ನಗರದ ಮಧ್ಯೆ, ವಿದ್ಯುತ್ ಸಂಪರ್ಕದಿಂದ ದೂರ!
Team Udayavani, May 21, 2018, 12:56 PM IST
ಕಳೆದ ಯುಗಾದಿಯಂದು ದಿನೇಶ್ ಅವರ ಮನೆಯ ಗೃಹಪ್ರವೇಶ ನಡೆದಿದೆ. ಈ ಸುಸಜ್ಜಿತ ಮನೆಯಲ್ಲಿ ಏರ್ ಕಂಡೀಷನರ್ ವ್ಯವಸ್ಥೆ ಇದೆ. ವಾಶಿಂಗ್ ಮಿಷನ್, 5 ಹೆಚ್‌ಪಿ ಸಾಮರ್ಥ್ಯದ ಬೋರ್‌ವೆಲ್ ಸಬ್‌ಮರ್ಸಿಬಲ್ ಪಂಪ್, ರೆಫ್ರಿಜರೇಟರ್, ಟಿವಿ ಸೇರಿದಂತೆ ಉಳಿದ ಎಲೆಕ್ಟ್ರಾನಿಕ್ ವಸ್ತುಗಳೆಲ್ಲವೂ ಇವೆ. ಇಲ್ಲ ಎಂಬುದು ಬೆಸ್ಕಾಂ ವಿದ್ಯುತ್ ಸಂಪರ್ಕ ಮಾತ್ರ.
ದಿ ಬೆಟರ್ ಇಂಡಿಯಾ ಡಾಟ್ ಕಾಂ ಎಂಬ ವೆಬ್‌ನಲ್ಲಿ ಭಾರತದ ಅಪರೂಪದ ಸಾಧಕರ ಕಥೆಗಳನ್ನು ನೋಡಬಹುದು. ಅದರಲ್ಲಿ ನಮೂದಾಗಿರುವ ಬೆಂಗಳೂರಿನ ದಿನೇಶ್ ಪಗರಿಯಾ ಅವರ ಯಶೋಗಾಥೆ ಭಿನ್ನವಾಗಿದೆ. 2016ರಲ್ಲಿ ಬೆಂಗಳೂರಿನ ಜಯನಗರದಲ್ಲಿ 60-80ರ ನಿವೇಶನದಲ್ಲಿ ಫ್ಲಾಟ್ ಕಟ್ಟಿಸಿದ ದಿನೇಶ್, ಈವರೆಗೆ ವಿದ್ಯುತ್‌ಗಾಗಿ ಅಲ್ಲಿನ ಬೆಸ್ಕಾಂಗೆ ಮೊರೆ ಹೋಗಿಲ್ಲ! ಕಟ್ಟುವ ಸಂದರ್ಭದಿಂದ ಈವರೆಗೆ ಅವರ ವಿದ್ಯುತ್ ಬಳಕೆ ಪಯಣ ಸಂಪೂರ್ಣ ಸ್ವಾಯತ್ತ.
ಮನೆ ನಿರ್ಮಿಸಿಕೊಂಡ ನಂತರ ಸೋಲಾರ್ ಪ್ಯಾನೆಲ್ ಅಳವಡಿಸಿ, ತಾವೂ ಬಳಸಿ ಎಸ್ಕಾಂನ ಗ್ರಿಡ್‌ಗೂ ವಿದ್ಯುತ್ ಮಾರುವವರ ಕತೆಯನ್ನು ನಾವು ಈವರೆಗೆ ಕೇಳಿದ್ದೇವೆ. ರಿಯಲ್ ಎಸ್ಟೇಟ್ ಉದ್ಯಮ ನಡೆಸುವ ಒಬ್ಬ ಪರಿಸರ ಪ್ರೇಮಿಯಾಗಿ ದಿನೇಶ್ ಅವರು ವಾತಾವರಣ ಕಲುಷಿತಗೊಳಿಸದ ಎಲೆಕ್ಟ್ರಿಕಲ್ ಕಾರು ಬಳಸುವಂಥವರು. ತಮ್ಮದೇ ಮನೆ ಕಟ್ಟುವಾಗ ನಿವೇಶನದಲ್ಲಿರುವ ಮರ ಕಡಿಯದೆ ಮನೆ ಕಟ್ಟುವ ಯೋಜನೆ ರೂಪಿಸಬೇಕು ಎಂದು ಅವರು ಕೆಲವೆಡೆ ಹೇಳಿದ್ದಿದೆ. ಇವರಿಗೆ ಸ್ಟುಡಿಯೋ 69 ಕಂಪನಿಯ ಗಣೇಶ್‌ಕುಮಾರ್ ಅವರ ಬೆಂಬಲ ಸಿಕ್ಕನಂತರ ಸಂಪೂರ್ಣ ಹಸಿರುವಾಸಿ ಎನ್ನಿಸಿಕೊಳ್ಳುವ ಮನೆ ನಿರ್ಮಿಸುವ ಯೋಜನೆಗೆ ಚಿಗುರು ಬಂದಿತು.
ವರ್ಕರ್ ಶೆಡ್ ಮೇಲೂ ಸೋಲಾರ್ ಪ್ಯಾನೆಲ್!: ಮನೆ ನಿರ್ಮಾಣ ಹಂತದಲ್ಲಿ ಕೆಲಸಗಾರರ ಶೆಡ್ ನಿರ್ಮಾಣವಾಗುತ್ತದೆ. ದಿನೇಶ್ ವಿಚಾರದಲ್ಲೂ ಅದೇ ಆಗಿತ್ತಾದರೂ, ಅದೇ ಶೆಡ್ ಮೇಲೆ 4 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ “ರೂಫ್ ಟಾಪ್’ ಬಂದಿತು. ಇದರಿಂದ ಪ್ರಾಥಮಿಕ ಹಂತದ ಅಷ್ಟೂ ವಿದ್ಯುತ್ ಅಗತ್ಯಗಳನ್ನು ಪೂರೈಸಲಾಯಿತು. ಬೆಸ್ಕಾಂನ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕೂಡ ಪಡೆಯಲಿಲ್ಲ.
ಹಾಗೆಯೇ ಮುಖ್ಯ ಮನೆಯ ನಿರ್ಮಾಣ ಒಂದು ಹಂತಕ್ಕೆ ಬರುತ್ತಿದ್ದಂತೆ 20 ಕಿ.ವ್ಯಾ ತಾಕತ್ತಿನ ಸೋಲಾರ್ ಪ್ಯಾನೆಲ್‌ಗಳು ಮನೆಯ ಮೇಲ್ಭಾಗದಲ್ಲಿ ಎಂದ್ದು ನಿಂತವು. ಕೆಳಗಡೆ ಮನೆಯ ಗಾರೆ, ಒಳಾಂಗಣ ಕೆಲಸವಾದರೆ, ಮೇಲೆ ಸೂರ್ಯನಿಂದ ವಿದ್ಯುತ್ ಉತ್ಪಾದನೆ ಕೆಲಸ! ಮನೆ ನಿರ್ಮಾಣದ ಪ್ರತಿ ಹಂತದಲ್ಲಿ ಸೂರ್ಯನ ಪ್ರಕಾಶ ಹೀರಿಯೇ ಯಂತ್ರಗಳಿಗೆ ಚಾಲನೆ ನೀಡಲಾಯಿತು. ಒಂದು ಲೆಕ್ಕದಲ್ಲಿ, ತಾತ್ಕಾಲಿಕ ವಿದ್ಯುತ್‌ಗೆ ವೆಚ್ಚ ಮಾಡಲಾಗುವ 7ರಿಂದ 8 ಲಕ್ಷ ರೂ. ಉಳಿತಾಯವಾಗಿದ್ದು ಗಮನಾರ್ಹ.
ಸೌಲಭ್ಯ ಇದೆ, ವಿದ್ಯುತ್ ಇಲ್ಲ!: ಕಳೆದ ಯುಗಾದಿ ಸಂದರ್ಭದಲ್ಲಿ ಮನೆಯ ಗೃಹಪ್ರವೇಶ ನಡೆದಿದೆ. ಈ ಸುಸಜ್ಜಿತ ಮನೆಯಲ್ಲಿ ಏರ್ ಕಂಡೀಷನರ್ ವ್ಯವಸ್ಥೆ ಇದೆ. ವಾಶಿಂಗ್ ಮಿಷನ್, 5 ಹೆಚ್‌ಪಿ ಸಾಮರ್ಥ್ಯದ ಬೋರ್‌ವೆಲ್ ಸಬ್‌ಮರ್ಸಿಬಲ್ ಪಂಪ್, ರೆಫ್ರಿಜರೇಟರ್, ಟಿವಿ ಸೇರಿದಂತೆ ಉಳಿದ ಎಲೆಕ್ಟ್ರಾನಿಕ್ ಹಾಳುಮೂಳುಗಳೆಲ್ಲ ಇವೆ. ಇಲ್ಲ ಎಂಬುದು ಬೆಸ್ಕಾಂ ವಿದ್ಯುತ್ ಸಂಪರ್ಕ ಮಾತ್ರ! ಇಂದು ದಿನೇಶ್ ಅವರ ಮನೆಯ ಚಾವಣಿಯಲ್ಲಿ 133 ಸೋಲಾರ್ ಪ್ಯಾನೆಲ್‌ಗಳಿವೆ. ಇವು ದಿನವೊಂದಕ್ಕೆ 80 ಯೂನಿಟ್ ವಿದ್ಯುತ್ ಉತ್ಪಾದಿಸಬಲ್ಲವು.
ಇತ್ತ ಮನೆಯಲ್ಲಿ ವಿಪರೀತ ಎಂಬಂತೆ ಬಳಸಿದರೂ ದಿನವೊಂದಕ್ಕೆ ಪರಮಾವಧಿ 20 ಯೂನಿಟ್ ವಿದ್ಯುತ್ ಬೇಕಾಗುತ್ತದೆ. ವಿದ್ಯುತ್ ಸ್ವಾಯತ್ತತೆ ಸಮಸ್ಯೆಯೇ ಅಲ್ಲ! ಸಾಂಪ್ರದಾಯಿಕ ಸೋಲಾರ್ ಪ್ಯಾನೆಲ್‌ಗಳಲ್ಲಿ ಸೂರ್ಯ ರಶ್ಮಿ ವಿದ್ಯುತ್ ಉತ್ಪಾದನೆಯನ್ನು ಬಡಿದೆಬ್ಬಿಸಬೇಕಾಗುತ್ತದೆ. ವಿಶ್ವದೆಲ್ಲೆಡೆ ಕಮರ್ಷಿಯಲ್ ಪವರ್ ಉತ್ಪಾದನೆಯಲ್ಲಿ ತೆಳುವಾದ ಸೋಲಾರ್ ಕೋಶಗಳನ್ನು ಬಳಸುತ್ತಿದ್ದಾರೆ. ಇದು ಕೋಶದ ಒಂದು ಭಾಗದಲ್ಲಿ ಚೂರೇ ಚೂರು ಬೆಳಕಿನ ಛಾಯೆ ಬಿದ್ದರೂ ವಿದ್ಯುತ್ ಉತ್ಪಾದನೆ ಆರಂಭವಾಗುತ್ತದೆ. ಮಳೆಗಾಲ, ಮೋಡ ಮುಸುಕಿದ್ದರೂ ಉತ್ಪಾದನೆಗೆ ರಜೆ ಇಲ್ಲ.
ಸಾಂಪ್ರದಾಯಿಕ ಪ್ಯಾನೆಲ್ ಬೆಲೆ 5, 6 ಸಾವಿರ ರೂ.ಗಳಿದ್ದರೆ ತೆಳು ಸೋಲಾರ್ ಕೋಶಕ್ಕೆ ಸುಮಾರು 7 ಸಾವಿರ ರೂ. ಬೆಲೆ ಇದೆ. ಕಾರ್ಯಕ್ಷಮತೆಯನ್ನು ಪರಿಗಣಿಸಿದರೆ ಇದಕ್ಕೇ ಬಂಡವಾಳ ಹೂಡುವುದು ಪರಿಣಾಮಕಾರಿ. 10ರಿಂದ 15 ವರ್ಷದ ಬಾಳಿಕೆಯ ಸಾವಿರ ಎಎಚ್‌ನ ಎರಡು ಬ್ಯಾಟರಿ ಇದೆ. ಎಂಟು, ಎಂಟು ಹಾಗೂ ನಾಲ್ಕು ಕಿ.ವ್ಯಾನ ಮೂರು ಪ್ರತ್ಯೇಕ ಯೂನಿಟ್‌ಗಳಿವೆ. ಯಾಂತ್ರಿಕ ವ್ಯವಸ್ಥೆಯನ್ನು ದೂರದ ಆಸ್ಟ್ರೇಲಿಯಾದಲ್ಲಿ ಕುಳಿತೂ ನಿರ್ವಹಿಸಬಹುದಾದ ತಾಂತ್ರಿಕತೆ ಅಳವಡಿಕೆಯಾಗಿದೆ.
ಇಷ್ಟೆಲ್ಲ ನಿರ್ಮಾಣಕ್ಕೆ ಎಲ್ಲ ವ್ಯವಸ್ಥೆಗಳೂ ಸೇರಿ ವೆಚ್ಚವಾಗಿದ್ದು 36 ಲಕ್ಷ ರೂ. ಟಿಪಿ ಉಳಿತಾಯದ ಹೊರತಾಗಿಯೂ ಈವರೆಗೆ 5ರಿಂದ 8 ಲಕ್ಷ ರೂ. ಪರೋಕ್ಷವಾಗಿ ವಸೂಲಿಯಾಗಿದೆ. ಇಂತಿಪ್ಪ ಹಿನ್ನೆಲೆಯ ದಿನೇಶ್ ಅವರ ಸಫಲ ಸಾಧನೆ ಉಳಿದವರಿಗೆ ಮಾದರಿಯಾಗದಿದ್ದರೆ ನಷ್ಟ ನಮ್ಮದೇ. ಸೋಲಾರ್ ರೂಫ್ಟಾಪ್ ಸಂಬಂಧ ಎಸ್ಕಾಂಗಳ ಕೆಂಗಣ್ಣು ಬಿದ್ದಾಗಿದೆ. ಆ ಬಗ್ಗೆ ಇನ್ನೊಮ್ಮೆ. ಆದರೆ ಜನರು ಸಣ್ಣ ಸಣ್ಣ ಯೂನಿಟ್‌ಗಳಾಗಿ ಸಹಕಾರಿ ತತ್ವದಲ್ಲಿ ವಿದ್ಯುತ್ ಸ್ವಾಯತ್ತತೆ ಪಡೆಯಲು ಸೋಲಾರ್ ದಾರಿ ತೋರಿಸುತ್ತಿದೆ. ಈ ನಿಟ್ಟಿನಲ್ಲಿಯೇ ಹೆಚ್ಚು ಚಿಂತನೆಗಳು ನಡೆಯಬೆಕಾಗಿದೆ.
* ಗುರು ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.