ಶೇರಲ್ಲಿ ಹಣ ಹೂಡುವ ಮುನ್ನ…ಗೊತ್ತಿರಲೇ ಬೇಕಾದ ಸಂಗತಿಗಳು


Team Udayavani, Jun 25, 2018, 1:17 PM IST

hoodike-maduva-munna.jpg

ಶೇರು ಮಾರುಕಟ್ಟೆ ಎಂದರೆ ಭಯ ಬೀಳುವ ಮಂದಿ ಹೆಚ್ಚು. ಕಳೆದು ಕೊಳ್ಳುವವರಷ್ಟೇ ಪಡೆದು ಕೊಳ್ಳು ವರ್ಗವಿದೆ.  ಕಳೆದು ಕೊಳ್ಳುವ ಮಂದಿಯ ಕಣ್ಣಿಗೆ ಅದುಹೇಗೆ ಹೂಡಿಕೆ ಮಾಡಿ, ದುಡ್ಡು ಮಾಡ್ತಾರೆ ಅನ್ನೋ ಆಶ್ಚರ್ಯ ಇದ್ದೇ ಇರುತ್ತದೆ. ಇದಕ್ಕೆಲ್ಲಾ ಕಾರಣ ಹೂಡಿಕೆ ಮಾಡುವ ಮೊದಲು ಮಾರುಕಟ್ಟೆಯ  ಲೆಕ್ಕಾಚಾರಗಳನ್ನು  ತಿಳಿದಿರುತ್ತಾರೆ. ನೀವು ಹೂಡಿಕೆ ಮಾಡುವುದಾದರೆ, ಇಲ್ಲೊಂದಷ್ಟು ಮಾಹಿತಿ ಇದೆ.

ಯಾವುದೇ ಸರಕಿಗೂ ಒಂದು ಮಾರುಕಟ್ಟೆ ಇದ್ದರೆ ಅದರ ಮೌಲ್ಯದ ಸಂಪೂರ್ಣ ಲಾಭ ಪಡೆಯಬಹುದು. ಅಂತಹ ಒಂದು ಮಾರುಕಟ್ಟೆ ಇದ್ದರೇನೇ ಒಂದು ವಸ್ತುವಿನ ಆಂತರಿಕ ಮೌಲ್ಯವು ಮಾರುಕಟ್ಟೆ ಬೆಲೆಯಾಗಿ ಪರಿವರ್ತಿತವಾಗುವುದು. ಒಂದು ವ್ಯವಸ್ಥಿತವಾದ ಪ್ರಬುದ್ಧ ಮಾರುಕಟ್ಟೆ ಎಲ್ಲಾ ಕೊಡು-ಕೊಳ್ಳುವವರಿಗೂ ಅತ್ಯಗತ್ಯ.

ಭಾರತದಲ್ಲಿ ಒಂದು ಅಂತಾರಾಷ್ಟ್ರೀಯ ಗುಣಮಟ್ಟದ ಶೇರು ಮಾರುಕಟ್ಟೆ ಅಥವಾ ಸ್ಟಾಕ್‌ ಎಕ್ಸ್‌ಚೇಂಜ್‌ ಇರುವುದು ನಮಗೆಲ್ಲಾ ಬರೇ ಹೆಮ್ಮೆಯ ವಿಷಯ ಮಾತ್ರವಲ್ಲ. ಅದರಿಂದಾಗಿ ಬರುವ ವಿದೇಶೀ ಬೇಡಿಕೆಯಿಂದಾಗಿ ನಮಗೆ ಲಾಭದಾಯಕವೂ ಆಗಿದೆ. ಈ ಮಾರುಕಟ್ಟೆಗಳಲ್ಲಿ ಶೇರು ಮಾರಾಟ ಅಲ್ಲಿನ ಸದಸ್ಯರಾದಂತಹ ಬ್ರೋಕರ್‌ ಅಥವಾ ಮಧ್ಯವರ್ತಿಗಳ ಮೂಲಕ ನಡೆಯುತ್ತವೆ.   

ಭಾರತದಲ್ಲಿ ಮುಖ್ಯವಾಗಿ ಎರಡು ಶೇರು ಮಾರುಕಟ್ಟೆಗಳು ಇವೆ. ಖಾಸಗಿ ಒಡೆತನದ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ (ಬಿ.ಎಸ್‌.ಇ) ಮತ್ತು ಸರಕಾರೀ ಒಡೆತನದ ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌.ಎಸ್‌.ಇ). ಇದರಲ್ಲಿ ಬಿ.ಎಸ್‌.ಇ 1875 ರಲ್ಲಿ 318 ಖಾಸಗೀ ಬ್ರೋಕರ್‌ ಅಥವಾ ದಲ್ಲಾಳಿಗಳ ತಲಾ ರೂ 1 ಬಂಡವಾಳದೊಂದಿಗೆ ಆರಂಭಗೊಂಡಿತು. ಇದು ಮುಂಬೈನ ದಲಾಲ್ ಸ್ಟ್ರೀಟ್‌ ನಲ್ಲಿದೆ. ಇದರ ಫೋಟೋ ಅತ್ಯಂತ ಪ್ರಚಲಿತವಾಗಿ ಎಲ್ಲೆಡೆ ಕಂಡುಬರುತ್ತದೆ. ಕ್ರಮೇಣ 1992 ರಲ್ಲಿ ಸರಕಾರವು ಬಜಾರು ಸುಧಾರಣೆಯ ಉದ್ದೇಶದಿಂದ ವಿತ್ತೀಯ ಸಂಸ್ಥೆಗಳ ಮೂಲಕ ತನ್ನದೇ ಆದ ಎನ್‌.ಎಸ್‌.ಇ ಯನ್ನು ಸ್ಥಾಪಿಸಿತು. ಇದರಿಂದಾಗಿ ಬಿ.ಎಸ್‌.ಇ ಯ ದಲಾಲಿಗಳ  ಕಪಿಮುಷ್ಠಿಯಿಂದ ಭಾರತದ ಶೇರು ವ್ಯವಹಾರವನ್ನು ಬಿಡಿಸಿಕೊಳ್ಳುವಲ್ಲೂ, ಮಾರುಕಟ್ಟೆಯಲ್ಲಿ ಅಗತ್ಯದ ಸುಧಾರಣೆಗಳನ್ನು ಆನುಷ್ಠಾನಕ್ಕೆ ತರುವಲ್ಲೂ ಸರಕಾರಕ್ಕೆ ಅನುಕೂಲವಾಯಿತು. ಇದೊಂದು ಚರಿತ್ರಾರ್ಹ ದಿಟ್ಟ ಹೆಜ್ಜೆ. ಇವೆರಡು ಅಲ್ಲದೆ ಹಲವು ಪ್ರಾದೇಶಿಕ ಶೇರು ಮಾರುಕಟ್ಟೆಗಳೂ ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಉದಾ, ಬೆಂಗಳೂರು, ಮಂಗಳೂರು, ದಿಲ್ಲಿ, ಚೆನ್ನೈ, ಕಲ್ಕತ್ತಾ, ಕೊಚ್ಚಿ, ಇತ್ಯಾದಿ. ಅವೆಲ್ಲಾ ಒಂದೊಂದಾಗಿ ಈಗ ಕ್ರಮೇಣ ಮುಚ್ಚಿ ಹೋಗಿವೆ.

ಈ ಎಲ್ಲಾ ಮಾರುಕಟ್ಟೆಗಳಲ್ಲಿ ನಾವೆಲ್ಲಾ ಅಲ್ಲಿನ ನೋಂದಾಯಿತ ಬ್ರೋಕರ್‌ ಇಲ್ಲವೇ ದಲಾಲಿಗಳ ಮೂಲಕವೇ ಕೊಡು-ಕೊಳ್ಳುವ ವ್ಯವಹಾರ ನಡೆಸಬೇಕಾಗುತ್ತದೆ. ಮಾರುಕಟ್ಟೆಯ ಹೊರಗೆ (ಆಫ್ ಮಾರ್ಕೆಟ… ಟ್ರೇಡ್‌) ಖಾಸಗಿಯಾಗಿ ಶೇರುಗಳ ಮಾರಾಟ-ಖರೀದಿ ನಡೆಸಬಹುದಾದರೂ ಅದರಿಂದ ನಮಗೆ ಒಂದು ವ್ಯವಸ್ಥಿತ ಮಾರುಕಟ್ಟೆಯ ಪ್ರಯೋಜನಗಳು (ಉತ್ತಮ ಬೆಲೆ, ಹಣಪಾವತಿಯ ಭರವಸೆ, ಕರ ವಿನಾಯಿತಿ ಇತ್ಯಾದಿ) ಲಭಿಸಲಾರದು.

ಮೊದಲೆಲ್ಲಾ ದಲಾಲಿಗಳೇ ಮಾರುಕಟ್ಟೆಯಲ್ಲಿ ಕೂಗಾಡಿ, ಚೀರಾಡಿ ಶೇರುಗಳ ವ್ಯಾಪಾರ ಮಾಡುತ್ತಿದ್ದರೆ ಈಗ ನೂರಕ್ಕೆ ನೂರು ಶೇರು ಮಾರಾಟ ಕಂಪ್ಯೂಟರ್‌ಗಳ ಮೂಲಕ ವಿದ್ಯುನ್ಮಾನ ಮಾಧ್ಯಮದಲ್ಲೆ ನಡೆಯುತ್ತದೆ.

ಪ್ರತಿಬಾರಿ ಟಿ.ವಿ ನೋಡುತ್ತಿರುವಾಗಲೂ ಸ್ಕ್ರೀನ್‌ ಕೆಳಗಡೆ ಬೇರೆ ಬೇರೆ ಕಂಪೆನಿಗಳ ಶೇರು ಬೆಲೆಗಳು ನಾಗಾಲೋಟದಲ್ಲಿ ಓಡುತ್ತಾ ಇರುತ್ತವೆ. ಆ ಸ್ಟ್ರಿಪYಗಳ ಮೊದಲಿಗೆ ಅವು ಯಾವ ಮಾರುಕಟ್ಟೆಯ (ಬಿ.ಎಸ್‌.ಇ ಅಥವಾ ಎನ್‌.ಎಸ್‌.ಇ) ಬೆಲೆಗಳು ಎಂದು ಬರೆದಿರುತ್ತವೆ. ಉದಾಹರಣೆಗೆ, ರಿಲಾಯನ್ಸ್‌ ಇಂಡ್‌ 1060(1050) ಎಂದಿರುತ್ತದೆ. ಇದರ ಅರ್ಥ, ಈ ಸಮಯದಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ ಕಂಪೆನಿಯ ಶೇರು ಬೆಲೆ ರೂ 1060 ಆಗಿದೆ. ಬ್ರಾಕೆಟ್ಟಿನಲ್ಲಿ ಕೊಟ್ಟ ಬೆಲೆ ರೂ 1050 ಹಿಂದಿನ ದಿನಾಂತ್ಯದ ಬೆಲೆ. ಇವಿಷ್ಟೇ ಅಲ್ಲದೆ, ಇಂಡೆಕ್ಸ್‌ ಎಂಬ ಪದವೂ ಒಂದು ಮೂಲೆಯಲ್ಲಿ ಕಾಣಬರುತ್ತದೆ. ಅದರ ಜೊತೆಗೆ ಒಂದು ಸಂಖ್ಯೆಯೂ ಮೇಲ್ಮುಖ ಅಥವ ಕೆಳಮುಖದ ಪ್ರಮಾಣವೂ, ಒಂದು ಬಾಣವೂ!

ಶೇರು ಸೂಚ್ಯಂಕ ಅಥವಾ ಇಂಡೆಕ್ಸ್‌
ಇತ್ತೀಚೆಗಂತೂ ಎಲ್ಲಾ ಮಾರುಕಟ್ಟೆಗಳಲ್ಲೂ ಎಲ್ಲಾ ಸರಕುಗಳ ಬಗ್ಗೆಯೂ ಇಂಡೆಕ್ಸ… ಅಥವಾ ಸೂಚ್ಯಂಕ ಎಂಬ ಪದದ ಬಳಕೆ ಆಗುತ್ತದೆ. ಉದಾ: ಶೇರು ಸೂಚ್ಯಂಕ, ಡಾಲರ್‌ ಸೂಚ್ಯಂಕ, ಬೆಲೆಯೇರಿಕೆಯ ಸೂಚ್ಯಂಕ, ಇತ್ಯಾದಿ.
ನಾವೆಲ್ಲಾ ಸಾಮಾನ್ಯವಾಗಿ ಹೇಳುತ್ತೇವೆ, ನಾವು ಚಿಕ್ಕವರಿ¨ªಾಗ ಅಷ್ಟು ರೂಪಾಯಿಗಳಿಗೆ ಸಿಗುತ್ತಿದ್ದ ಈ ಸರಕಿಗೆ ಈಗ ಇಷ್ಟು ರೂಪಾಯಿಯಾಗಿದೆ ಅಂತ. ಆವಾಗ ರೂ 250 ಇರುವ ಯಾವುದೋ ಒಂದು ಸೀಮೆಯ ಅಂಬಟೆಕಾಯಿಗೆ ಈಗಿನ ಬೆಲೆ ರೂ 2500. ಅಂದಿನ ರೂ 250 ಅನ್ನು 100 ಅಂಕಗಳು ಎಂದು ಪರಿಗಣಿಸಿದಲ್ಲಿ ಇಂದಿನ ರೂ 2500 ಎಷ್ಟು ಅಂಕಗಳಾಗುತ್ತದೆ ಎಂಬುದೇ ಸೂಚ್ಯಂಕದ ಲೆಕ್ಕಾಚಾರ. ಅದು (2500/250)*100=1000. ಅಂದರೆ ಅಂಬಟೆಕಾಯಿಯ ಇಂದಿನ ಸೂಚ್ಯಂಕ 1000. ಸೂಚ್ಯಂಕದ ಲೆಕ್ಕದಲ್ಲಿ ಯಾವುದೋ ಒಂದು ಸರಕಿನ ಯಾವುದೇ ಒಂದು ಸಮಯದ ತಳಹದಿಯ ಆಧಾರದಲ್ಲಿ ಇಂದಿನ  ಬೆಲೆ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕಲಾಗುತ್ತದೆ.   

ಶೇರುಗಳ ಆಟ
ಪತ್ರಿಕೆಗಳಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಶೇರುಗಳನ್ನೂ ಅವುಗಳ ಬೆಲೆಗಳನ್ನೂ ಬೇರೆ ಬೇರೆ ಗುಂಪುಗಳಲ್ಲಿ ಕೊಟ್ಟಿರುತ್ತಾರೆ. ಕೆಲವು ಶೇರುಗಳು ಎ ಗ್ರೂಪ್‌ ಕೆಳಗಡೆ ಬಂದರೆ ಇನ್ನು ಕೆಲವು ಬಿ, ಇನ್ನೂ ಕೆಲವು ಜೆಡ್‌ಗೂÅಪ್‌. ಏನೀ ಗ್ರೂಪ್‌ಗ್ಳು ? ಅವುಗಳ ಅರ್ಥವೇನು? ಅವನ್ನು ನಾವು ಯಾವ ರೀತಿ ಬಳಸಿಕೊಳ್ಳಬಹುದು?

ವಾಸ್ತವದಲ್ಲಿ, ಈ ಗ್ರೂಪ್‌ಗ್ಳು ಕಂಪೆನಿಗಳ ಗಾತ್ರ, ಸಾಧನೆ, ಲಿಕ್ವಿಡಿಟಿ, ಕಾರ್ಪೋರೇಟ್‌ ನಡವಳಿಕೆ, ಮಾರುಕಟ್ಟೆಯ ಅಗತ್ಯ ಹಾಗೂ ಹೂಡಿಕೆದಾರರ ಅನುಕೂಲಕ್ಕಾಗಿಯೇ ಮಾಡಲ್ಪಟ್ಟಿವೆ. ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಎಂಬಲ್ಲಿ ಶೇರುಗಳ 6 ಗುಂಪುಗಳಿವೆ. ಅವುಗಳ ಲಕ್ಷಣಗಳನ್ನು ಅರಿತು ವ್ಯವಹರಿಸಿದರೆ ಹೆಚ್ಚು ಸಹಾಯಕ.

ಎ ಗ್ರೂಪ್‌: ಇದು ಅತ್ಯಂತ ಹೆಚ್ಚು ಮಾರಾಟವಾಗುವ ಶೇರುಗಳ ಗುಂಪು. ಯಾವಾಗ ಬೇಕಾದರೂ ಕೊಡು-ಕೊಳ್ಳುವ ಅವಕಾಶ ಈ ಶೇರುಗಳಲ್ಲಿ ಇದೆ. ಅಂದರೆ ಇವು ತುಂಬಾ ಲಿಕ್ವಿಡ್‌ ಶೇರುಗಳು; ಯಾವಾಗ ಬೇಕಾದರೂ ಮಾರಾಟ ಮಾಡಿ ಹಣಮ ರೂಪಕ್ಕೆ ಪರಿವರ್ತಿಸಿಕೊಳ್ಳಬಹುದಾದ ಶೇರುಗಳು. ಸದಾ ಬೇಡಿಕೆ ಇರುವಂತವು. ಈ ಕಂಪೆನಿಗಳು ಹೂಡಿಕೆದಾರರೊಡನೆ ಉತ್ತಮವಾಗಿ, ಪಾರದರ್ಶಕವಾಗಿ ವ್ಯವಹರಿಸುವ ದಾಖಲೆ ಉಳ್ಳವುಗಳು. ಸುಮಾರಾಗಿ ಈ ಕಂಪೆನಿಗಳನ್ನು ಉತ್ತಮ ಗುಣಮಟ್ಟದ ಹೂಡಿಕೆಯೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಶೇರುಗಳು ರೋಲಿಂಗ್‌ ಸೆಟಲ್ಮೆಂಟ್‌ ಅಂದರೆ ಸೆಶನ್‌ ನಡೆಯುತ್ತಿದ್ದಂತೆ ಯಾವಾಗ ಬೇಕಾದರೂ ಸೆಟಲ್ (ಸ್ಕ್ವಾರ್‌ ಅಪ್‌) ಮಾಡಿಕೊಳ್ಳಬಹುದಾಗಿದೆ. ಇಂದು ಬೆಳಗ್ಗೆ ಕೊಂಡದ್ದನ್ನು ಮಧ್ಯಾಹ್ನ ಅಥವಾ ನಾಳೆ ಕೊಟ್ಟು ಸೆಟಲ್ ಮಾಡಿಕೊಳ್ಳಬಹುದು. ಶೇರಿನ ಡೆಲಿವರಿ ತೆಗೆದುಕೊಳ್ಳಬೇಕೆಂದೇನೂ ಕಡ್ಡಾಯವಿಲ್ಲ. ಇದರಿಂದಾಗಿ ಅ ಗ್ರೂಪ್‌ ಶೇರುಗಳಲ್ಲಿ ಡೇ-ಟ್ರೇಡಿಂಗ್‌ ಅಥವಾ ದಿನದೊಳಗಿನ ಮಾರಾಟ ಸಾಧ್ಯ. ಡೆಲಿವರಿ ಬೇಕಾದವರು ನಿಗದಿತ ಅವಧಿಯ ಅಂತ್ಯಕ್ಕೆ (ಟಿ+2, ಅಂದರೆ ಟ್ರೇಡ್‌ ಆದ 2 ನೇ ದಿನ) ಶೇರುಗಳನ್ನು ಡೆಲಿವರಿ ತೆಗೆದುಕೊಳ್ಳಲೂ ಬಹುದು.

ಬಿ ಗ್ರೂಪ್‌- ಇವೂ ಎ ಗ್ರೂಪಿನಂತೆ ಉತ್ತಮ ಶೇರುಗಳೇ. ಆದರೆ ಎ ಗ್ರೂಪಿನಿಂದ ಚಿಕ್ಕ ಕಂಪೆನಿಗಳು. ಮಿಡ್‌-ಕಾಪ್‌ ಮತ್ತು ಸ್ಮಾಲ್‌-ಕಾಪ್‌ ಎಂಬ ಮಧ್ಯಮ ಮತ್ತು ಸಣ್ಣ ಬಂಡವಾಳದ ಕಂಪೆನಿಗಳು ಇದರಲ್ಲಿ ಬರುತ್ತವೆ. ಇಲ್ಲೂ ಎ ಗ್ರೂಪಿನಂತೆ  ರೋಲಿಂಗ್‌ ಸೆಟಲ್ಮೆಂಟ್‌ ಇದ್ದು ದೈನಂದಿನ ಡೇ ಟ್ರೇಡಿಂಗ್‌ ಸಾಧ್ಯ.

ಟಿ ಗ್ರೂಪ್‌ -ಈ ಗ್ರೂಪ್‌ ಶೇರುಗಳನ್ನು ಟ್ರೇಡ್‌-ಟು-ಟ್ರೇಡ್‌ ಸೆಟಲ್ಮೆಂಟ… ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಪ್ರತಿಯೊಂದು ಟ್ರೇಡ್‌ ಅಥವಾ ಡೀಲ… ಅನ್ನು ಅದರ ನಿಗದಿತ ಸಮಯದ ಕೊನೆಗೆ ಸೆಟಲ್ ಮಾಡಿಕೊಳ್ಳಬೇಕು. ರೋಲಿಂಗ್‌ ಸೆಟಲ್‌ ಮೆಂಟಿನಂತೆ ದಿನದೊಳಗೇ ಕೊಂಡು ಮಾರುವಂತಿಲ್ಲ. ಕೊಂಡವರು ಕಡ್ಡಾಯವಾಗಿ ದುಡ್ಡುಕೊಟ್ಟು ಶೇರುಗಳ ಡೆಲಿವರಿ ತೆಗೆದುಕೊಳ್ಳಬೇಕು ಹಾಗೂ ಕೊಟ್ಟವರು ಕಡ್ಡಾಯವಾಗಿ ಶೇರು ಕೊಟ್ಟು ದುಡ್ಡು ಪಡೆದುಕೊಳ್ಳಬೇಕು.

ಈ ಶೇರುಗಳಿಗೆ ಟ್ರೇಡಿಂಗ್‌ ನಡೆದ ಎರಡನೇ ದಿನ (ಟಿ+2) ಸೆಟಲ್ಮೆಂಟ್‌ ನಡೆಯುತ್ತದೆ. ಶೇರುಗಳ ಬೆಲೆಯಲ್ಲಿ ಅತಿಹೆಚ್ಚಿನ  ಏರಿಳಿತ ಹಾಗೂ ಜೂಜಾಟವನ್ನು ತಡೆ ಹಿಡಿಯಲು ಅವುಗಳನ್ನು ಈ ಗ್ರೂಪಿನೊಳಕ್ಕೆ ತುರುಕುತ್ತಾರೆ. ಇವುಗಳ ಸೆಟಲ್ಮೆಂಟ್‌ ರೀತಿಯಿಂದಾಗಿ ಇವುಗಳಲ್ಲಿ ಊಹಾತ್ಮಕ ಹೂಡಿಕೆ (ಸ್ಪೆಕ್ಯುಲೇಶನ್‌) ಸುಲಭವಲ್ಲ.

ಎಸ್‌ ಗ್ರೂಪ್‌-ಮೂಲತಃ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಲಿಸ್ಟ್‌ ಆದ ಚಿಕ್ಕ ಮತ್ತು ಮಧ್ಯಮ ಗಾತ್ರದ ಕಂಪೆನಿಗಳ ಶೇರುಗಳನ್ನು ಈ ಸಮೂಹದಲ್ಲಿ ಇಡಲಾಗಿದೆ. ಇವುಗಳ ಬಿಸಿನೆಸ್‌ ರೂ 5 ಕೋಟಿಯ  ಒಳಗೆ ಹಾಗೂ ಹೂಡಿಕೆ ರೂ 3 ಕೋಟಿಯ ಒಳಗೆ ಇರುತ್ತವೆ. ಈ ಕಂಪೆನಿಯ ದೊಡ್ಡ ಪ್ರಮಾಣದ (75% ರಷ್ಟರ ಮಟ್ಟಿಗೂ) ಶೇರುಗಳನ್ನು ತಮ್ಮಲ್ಲೆ ಇಟ್ಟುಕೊಂದಿದ್ದು ಬಹಳ ಕಡಿಮೆ ಶೇರುಗಳು ಸಾರ್ವಜನಿಕವಾಗಿ ಲಭ್ಯವಾಗಿರಬಹುದು. ಹಾಗಾಗಿ ಬೆಲೆ ಯದ್ವಾತದ್ವಾ ಏರಿಳಿಯಬಹುದು. ಈ ಗ್ರೂಪಿನ ಶೇರುಗಳಲ್ಲಿ ಜಾಸ್ತಿ ಎಚ್ಚರ ಅಗತ್ಯ.

ಟಿ.ಎಸ್‌ ಗ್ರೂಪ್‌-ಟಿ.ಎಸ್‌ ಗ್ರೂಪ್‌ ಎಂದರೆ ಎಸ್‌ ಕೂಡಾ ಹೌದು; ಟಿ ಯೂ ಹೌದು. ಎರಡರ ಹೈಬ್ರಿಡ್‌! ಇವು ಎಸ್‌ಗೆÅàಡ್‌ ಶೇರುಗಳು ಕಡ್ಡಾಯವಾಗಿ ಟಿ ಗ್ರೂಪಿನಂತೆ ಟ್ರೇಡ್‌-ಟು-ಟ್ರೇಡ್‌ ರೀತಿಯಲ್ಲೆ ಸೆಟಲ್ಮೆಂಟ್‌ ಆಗುವಂತಹದ್ದು. ದಿನದೊಳಗಿನ ಡೇ ಟ್ರೇಡ್‌ ಇದರಲ್ಲಿ ಇಲ್ಲದ ಕಾರಣ, ಹಾಗೂ ಶೇರುಗಳ ಸಂಖ್ಯೆಯೂ ಅತಿಕಡಿಮೆ ಇರುವ ಕಾರಣ ಇದರಲ್ಲಿ ಲಿಕ್ವಿಡಿಟಿಯ ಕೊರತೆ ಕಾಣುವ ಅಪಾಯ ಇದೆ. ಅಂದರೆ, ಮನಬಂದಂತೆ ಕೊಡ-ಕೊಳ್ಳುವ ಅವಕಾಶಗಳು ಕಡಿಮೆ.  

ಜೆಡ್‌ ಗ್ರೂಪ್‌- ಇದು ಅಪಾಯದ ಗ್ರೂಪ್‌. ಅಂದರೆ ಯಾವುದೋ ಕಾರಣಕ್ಕೆ ಮಾರುಕಟ್ಟೆಯ ಕಾಯಿದೆಗಳನ್ನು ಮುರಿದ ಹಿನ್ನೆಲೆಯಿರುವ ಅಥವಾ ಹೂಡಿಕೆದಾರರ ಸಮಸ್ಯೆಗಳಿಗೆ ಕಿವಿಕೊಡದ ಕಂಪೆನಿಗಳನ್ನು ಈ ಸಮೂಹದಲ್ಲಿ ಕೂಡಿ ಹಾಕಲಾಗುತ್ತದೆ. ಈ ಕಂಪೆನಿಗಳ ಬಗ್ಗೆ ಮಾಹಿತಿಯ ಕೊರತೆಯೂ ಇರಬಹುದು. ಈ ಶೇರುಗಳ ಬೆಲೆಗಳ
 ಹಿಂದೆ ದ್ರವ ವ್ಯವಹಾರಗಳ ಕೈವಾಡ ಇರುವ ಸಾಧ್ಯತೆಗಳೂ ಇವೆ. ಬಹಳ ಕಡಿಮೆ ಬೆಲೆಗೆ ಬಿಕರಿಯಾಗುವ ಕಾರಣ ಇಲ್ಲಿನ ಬಹುತೇಕ ಶೇರುಗಳನ್ನು ಪೆನ್ನಿ ಸ್ಟಾಕ್ಸ್‌ ಎಂದೇ ಕರೆಯುತ್ತಾರೆ. ಈ ಗ್ರೂಪಿನಲ್ಲಿ ವ್ಯವಹರಿಸುವ ಮುನ್ನ ಸರಿಯಾದ ಮಾಹಿತಿಯನ್ನು ಪಡೆದು ಎಚ್ಚರಿಕೆಯಿಂದಲೇ ವ್ಯವಹರಿಸಬೇಕು.

ಶೇರು ಮಾರುಕಟ್ಟೆಯ ಕೆಲವು ಸೂಚ್ಯಂಕಗಳು ಈ ರೀತಿಇವೆ:
1. ಬಾಂಬೆ ಸೆನ್ಸೆಕ್ಸ್‌- 1986 ರಲ್ಲಿ 30 ಆಯ್ದ ಶೇರುಗಳ 1978-1979 ರ ಸರಾಸರಿ ಬೆಲೆಯನ್ನು  100 ಎಂದಿಟ್ಟುಕೊಂಡು ಆರಂಭಗೊಂಡದ್ದು. 1996 ರಲ್ಲಿ ಇನ್ನೊಂದು ಇಂಡೆಕ್ಸ್‌ 100 ಶೇರುಗಳ ಬಿ.ಎಸ್‌.ಇ-100 ಆರಂಭಗೊಂಡಿತು.

2. ನ್ಯಾಶನಲ್ ಇಂಡೆಕ್ಸ್‌ -1983-84 ರ 100 ಶೇರುಗಳ ಸರಾಸರಿ ಬೆಲೆಯನ್ನು 100 ಎಂದಿಟ್ಟುಕೊಂಡು 1989 ರಲ್ಲಿ ಆರಂಭಗೊಂಡಿದ್ದು.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.