ಆನ್‌ಲೈನ್‌ ಲೋನ್ ‌ಆ್ಯಪ್ ‌ಸಾಲದ ಆಪತ್ತು ಜೋಕೆ.!


Team Udayavani, Dec 28, 2020, 7:20 PM IST

ಆನ್‌ಲೈನ್‌ ಲೋನ್ ‌ಆ್ಯಪ್ ‌ಸಾಲದ ಆಪತ್ತು ಜೋಕೆ.!

ಸಾಮದರ್ಭಿಕ ಚಿತ್ರ

ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ಸಾಲ ಕೊಡುವ ಯೋಜನೆಯೊಂದು ಈಗ ಸುದ್ದಿಯಲ್ಲಿದೆ. ಹೀಗೆ ಸಾಲ ಕೊಡುವುದು ಬ್ಯಾಂಕ್‌ ಅಲ್ಲ. ಆನ್‌ಲೈನ್‌ನ ಆ್ಯಪ್‌ಗಳು! ಹೀಗೆ ಸಾಲ ಪಡೆಯುವುದರಿಂದ ಏನೇನೆಲ್ಲಾ ತೊಂದರೆಗಳಿವೆ ಗೊತ್ತೇ?

ಆನ್‌ಲೈನ್‌ ಮೂಲಕ ಸಾಲ ಕೊಡುವ ಆ್ಯಪ್‌ಗಳು ಕಳೆದೆರಡು ವರ್ಷಗಳಿಂದ ಚಾಲನೆಯಲ್ಲಿದ್ದರೂ ಅವು ಡಿಮ್ಯಾಂಡ್‌ ಪಡೆದುಕೊಂಡಿದ್ದು ಕೋವಿಡ್ ಲಾಕ್‌ಡೌನ್‌ ಕಾಲದಲ್ಲಿ. ಈಸಮಯದಲ್ಲಿ ಅಸಂಖ್ಯಾತ ಜನರ ಕೆಲಸಹೋಯಿತು. ಸಂಬಳ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ, ಬಾಡಿಗೆ ಕಟ್ಟುವುದರಿಂದ ಹಿಡಿದು ಯಾವ ಖರ್ಚುಗಳಿಗೂ ಲಾಕ್‌ಡೌನ್‌ ಇರಲಿಲ್ಲ. ಬಹುತೇಕ ಎಲ್ಲಾ ಬಿಸಿನೆಸ್‌ಗಳು ಸ್ಥಗಿತಗೊಂಡಿದ್ದವು. ಜನರ ಕೈಲಿ ಹಣವೇಇಲ್ಲದಿದ್ದಾಗ, ಅವರಿಗೆಲ್ಲಾ ಸುಲಭವಾಗಿ, ಕ್ಷಿಪ್ರಗತಿಯಲ್ಲಿ ಸಿಗುವ ಈ ಆನ್‌ಲೈನ್‌ ಸಾಲದ ಆ್ಯಪ್‌ಗಳು ಆಪತ್ಭಾಂಧವರಂತೆ ಕಂಡದ್ದು ಸುಳ್ಳಲ್ಲ.

ಸಾಲ ಪಡೆಯೋದು ಸುಲಭ! :  ಈ ಆನ್‌ಲೈನ್‌ ಲೋನ್‌ಆ್ಯಪ್‌ಗಳಲ್ಲಿ ಸಾಲತೊಗೊಳ್ಳೋದು ಬಹಳಸುಲಭ. ನಿಮ್ಮ ಮೊಬೈಲ್‌ನಲ್ಲಿ ಅವರ ಆ್ಯಪ್‌ ಅನ್ನು ಡೌನ್‌ ಲೋಡ್‌ ಮಾಡುವುದು, ಆ ಸಮಯದಲ್ಲಿ ಅವರು ನಮ್ಮ ಮೊಬೈಲಿನ ಕಾಂಟಾಕ್ಟ್ ಲಿಸ್ಟ್ಮತ್ತು SMS ಮೆಸೇಜ್‌ಗಳನ್ನುಓದಲು ನಮ್ಮ ಅನುಮತಿಕೋರುತ್ತಾರೆ. ನಾವು ಆ ಕಂಡೀಷನ್‌ಗೆ ಒಪ್ಪಿದರಷ್ಟೆ ಆ್ಯಪ್‌ ಉಪಯೋಗಿಸಲು ಸಾಧ್ಯವಾಗುವುದು. ನೀವು ಸರಿ ಎಂದು ಒಪ್ಪಿದೊಡನೆಯೇ,ಮುಂದಿನ ಹಂತ, ನಿಮ್ಮ ಆಧಾರ್‌ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ಕಾಪಿಗಳನ್ನು ಅಲ್ಲಿ ಲಗತ್ತಿಸುವುದು,ಜೊತೆಗೆ ನಿಮ್ಮ ಬ್ಯಾಂಕ್‌ ಅಕೌಂಟ್‌ನ ಮಾಹಿತಿ ನೀಡುವುದು. ಇಷ್ಟುಮಾಹಿತಿಗಳನ್ನು ನೀವು ಕೊಟ್ಟ ಅರ್ಧ ಗಂಟೆಯಲ್ಲಿ ನಿಮಗೆ ಸಾಲಮಂಜೂರಾಗಿ, ನಿಮ್ಮ ಅಕೌಂಟ್‌ಗೆ ಹಣ ಬಂದುಬಿಡುತ್ತದೆ. ಹೆಚ್ಚಿನ ಸಂದರ್ಭದಲ್ಲಿ, ನಿಮ್ಮ ತಿಂಗಳ ಸಂಬಳದಷ್ಟುಮಾತ್ರ ಸಾಲ ಮಂಜೂರಾಗುತ್ತದೆ.

ಬಡ್ಡಿಯನ್ನು ಕಟ್‌ ಮಾಡಿಕೊಳ್ತಾರೆ! :  ಅರೇ, ಸಾಲ ಪಡೆಯುವುದು ಇಷ್ಟುಸುಲಭವಾ? ಕ್ಯೂ ನಿಲ್ಲುವಂತಿಲ್ಲ. ಕಾಗದ ಪಾತ್ರಗಳಿಗೆ ಸಹಿ ಹಾಕುವಂತಿಲ್ಲ.ದಾಖಲೆಗಳನ್ನು ತೋರುವಂತೆಯೂ ಇಲ್ಲ ಅಂದಮೇಲೆ ಹೀಗೆ ಸಾಲ ಪಡೆಯುವುದೇ ಅನುಕೂಲಕರ ಅಲ್ಲವೆ ಎಂದು ನೀವೀಗ ಯೋಚಿಸುತ್ತಿದ್ದರೆ, ಅಲ್ಲೇ ನೀವುಎಡವುತ್ತಿರುವುದು. ನಿಮ್ಮ ತಿಂಗಳ ಸಂಬಳಹತ್ತು ಸಾವಿರ ಎಂದರೆ, ಈ ಆ್ಯಪ್‌ನವರು ನಿಮಗೆ ಹತ್ತು ಸಾವಿರ ಸಾಲ ಕೊಡಲು ಒಪ್ಪುತ್ತಾರೆ. ಬಡ್ಡಿ

ಜಾಸ್ತಿಯೇ? ಉಹೂ! ಇಲ್ಲ. ಬಡ್ಡಿ ಕೂಡ ಕೇವಲ 1%, ಮತ್ತೇನು ಸಮಸ್ಯೆ ಅಂದಿರಾ? ಅವರ ಪ್ರಾಸೆಸಿಂಗ್ ಫೀಸ್‌ ಬಹಳ ದುಬಾರಿ. ಹತ್ತು ಸಾವಿರ ಸಾಲ ಕೊಡಲು ಪ್ರಾಸೆಸಿಂಗ್‌ ಫೀಸ್‌ ಕನಿಷ್ಠವೆಂದರೂ 3000 ತೊಗೋತಾರೆ. GST (ಅದನ್ನು ಸರ್ಕಾರಕ್ಕೆ ಕಟ್ತಾರೋ, ಇಲ್ಲವೋ?) ಎಂದು ಸುಮಾರು ರೂ 500/- ಇಷ್ಟು ಹಣವನ್ನು ಕಟ್‌ ಮಾಡಿಕೊಂಡೇ ಸಾಲ ಮಂಜೂರು ಮಾಡುತ್ತಾರೆ! ಅಂದರೆ, ನೀವು 10000 ರೂಪಾಯಿ ಸಾಲ ಕೇಳಿದರೆ, ಅಷ್ಟು ಹಣ ಮಂಜೂರಾದರೂ, ಕೈಗೆ ಸಿಗುವುದು ಬರೀ ರೂ 6500/- ಮಾತ್ರ. ಹೀಗೆ ಪಡೆದ ಸಾಲವನ್ನು ನೀವು ಹತ್ತು ದಿವಸಗಳಲ್ಲಿಯೇ, ಶೇ. 1 ಬಡ್ಡಿಯ ಹಣ ಸೇರಿಸಿ 10100 ರೂ. ಗಳನ್ನು ವಾಪಸ್‌ ಮಾಡಬೇಕು. ಅಕಸ್ಮಾತ್‌ ಹಣ ಮರಳಿಸಲು ಹತ್ತು ನಿಮಿಷ ತಡವಾದರೂ ಶೇ. 100ರಂತೆ ಪೆನಾಲ್ಟಿ ಬೀಳುತ್ತದೆ.

ಅರ್ಧ ಗಂಟೆ ತಡವಾದರೆ ನಿಮ್ಮ ಕಾಂಟಾಕ್ಟ್  ಲಿಸ್ಟ್ ನಲ್ಲಿರುವವರನ್ನೆಲ್ಲಾ ಒಂದು ವಾಟ್ಸಾಪ್‌ ಗ್ರೂಪ್‌ ಮಾಡಿ, ನಿಮ್ಮ ಫೋಟೋಹಾಕಿ, ನೀವು ಫ್ರಾಡ್‌/ ಮೋಸಗಾರರು ಅಂತ ಹೇಳಿ, ಮರ್ಯಾದೆ ಕಳೀತಾರೆ. ಅಷ್ಟೇ ಅಲ್ಲದೆ, ನಿಮ್ಮ ಕಾಂಟಾಕ್ಟ್  ಲಿಸ್ಟ್ ನಲ್ಲಿರುವ ಪ್ರತಿಯೊಬ್ಬರಿಗೂ- “ಅವರು ನಿಮ್ಮ ಸಾಲಕ್ಕೆ ಶ್ಯೂರಿಟಿಯಾಗಿದ್ದರು. ನೀವು ಸಾಲ ಕಟ್ಟದಿರುವ ಕಾರಣ, ಅವರ ಮನೆಬಾಗಿಲಿಗೆ ಸಾಲ ವಸೂಲಿ ಮಾಡಲು ಜನರನ್ನುಕಳಿಸುತ್ತೇವೆ’ ಎಂಬಂತೆ ಬೆದರಿಸುತ್ತಾರೆ. ಜೊತೆಗೆ ಅವರೆಲ್ಲರಿಗೂ ಕಾಲ್‌ ಮಾಡಿ, ಸಾಲಮರಳಿಸಲು ನಿಮ್ಮ ಗೆಳೆಯರಿಗೆ ಹೇಳಿ ಎಂದೂ ಸಲಹೆ ನೀಡುತ್ತಾರೆ!

ಅದು ಚಕ್ರವ್ಯೂಹ :  ನಿಮಗೆ ಸಂಬಳ ಬರಲು ಇನ್ನೂ ಇಪ್ಪತ್ತು ದಿವಸಗಳ ಸಮಯವಿದೆ!ಸಂಬಳವೇ ಬರದೆ, ನೀವು ಹೇಗೆ ಹಣವಾಪಸ್‌ ಮಾಡಲು ಸಾಧ್ಯ? ಇಂಥಸಂದರ್ಭದಲ್ಲಿ ಮತ್ತದೇ ಆ್ಯಪ್‌ಗ್ಳುನಿಮ್ಮ ಸಹಾಯಕ್ಕೆ ಬರುತ್ತವೆ. ನೀವುಇನ್ನೆರಡು ಆ್ಯಪ್‌ಗ್ಳನ್ನು ಡೌನ್‌ ಲೋಡ್‌ ಮಾಡಿಕೊಳ್ಳಿ, ಅವುಗಳಿಂದಸಾಲ ಪಡೆಯಿರಿ, ಮೊದಲನೆಯದನ್ನು ತುಂಬಿ ಎಂಬ ಸಲಹೆ ಬರುತ್ತದೆ!ಹೀಗೆ ನಡೆಯುತ್ತದೆ ಈ ಆನ್‌ಲೈನ್‌ಮೂಲಕ ಸಾಲ ಕೊಡುವ ಆ್ಯಪ್‌ಗ್ಳ ಹಗಲು ದರೋಡೆ ಕೆಲಸ. ತಿಂಗಳ ಶುರುವಿನಲ್ಲಿ ನೀವು ಪಡೆದ ಹತ್ತುಸಾವಿರ ಸಾಲ, ತಿಂಗಳಕೊನೆಯಾಗುವ ಹೊತ್ತಿಗೆಕಡಿಮೆಯೆಂದರೂ ನಲವತ್ತುಸಾವಿರವಾಗಿರುತ್ತದೆ! ಹಾಗೂ,ಮೊದಲ ಹತ್ತು ಸಾವಿರವನ್ನು ಹೊರತು ಪಡಿಸಿ, ಉಳಿದ ಹಣವನ್ನೆಲ್ಲಾ, ನೀವು ಈ ಸಾಲ ತೀರಿಸಲೆಂದೇ ಪಡೆದಿರುತ್ತೀರಿ! ಇದೆಲ್ಲವೂ ಪೂರ್ತಿ ಅರ್ಥವಾಗುವ ಹೊತ್ತಿಗೆ ಲೋನ್‌ ಆ್ಯಪ್‌ಗಳ ಚಕ್ರವ್ಯೂಹಕ್ಕೆ ಸಿಲುಕಿರುತ್ತೀರಿ!

ಆಮಿಷಕ್ಕೆ ಮರುಳಾಗಬೇಡಿ… :  RBI ಮತ್ತು ಕರ್ನಾಟಕ Money Lenders Rules ಪ್ರಕಾರ ವರ್ಷಕ್ಕೆ 16% ಗಿಂತ ಜಾಸ್ತಿ ಬಡ್ಡಿಯನ್ನು ಯಾರಾದರೂ ತೆಗೆದುಕೊಂಡರೆ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಸಿಸಿಬಿ ಯವರಿದ್ದಾರೆ.ಯಾರಾದರೂ ಇಂತಹ ಲೋನ್‌ ಆ್ಯಪ್‌ಗ್ಳಲ್ಲಿಸಿಲುಕಿಬಿದ್ದಿದ್ದರೆ ಸಿಸಿಬಿಯವರನ್ನು ಸಂಪರ್ಕಿಸಿ.ಈ ಆ್ಯಪ್‌ಗಳ ಆಮಿಷಕ್ಕೆ ಮರುಳಾಗಿ ಪೂರ್ತಿ ವಿವರ ತಿಳಿಯದೆ ಸಾಲ ಮಾಡಿ, ನಂತರ ಆ ಸಾಲ ತೀರಿಸಲು ಮತ್ತಷ್ಟು ಸಾಲ ಮಾಡಿ ನೆಮ್ಮದಿ, ಜೀವನ, ಜೀವ ಕಳೆದುಕೊಳ್ಳದಿರಿ.

ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ! :

ನಾನೀಗ ಕಟ್ಟುತ್ತಾ ಇರುವ ಬಡ್ಡಿಯ ಮೊತ್ತವೇ ಜಾಸ್ತಿ ಆಗಿದೆ. ಆ ಕಾರಣಕ್ಕೆ ಇನ್ನುಮುಂದೆ ನಾನು ಹಣ ಕೊಡುವುದಿಲ್ಲ ಎಂದು ಸಾಲ ಪಡೆದವರು ಹೇಳಲು ಸಾಧ್ಯವಾಗುವುದಿಲ್ಲ. ಕಾರಣ, ಇದು ಆನ್‌ ಲೈನ್‌ ಸಾಲ ಆಗಿರುವುದರಿಂದ, ಈ ಬಗ್ಗೆ ಯಾರ ಬಳಿಯೂ ಮಾತಾಡಲು ಆಗುವುದಿಲ್ಲ. ಎಲ್ಲವೂ ಆ್ಯಪ್‌ಗ್ಳ ನಿಯಂತ್ರಣದಲ್ಲಿ ಇರುತ್ತದೆ. ನಾವು ಸಾಲ ವಾಪಸ್‌ ಕೊಡದೇ ಹೋದರೆ, ಅದೇ ಸಂದೇಶ ನಮ್ಮ ಫ್ರೆಂಡ್‌ ಲಿಸ್ಟ್ ನಲ್ಲಿ ಇರುವ ಎಲ್ಲರ ಮೊಬೈಲ್‌ಗ‌ೂ ಹೋಗಿಬಿಡುತ್ತದೆ! ಆನ್‌ಲೈನ್‌ ಆ್ಯಪ್‌ಗಳ ಮೂಲಕ ಸಾಲ ಪಡೆದು, ಸಕಾಲದಲ್ಲಿ ತೀರಿಸಲು ಆಗದೆ, ಫ್ರೆಂಡ್‌ಗಳ ಮುಂದೆ ಮರ್ಯಾದೆ ಹೋಗಿದ್ದಕ್ಕೆ ಹೆದರಿ ಹೈದರಾಬಾದ್‌ ಮತ್ತು ತೆಲಂಗಾಣದಲ್ಲಿ ಐದಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಅಂದಮೇಲೆ, ಈ ಆ್ಯಪ್‌ಗ್ಳ ಮೂಲಕ ಸಾಲ ಕೊಟ್ಟವರ ಕಿರಿಕಿರಿ ಹೇಗಿರಬಹುದೋ ಅಂದಾಜು ಮಾಡಿಕೊಳ್ಳಿ.

 

ರೂಪ ಲಕ್ಷ್ಮೀ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.