ಮನೆ ಕೇವಲ ಮನೆಯಲ್ಲ ಮನಮನಕೆ ಹಿಡಿವ ಕನ್ನಡಿ


Team Udayavani, Jan 30, 2017, 3:45 AM IST

kannadi.jpg

ಮನೆಯ ವ್ಯಾಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮನೆಯನ್ನು ಪರಿಣಾಮದ ದೃಷ್ಟಿಯಿಂದ ವಿಸ್ತರಿಸಬಹುದು. ಉಳಿಯಲೊಂದು ಮನೆ ಎಂಬುದು ಸರಿ. ಆದರೆ ಮನೆಯೊಳಗಿನ ಮನಸ್ಸುಗಳು ಅಧೈರ್ಯ ಅನುಮಾನ, ಅಸ್ವಾಸ್ಥ್ಯಗಳೊಂದಿಗೆ ಕೂಡಿರಬಾರದು. ಮನೆಯೇ ಮೊದಲ ಪಾಠಶಾಲೆ ಎಂಬ ವಿಚಾರವನ್ನು ಇಲ್ಲೀಗ ವ್ಯಾಖ್ಯಾನಿಸಿ ನೋಡಬಹುದು. ಜನನಿ ತಾನೆ ಮೊದಲ ಗುರು ಎಂಬ ಕವಿವಾಣೀ ಸರಿ. ಆದರೆ ಜನನಿ ಯೋರ್ವಳೇ ಅಲ್ಲ ಉತ್ತಮ ಸಂಸ್ಕಾರಕ್ಕೆ ಮನೆಯ ಪ್ರತಿ ವ್ಯಕ್ತಿಯೂ ತನ್ನ ವೈಯುಕ್ತಿಕ ನೆಲೆಯಲ್ಲಿ ಶ್ರೇಷ್ಟವಾದ ಪಾಠವನ್ನು ಮನೆಯ ಸಹನಿವಾಸಿಗೆ ಕೊಡುತ್ತಲೇ ಇರುವುದು ಗಮನಾರ್ಹವಾದ ಅಂಶವಾಗಿದೆ. ಜೊತೆಗೆ ಮನೆಗೆ ಭೇಟಿ ಕೊಡುವ ಅತಿಥಿಗಳ ಗುಂಪು ಕೂಡಾ ಅನೇಕವನ್ನು ಅನುಭವ ಜನ್ಯ ನೆಲೆಯಲ್ಲಿ ಒದಗಿಸುತ್ತದೆ. ಈ ಗುಂಪು ತಾನೂ ಸುಕೃತಕ್ಕೆ ಸಂಬಂಧಿಸಿದ ದಿವ್ಯಗಳನ್ನು ಒಂದು ಮನೆಯೊಳಗಿಂದ ಅನುಭವದ ಕೊಡದಂತೆ ಹೊತ್ತೂಯ್ಯುತ್ತದೆ.

ಎಲ್ಲರಿಗೂ ತಿಳಿದಂತೆ ಈಶಾನ್ಯ ದಿಕ್ಕಿನಿಂದಲೇ ಮನೆಯ ಅಡಿಗಲ್ಲನ್ನು ಇಡುವ ಶುಭಕಾರ್ಯ ನೆರವೇರಬೇಕಾದುದು ಮುಖ್ಯವೆಂಬುದು ಸರಿ. ಈ ಶುಭ ವಿಚಾರವನ್ನು ಪೂರ್ಣ ಗೊಳಿಸುವ ವ್ಯಕ್ತಿ ಈ ಅಡಿಗಲ್ಲನ್ನು ಇಡುವ ಕ್ರಿಯೆ ಪೂರ್ವವನ್ನು ದಿಟ್ಟಿಸಿಕೊಂಡು ಪೂರೈಸಬೇಕು. ಅಡಿಗಲ್ಲನ್ನು ಜೋಡಿಸುವ ಸಂದರ್ಭದಲ್ಲಿ ನವರತ್ನಗಳನ್ನು ಭೂವಲಯದಲ್ಲಿ ಇರಿಸಬೇಕು. ಶಕ್ತಾನುಸಾರವಾಗಿ ನವರತ್ನಗಳ ಬೆಲೆ ಇರಲಿ. ಅನಾವಶ್ಯಕವಾದ ದುಂದು ವೆಚ್ಚಗಳನ್ನು ಮಾಡಬೇಡಿ.

ನವರತ್ನಗಳ ಶೋಭೆ ಮಣ್ಣ ತಳಹದಿಯಿಂದ ಉಕ್ಕುವ ಸ್ಪಂದನಗಳಿಂದಾಗಿ ಮನೆಯ ನಿವಾಸಿ, ಅತಿಥಿ, ಪ್ರತಿ ಜೀವಿಗೂ ಸಕಾರಾತ್ಮಕವಾದ ಮನೋಬಲವನ್ನು ಅವರವರಿಗೆ ತಕ್ಕಂತೆ ಮಾಡಿಸುತ್ತದೆ. ಈ ನವರತ್ನಗಳು ಕೆಂಪು, ಹಳದಿ, ನೀಲಿ, ಕೇಸರಿ, ಗೋಮೇಧ, ನಭ ಗರ್ಭ ಬಣ್ಣಗಳು ತಂತಮ್ಮ ದಿವ್ಯತೆಯನ್ನು ಜಿನುಗಿಸುತ್ತದೆ. ಮನಸ್ಸಿನ ತರಂಗಗಳ ಹವಾ ಪೂರ್ಣ ಸುತ್ತಾಟ ಪ್ರವಾಹಗಳಲ್ಲಿ  ಒಂದು ಹದವನ್ನು ಭರಿಸಿಕೊಳ್ಳುತ್ತದೆ. ಹೀಗಾಗಿ ಮನೆಯಲ್ಲಿನ ಮನಮನಕ್ಕೆ ಮನೆ ದರ್ಪಣ ಹಿಡಿದು ಪ್ರತಿಯೋರ್ವನನ್ನೂ ಪ್ರತಿಫ‌ಲಿಸುತ್ತಲೇ ಇರುತ್ತದೆ.

ಮನೆಯೊಳಗಿನಿಂದ ಒಳ ಅಲಂಕೃತ ಸೂಕ್ಷ್ಮಗಳು ಮನಸ್ಸನ್ನು ಸಂವೇದಿಸುವಂತಿರಬೇಕು. ಬಣ್ಣಗಳ ಚಿತ್ತಾರಕ್ಕೆ ಮಾನಸಿಕ ವಲಯದ ಮೇಲೆ ಪ್ರಭಾವ ನೀಡುವ ಸರಳ ಅನುಸಂಧಾನ ಪ್ರಾಪ್ತವಾಗಿರಲಿ. ಭಾರತೀಯ ಪರಂಪರೆ ಎಲ್ಲಾ ವಿಚಾರಗಳಲ್ಲೂ ಅನುಭಾವ ಪೂರ್ಣ ಸಾದೃಶ್ಯ ಅಂತರ್ಗತ ರಸೋತ್ಪತ್ತಿಯ ಕುರಿತು ವ್ಯಾಖ್ಯಾನಿಸುತ್ತದೆ. ಮಂತ್ರಗಳ ಪಠಣವೇ ಒಂದು ತೆರನಾದ ಶಬ್ದಾತೀತ ಅನುಭವವನ್ನು ನಮ್ಮೊಳಗೆ ದ್ರವಿಸುತ್ತದೆ. ಮಂತ್ರಗಳೊಳಗಿನ ಅರ್ಥ ಇಷ್ಟೇನೆ ಎಂಬುದು ಅನೇಕರು ಮೂಗು ಮುರಿಯುವ ಕ್ರಿಯೆ ಮಾಡಿಕೊಳ್ಳುತ್ತಾರೆ. ಆದರೆ ಲಯಬದ್ಧ ಅಕ್ಷರದ ಹರಿದಾಟಗಳು ಒಂದು ಅನೂಹ್ಯ ಪರಿಣಾಮವನ್ನು ಮನದ ಅಂಗಳದ ಭಾವ ಶುದ್ಧಿಯ ಮೇಲೆ ಹಿತವಾಗಿ ಸ್ಪರ್ಶ ಒದಗಿಸುತ್ತದೆ. ಈ ಸ್ಪರ್ಶದ ಅನುಭವ ಜನ್ಯವಾಗಿ ಒಂದು ಮಿಡಿತದ ರಿಂಗಣ ದಿಗಣಗಳೇ ರಸೋತ್ಪತ್ತಿ ಎಂದು ಕರೆಯಲ್ಪಡುತ್ತದೆ. ಈ ನೆಲೆಯಲ್ಲಿಯೇ ಯೋಚಿಸಿ ಮನೆಯ ಒಳಾಂಗಣದ ಸರಳ ಸುಸಜ್ಜಿತ ಅಂಶಗಳು ಸಾಂದ್ರಗೊಳ್ಳುವಂತಿರಲಿ. ಈ ಸಾಂದ್ರತೆಯಿಂದಾಗಿ ಸಾಂಖ್ಯ ಯೋಗ ನ್ಯಾಯ ವೈವಾಹಿಕ ಮೀಮಾಂಸ ವೇದಾಂತ ಎಂಬ ಷಡªರ್ಶನಗಳು ಪ್ರಾಪ್ತವಾಗುತ್ತದೆ. ಪಂಡಿತನಿಂದ ಪಾಮರನವರೆಗೂ ಅವರವರ ಬುದ್ಧಿಶಕ್ತಿಯ ಹದ ಮೇಲಿಂದ ಮನೆಯೊಳಗಿನ ಬಣ್ಣ ಚಿತ್ರ ಅಲಂಕೃತ ದ್ರವ್ಯಗಳು ಈ ಷಟªರ್ಶನವನ್ನು ನೀಡುತ್ತಿರುತ್ತದೆ. ಗುರುರ್‌ ಬ್ರಹ್ಮ ಗುರುರ್‌ ವಿಷ್ಣು ಗುರುರ್‌ ದೇವೋ ಮಹೇಶ್ವರಹಃ, ಗುರುರ್‌ ಸಾûಾತ್‌ ಪರಬ್ರಹ್ಮ ತಸೆ¾„ಶ್ರೀ ಗುರವೇ ನಮಃ- ಎಂಬ ಮಂತ್ರವನ್ನೇ ಗಮನಿಸಿ ಲಯ ಹಾಗೂ ಸ್ವರ ಬದ್ಧವಾಗಿ ಈ ಮಂತ್ರ ನುಡಿದಾಗ ಮನಸ್ಸಿನ ಕಿರಿಕಿರಿಗಳೆಲ್ಲಾ ಒಂದೇ ಕ್ಷಣದಲ್ಲಿ ನಾಶವಾಗಿ ಹೊಸಚೇತನ ಒದಗುತ್ತದೆ. ಪಂಡಿತನು ಊಹಿಸುವ ಗುರುವಿನ ಎತ್ತರ ಬೇರೆ ಪಾಮರನ ಅಳತೆಯೇ ಬೇರೆ. ಆದರೆ ಪರಿಣಾಮ 
ಅಗಾಧ. ಹೀಗೆ ಮನೆ ಕೇವಲ ಮನೆಯಲ್ಲ ಮನವ ಮೀಟುವ ವೀಣಾವಾಣಿ. 

– ಅನಂತಶಾಸ್ತ್ರಿ

ಟಾಪ್ ನ್ಯೂಸ್

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

8(1

Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.