ಬ್ಯಾಂಕ್‌ ವಿಲೀನ; ಇದರಿಂದ ನಮಗೇನು ಲಾಭ?


Team Udayavani, Feb 27, 2017, 3:03 PM IST

Ban27021701SIsr.jpg

ಭಾರತದಲ್ಲಿ 77 ಸಾರ್ವಜನಿಕ  ವಲಯದ ಬ್ಯಾಂಕ್‌ಗಳಿವೆ.ಎನ್‌ಪಿಎ ಪ್ರಮಾಣ ಅಗಾಧವಾಗಿದೆ. ಇದರ ನಡುವೆ ಇವು ದೇಶದ ಜಿಡಿಪಿಗೆ ಏನೆಂದರೆ ಏನೂ ಕೊಡುಗೆ ಕೊಡುತ್ತಿಲ್ಲ. ವಿಶ್ವದಲ್ಲಿ ಟಾಪ್‌ 1000 ಬ್ಯಾಂಕ್‌ಗಳ ಪಟ್ಟಿ ಮಾಡಿದರೆ ಭಾರತದ ಕೆಲವು ಬ್ಯಾಂಕ್‌ಗಳು ಈ ಪರಿಮಿತಿಯಲ್ಲಿ ಬರಬಹುದು. ಆದರೆ ಟಾಪ್‌ 50 ಎಂಬ ಚಿಕ್ಕ ಪಟ್ಟಿಗೆ ಬಂದರೆ ಭಾರತದ ಒಂದೇ ಒಂದು ಬ್ಯಾಂಕ್‌ ಇದರೊಳಗೆ ಏರುವುದಿಲ್ಲ.

ಒಂದರೊಳಗೊಂದು ಐಕ್ಯ ಆಗುವುದು ಪ್ರಕೃತಿ ಸಹಜ ಕ್ರಿಯೆ. ದೊಡ್ಡ ಮೀನು ಸಣ್ಣ ಮೀನುಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ವ್ಯಾಪಾರಿ ವಲಯದಲ್ಲಂತೂ ಇದು ಒಂದು ಉದ್ಯಮ ನೀತಿ. ದೊಡ್ಡ ಸಾಫ್ಟ್ವೇರ್‌ ಉದ್ಯಮ ಸಣ್ಣದನ್ನು ಖರೀದಿಸಿ ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಮೊಬೈಲ್‌ ದೈತ್ಯರಾದ ವೊಡಾಫೋನ್‌, ಐಡಿಯಾಗಳು ಒಂದಾಗಿ ಮೊಬೈಲ್‌ ಜಗತ್ತಿನ ಸವಾಲುಗಳನ್ನು ಎದುರಿಸಲು ಹೊರಡುತ್ತವೆ. ಅದೇ ರೀತಿ, ದೇಶದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದೊಳಗೆ ದೇಶದ ಇತರ ಐದು ಬ್ಯಾಂಕ್‌ಗಳ ಲೀನ ಖಾತ್ರಿಯಾಗಿದೆ. ಈಗಾಗಲೇ ಲೀನ ಪ್ರಕ್ರಿಯೆ ಮೊದಲ ಹಂತಗಳನ್ನು ದಾಟಿವೆ. ಏಪ್ರಿಲ್‌ ಒಂದರ ಮೂರ್ಖರ ದಿನದ ಮುಹೂರ್ತವನ್ನೇ ಇಡಲಾಗಿದೆ.  ಎಸ್‌ಬಿಐ ಹೊರತಾದ ಬ್ಯಾಂಕ್‌ಗಳ ಸಿಬ್ಬಂದಿ ಇದನ್ನು ವಿರೋಧಿಸಿ ಒಂದಕ್ಕಿಂತ ಹೆಚ್ಚು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಫ‌ಲ ಸಿಕ್ಕದೆ ಇರಬಹುದು. ಇತ್ತ ಈ ಸಣ್ಣ ಬ್ಯಾಂಕ್‌ಗಳ ಖಾತೆದಾರರು ಮಾತ್ರ ಚಳವಳಿ ನಡೆಸಿದ್ದು ಇಂದಿನ ದಿನಾಂಕದವರೆಗೆ ನಡೆದಿಲ್ಲ. ಈ ಗ್ರಾಹಕರಿಗೆ ಲಾಭವಾಗುತ್ತದೆಯೇ ಅಥವಾ ಅವರಿಗಿನ್ನು ವಿಷಯ ಮನದಟ್ಟಾಗಿಲ್ಲವೇ?

ಮೇಲ್ನೋಟಕ್ಕೆ ಬ್ಯಾಂಕ್‌ ಗ್ರಾಹಕರಿಗೆ ಲಾಭಗಳೇ ಆಗಬೇಕು. ಎಲ್ಲೆಡೆ ಸಾಲದ ಬಡ್ಡಿಯ ದರ ಒಂದೇ ಇರಬೇಕು ಎಂಬ ನೀತಿಯಡಿ ಸಣ್ಣ ಬ್ಯಾಂಕ್‌ಗಳ ಹೆಚ್ಚು ಬಡ್ಡಿದರಗಳ ಮೇಲೆ ಕಡಿವಾಣ ಬೀಳಲಿದೆ. ಈಗಾಗಲೇ ಸಾಲದ ಬಡ್ಡಿದರ ಶೇ. 0.5ರಿಂದ ಒಂದರಷ್ಟು ಕಡಿಮೆಯಾಗಿದೆ. ಎಸ್‌ಬಿಐನಲ್ಲಿ ಲೀನವಾಗುತ್ತಿರುವ ಬ್ಯಾಂಕ್‌ಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಜೈಪುರ್‌  ಹೊರತುಪಡಿಸಿದರೆ ಸ್ಟೇಟ್‌ ಬ್ಯಾಂಕ್‌ ಆಫ್ ಟ್ರಿವೆನ್‌ಕೋರ್‌, ಎಸ್‌ಬಿಎಂ ತರದವು ಸಣ್ಣ ಮೀನುಗಳು. ಎಸ್‌ಬಿಐನಲ್ಲಿ ಬಂದ ಸಾಫ್ಟ್ವೇರ್‌ ಉನ್ನತಿ, ಸೌಲಭ್ಯ ಸರಿಸುಮಾರು ಎರಡು ವರ್ಷಗಳ ನಂತರ ಮಾತ್ರವೇ ಈ ಸಹೋದರ ಬ್ಯಾಂಕ್‌ಗೆ ಬರುವುದನ್ನು ಕಂಡಿದ್ದೇವೆ. ಲೀನದಿಂದ ಇಲ್ಲಿನ ಗ್ರಾಹಕನೂ ಉನ್ನತ ಸೌಲಭ್ಯ, ಮೊಬೈಲ್‌ ಹಾಗೂ ಅಂತಜಾìಲ ವೆಬ್‌ನ ಸುಧಾರಿತ ಸೌಕರ್ಯಗಳಿಗೆ ಹಕ್ಕುದಾರನಾಗುತ್ತಾನೆ.

ಎಸ್‌ಬಿಐ ಬ್ಯಾಂಕಿಂಗ್‌ ವ್ಯವಸ್ಥೆ ಹಳೆಯದನ್ನು ನೆನಪಿಸುತ್ತದೆ. 1959ರ ವೇಳೆಗೇ ಎಸ್‌ಬಿಐ ಸಬ್ಸಿಡೈಸರಿ ಕಾಯ್ದೆಯ ಅನ್ವಯ ಒಂದರ್ಥದಲ್ಲಿ ಲೀನದ ಬೀಜಾರ್ಪಣವಾಗಿತ್ತು. ಇಂದು ಎಸ್‌ಬಿಟಿಯಲ್ಲಿ ಎಸ್‌ಬಿಐನದು ಐದನೇ ನಾಲ್ಕರಷ್ಟು ಭಾಗದಷ್ಟು ಪಾಲಿದೆ. ಇದರ ಇಡೀ ವ್ಯವಸ್ಥೆಯನ್ನು ಎಸ್‌ಬಿಐ ನೇಮಕಾತಿಯಿಂದ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಲೀನ ಎಂಬುದು ಒಂದು ತಾಂತ್ರಿಕ ವ್ಯಾಖ್ಯಾನವಾಗಿದೆಯೇ ವಿನಃ ಈಗಾಗಲೇ ಅವುಗಳದು ಜಂಟಿ ಕಾರ್ಯಾಚರಣೆಯೇ ಆಗಿತ್ತು.ಭಾರತದಲ್ಲಿ 77 ಸಾರ್ವಜನಿಕ  ವಲಯದ ಬ್ಯಾಂಕ್‌ಗಳಿವೆ. ಎನ್‌ಪಿಎ ಪ್ರಮಾಣ ಅಗಾಧವಾಗಿದೆ. ಇದರ ನಡುವೆ ಇವು ದೇಶದ ಜಿಡಿಪಿಗೆ ಏನೆಂದರೆ ಏನೂ ಕೊಡುಗೆ ಕೊಡುತ್ತಿಲ್ಲ. ವಿಶ್ವದಲ್ಲಿ ಟಾಪ್‌ 1000 ಬ್ಯಾಂಕ್‌ಗಳ ಪಟ್ಟಿ ಮಾಡಿದರೆ ಭಾರತದ ಕೆಲವು ಬ್ಯಾಂಕ್‌ಗಳು ಈ ಪರಿಮಿತಿಯಲ್ಲಿ ಬರಬಹುದು. ಆದರೆ ಟಾಪ್‌ 50 ಎಂಬ ಚಿಕ್ಕ ಪಟ್ಟಿಗೆ ಬಂದರೆ ಭಾರತದ ಒಂದೇ ಒಂದು ಬ್ಯಾಂಕ್‌ ಇದರೊಳಗೆ ಏರುವುದಿಲ್ಲ.
ಈ ಲೀನವಾಗುವುದರಿಂದ ಎಸ್‌ಬಿಐ ಟಾಪ್‌ 50ರೊಳಗೆ ಬರಲಿದೆ ಎಂಬುದೇ ಕೇಂದ್ರ ಸರ್ಕಾರದ ವಿಶೇಷ ಕಾಳಜಿಯ ಮುನ್ನೋಟ. ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ. ಎಸ್‌ಬಿಐ ಲೀನದ ನಂತರ ಟಾಪ್‌ 50ರೊಳಗೆ ಅಲಂಕಾರಗೊಳ್ಳಲಿದೆ. ದೇಶದ ಕನಿಷ್ಟ 4-5 ಬ್ಯಾಂಕ್‌ಗಳು ವಿಶ್ವದ ಮೊದಲ ನೂರು ರ್ಯಾಕಿಂಗ್‌ನೊಳಗಿನ ಸಂಸ್ಥೆಗಳಾಗಬೇಕು ಎಂಬ ಅಭಿಲಾಷೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಬಹಿರಂಗಗೊಳಿಸಿದೆ. ಎಸ್‌ಬಿಐ ಕೂಡ ಸಹ ಬ್ಯಾಂಕ್‌ಗಳ ನೌಕರರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದೆಯೇ ವಿನಃ ಗ್ರಾಹಕರಿಗೆ ಆಗುವ ಲಾಭ ನಷ್ಟದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಲೇ ಇಲ್ಲ. ಇದು ಗ್ರಾಹಕರ ಗೊಂದಲವನ್ನು ಹೆಚ್ಚಿಸುತ್ತಿದೆ.

ವಿಸ್ತಾರವಾದ ಜಾಲ ಹೊಂದಿದ ಬ್ಯಾಂಕ್‌ ಒಂದರ ಗ್ರಾಹಕರಾಗಿರುವುದು ಹಲವು ದೃಷ್ಟಿಯಿಂದ ಲಾಭದಾಯಕ. ಹಣ ಪಾವತಿ, ಹಿಂಪಡೆಯುವಿಕೆಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತದೆ. ಕೆಲವು ನಿಯಮಗಳು ಗ್ರಾಹಕ ಪರವಾಗಿ ಬದಲಾಗಬಹುದು. ಉದಾಹರಣೆಗೆ ಎಸ್‌ಬಿಎಂ, ಖಾತೆ ಹೊಂದಿದ ಶಾಖೆಯ ಹೊರತಾದ ಶಾಖೆಗಳಲ್ಲಿ ಹಣ ತುಂಬಿದರೆ 100 ರೂ. ಶುಲ್ಕ ಇದ್ದದ್ದು ಲೀನ ಹಿನ್ನೆಲೆಯಲ್ಲಿ 25 ಸಾವಿರ ರೂ. ಪಾವತಿಗೆ ರಿಯಾಯ್ತಿ ಸಿಕ್ಕಿತ್ತು.  ಈ ಮಾದರಿಯ ಇತರ ಹಲವು ಪ್ರಯೋಜನಗಳಾಗಬಹುದು. 

ಸಾಮಾನ್ಯ ಗ್ರಾಹಕನಿಗೆ ಗುಣಮಟ್ಟದ ಸೇವೆ ಸಿಗುವ ಬಗ್ಗೆ ಬ್ಯಾಂಕಿಂಗ್‌ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ವಿಲೀನದ ನಂತರ ಬಂಡವಾಳ ಸಮೃದ್ಧವಾಗುತ್ತದೆ. ಸಾಲ ಕೊಡುವ ಸಾಮರ್ಥ್ಯ ವಿಸ್ತರಿಸಿದಾಗ ಒಂದು ಬ್ಯಾಂಕ್‌ ಸಹಜವಾಗಿ ದೊಡ್ಡ ಕುಳಗಳತ್ತ ಹೆಚ್ಚು ಒಲವು ಪ್ರದರ್ಶಿಸುತ್ತದೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ಆದ್ಯತೆ ಸಿಗುವುದರಿಂದ ಸಾಮಾನ್ಯ ಗ್ರಾಹಕ ಇಂತಹ ಕಡೆಗಳಲ್ಲಿ ಸಾಲ ಪಡೆಯಲು ಇನ್ನಿಲ್ಲದ ಕಷ್ಟ ಪಡಬೇಕಾಗಬಹುದು. ಕಾರ್ಪೊರೇಟ್‌ ಖಾತೆಯ ಪ್ರಾಶಸ್ತ$Âದಿಂದ ಬಡ ಬೋರೇಗೌಡ ಇಲ್ಲೂ ದ್ವಿತೀಯ ದರ್ಜೆಯ ಗ್ರಾಹಕನಾಗಿಬಿಡಬಹುದು.

ಸ್ಥಳೀಯ ಸ್ಪರ್ಶಗಳು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮಾಯವಾಗುತ್ತಿದೆ ಎಂಬುದು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿರುವ ಮಾತು. ಈ ಪರಿಸ್ಥಿತಿ ಬ್ಯಾಂಕ್‌ ವಿಲೀನದ ನಂತರ ಇನ್ನಷ್ಟು ಹದಗೆಡಲಿದೆ. ಇಂದಿಗೂ ಬ್ಯಾಂಕ್‌ ಒಳಗಿನ ಸೇವೆಗಳು ಪರಿಚಿತ ಮುಖಗಳ ಲಭ್ಯತೆಯ ಮೇಲೆ ಉತ್ಕೃಷ್ಟಗೊಳ್ಳುತ್ತದೆ. ಮೆಟ್ರೋ ಹೊರತಾದ ಭಾಗಗಳಲ್ಲಂತೂ ಪರಿಚಯವೇ ಆಧಾರ್‌ ಕಾರ್ಡ್‌ನಂತೆ! ಎಸ್‌ಬಿಐ ಪ್ರಕರಣದಲ್ಲಿಯೇ ಹೇಳುವುದಾದರೆ, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಮೈಸೂರು ಬ್ಯಾಂಕ್‌ ಎಂಬ ಆಯಾ ಭಾಗದ ಸಾಂಸ್ಕೃತಿಕ ಸ್ಪರ್ಶ ಬ್ಯಾಂಕ್‌ಗಿರದು. ಒಂದು ಊರಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಹಯೋಗ ಒದಗಿಸುವುದು ಕೂಡ ಕೇಂದ್ರ ಕಚೇರಿಯ ಮರ್ಜಿಯನ್ನು ಅವಲಂಬಿಸುವಂತಾಗುತ್ತದೆ.  ಕನ್ನಡವೇ ಉಸಿರಾದ ಗ್ರಾಮೀಣ ಭಾಗದ ಶಾಖೆಯೊಂದಕ್ಕೆ ಉತ್ತರ ಭಾರತದ ಜನ ಬಂದರೆ ವ್ಯವಹಾರ ನಡೆದೀತು, ವಿಸ್ತರಿಸುವುದು ಸುಲಭವಲ್ಲ. 

ಜನ ಬ್ಯಾಂಕ್‌ಗೆ ಕೇವಲ ಹಣ ಇಡಲು, ತೆಗೆಯಲು ಬರುವುದಿಲ್ಲ. ಅಲ್ಲಿನ ಉದ್ಯೋಗಿ ಅವರಿಗೆ ಆರ್ಥಿಕ ಸಲಹೆ ಕೊಡುವ ತಜ್ಞನಾಗಿಯೂ ಕೆಲಸ ಮಾಡುತ್ತಾನೆ. ಪರಿಚಯವೇ ಇಲ್ಲದ, ಪರಿಚಯ ವಿಸ್ತರಿಸಿಕೊಳ್ಳಲಾಗದ, ಭಾಷಾ ಸಮಸ್ಯೆ ಕಾಡುವ ಉದ್ಯೋಗಿ ಜತೆ ಸಂವಹನ ನಡೆಸಲಾಗದ ಕಷ್ಟ ಜನರಿಗಾಗುತ್ತದೆ. ಬೆಂಗಳೂರು ತರಹದ ನಗರ ಬಿಟ್ಟು ಉಳಿದೆಲ್ಲೆಡೆ ಈ ಸಮಸ್ಯೆ ಢಾಳಾಗಿ ಹೊಡೆದುಕೊಳ್ಳಲಿದೆ. ಇದು ಎಸ್‌ಬಿಐ ಲೀನದ ನಂತರ ದಟ್ಟವಾಗುವುದು ಖಚಿತ.

ಇನ್ನೊಂದು ಅಪಾಯ ಹಿಂದುಗಡೆಯ ಬಾಗಿಲಿನಿಂದ ಬರುವಂತದು. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಸಣ್ಣ ಸಣ್ಣ ಬ್ಯಾಂಕ್‌ಗಳ ಮೇಲೆ ಸವಾರಿ ಮಾಡಬಲ್ಲದು. ಕಟ್ಟುನಿಟ್ಟಾಗಿ ತನ್ನ ಸೂಚನೆಗಳನ್ನು ಪಾಲಿಸಲು ಅದು ಹುಕುಂ ಮಾಡಬಹುದು. ಇದೇ ಕಾರಣದಿಂದ ಹತ್ತಾರು ಬಾರಿ ಗ್ರಾಹಕ ಪರ ನಿರ್ದೇಶನಗಳನ್ನು ಕೊಡಲು ಸಾಧ್ಯವಾಗಿದೆ. ಬಿಸಿಸಿಐನ್ನು ನೆನಪಿಸಿಕೊಳ್ಳಿ, ಐಸಿಸಿಗೆ ಇವತ್ತಿಗೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದು ಕ್ರಿಕೆಟ್‌ಗೆ ಧಕ್ಕೆ ತರುವಂತೆ ಆರ್‌ಬಿಐನ ಸುತ್ತೋಲೆಗಳಿಗೆ ಎಸ್‌ಬಿಐ ತರಹದ ಬಿಗ್‌ಬ್ಯಾಂಕ್‌ ಬೆಲೆ ಕೊಡುತ್ತಿದ್ದುದು  ಯಾವಾಗಲೂ ಕಡಿಮೆಯೇ. ಅದರಲ್ಲೂ ಸಾಮಾನ್ಯ ಗ್ರಾಹಕ, ಖಾತೆಗಳ ವಿಚಾರದಲ್ಲಿ ಅದರದು ದಿವ್ಯ ನಿರ್ಲಕ್ಯ. ಇನ್ನು ಮುಂದೆ ಆರ್‌ಬಿಐ ಸೂಚನೆ ಉಲ್ಲಂಘನೆ ಹೆಚ್ಚಿ ಸಾಮಾನ್ಯ ಗ್ರಾಹಕನಿಗೆ ಉಸಿರು ಕಟ್ಟುವ ಸ್ಥಿತಿ ನಿರ್ಮಾಣವಾಗಬಹುದು. ಸರ್ಕಾರ ಯಾವತ್ತೂ ದೊಡ್ಡಣ್ಣನ ಪರವೇ!

ಮತ್ತೆ ಉದಾಹರಣೆಗೇ ಬಂದರೆ, ಇಂದು ಎಸ್‌ಬಿಐ ನಿಯಮಗಳ ಪ್ರಕಾರ, ಅದರಲ್ಲಿ 5 ಎಟಿಎಂ ಹಾಗೂ ನಾಲ್ಕು ಬ್ಯಾಂಕ್‌ ಒಳಗಿನ ಪಾವತಿ, ವಾಪಾಸು ಪ್ರಕ್ರಿಯೆ ಉಚಿತ. ನಮ್ಮದೇ ಬ್ಯಾಂಕ್‌ ಒಳಗೆ ಎಷ್ಟೇ ವ್ಯವಹಾರ ನಡೆಸಿದರೆ ಹೆಚ್ಚುವರಿ ವೆಚ್ಚ ಹೇರುವುದಿಲ್ಲ ಎಂಬ ನಂಬಿಕೆಯೇ ಹುಸಿ ಹೋಗಿದೆ. ಇತರ ಬ್ಯಾಂಕ್‌ ಎಟಿಎಂಗಳಲ್ಲಿ ಮಾಸಿಕ 5 ವ್ಯವಹಾರ ಉಚಿತ. ಮೆಟ್ರೋಗಳಲ್ಲಿ ಇದು ಕೇವಲ 3. ನಿಧಾನ ನಿಧಾನವಾಗಿ ಬ್ಯಾಂಕ್‌ಗಳು ಬ್ಯಾಂಕ್‌ ಒಳಗೆ ಪ್ರವೇಶ ಶುಲ್ಕ ಇರಿಸಿದರೂ ಬೆಚ್ಚಿಬೀಳಬಾರದು.

ಲೀನದ ನಂತರ ಒಪ್ಪಂದದ ಅವಧಿ ಇನ್ನೂ ಊರ್ಜಿತವಿರುವ ಸಾಲ ಅಥವಾ ಠೇವಣಿಯ ಬಡ್ಡಿ ದರವನ್ನು ಬದಲಿಸಲು ಆಗುವುದಿಲ್ಲ. ಅಷ್ಟರಮಟ್ಟಿಗೆ ಗ್ರಾಹಕ ಸುರಕ್ಷಿತ. ಪಡೆದ ಸಾಲದ ಬಡ್ಡಿದರಕ್ಕಿಂತ ವಿಲೀನ ನಂತರದ ಸಾಲ ದರ ಮೂಲ ಬ್ಯಾಂಕ್‌ನಲ್ಲಿ ಕಡಿಮೆ ಇದ್ದರೆ ಬದಲಿಸಿಕೊಳ್ಳಲು ಅವಕಾಶದೆ. ಪ್ರೋಸಸಿಂಗ್‌ ಫೀ, ಮಣ್ಣು, ಮಸಿಯೆಂದು ಹೆಚ್ಚಿನ ಸೇವಾ ಶುಲ್ಕ ವಿಧಿಸುವ ಸಾಧ್ಯತೆಗಳ ಬಗ್ಗೆ ಮಾತ್ರ ಎಚ್ಚರಿಕೆ ಇರಬೇಕು. ಬ್ಯಾಂಕ್‌ ಕಾರ್ಯಕ್ಷೇತ್ರ, ವಹಿವಾಟು ವ್ಯಾಪ್ತಿ ವಿಸ್ತರಿಸಿದಷ್ಟೂ ಅದರ ಸೇವಾ ಶುಲ್ಕಗಳು ಕಡಿಮೆಯಾಗದೆ ಹೆಚ್ಚುತ್ತಲೇ ಹೋಗುವುದು ಪದೇ ಪದೇ ರುಜುವಾತಾದ ಸತ್ಯ. ಎಸ್‌ಬಿಐನಲ್ಲಿ 5 ಸಹವರ್ತಿ ಬ್ಯಾಂಕ್‌ ಹಾಗೂ ಭಾರತ್‌ ಮಹಿಳಾ ಬ್ಯಾಂಕ್‌ನ ಲೀನದ ನಂತರ ಅದರ ಮೌಲ್ಯ 37 ಲಕ್ಷ ಕೋಟಿಯಾಗುತ್ತದೆ. ಇದು ಭಾರತದ ಜಿಡಿಪಿಯ ಐದನೇ ಒಂದು ಭಾಗದಷ್ಟು ಬೃಹತ್‌. ಹಾಗಿದ್ದೂ ಸೇವಾ ಶುಲ್ಕ ಹೆಚ್ಚಳಕ್ಕೆ ಗ್ರಾಹಕ ಸಿದ್ಧನಾಗಲಿ.

ಸದ್ಯಕ್ಕೆ ಬದಲಾಗದ ಹಲವು ಅಂಶಗಳು ವಿಲೀನ ಸಂದರ್ಭದಲ್ಲಿ ಕಾಣುತ್ತವೆ. ಇನ್ಸೂರೆನ್ಸ್‌, ಮ್ಯೂಚುಯೆಲ್‌ ಫ‌ಂಡ್‌ನ‌ಂತಹ ಮೂರನೆಯವರ ಸೇವೆಗಳ ವಿಚಾರದಲ್ಲಿ ಬದಲಾವಣೆ ಇರಲಿಕ್ಕಿಲ್ಲ. ಡೆಬಿಟ್‌ ಕಾರ್ಡ್‌ ರಿವಾರ್ಡ್ಸ್‌ ಪಾಯಿಂಟ್‌, ಕ್ಯಾಶ್‌ಬ್ಯಾಕ್‌ ಆಫ‌ರ್‌ಗಳು ಆಯಾ ಸಂಸ್ಥೆಗಳ ನಡುನ ಒಪ್ಪಂದದ ಅನುಸಾರ ಜಾರಿಯಲ್ಲಿರುವುದರಿಂದ ಆ ಒಪ್ಪಂದದ ಅವಧಿ ಪೂರೈಸುವವರೆಗೂ ಬದಲಾಗುವುದಿಲ್ಲ. ಒಪ್ಪಂದದ ಮುಂದುವರಿಕೆಗೆ ಸಹಿ ಹಾಕುವ ಸಂದರ್ಭದ ಬದಲಾವಣೆಗಳು ಮುಂದಿನ ದಿನಗಳನ್ನಷ್ಟೇ ಪ್ರಭಾವಿಸುತ್ತದೆ.

ರಾಜಕೀಯ ಪಕ್ಷಗಳ ವಿಲೀನದಂತೆ ಬ್ಯಾಂಕ್‌ಗಳ ವಿಲೀನವೂ ಇತಿಹಾಸದಲ್ಲಿ ಪದೇ ಪದೆ ಘಟಿಸುತ್ತಿರುವಂತದು. ಇದು ಎಲ್ಲ ದೇಶಗಳಲ್ಲೂ ನಡೆದಿದೆ. ಇತ್ತೀಚೆಗಷ್ಟೇ, 2015ರಲ್ಲಿ  ಭಾರತದಲ್ಲಿ ಕೊಠಕ್‌ ಮಹಿಂದ್ರಾ ಬ್ಯಾಂಕ್‌ ಹಾಗೂ ಐಎನ್‌ಜಿ ವೈಶ್ಯಾ ಬ್ಯಾಂಕ್‌ ವಿಲೀನಗೊಂಡಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ ಖಾತೆಯ ನಂಬರ್‌ನ ಬದಲಾವಣೆ, ಇ ಬ್ಯಾಂಕಿಂಗ್‌ ಪರವಾನಗಿಯ ಮಾರ್ಪಾಡು ಸೇರಿದಂತೆ ಹಲವು ತಾಂತ್ರಿಕ ವಿಚಾರಗಳಲ್ಲಿ ಗ್ರಾಹಕ ಒಂದು ಮಟ್ಟಿನ ಸಮಸ್ಯೆ ಅನುಭಸುವಂತಾಗುವಂತದಂತೂ ನಿಜ. ಬ್ಯಾಂಕ್‌ಗಳ ವಿಲೀನ ನಿರ್ಧಾರದ ಹಿಂದೆ ಬ್ಯಾಂಕ್‌ ಆಡಳಿತದ ಅನುಕೂಲಗಳ ಲೆಕ್ಕಾಚಾರವಿರುತ್ತದೆಯೇ ವಿನಃ ಗ್ರಾಹಕ ಪರ ಚಿಂತನೆ ಮುದ್ದಾಂ ಇರುವುದಿಲ್ಲ. ಇಂತಹ ಪ್ರಕ್ರಿಯೆಯಲ್ಲಿ ಒಂದೊಮ್ಮೆ ಗ್ರಾಹಕರಿಗೆ ಲಾಭ ಒದಗಿಸದರೆ ಅದು ಆಕಸ್ಮಿಕವೇ ವಿನಃ ಉದ್ದೇಶಪೂರ್ವಕವಲ್ಲ!

– ಮಾ.ವೆಂ.ಸ.ಪ್ರಸಾದ್‌
 

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.