ಅಂದದ ಮನೆಯೊಳಗೆ ವಿಭಜನೆ ಎಂಬ ಭಜನೆ
Team Udayavani, Jul 31, 2017, 7:50 AM IST
ನಾವು ಮನೆಯನ್ನು ವಿನ್ಯಾಸ ಮಾಡುವಾಗ,ಇಂದಿನ ಅಗತ್ಯಗಳನ್ನೇ ಅಲ್ಲದೆ ಮುಂದಾಗಬಹುದಾದ ಬದಲಾವಣೆಗಳನ್ನು, ಬೆಳೆಯುವ ಮಕ್ಕಳ ಆಸೆ ಆಕಾಂಕ್ಷೆಗಳನ್ನು ಊಹಿಸಿಕೊಂಡು ಸೂಕ್ತ ಸ್ಥಳಾವಕಾಶಗಳನ್ನು ಮಾಡಿಟ್ಟುಕೊಂಡು ಮುಂದುವರೆಯುವುದು ಉತ್ತಮ.
ಇಂದು ನಾವು ಬಹಳ ತಲೆ ಕೆಡಿಸಿಕೊಂಡು ಪ್ಲಾನ್ ಮಾಡಿರುತ್ತೇವೆ. ಆದರೆ ನಾಲ್ಕಾರು ವರ್ಷಗಳ ನಂತರ ಅದು ಬದಲಾದ ಕಾಲಮಾನಕ್ಕೆ ತಕ್ಕಂತೆ ಇರುವುದಿಲ್ಲ. ಇದರಿಂದ ಮನೆಯನ್ನು ಕಾಲಕ್ಕೆ ತಕ್ಕಂತೆ ಹೊಂದಿಸುವುದರ ಬಗ್ಗೆ ಮತ್ತೆ ತಲೆ ಕೆಡಿಸಿಕೊಳ್ಳುವಂತೆ ಆಗಬಹುದು! ಕಾಲಮಾನಕ್ಕೆ ತಕ್ಕಂತೆ ಬದಲಾವಣೆಗಳಾಗುವುದು ಸಹಜ. ಮಕ್ಕಳು ಬೆಳೆಯುತ್ತಿದ್ದಂತೆ ಅವರ ಅಗತ್ಯಗಳೂ ಬದಲಾಗುತ್ತವೆ. ಎಸ್‌ಎಸ್‌ಎಲ್‌ಸಿ, ಕಾಲೇಜಿಗೆ ಬರುವಷ್ಟರಲ್ಲಿ ಮಕ್ಕಳು ಪ್ರತ್ಯೇಕ ಕೋಣೆ ಬೇಕು ಎನ್ನಬಹುದು. ಓದಲು ಬರೆಯಲು ಎಂದೇ ವಿಶೇಷವಾಗಿ ವಿನ್ಯಾಸ ಮಾಡಿದ ರೂಮ್ ಇದ್ದರೆ, ಸ್ಟಡಿ ಮಾಡಲು ಅನುಕೂಲಕರ ಎನ್ನಬಹುದು. ಆದುದರಿಂದ ನಾವು ಮನೆಯನ್ನು ವಿನ್ಯಾಸ ಮಾಡುವಾಗ, ಇಂದಿನ ಅಗತ್ಯಗಳನ್ನೇ ಅಲ್ಲದೆ ಮುಂದಾಗಬಹುದಾದ ಬದಲಾವಣೆಗಳನ್ನು, ಬೆಳೆಯುವ ಮಕ್ಕಳ ಆಸೆ ಆಕಾಂಕ್ಷೆಗಳನ್ನು ಊಹಿಸಿಕೊಂಡು ಸೂಕ್ತ ಸ್ಥಳಾವಕಾಶಗಳನ್ನು ಮಾಡಿಟ್ಟುಕೊಂಡು ಮುಂದುವರೆಯುವುದು ಉತ್ತಮ.
ದೊಡ್ಡ ಬೆಡ್ ರೂಮ್‌ನಲ್ಲೇ ಸ್ಟಡಿ ಸ್ಪೇಸ್
ಮನೆ ಕಟ್ಟುವಾಗ ಇರಲಿ ಎಂದು ದೊಡ್ಡ ಬೆಡ್‌ರೂಮ್ ವಿನ್ಯಾಸ ಮಾಡಿಕೊಂಡಿದ್ದರೆ, ನಂತರ ಅದರ ಒಂದು ಭಾಗವನ್ನೇ ಸ್ಟಡಿಗೆ ಮೀಸಲಿಟ್ಟುಕೊಳ್ಳಬಹುದು. ಸಣ್ಣದೊಂದು ಪಾರ್ಟಿಷನ್ ಹಾಕಿಕೊಂಡರೆ ಓದಲು ಪ್ರತ್ಯೇಕ ಸ್ಥಳ ದೊರೆತಂತೆ ಆಗುತ್ತದೆ. ಪಾರ್ಟಿಷನ್ ಮಾಡುವಾಗ ಓದುವ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇದೆಯೇ? ಎಂದು ಗಮನಿಸುವುದು ಸೂಕ್ತ. ದಿನದ ಹೊತ್ತು ಸೂರ್ಯನ ಬೆಳಕು ಸಿಕ್ಕರೆ ಮಕ್ಕಳ ಮನಸ್ಸು ತೇಜೋಹಾರಿಯಾಗಿದ್ದು, ಓದಿಗೊಂದು ಚುರುಕು ಸಿಗುತ್ತದೆ. ನೈಸರ್ಗಿಕವಾಗಿ ಸಿಗುವ ಬೆಳಕು ಕಣ್ಣಿಗೆ ಒಳ್ಳೆಯದು ಆಗಿರುವುದರ ಜೊತೆಗೆ ಅದು ಸದಾ ಬದಲಾಗುತ್ತಿದ್ದು, ಇದೂ ಕೂಡ ಏಕತಾನತೆಯಿಂದ ಕೂಡಿದ ವಿದ್ಯುತ್ ದೀಪಕ್ಕಿಂತ ಉತ್ತಮವಾದದ್ದಾಗಿರುತ್ತದೆ.
ನಿಮ್ಮ ಬೆಡ್ ರೂಮ್‌ಗಳನ್ನು ಮುಂದೆ ವಿಭಜಿಸುವ ಸಾಧ್ಯತೆ ಇದ್ದರೆ, ಹನ್ನೆರಡು ಅಡಿಗೆ ಹದಿನಾಲ್ಕು ಅಡಿ ಅಂದರೆ ಸುಮಾರು 168 ಚದರ ಅಡಿ ಇಡಬೇಡಿ. ಬದಲಾಗಿ ಹತ್ತು ಅಡಿಗೆ ಹದಿನೇಳು ಅಡಿ ಇಟ್ಟರೆ, ಒಂದು ಕಡೆ ಐದು ಅಡಿಯ ಸ್ಟಡಿ ರೂಮನ್ನು ನಿರಾಯಾಸವಾಗಿ ಮಾಡಬಹುದು. ಹೀಗೆ ಮಾಡುವುದರಿಂದ ಸ್ಟಡಿ ಭಾಗ ಕಳೆದರೂ ನಮಗೆ ಮಾಮೂಲಿ ಅಳತೆಯ ಅಂದರೆ ಹತ್ತು ಅಡಿಗೆ ಹನ್ನೆರಡು ಅಡಿಯ ಬೆಡ್ ರೂಮ್ ಸಿಕ್ಕಂತೆ ಆಗುತ್ತದೆ.
ಸ್ಟಡಿ ಪಾರ್ಟಿಷನ್ ವಸ್ತುಗಳು
ನಾಲ್ಕಾರು ಅಡಿ ಮಾತ್ರ ಉದ್ದವಿರುವ ವಿಭಜಕಗಳನ್ನು ಬುಕ್ ಶೆಲ್ಪ್ ಮಾದರಿಯಲ್ಲೂ ಮಾಡಬಹುದು. ಸ್ಟಡಿಗೆ ಬೇಕಾದ ಪುಸ್ತಕಗಳನ್ನು ಇಡಲು ಸೂಕ್ತ ಸ್ಥಳ ನೀಡುವುದರೊಂದಿಗೆ, ಸಾಕಷ್ಟು ಪ್ರ„ವಸಿಯನ್ನೂ ಕೂಡ ಈ ವಿಭಜಕ ನೀಡಬಲ್ಲದು. ಸಾಮಾನ್ಯವಾಗಿ ಕೋಣೆಗೆ ಅಡ್ಡಲಾಗಿ ಇಡುವ ಕಪಾಟು ಮಾದರಿಯಲ್ಲಿ ಪಾರ್ಟಿಷನ್ ದೃಢವಾಗಿರದ ಕಾರಣ, ಅದಕ್ಕೆ ಗೋಡೆಗೆ ತಾಗಿದಂತೆ ಇರುವ ಮತ್ತೂಂದನ್ನು ಜೊತೆಮಾಡಿ ವಿನ್ಯಾಸ ಮಾಡಿದರೆ, ಆಗ ಲಭ್ಯವಾಗುವ “ಎಲ್’ ಆಕಾರದ ವಿಭಜಕ ಹೆಚ್ಚು ಸದೃಢವಾಗಿರುತ್ತದೆ. ಕೆಲವೊಮ್ಮೆ ಒಂದು ಕಡೆ ಪ್ಲೇನ್ ಆಗಿ ವಿನ್ಯಾಸ ಮಾಡಿಕೊಂಡು ವಿಭಜಕಗಳನ್ನು ಪ್ಯಾನೆಲಿಂಗ್ ಮಾದರಿ ಡಿಸೈನ್ ಮಾಡಿದರೆ, ಮತ್ತೂಂದೆಡೆ ಇರುವ ಕೋಣೆಗೂ ಒಂದು ವಿಶೇಷ ಮೆರುಗು ದೊರೆಯುತ್ತದೆ.
ಲೈಟ್ ವೇಟ್ ಪಾರ್ಟಿಷನ್
ವಿಭಜಕಗಳನ್ನು ಮಾಡುವಾಗ ಮೂಲ ಕಟ್ಟಡದ ಮೇಲೆ ಹೆಚ್ಚು ಭಾರ ಆಗದಂತೆ ನೋಡಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ಆರ್‌ಸಿಸಿ ಹಲಗೆಗಳನ್ನು ಮಾಮೂಲಿ ಲೋಡ್‌ಗಳಿಗೆ ಮಾತ್ರ ವಿನ್ಯಾಸ ಮಾಡಿರಲಾಗುತ್ತದೆ. ಹೆಚ್ಚು ಭಾರದ ಅಂದರೆ ಇಟ್ಟಿಗೆ ಗೋಡೆ ಕಟ್ಟಿ ವಿಭಜಿಸಿದರೆ, ಸ್ಲಾ$Âಬ್ ಮೇಲೆ ಹೆಚ್ಚು ಲೋಡ್ ಬರುವ ಸಾಧ್ಯತೆ ಇರುತ್ತದೆ. ಆದುದರಿಂದ ಲಘು ಭಾರದ ವಸ್ತುಗಳನ್ನು ಬಳಸುವುದು ಸೂಕ್ತ. ಏರ್‌ಟೈಟ್ ಕಾಂಕ್ರಿಟ್ ಬ್ಲಾಕ್ಸ್, ಇಲ್ಲವೆ ಇತರೆ ಲಘು ವಸ್ತುಗಳಿಂದ ಮಾಡಿದ ಪಾರ್ಟಿಷನ್‌ಗಳನ್ನು ಬಳಸುವುದು ಸೂಕ್ತ. ಇಟ್ಟಿಗೆಯ ಬಳಕೆ ಅನಿವಾರ್ಯವಾದಲ್ಲಿ, ಫ್ಲೋರ್ ಮಟ್ಟದಲ್ಲಿ ಬೀಮ್ ಕೊಡುವುದು ಕಷ್ಟವಾದರೂ, ಕಡೆ ಪಕ್ಷ ಲಿಂಟಲ್ ಮಟ್ಟದಲ್ಲಿ ಒಂದು ಬೀಮ್ ಕೊಟ್ಟು, ಹೆಚ್ಚುವರಿ ಭಾರವನ್ನು ಗೋಡೆಗಳು ಹೊರುವ ಹಾಗೆ ಮಾಡುವುದು ಒಳ್ಳೆಯದು.
ಪಾರ್ಟಿಷನ್ ಫ್ರೆàಮ್‌ವರ್ಕ್
ಅತಿ ಲಘು ವಿಭಜಕಗಳನ್ನು ಮರದ ಫ್ರೆàಮ್‌ಗಳಿಂದ ವಿನ್ಯಾಸಗೊಳಿಸಬಹುದು. ಸಾಮಾನ್ಯವಾಗಿ ಎರಡು ಇಂಚಿಗೆ ಎರಡು ಇಂಚು ಮರದ ಸೆಕ್ಷನ್‌ಗಳನ್ನು ಬಳಸಿ ಚೌಕಟ್ಟುಗಳನ್ನು ತಯಾರು ಮಾಡಬಹುದು. ಇವುಗಳಿಗೆ ಪ್ಲೆ„ವುಡ್ ಇಲ್ಲವೆ ಇತರೆ ಲಘು ವಸ್ತುಗಳನ್ನು ಬಳಸಿ ವಿಭಜಕಗಳನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಪಾರ್ಟಿಕಲ್ ಬೋರ್x, ಎಮ್‌ಡಿಎಫ್ ಬೋರ್ಡ್‌ಗಳೂ ಜನಪ್ರಿಯವಾಗಿವೆ. ಪಾರ್ಟಿಷನ್‌ಗಳಿಗೆ ಈ ಬೊರ್ಡ್ ಗಳನ್ನು ಬಳಸುವ ಮೊದಲು ಅವು ನೀರು ನಿರೋಧಕ ಗುಣ ಹೊಂದಿದೆಯೇ ಎಂದು ಗಮನಿಸುವುದು ಒಳ್ಳೆಯದು. ಇಲ್ಲದಿದ್ದರೆ, ನೀರು ತಾಗಿದರೆ, ಭಾಗುವುದು, ಬಣ್ಣ ಕಿತ್ತುಬರುವುದು ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್
ಹಲಗೆಗಳಂತೆ ಬರುವ ಈ ವಸ್ತುವನ್ನು ಸಾಮಾನ್ಯವಾಗಿ ಮರದ ಇಲ್ಲವೆ ಜಿಐ ಕೋಟಿಂಗ್ ನೀಡಿದ ಕಬ್ಬಿಣದ ಫ್ರೆàಮ್‌ಗಳಿಗೆ ಹೊಂದಿಸಲಾಗುತ್ತದೆ. ಒಮ್ಮೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ವಿಭಜಕ ಮಾಡಿ ಬಣ್ಣ ಬಳಿದರೆ, ನೋಡಲು ಮಾಮೂಲಿ ಗೋಡೆಗಳಂತೆಯೇ ಇವು ಕಾಣುತ್ತವೆ. ಜೊತೆಗೆ ಬಹುತೇಕ ಕೆಲಸವನ್ನು ಮನೆಯ ಹೊರಗೇ ಮಾಡಿಕೊಂಡು ಫಿನಿಶ್ ಮಾತ್ರ ಮನೆಯೊಳಗೆ ಮಾಡಿಕೊಳ್ಳಬಹುದಾದ ಅನುಕೂಲವೂ ಇರುತ್ತದೆ. ಅತಿ ಕಡಿಮೆ ಭಾರ ಇರುವ ಈ ಬೋರ್ಡುಗಳನ್ನು ವಿಭಜಕಗಳನ್ನು ಮಾಡಲೆಂದೇ ತಯಾರು ಮಾಡಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮತ್ತೂಂದು ಮುಖ್ಯ ಗುಣ ಏನೆಂದರೆ, ಇವುಗಳನ್ನು ಕಲಾತ್ಮಕವಾಗಿಯೂ ವಿವಿಧ ರೀತಿಯಲ್ಲಿ ಎರಕ ಹೊಯ್ಯಲು ಸಾಧ್ಯವಿದ್ದು, ನಮಗೆ ಇಷ್ಟವಾದ ವಿನ್ಯಾಸದಲ್ಲಿ ತಯಾರಿಸಿಕೊಂಡು ವಿವಿಧ ಡಿಸೈನ್‌ಗಳನ್ನು ಪಡೆಯಬಹುದು.
ಗ್ಲಾಸ್ ಪಾರ್ಟಿಷಕನ್
ಕೆಲವೊಮ್ಮೆ ಇರುವ ಕೋಣೆ ಇಲ್ಲವೇ ಹಾಲ್ ಅನ್ನು ವಿಭಜಿಸಲು ಹೊರಟರೆ, ಕೋಣೆಯೊಳಗೆ ಸಾಕಷ್ಟು ಬೆಳಕು ಬರುವುದಿಲ್ಲ. ಹೀಗಾಗದಂತೆ ಮಾಡಲು ಅರೆ ತೆರೆದಂತಿರುವ ಇಲ್ಲವೇ ಗ್ರೌಂಡ್ ಗ್ಲಾಸ್ ಮಾದರಿಯ ಗಾಜನ್ನು ಬಳಸಿ ಸೂಕ್ತ ರೀತಿಯಲ್ಲಿ ವಿನ್ಯಾಸ ಮಾಡಿದರೆ, ಎಷ್ಟು ಬೇಕೋ ಅಷ್ಟು ಪ್ರ„ವಸಿಯನ್ನು ಒದಗಿಸುತ್ತಲೇ ಬೆಳಕನ್ನೂ ಒಳಗೆ ಬರುವಂತೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಸುಂದರವಾದ ಗಾಜಿನ ವಿನ್ಯಾಸಗಳು ರೆಡಿಮೇಡ್ ಆಗಿಯೂ ದೊರೆಯುತ್ತಿವೆ. ಇತರೆ ವಸ್ತುಗಳಿಗೆ ಹೋಲಿಸಿದರೆ, ಹೆಚ್ಚು ದುಬಾರಿಯೂ ಅಲ್ಲ. ನಾವು ಗಾಜು – ಒಡೆದರೆ ಹೇಗೆ? ಎಂದು ಹಿಂಜರಿಯುವಂತೆಯೂ ಇಲ್ಲ. ವಿನ್ಯಾಸದ ನಂತರ ವಿಶೇಷ ಟ್ರೀಟ್ ಮೆಂಟ್ ಕೊಟ್ಟು ಗಟ್ಟಿಗೊಳಿಸಿದರೆ, ಗಾಜೂ ಕೂಡ ಇತರೆ ವಸ್ತುಗಳಂತೆ ಸಾಕಷ್ಟು ಗಡಸಾಗುತ್ತದೆ.
ವಿನ್ಯಾಸಗಳನ್ನು ಬದಲಿಸಲು ಇರುವ ಅತಿ ಸುಲಭ ವಿಧಾನ ವಿಭಜಕಗಳನ್ನು ಬಳಸಿ ಪ್ರತ್ಯೇಕ ಸ್ಥಳಗಳನ್ನು ಪಡೆಯುವುದೇ ಆಗಿದೆ. ಮುಂದಾಗುವುದನ್ನು ಎಲ್ಲ ಕಾಲದಲ್ಲೂ ಊಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಾಲಕ್ಕೆ ತಕ್ಕಂತೆ ನಮಗೆ ಬೇಕಾದ ಹಾಗೆ ಪ್ಲಾನ್ ಬದಲಾಯಿಸಿಕೊಳ್ಳಲು ನಾವು ತಯಾರಿರಬೇಕು!
ಹೆಚ್ಚಿನ ಮಾತಿಗೆ :98441 32826
– ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.