ಕ್ರೇಜಿ ರೈಡ್‌ಗೆ ಹೊಸ ಡಾಮಿನಾರ್‌  


Team Udayavani, Mar 17, 2019, 12:42 PM IST

s-5.jpg

ಡಾಮಿನಾರ್‌ ಬೈಕ್‌ನಲ್ಲಿ ಆಗಾಗ್ಗೆ ಗಿಯರ್‌ ಬದಲಿಸುವ ಅಗತ್ಯವಿಲ್ಲ. ಎರಡೂ ಬದಿಯಲ್ಲಿ ಎಆರ್‌ಎಫ್ ಟೈರ್‌ಗಳನ್ನು ಹೊಂದಿದೆ.. 300 ಸಿಸಿ ಮೇಲ್ಪಟ್ಟ ಉತ್ತಮ ಟೂರಿಂಗ್‌ ಬೈಕ್‌ಗಳಲ್ಲಿ ಡಾಮಿನಾರ್‌ ಕೂಡ ಒಂದು. 

ಹೊಸ ವರ್ಷಕ್ಕೆ ಸುಧಾರಿತ ಆವೃತ್ತಿಯ ಬೈಕ್‌ ಬರುತ್ತದೆ ಎಂದಾದರೆ ಸಾಮಾನ್ಯವಾಗಿ ಎಲ್ಲ ಕಂಪನಿಗಳೂ ಒಂದಷ್ಟು ಹೊರಾಂಗಣ ವಿನ್ಯಾಸ, ಫೈಬರ್‌ ಭಾಗ, ಪೈಂಟ್‌ಗಳನ್ನಷ್ಟೇ ಬದಲಾಯಿಸುತ್ತವೆ. ಆದರೆ, ಇದಕ್ಕೆ ಹೊಸ ಡಾಮಿನಾರ್‌ ಅಪವಾದ.  2019ರ ಮಾಡೆಲ್‌ನ ಡಾಮಿನೋರ್‌ 400 ಟೂರಿಂಗ್‌ ಬೈಕ್‌ ಪ್ರಿಯರ ಮನಗೆಲ್ಲಲು ಸಿದ್ಧವಾಗಿದೆ. 2016ರಲ್ಲಿ ಬಿಡುಗಡೆಗೊಂಡ ಡಾಮಿನಾರ್‌ ತಾಂತ್ರಿಕ ವಿಚಾರದಲ್ಲೂ ವ್ಯಾಪಕ ಸುಧಾರಣೆ ಕಂಡಿದೆ. ಭಾರತೀಯ ಕಂಪೆನಿಗಳ ತಯಾರಿಕೆಯ 300 ಸಿಸಿ ಮೇಲ್ಪಟ್ಟ ಉತ್ತಮ ಟೂರಿಂಗ್‌ ಬೈಕ್‌ಗಳಲ್ಲಿ ಡಾಮಿನಾರ್‌ ಕೂಡ ಒಂದು.

ಹೊಸದೇನು? 
ಪ್ರಮುಖವಾಗಿ ಎಂಜಿನ್‌ ಸುಧಾರಣೆಯಾಗಿದೆ. ಹಿಂದಿನ 373.3 ಸಿಸಿ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಈಗ ಕೂಡ ಇದೆ. ಆದರೆ ಅದರ ಶಕ್ತಿ 35 ಎಚ್‌ಪಿಯಿಂದ 40 ಎಚ್‌ಪಿಗಳಿಗೇರಿದೆ. ಡಿಒಎಚ್‌ಸಿ (ಡ್ಯುಯಲ್‌ ಓವರ್‌ ಹೆಡ್‌ ಕ್ಯಾಮ್‌ಶಾಫ್ಟ್) ನೀಡಲಾಗಿದ್ದು ಶಕ್ತಿ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಡ್ಯುಎಲ್‌ ಬಾರಲ್‌ ಎಂಡ್‌ ಕ್ಯಾನ್‌ ಎಕ್ಸಾಸ್ಟ್‌ ಇದ್ದು ಉತ್ತಮ ಬೀಟ್‌ ಇದೆ. ಇನ್ನೊಂದು ಪ್ರಮುಖ ಬದಲಾವಣೆ ಅಪ್‌ಸೆçಡ್‌ ಡೌನ್‌ (ತಲೆಕೆಳಗಾದ ಫ್ರಂಟ್‌ ಶಾಕ್ಸ್‌) 43 ಎಂ.ಎಂ.ನ ಈ ಶಾಕ್ಸ್‌ ಆರಾಮದಾಯಕ ಸವಾರಿಗೆ ಉತ್ತಮವಾಗಿದೆ. ಇದೇ ಮಾದರಿ ಫೋರ್ಕ್‌ ಕೆಟಿಎಂ ಡ್ನೂಕ್‌ನಲ್ಲೂ ಇದೆ. ಇದರೊಂದಿಗೆ ಡಾಮಿನಾರ್‌ನಲ್ಲಿ ಎಬಿಎಸ್‌ ವರ್ಷನ್‌ ಮಾತ್ರ ಲಭ್ಯವಿದೆ.  ಇನ್‌ಸ್ಟ್ರೆಮೆಂಟಲ್‌ ಕ್ಲಸ್ಟರ್‌ನ ಪ್ರೈಮರಿ ಡಿಸ್ಪೆ$Éà ಈಗ ಆವರೇಜ್‌ ಮೈಲೇಜ್‌ (ಸದ್ಯ ಎಷ್ಟು ಮೈಲೇಜ್‌ ಕೊಡುತ್ತಿದೆ ಮತ್ತು ಇರುವ ಇಂಧನದಲ್ಲಿ ಎಷ್ಟು ದೂರ ಸಾಗಬಹುದು) ಎಂಬುದನ್ನೂ ಹೇಳುತ್ತದೆ. ಜತೆಗೆ ಸೈಡ್‌ಸ್ಟಾಂಡ್‌ ಹಾಕಿದ್ದಾಗ ಎಂಜಿನ್‌ ಕಿಲ್‌ ಸ್ವಿಚ್‌ ಆನ್‌ ಇದೆ ಎಂಬುದನ್ನು ಎಚ್ಚರಿಸುತ್ತದೆ. ಮುಂಭಾಗದ ಹೆಡ್‌ಲೈಟ್‌ ಸುಧಾರಣೆಯಾಗಿದ್ದು ಹೆಚ್ಚು ಸ್ಪಷ್ಟವಾಗಿ ಕಾಣಲು ನೆರವಾಗುತ್ತದೆ. ಕಂಪೆನಿ ಫಿಟ್ಟೆಡ್‌ ಟ್ಯಾಂಕ್‌ ಪ್ಯಾಡ್‌, ಹಿಂಭಾಗ ಸರಂಜಾಮುಗಳು ಜಾರದಂತೆ ಇಡಲು ನೆರವಾಗುವ ನೈಲಾನ್‌ ಲೂಪ್ಸ್‌ಗಳು ಇದರಲ್ಲಿವೆ. ಇದರೊಂದಿಗೆ ಹೊಸ ಮಾಡೆಲ್‌ನ ವಿಶೇಷತೆ ಏನೆಂದರೆ ಹಸಿರು ಬಣ್ಣ. ಕವಾಸಾಕಿ ನಿಂಜಾ ಮಾದರಿಯಲ್ಲಿ ಈ ಬಣ್ಣ ಆಕರ್ಷಕವಾಗಿದೆ.

ರೈಡಿಂಗ್‌ ಅನುಭವ ಹೇಗಿದೆ? 
ಮೊದಲನೆಯದಾಗಿ, ಎಂಜಿನ್‌ ದಕ್ಷತೆ ಹೆಚ್ಚಾಗಿದೆ. ಇದು ರೈಡಿಂಗ್‌ ಮೇಲೆ ನೇರ ಪರಿಣಾಮ ಬೀರುತ್ತದೆ. ಶಬ್ದ ಉತ್ತಮ ಬೀಟ್‌ ಹೊಂದಿದ್ದು, ಬೈಕ್‌ಗೆ ಮತ್ತಷ್ಟು ಪಿಕಪ್‌ ಇರುವಂತೆ ಭಾಸವಾಗುತ್ತದೆ. ವಿಶೇಷವಾಗಿ ಮಿಡ್‌ರೇಂಜ್‌ನಲ್ಲಿ ಬೈಕ್‌ ಉತ್ತಮ ಪಿಕಪ್‌ ಇದೆ. ಜತೆಗೆ, ಆಗಾಗ್ಗೆ ಗಿಯರ್‌ ಚೇಂಜ್‌ ಮಾಡುವ ಆವಶ್ಯಕತೆ ಇಲ್ಲ. ಸಾಮಾನ್ಯ ಎಕ್ಸಲರೇಷನ್‌ ನಲ್ಲೇ ಉತ್ತಮ ಸ್ಪೀಡ್‌ ತಲುಪುತ್ತದೆ. ವೈಬ್ರೇಷನ್‌ನನ್ನು ತೀವ್ರವಾಗಿ ಕಡಿಮೆಗೊಳಿಸಲಾಗಿದ್ದು, ದೀರ್ಘ‌ ರೈಡ್‌ಗೆ ಉಪಕಾರಿಯಾಗಿದೆ. ಎರಡೂ ಬದಿ ಎಮ್‌ಆರ್‌ಎಫ್ ಟಯರ್‌ಗಳಿದ್ದು, ಉತ್ತಮ ಗ್ರಿಪ್‌ ಹೊಂದಿದೆ. ಕಾರ್ನರ್‌ನಲ್ಲಿ ಉತ್ತಮ ಸವಾರಿಯ ಅನುಭವವನ್ನೂ ನೀಡುತ್ತದೆ. ಇದರೊಂದಿಗೆ ಸದ್ಯ ಡಾಮಿನಾರ್‌ ಒಟ್ಟು ಭಾರ 2 ಕೆ.ಜಿ.ಯಷ್ಟು ಅಂದರೆ 184 ಕೆ.ಜಿ.ಗಳಿಗೇರಿದೆ. ಆದರೆ ಇಷ್ಟು ಭಾರವಿದೆ ಎಂಬುದು ರೈಡಿಂಗ್‌ನಲ್ಲಿ ಅನುಭವಕ್ಕೆ ಬರುವುದೇ ಇಲ್ಲ. 110-120 ಕಿ.ಮೀ. ವೇಗವನ್ನು ಡಾಮಿನಾರ್‌ ಆರಾಮವಾಗಿ ಕ್ರಮಿಸುತ್ತದೆ. ಈ ಸ್ಪೀಡ್‌ನ‌ಲ್ಲಿ ಕ್ರೂಸಿಂಗ್‌ಗೆ ಹೆಚ್ಚು ಸಮಸ್ಯೆಯೇ ಇಲ್ಲದಷ್ಟು ಎಂಜಿನ್‌ನ ರಿಫೈನ್‌ಮೆಂಟ್‌ ಆಗಿದೆ. ವಿಶೇಷವಾಗಿ ಫ‌ೂಟ್‌ರೆಸ್ಟ್‌, ಹ್ಯಾಂಡಲ್‌ ಬಾರ್‌ ವೈಬ್ರೇಷನ್‌ ಕಡಿಮೆಯಾಗಿದೆ.

ಯಾರಿಗೆ ಬೆಸ್ಟ್‌?
ಬೈಕ್‌ ಪ್ರವಾಸದ ಕ್ರೇಜ್‌ ಹೊಂದಿದವರಿಗೆ, 300 ಸಿಸಿಯ ಉತ್ತಮ ಪವರ್‌ನ ಬೈಕ್‌ ಬೇಕು ಎನ್ನುವವರಿಗೆ ಡಾಮಿನಾರ್‌ ಹೇಳಿ ಮಾಡಿಸಿದ್ದು. ದೇಸಿ ಕಂಪನಿ ತಯಾರಿಕೆಯ ಇಷ್ಟೊಂದು ಪವರ್‌ ಇರುವ ಬೈಕ್‌ ಬೇರಿಲ್ಲ.  ಆರಾಮ ಚಾಲನೆಗೆ ನೆರವು ನೀಡುತ್ತದೆ. 2 ಲಕ್ಷ ರೂ. ಒಳಗಿನ ಬೈಕ್‌ ಇದಾಗಿದ್ದು ಈ ರೇಂಜ್‌ನಲ್ಲಿರುವ ಒಂದು ಉತ್ತಮ ಟೂರಿಂಗ್‌ ಬೈಕ್‌ ಕೂಡ ಆಗಿದೆ.

ತಾಂತ್ರಿಕತೆ 
ವೀಲ್‌ಬೇಸ್‌ 1453
ಗ್ರೌಂಡ್‌ಕ್ಲಿಯರೆನ್ಸ್‌ 157
ಇಂಧನ ಟ್ಯಾಂಕ್‌ 13 ಲೀ.
ಬ್ರೇಕ್‌ ಮುಂದೆ 320 ಡಯಾಮೀಟರ್‌, ಹಿಂಭಾಗ 230 ಡಯಾಮೀಟರ್‌ ಡಿಸ್ಕ್
ಟ್ವಿನ್‌ ಚಾನೆಲ್‌ಎಬಿಎಸ್‌
ಎಂಜಿನ್‌ 373.3
ಶಕ್ತಿ 40 ಬಿಎಚ್‌ಪಿ 

ಈಶ

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.