ಡೆಫೆನೆಟ್ಲಿ ಮೇಲು! 125 ಸಿಸಿ ವಿಭಾಗದಲ್ಲಿ ಮಗದೊಂದು ಪಲ್ಸರ್
Team Udayavani, Oct 14, 2019, 5:15 AM IST
ಪಲ್ಸರ್… ಈ ಹೆಸರು ಕೇಳಿದರೆ ಸಾಕು! ಹೋ ಇದು ಯುವಕರ ಬೈಕು ಎಂದು ಹೇಳುತ್ತಿದ್ದ ಕಾಲವಿದು… ಏಕೆಂದರೆ, ಇದರ ಸ್ಟೈಲಿಷ್ ವಿನ್ಯಾಸ, ಸಾಮರ್ಥ್ಯ… ಸ್ಟೋರ್ಟಿ ಲುಕ್… ಎಲ್ಲವೂ ಯುವಕರಿಗೇ ಹೇಳಿ ಮಾಡಿಸಿದಂತಿದೆ. ಅಗಸ್ಟ್‌ನಲ್ಲಿ ಪಲ್ಸರ್ ನಿಯೋನ್ ಬೈಕನ್ನು ಪರಿಚಯಿಸಿದ್ದ ಸಂಸ್ಥೆ ಇತ್ತೀಚಿಗಷ್ಟೆ ಮತ್ತೆ 125 ವಿಭಾಗದಲ್ಲಿ ಅದಕ್ಕಿಂತ ಹೆಚ್ಚು ಸುಧಾರಿತ ಪಲ್ಸರ್ ಕ್ಲಾಸಿಕ್ ಬೈಕನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಒಂದು ಕಡೆ ಪೆಟ್ರೋಲ್ ದರ ಏರುತ್ತಿದ್ದರೆ, ಇನ್ನೊಂದೆಡೆ ಬೈಕುಗಳ ಬೆಲೆಯೂ ಗಗನಮುಖೀಯಾಗಿದೆ. ಇಂಥ ವೇಳೆಯಲ್ಲಿ 150+ ಅಥವಾ 200+ ಸಿಸಿ ಸಾಮರ್ಥ್ಯದ ಬೈಕುಗಳ ಖರೀದಿ ಮಾಡಬೇಕು ಎಂದರೆ ಲಕ್ಷ ರೂ.ಗಿಂತ ಹೆಚ್ಚೇ ಬೆಲೆ ತೆರಬೇಕು. ಇದರ ನಡುವೆಯೇ ಸ್ಟೋರ್ಟ್ಸ್ ಬೈಕ್ ಎಂದೇ ಹೆಸರಾಗಿರುವ ಕೆಟಿಎಂ 125 ಬೈಕು ಬಿಟ್ಟು ಆ ವಿಭಾಗದಲ್ಲಿಯೂ ಯಶಸ್ವಿಯಾಗಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವಂತೆ ತೋರುತ್ತಿರುವ ಬಜಾಜ್, ತನ್ನ ಪಲ್ಸರ್ ಬ್ರಾಂಡನ್ನು 125ಸಿಸಿ ವಿಭಾಗದಲ್ಲಿ ಪರೀಕ್ಷೆಗೆ ಇಳಿಸಲು ಹೊರಟಿದೆ.
ಪಲ್ಸರ್ 150ರ ವಿನ್ಯಾಸ
ಎಂಜಿನ್ ಸಾಮರ್ಥ್ಯವೊಂದನ್ನು ಕಡಿಮೆ ಮಾಡಿದೆ ಎಂಬುದನ್ನು ಬಿಟ್ಟರೆ ಈ ಬೈಕು ಹೆಚ್ಚು ಕಡಿಮೆ ಬಜಾಜ್ ಪಲ್ಸರ್ 150 ಅನ್ನೇ ಹೋಲುತ್ತದೆ. ಟ್ಯಾಂಕ್ ವಿನ್ಯಾಸ ಕೂಡ ಹಾಗೆಯೇ ಇದೆ. ಆದರೆ, ಟ್ಯಾಂಕ್‌ನ ಸಾಮರ್ಥ್ಯವನ್ನು 11.5 ಲೀಟರ್‌ಗೆ ಇಳಿಕೆ ಮಾಡಲಾಗಿದೆ. ಬೈಕಿನ ಭಾರ ಕಡಿಮೆ ಮಾಡಲೆಂದೇ ಟ್ಯಾಂಕಿನ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎನ್ನುವ ಮಾತೂ ಇದೆ.
150+ ಸಿಸಿ ಸಾಮರ್ಥ್ಯದ ಬಜಾಜ್ ಪಲ್ಸರ್ ಬೈಕುಗಳಲ್ಲಿ ಹೆಚ್ಚು ಮೈಲೇಜ್ ಸಿಗುವುದಿಲ್ಲ. ಹೀಗಾಗಿ ಆ ಕೊರತೆಯನ್ನು ತುಂಬುವ ಸಲುವಾಗಿ ಹೆಚ್ಚು ಮೈಲೇಜ್ ಕೊಡಬೇಕು ಮತ್ತು ಸ್ಟೈಲಿಷ್ ಆಗಿಯೂ ಇರಬೇಕು ಎನ್ನುವವರಿಗಾಗಿಯೇ ಈ ಬೈಕನ್ನು ಬಿಡುಗಡೆ ಮಾಡಲಾಗಿದೆ ಎನ್ನುವುದರಲ್ಲೂ ಸತ್ಯಾಂಶವಿದೆ. ಪಲ್ಸರ್ 125ಕ್ಕೆ ಪ್ರತಿಸ್ಪರ್ಧಿ ಎಂದರೆ ಹೋಂಡಾ ಸಿ.ಬಿ ಶೈನ್. ಶೈನ್‌ಗಿಂತ ಪಲ್ಸರ್ 15 ಕೆ.ಜಿ ಹೆಚ್ಚು ಭಾರವಿದೆ. ಇದರಿಂದಾಗಿ ಒಳ್ಳೆಯ ರೋಡ್ ಗ್ರಿಪ್ ಅನ್ನು ಈ ಹೊಸ ಬೈಕಿನಿಂದ ನಿರೀಕ್ಷಿಸಬಹುದು. ಪಲ್ಸರ್ 150 ಬೈಕಿಗೆ ಬಳಸಿದ್ದ ಎಂಜಿನ್‌ಅನ್ನೇ ಇದರಲ್ಲೂ ಉಪಯೋಗಿಸಿರುವುದರಿಂದ ಸಾಮರ್ಥ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ ಎನ್ನಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಈ ಬೈಕ್ ಸ್ಟಾರ್ಟ್ ಮಾಡಿದಾಕ್ಷಣ, 100 ಕಿ.ಮೀ. ವೇಗವನ್ನು ತಲುಪಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಟಾರ್ಗೆಟ್ ಸವಾರರು ಯಾರು?
ಈ ಬೈಕಿನಲ್ಲಿ ಎಬಿಎಸ್ ಇಲ್ಲ ಎಂಬುದು ಒಂದು ಕೊರತೆ. ಆದರೆ, 68 ಸಾವಿರ ರೂ.ಗಳ ರೇಂಜ್‌ನಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿರುವ ಬೈಕ್ ಸಿಗುತ್ತದೆ. 64 ಸಾವಿರ ರೂ.ಗಳ ರೇಂಜಿನಲ್ಲಿ ಕೇವಲ ಡ್ರಮ್ ಬ್ರೇಕ್ ಸಿಸ್ಟಮ್ ಒದಗಿಸಲಾಗಿದೆ. ಡಿಸ್ಕ್ ಬ್ರೇಕ್ ವ್ಯವಸ್ಥೆ ಬೇಕೆಂದರೆ 68 ಸಾವಿರ ರೇಂಜ್‌ನ ಬೈಕನ್ನೇ ಖರೀದಿಸಬೇಕು.
ಈಗಾಗಲೇ ಒಮ್ಮೆ ತನ್ನದೇ ಬ್ರ್ಯಾಂಡ್ ನ ಬಜಾಜ್ ಡಿಸ್ಕವರ್‌ನಲ್ಲಿ 125 ಸಿಸಿ ಬೈಕುಗಳನ್ನು ಬಜಾಜ್ ಪರಿಚಯಿಸಿತ್ತು. ಮತ್ತೆ ಈಗ ಇನ್ನೊಂದು ಬ್ರ್ಯಾಂಡ್ ನಲ್ಲಿ 125 ಸಿಸಿ ಸಾಮರ್ಥ್ಯದ ಬೈಕುಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸುವ ಲೆಕ್ಕಾಚಾರ ಕಂಪನಿಯದು. ಆದರೆ, ಪಲ್ಸರ್ ಬೈಕನ್ನು ಕೇಳಿಕೊಂಡು ಬರುವವರು, ಹೆಚ್ಚು ಸಾಮರ್ಥ್ಯದ ಮಾಡೆಲ್‌ಗಳನ್ನು ಬಯಸುವವರು. ಅವರು ಬೆಲೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವರೇ ಹೊರತು ಪವರ್, ಸಾಮರ್ಥ್ಯದ ವಿಚಾರದಲ್ಲಲ್ಲ. ಆಂಥಾ ಗ್ರಾಹಕರು ಪಲ್ಸರ್ 125ಅನ್ನು ಹೇಗೆ ಸ್ವೀಕರಿಸುತ್ತಾರೇ ಎನ್ನುವ ಪ್ರಶ್ನೆಯಂತೂ ಇದೆ. ಆದರೆ ಮೊದಲೇ ಹೇಳಿದಂತೆ ಈ ಬೈಕಿನ ಟಾರ್ಗೆಟ್ ಬೇರೆಯದೇ ವರ್ಗದ ಜನ. ಮೈಲೇಜ್ ಮತ್ತು ನ್ಪೋರ್ಟಿ ಲುಕ್ ಎರಡೂ ಬೇಕೆನ್ನುವವರು ಈ ಬೈಕನ್ನು ಟೆಸ್ಟ್ ರೈಡ್ ಮಾಡಬಹುದು.
ಬಜಾಜ್ ಪಲ್ಸರ್ 125
ಸಾಮರ್ಥ್ಯ – 124.4 ಸಿ.ಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್‌ಕೂಲ್ಡ…
ತೂಕ -140 ಕೆ.ಜಿ
ಸ್ಪ್ಲಿಟ್ ಸೀಟ್
ಸೀಟಿನ ಎತ್ತರ -790ಎಂ.ಎಂ
ವೀಲ್ ಬೇಸ್ – 1,320 ಎಂ.ಎಂ
ಬೆಲೆ -64,000 ರೂ.(ಎಕ್ಸ್ ಶೋರೂಂ, ದೆಹಲಿ)
-ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.