ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೇ ಸವಾಲ್
Team Udayavani, Jul 31, 2017, 7:20 AM IST
ರೈತರ ಆಕ್ರೋಶ ಸ್ವತಂತ್ರ ಭಾರತದ ಚರಿತ್ರೆಯಲ್ಲೇ ಮೊದಲ ಬಾರಿ ಮುಷ್ಕರವಾಗಿ ಸ್ಫೋಟಿಸಿದ್ದು 1 ಜೂನ್ 2017ರಂದು. ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಗೋದಾವರಿ ನದಿ ತೀರದ ಪುನ¤ಂಬಾ ಪಟ್ಟಣದಲ್ಲಿ. ಅಲ್ಲಿರುವ ರೈತರ ಸಂಖ್ಯೆ 13,000. ಆ ದಿನ ಅವರೆಲ್ಲರೂ ತಮ್ಮ ಆಕಳುಗಳ ಕ್ಯಾನುಗಟ್ಟಲೆ ಹಾಲನ್ನು ರಸ್ತೆಗೆ ಸುರಿದರು. ತಾವು ಬೆಳೆದಿದ್ದ ಟೊಮೆಟೊ, ಈರುಳ್ಳಿ, ಬದನೆ, ಮೆಣಸು ಇತ್ಯಾದಿ ತರಕಾರಿಗಳನ್ನೆಲ್ಲ ರಸ್ತೆಗೆಸೆದರು.
ಪನ¤ಂಬಾದಲ್ಲಿ ಸ್ಫೋಟವಾದ ಈ ಚಾರಿತ್ರಿಕ ರೈತರ ಮುಷ್ಕರ ಮಹಾರಾಷ್ಟ್ರದ ಇತರ ಜಿಲ್ಲೆಗಳಿಗೂ ವ್ಯಾಪಿಸಿತು. ತಾವು ಬೆಳೆದ ತರಕಾರಿಗಳು ಮುಂಬಯಿ ಮತ್ತು ಪುಣೆ ತಲುಪಬಾರದು; ಕೃಷಿಯ ಸಂಕಟಈ ಸ್ಥಿತಿಯನ್ನು ತಿಳಿಯೂ ತಿಳಿಯದವರಂತೆ ತೂಕಡಿಸುತ್ತಾ ಬಾಳುತ್ತಿರುವ ನಗರವಾಸಿಗಳಿಗೆ ಬಿಸಿ ಮುಟ್ಟಿಸಬೇಕೆಂಬುದು ಈ ಮುಷ್ಕರದ ಮುಖ್ಯ ಉದ್ದೇಶ. ಡಾ.ಎಂ.ಎಸ್. ಸ್ವಾಮಿನಾಥನ್ ಸಮಿತಿಯ ಶಿಫಾರಸನ್ನು ಜಾರಿ ಮಾಡಬೇಕೆಂಬುದು ಮುಷ್ಕರಕ್ಕೆ ಮುಂದಾಗಿದ್ದ ರೈತರೆಲ್ಲರ ಪ್ರಧಾನ ಬೇಡಿಕೆ. ವಿವಿಧ ಬೆಳೆಗಳ ಉತ್ಪಾದನಾ ವೆಚ್ಚಕ್ಕೆ ಅದರ ಶೇಕಡಾ 50 ಕೂಡಿಸಿ, ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂಬುದೇ ಆ ಮುಖ್ಯ ಬೇಡಿಕೆ.
ಪುನ¤ಂಬಾದ 300 ಕಿಮೀ. ದಕ್ಷಿಣದಲ್ಲಿ ಹಾಗೂ ಮರಾಠಾವಾಡಾದ ಒಸ್ಮನಾಬಾದ್ ನಗರದಿಂದ 12 ಕಿ.ಮೀ ದೂರದಲ್ಲಿರುವ ಕಮ್ತಾ ಗ್ರಾಮದ ರೈತರೂ ಅದೇ ದಿನ ಮುಷ್ಕರಕ್ಕೆ ಧುಮುಕಿದರು. ಅಲ್ಲಿನ ರೈತ ವಿಕಾಸ್ ಪಟಾದೆ ಅಂದು ನಡೆದದ್ದನ್ನು ಹೀಗೆ ನೆನೆಯುತ್ತಾರೆ.
ಪುನ¤ಂಬಾದ ಮುಷ್ಕರದ ಸುದ್ದಿ ಕೇಳಿದೊಡನೆ ನಮ್ಮ ಹಳ್ಳಿಯಲ್ಲಿಯೂ ಸಂಚಲನ. ಕೂಡಲೇ ಗ್ರಾಮಸಭೆ ನಡೆಸಿ, ಇಲ್ಲಿಯೂ ಮುಷ್ಕರ ಮಾಡಲು ನಿರ್ಧರಿಸಿದೆವು.
ಕಮ್ತಾ ಗ್ರಾಮದ ರೈತರ ಮುಖ್ಯ ಬೆಳೆ ತರಕಾರಿಗಳು. ಪ್ರತಿ ದಿನ ಇಲ್ಲಿಂದ ವಿವಿಧ ಮಾರುಕಟ್ಟೆಗಳಿಗೆ ರೂ.70,000 ಬೆಲೆಯ ತರಕಾರಿಗಳ ಸರಬರಾಜಾಗುತ್ತಿದೆ. ಇಲ್ಲಿನ ರೈತರು ಒಂದು ವಾರ ಛಲದಿಂದ ಮುಷ್ಕರ ನಡೆಸಿದರು. ಅದರಿಂದಾಗಿ, ಒಸ್ಮನಾಬಾದ್ ಮತ್ತು ಕಲಾಂಬ ನಗರಗಳ ಮಾರುಕಟ್ಟೆಗಳು ಏಳು ದಿನ ಮುಚ್ಚಿದ್ದವು. ಕೇವಲ 1,700 ಜನಸಂಖ್ಯೆಯ ನಮ್ಮ ಪುಟ್ಟ ಹಳ್ಳಿ ಇಡೀ ರಾಜ್ಯವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಆದರೆ, ಈ ಆಂದೋಲನಕ್ಕೆ ಸಣ್ಣ ರೀತಿಯಲ್ಲಾದರೂ ಕೈಜೋಡಿಸಬೇಕನ್ನೋದು ನಮ್ಮ ನಿರ್ಧಾರವಾಗಿತ್ತು ಎನ್ನುತ್ತಾರೆ ವಿಕಾಸ್.
ಒಂದೇ ವಾರದಲ್ಲಿ ವಿಕಾಸ್ ಪಟಾದೆ(43) ಮತ್ತು ಅವರ ಇಬ್ಬರು ಸೋದರರು ಮುಷ್ಕರದಿಂದಾಗಿ ಅನುಭವಿಸಿದ ನಷ್ಟ ರೂ.80,000. ತಮ್ಮ 20 ಎಕ್ರೆ ಜಮೀನಿನಲ್ಲಿ ತರಕಾರಿ ಬೆಳೆಸುವ ಅವರು ಆಕಳುಗಳನ್ನು ಸಾಕಿಕೊಂಡು, ಹಾಲು ಮಾರಿ, ತಮ್ಮ ಕುಟುಂಬಗಳನ್ನು ಸಲಹುತ್ತಿ¨ªಾರೆ. ಈ ಮುಷ್ಕರದಿಂದ ಆಗಿರುವ ನಷ್ಟ ಸರಿದೂಗಿಸಲು ನಮಗೆ ಒಂದು ವರುಷವೇ ಬೇಕಾದೀತು ಎನ್ನುವಾಗ ವಿಕಾಸರ ಧ್ವನಿ ಭಾರವಾಗುತ್ತದೆ. ಈಗಾಗಲೇ ರೂ.8 ಲಕ್ಷ ಸಾಲ ಮಾಡಿರುವ ಅವರಿಗೆ ಈ ನಷ್ಟ ದೊಡª ಹೊರೆ.
ಅಹ್ಮದ್‌ನಗರ ಮತ್ತು ನಾಸಿಕ್ ಜಿಲ್ಲೆಗಳು ಮುಂಚೂಣಿಯಲ್ಲಿದ್ದ ಈ ಚಾರಿತ್ರಿಕ ರೈತ ಮುಷ್ಕರದ ಬಿಸಿ ಮಹಾರಾಷ್ಟ್ರ ಸರಕಾರಕ್ಕೆ ತಟ್ಟಿತು. 12 ಜೂನ್ 2017ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರೈತರಿಗೆ ಎರಡು ಭರವಸೆ ನೀಡಿ, ಮುಷ್ಕರದ ಬಿರುಸು ತಗ್ಗಿಸಲು ಪ್ರಯತ್ನಿಸಿದರು. ಹಾಲಿನ ಬೆಲೆ ಹೆಚ್ಚಿಸುವುದು ಮತ್ತು ರೈತರ ಸಾಲ ಮನ್ನಾ ಇವೇ ಅವರು ನೀಡಿದ ಭರವಸೆಗಳು. ಅನಂತರ, 1.34 ಕೋಟಿ ರೈತರ ರೂ.33,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಅವರು ಘೋಷಿಸಿ¨ªಾರೆ.
ಡಾ. ಸ್ವಾಮಿನಾಥನ್ ಸಮಿತಿಯ ಶಿಫಾರಸನ್ನು ಜಾರಿ ಮಾಡಿದರೆ ಇಂತಹ ಸಾಲ ಮನ್ನಾ ಅಗತ್ಯವಿಲ್ಲ ಎಂಬುದು ಒಸ್ಮನಾಬಾದ್ ಜಿಲ್ಲೆಯ ಕಲಾಂಬ ತಾಲೂಕಿನ ಖಾಮಸವಾಡಿ ಗ್ರಾಮದ ಶರದ್ ಶೇಲ್ಕೆಯವರ ಅಭಿಪ್ರಾಯ. ಎಂಟು ವರುಷಗಳ ಮುಂಚೆ ಸಾವಿರಾರು ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ಈಗ ಪುನಃ ಸಾಲ ಮನ್ನಾ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅದಕ್ಕಾಗಿಯೇ ಇಂತಹ ತಾತ್ಕಾಲಿಕ ಕ್ರಮಗಳ ಬದಲಾಗಿ ದೀರ್ಘಾವಧಿ ಕ್ರಮಗಳೇ ಉತ್ತಮ ಎನ್ನುತ್ತಾರೆ ಅವರು.
ಏಳು ಸಾವಿರ ಜನಸಂಖ್ಯೆಯ ಖಾಮಸವಾಡಿಯಲ್ಲಿ ಜೂನ್4 ಮತ್ತು 5ರಂದು ಎರಡು ದಿನಗಳ ರೈತರ ಮುಷ್ಕರದಲ್ಲಿ ನೂರಾರು ಹಾಲು ಉತ್ಪಾದಕರನ್ನು ಸಂಘಟಿಸಿದ್ದರು ಶೇಲ್ಕೆ. ಅವರೆಲ್ಲರೂ ತಾವು ತಂದಿದ್ದ ಸಾವಿರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದರು. ಅದಲ್ಲದೆ, ಒಂದು ಕಿಮೀ ಉದ್ದದ ವಿನಂತಿ ಪತ್ರವೊಂದಕ್ಕೆ ಸಹಿ ಮಾಡಿದರು.
ಆ ಮುಷ್ಕರದಲ್ಲಿ ಪಾಲ್ಗೊಂಡ ಚಂದ್ರಕಾಂತ ಪಾಟೀಲ (32) ಗೋಧಿ, ಸಣ್ಣಜೋಳ ಮತ್ತು ಸೋಯಾಬೀನ್ ಬೆಳೆಸುವ ಒಬ್ಬ ರೈತ. ನಾನು ಆ ಎರಡು ದಿನಗಳಲ್ಲಿ 800 ರೂಪಾಯಿಯ ಹಾಲನ್ನು ರಸ್ತೆಗೆ ಚೆಲ್ಲಿದೆ. ನನಗೂ ಇಬ್ಬರು ಸಣ್ಣ ಮಕ್ಕಳಿ¨ªಾರೆ. ಪ್ರತಿಯೊಬ್ಬ ರೈತನೂ ಸಾಲದ ಹೊರೆಯಿಂದ ಸೋತಿ¨ªಾನೆ. ನಾವು ಎರಡು ದಿನ ಮಾತ್ರ ಮುಷ್ಕರ ಮಾಡಬಲ್ಲೆವು. ಸರಕಾರಕ್ಕೆ ಈ ವಿಷಯ ಚೆನ್ನಾಗಿ ಗೊತ್ತಿದೆ ಎಂಬುದು ಅವರ ಹತಾಶೆಯ ಮಾತು.
ತಾನು ಕೈಯಾರೆ ಬೆಳೆಸಿದ್ದನ್ನೇ ರಸ್ತೆಗೆ ಚೆಲ್ಲುವಾಗ ರೈತನ ಮನಸ್ಸಿನಲ್ಲಿ ಏನಾಗುತ್ತದೆ ಎಂಬುದನ್ನು ನೀವು ಕಲ್ಪಿಸಲಿಕ್ಕೂ ಸಾಧ್ಯವಿಲ್ಲ. ಆದರೆ ನಮ್ಮ ಸಂಕಟದ ಮಾತುಗಳಿಗೆ ಯಾರೂ ಕಿವಿಗೊಡದಿರುವಾಗ ನಮಗೆ ಪ್ರತಿಭಟನೆಯ ದಾರಿಯೊಂದೇ ಉಳಿದಿರೋದು ಎನ್ನುವ ಪಾಟೀಲ… ಕೇಳುವ ಪ್ರಶ್ನೆ: ಒಂದು ಕ್ವಿಂಟಾಲ… ಗೋಧಿ ಅಥವಾ ಸಣ್ಣ ಜೋಳ ಬೆಳೆಸಲು 2,000 ರೂಪಾಯಿ ಖರ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಅದರ ರೇಟು 1,500ರಿಂದ 1,700 ರೂಪಾಯಿ ನಡುವೆ ಏರಿಳಿಯುತ್ತದೆ. ಹೀಗಾದರೆ ನಾವು ಬದುಕುವುದು ಹೇಗೆ?
ಆದ್ದರಿಂದಲೇ ಚಂದ್ರಕಾಂತ ಪಾಟೀಲರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸರಿಗೆ ನೇರ ಸವಾಲು ಹಾಕಿ¨ªಾರೆ. ಆ ಸವಾಲು: ಕುಟುಂಬದ ಎಲ್ಲ ಖರ್ಚು, ಅಂದರೆ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸದ ಖರ್ಚು ಮತ್ತು ದಿನಕ್ಕೆರಡು ಊಟದ ಖರ್ಚು, ಇದನ್ನೆಲ್ಲ ನನ್ನ ಜಮೀನಿನಲ್ಲಿ ಬೇಸಾಯ ಮಾಡಿ ಸಿಗುವ ಆದಾಯದಿಂದಲೇ ಮುಖ್ಯಮಂತ್ರಿ ಐದು ವರ್ಷ ನಿಭಾಯಿಸಲಿ. ಹಾಗೆ ಮಾಡಿ ತೋರಿಸಿದರೆ, ನನ್ನ ಐದೆಕ್ರೆ ಜಮೀನನ್ನು ಅವರಿಗೇ ಕೊಟ್ಟು ಬಿಡುತ್ತೇನೆ.
– ಅಡ್ಕೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.