುವ ಶೆಣೈ ಅವರಿತ್ತ ನೇರ ಉತ್ತರ: ಯಾಕಿಲ್ಲ? ಮೈ ಬಗ್ಗಿಸಿ ಕೆಲಸ ಮಾಡಿದರೆ ಕೈತುಂಬ ಆದಾಯವಿದೆ.
– ಅಡೂxರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.