ಹೈಟೆಕ್ ಡ್ರೈವ್, ಪ್ರಗತಿಯಲ್ಲಿ ಆಟೋಮೊಬೈಲ್ ತಂತ್ರಜ್ಞಾನ
Team Udayavani, Nov 6, 2017, 6:10 PM IST
ಜೀವನ ಶೈಲಿ ಬದಲಾಗುತ್ತಲೇ ಇರುತ್ತದೆ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದರಲ್ಲೂ ದಿನಕ್ಕೊಂದು ರೀತಿಯಲ್ಲಿ ಬದಲಾಗುತ್ತಿರುವ ತಂತ್ರಜಾnನ ಕ್ಷೇತ್ರ, ದಿನವೂ ಹೊಸತನ್ನು ನೀಡುತ್ತಲೇ ಬಂದಿದೆ. ಹೀಗಾಗಿ ಜೀವನ ಶೈಲಿಯೂ ಸಹಜವಾಗಿ ಬದಲಾಗುತ್ತಲೇ ಇರುವುದನ್ನು ಕಾಣುತ್ತೇವೆ. ಹಳ್ಳಿಯ ಬಹುತೇಕ ಯುವಕ-ಯುವತಿಯರೂ ಪೇಟೆ ಮಂದಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ತಂತ್ರಜಾnನಕ್ಕೆ ಒಗ್ಗಿಕೊಂಡು ಬದುಕುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಮೊಬೈಲ್ ಬಳಕೆ.
ಹಳ್ಳಿಯ ಜನರು ಈಗ ತುಂಬ ಸುಲಭವಾಗಿ ಮೊಬೈಲ್ ತಂತ್ರಜಾnನಗಳನ್ನು ಬಳಸಬಲ್ಲರು.
ಆಟೋಮೊಬೈಲ್ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಆಟೋಮೊಬೈಲ್ ಕ್ಷೇತ್ರ ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎಂದರೆ ಇತ್ತೀಚೆಗೆ ಸುರಕ್ಷತಾ ತಂತ್ರಜಾnನಗಳನ್ನು ಸಾಮಾನ್ಯ ಕಾರುಗಳಲ್ಲಿಯೂ ಅಳವಡಿಸಿಕೊಡಲಾಗುತ್ತಿದೆ. ಬಹುತೇಕ ಕಾರು ಕಂಪನಿಗಳು ಇದನ್ನು ಅತಿ ಸುಲಭ ಎನ್ನುವಂತೆ ಬಳಕೆದಾರರ ಸ್ನೇಹಿಯಾಗಿಸುತ್ತಿವೆ. ಅತ್ಯುತ್ತಮ ಈ ಮಾತಿಗೆ ಉದಾಹರಣೆ ಕೊಡುವುದಾದರೆ, ಸೆಂಟರ್ ಲಾಕ್. ಈ ಹಿಂದೆ ಕಾರ್‌ಗೆ ಸೆಂಟರ್ ಲಾಕ್ ಇದೆ ಎನ್ನುವುದೇ ಒಂದು ಅಚ್ಚರಿ ಎನ್ನುವಂತೆ ನೋಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಶೋ ರೂಂನಿಂದ ಮಾರುಕಟ್ಟೆಗೆ ಬರುವ ಪ್ರತಿಯೊಂದು ಕಾರು, ವೇರಿಯಂಟ್‌ಗಳಲ್ಲಿ ಇದು ಕಾಮನ್ ಎನ್ನುವಂತೆ ಆಗಿದೆ. ತಂತ್ರಜಾnನ ಅಷ್ಟರಮಟ್ಟಿಗೆ ಆವರಿಸಿಕೊಳ್ಳುತ್ತಿದೆ.
ವಿನ್ಯಾಸವೇ ಬದಲಾಗಿದೆ
ಹತ್ತಾರು ವರ್ಷಗಳಿಂದೀಚೆಗೆ ಬಹುತೇಕ ವಾಹನ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನೆಗಳ ಕಾರ್ಯವಿಧಾನವನ್ನೇ ಬದಲಾಯಿಸಿಕೊಂಡಿವೆ. ವಿಶೇಷವಾಗಿ ಭಾರತ, ಚೀನಾ, ಜರ್ಮನಿ, ಜಪಾನ್, ಅಮೆರಿಕ, ಕೊರಿಯಾ ಕಂಪನಿಗಳು ಮಾಡಿಕೊಂಡಿರುವ ಬದಲಾವಣೆಗಳು ಶ್ಲಾಘನೀಯ. ಆಟೋಮೊಬೈಲ್ ಉತ್ಪಾದನೆಯಲ್ಲಿನ ನಿರೀಕ್ಷೆಗಳನ್ನು ಬಹುತೇಕ ಕಂಪೆನಿಗಳು ದುಪ್ಪಟ್ಟುಗೊಳಿಸುತ್ತಾ ಬಂದಿವೆ. ತಂತ್ರಜಾnನ ಅಳವಡಿಕೆಗೆಂದೇ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸಿಕೊಂಡಿವೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಪರಿಚಯಗೊಂಡ ದ್ವಿಚಕ್ರ ಮತ್ತು ಚತುರ್ಚಕ್ರ ವಾಹನಗಳಲ್ಲಿ ಆಗಿರುವ ಗಮನಾರ್ಹ ಬದಲಾವಣೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಗ್ರಾಹಕನ ನಿರೀಕ್ಷೆಗಿಂತಲೂ ಲೇಟೆಸ್ಟ್ ಎನ್ನಿಸುವ ತಂತ್ರಜಾnನಗಳು ಅಳವಡಿಕೆಯಾಗಿರುತ್ತವೆ.
ದ್ವಿಚಕ್ರಗಳಿಗಿಂತ ಉಳಿದ ವಾಹನಗಳಲ್ಲಿ ಈ ಬದಲಾವಣೆಗಳನ್ನು ಹೆಚ್ಚೆಚ್ಚು ಕಾಣಲು ಸಾಧ್ಯ. ಒಂದಿಷ್ಟು ಹೊಸತನ, ಹೊಸ ಕಲ್ಪನೆ, ಹೊಸ ವಿನ್ಯಾಸಗಳನ್ನು ಅಳವಡಿಸುವುದರ ಜೊತೆಗೆ, ಸುರಕ್ಷತೆ ಮತ್ತು ಮನರಂಜನೆ ದೃಷ್ಟಿಯಿಂದಲೂ ಒಂದಿಷ್ಟು ತಂತ್ರಜಾnನಗಳನ್ನು ಅಳವಡಿಸಲಾಗುತ್ತದೆ.
ಎಕ್ಸಾನ್ ಮೋಬಿಲ್ ಆಗಾಗ ಹೇಳುತ್ತಲೇ ಬಂದಿರುವ ಮಾಹಿತಿಯ ಪ್ರಕಾರ, 2040ರ ವೇಳೆಗೆ ಎಲ್ಲಾ ಕಾರುಗಳ ತಯಾರಿಕೆಯೂ ಹೈಬ್ರಿಡ್ ಆಗಿರಲಿದೆ. ಇದು ಪರಿಸರ ಸ್ನೇಹಿಯೂ ಆಗಿರಲಿದೆ. ಸಾಮಾನ್ಯವಾಗಿ ದ್ವಿಚಕ್ರ ಸೇರಿ ಎಲ್ಲಾ ವಾಹನಗಳೂ ಬ್ಯಾಟರಿ ಚಾಲಿತ. ಲಿಥಿಯಮ್ -ಇಯಾನ್ ಬ್ಯಾಟರಿಗಳ ಬಳಕೆ ಮಾಡಬೇಕಾದ ಕಾರಣ ಭಾರ ಕೂಡ ಜಾಸಿಯಿರುತ್ತದೆ. ಈ ಕಾರಣಕ್ಕಾಗಿಯೇ ಎನರ್ಜಿ ಸ್ಟೋರಿಂಗ್ ಬಾಡಿ ಪ್ಯಾನಲ್ಸ್‌ಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಯುರೋಪ್‌ನಲ್ಲಿ ಈಗಾಗಲೇ ಇದಕ್ಕೆ ಚಾಲನೆ ಸಿಕ್ಕಿದೆ. ಒಂಬತ್ತು ಕಂಪನಿಗಳು ಒಟ್ಟಿಗೇ ಸೇರಿ ಇಂಥ ಸಾಮರ್ಥ್ಯದ ಹೊಸ ಕವಚದ ಅನ್ವೇಷಣೆಯಲ್ಲಿ ತೊಡಗಿಕೊಂಡಿವೆ. ಪಾಲಿಮರ್ ಫೈಬರ್ ಮತ್ತು ಕಾರ್ಬನ್ ರೆಸಿನ್ ಬಳಕೆ ಮಾಡಿ ಅನ್ವೇಷಣೆ ನಡೆಸುತ್ತಿವೆ. ಒಂದು ಹಂತದಲ್ಲಿ ಯಶಸ್ಸನ್ನೂ ಕಂಡುಕೊಂಡಿವೆ. ಕಾರಿಗೆ ಇದನ್ನು ಬಳಕೆ ಮಾಡಬೇಕಾದ ಕಾರಣ ಈ ಕಚ್ಚಾ ವಸ್ತುಗಳಿಂದ ನಿುìಸಲಾಗುವ ಕವಚದ ತೂಕ ಕಡಿಮೆ ಮಾಡುವ ವಿಧಾನ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಟೊಯೋಟ ಹಗುರವಾದ ಎನರ್ಜಿಸ್ಟೋರಿಂಗ್ ಪ್ಯಾನಲ್‌ಗಳಿಗಾಗಿ ಅನ್ವೇಷಣೆ ನಡೆಸಿದ್ದು, ಅದರಲ್ಲೂ ಓ ಪ್ಯಾನಲ್‌ಗಳು ಸೌರಶಕ್ತಿಯನ್ನೂ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರಬೇಕೆನ್ನುವ ಲೆಕ್ಕಾಚಾರದಲ್ಲಿದೆ.
ಮುಂದಿನ ಸಂಚಿಕೆಯಲ್ಲಿ ಹೈ-ಡ್ರೈವ್2
– ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.