ಬ್ಲಾಕ್ ಮನೆ
Team Udayavani, Nov 20, 2017, 1:00 PM IST
ಇಟ್ಟಿಗೆ ಇಲ್ಲದೆ ಮನೆ ನಿರ್ಮಿಸಲು ಸಾಧ್ಯವೇ ಇಲ್ಲ ಎಂದು ನಂಬಿದ್ದ ಕಾಲವೊಂದಿತ್ತು. ಆದರೆ ಈಗ ಬಂದಿರುವ ಕಾಂಕ್ರಿಟ್ ಬ್ಲಾಕ್‌ಗಳಿಂದ ಇಟ್ಟಿಗೆಯ ವೈಭವ ತುಸು ಮರೆಯಾದಂತೆ ಕಾಣುತ್ತದೆ. ಆದರೆ, ಇಟ್ಟಿಗೆಗಳನ್ನು ಬಳಸಿದಾಗಲೇ ಹೆಚ್ಚಿನ ವಿನ್ಯಾಸಕ್ಕೆ ಅನುಕೂಲವಾಗುತ್ತದೆ ಎಂಬುದು ಒಪ್ಪಲೇಬೇಕಾದ ಮಾತು.
ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದ ಇಟ್ಟಿಗೆಗಳು ಮನೆ ಕಟ್ಟಲು ಹೇಳಿಮಾಡಿಸಿದಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಂಕ್ರಿಟ್ ಬ್ಲಾಕ್ ದಾಂಗುಡಿಯಿಂದ ಅಗರ ಬಳಕೆ ಅನಿವಾರ್ಯ ಎನ್ನುವಂತಾಗಿದೆ. ಹಾಗಾಗಿ ಇಟ್ಟಿಗೆ ಹಾಗೂ ಬ್ಲಾಕ್‌ಗಳ ಮಿಶ್ರ ಬಳಕೆಯೂ ಜನಪ್ರಿಯವಾಗುತ್ತಿದೆ! ಇತ್ತ ತೀರ ಇಟ್ಟಿಗೆಯನ್ನೇ ಬಳಸದೆ ಮನೆ ಕಟ್ಟಿದೆ ಎಂದು ಆಗದೆ, ಕೆಲ ಮುಖ್ಯ ಜಾಗದಲ್ಲಾದರೂ ಅದರ ಬಳಕೆ ಆಗಿ, ಎಲ್ಲಿ ಬ್ಲಾಕ್ ಸುಲಭದಲ್ಲಿ ಬಳಸಬಹುದೋ ಅಲ್ಲೆಲ್ಲ ಧಾರಾಳವಾಗಿ ಬಳಸಬಹುದು.
ಹೊರಗಿನ ಗೋಡೆಗೆ ಇಟ್ಟಿಗೆ ಬಳಕೆ
ಹವಾಮಾನದ ವೈಪರೀತ್ಯದಿಂದ ಹಾಗೂ ಇಟ್ಟಿಗೆ ಗೋಡೆಗಳು “ಉಸಿರಾಡುತ್ತವೆ’, ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ. ಈ ಕಾರಣಕ್ಕೆ ಮನೆಯ ಹೊರಗಿನ ಗೋಡೆಗಳನ್ನು ಇಟ್ಟಿಗೆಯಲ್ಲಿ ಕಟ್ಟಬಹುದು. ಈಗ ಮನೆಗಳೆಲ್ಲಕ್ಕೂ ಕಾಲಂ ಬೀಮ್ ಇರುವುದರಿಂದ ಇಟ್ಟಿಗೆ ಹಾಗೂ ಬ್ಲಾಕ್ ವರಸೆಗಳನ್ನು ಬೆಸೆಯುವುದೂ ಕಷ್ಟವಾಗುವುದಿಲ್ಲ!. ಮನೆಯ ಒಳಗಿನ ಎಲ್ಲ ಪಾರ್ಟಿಷನ್ ಗೋಡೆಗಳನ್ನು ಕಾಂಕ್ರಿಟ್ ಬ್ಲಾಕ್‌ನಲ್ಲಿ ಕಟ್ಟಿಕೊಳ್ಳಬಹುದು. ಹೀಗೆ ಮಾಡುವುದರಿಂದ ಆಗುವ ಮುಖ್ಯ ಲಾಭ, ಮನೆಯ ಒಳಗಿನ ಗೋಡೆಗಳು ಹೆಚ್ಚು ಜಾಗವನ್ನು ತಗೆದುಕೊಳ್ಳದೆ, ಹೊರಗಿನ ಇಟ್ಟಿಗೆ ಗೋಡೆಗಳಿಂದಾಗಿ ಕಳೆದುಕೊಂಡ ಜಾಗವನ್ನು ಮರಳಿ ಪಡೆದಂತಾಗುತ್ತದೆ.
ಕೆಲವೊಮ್ಮೆ ಮನೆಗೆ ವೈವಿಧ್ಯಮಯ ಮುಂಮುಖ ಹೊಂದಿಸಬೇಕೆಂದರೆ, ಬ್ಲಾಕ್ ಗಳಿಗಿಂತ ಗಾತ್ರದಲ್ಲಿ ಸಣ್ಣದಿರುವ ಇಟ್ಟಿಗೆಗಳನ್ನು ಸುಲಭದಲ್ಲಿ ನಮಗಿಷ್ಟಬಂದ ರೀತಿಯಲ್ಲಿ ಜೋಡಿಸಿಕೊಳ್ಳಬಹುದು! ಕಾಂಕ್ರಿಟ್ ಬ್ಲಾಕ್ ಕತ್ತರಿಸಲು ಅಷ್ಟೊಂದು ಸುಲಭವಲ್ಲ. ಸ್ಟೆಪ್ ಗಳನ್ನು ಅಳವಡಿಸಲು, ಅಪ್‌ಸೆರ್‌ಗಳನ್ನು ಮಾಡಲು ಇಟ್ಟಿಗೆ ಹೆಚ್ಚು ಸೂಕ್ತ. ಎಲಿವೇಷನ್‌ಗೆ ಇಟ್ಟಿಗೆ ಹೇಳಿ ಮಾಡಿಸಿದಂತಿದೆ.
ಆರ್ಚ್ ಇತ್ಯಾದಿ ಇಟ್ಟಿಗೆಯಲ್ಲಿ ಮಾಡಿ
ವಿವಿಧ ಆಕಾರದ ಹಾಗೂ ಗಾತ್ರದ ಕಮಾನುಗಳನ್ನು ಮಾಡಲು ಇಟ್ಟಿಗೆ ಹೇಳಿಮಾಡಿಸಿದಂತಿದೆ. ಅದರಲ್ಲೂ, ತೆರೆದ ವಿನ್ಯಾಸದಂತೆ ಅಂದರೆ ಇಟ್ಟಿಗೆ ಕಾಣುವಂತೆ- ವೈರ್ ಕಟ್ ಇಲ್ಲವೇ ಇತರೆ ಮಾದರಿಯ ಇಟ್ಟಿಗೆ ಬಳಸಿ ಆರ್ಚ್ ಮಾಡಿ, ಪ್ಲಾಸ್ಟರ್ ಮಾಡದೆ ಬಿಡುವಂತಿದ್ದರೆ, ಆಗಪಅನಿವಾರ್ಯವಾಗಿ ಇಟ್ಟಿಗೆಯನ್ನೇ ಬಳಸಬೇಕಾಗುತ್ತದೆ. ಅರ್ಧಚಂದ್ರಾಕೃತಿ ಇಲ್ಲ ಇತರೆ ಮಾದರಿಯ ಆರ್ಚ್ ಮಾಲನ್ನು ಅಂದರೆ “ಟೆಂಪ್ಲೆಟ್’ ಅನ್ನು ಮರದಲ್ಲಿ ಇಲ್ಲ ಅಗಲ್ ಐರನ್ ಬಳಸಿ ತಯಾರು ಮಾಡಿ. ಅದರ ಮೇಲೆ ಅಳತೆ ಪ್ರಕಾರ ಇಟ್ಟಿಗೆಗಳನ್ನು ಗಾರೆಯಲ್ಲಿ ಕೂರಿಸುತ್ತ ಬಂದರೆ ಅತಿ ಸುಲಭದಲ್ಲಿ ಕಮಾನು ತಯಾರು ಆಗುತ್ತದೆ.
ಕೆಲವೊಮ್ಮೆ ಮನೆಯೆಲ್ಲ ಮುಗಿಸಿದ ಮೇಲೆ ನಮಗೆ ಎಲಿವೇಷನ್‌ಗೆ ಮತ್ತೂಂದಿಷ್ಟು ಗಮನ ಹರಿಸಬೇಕಾಗಿತ್ತು ಎಂದೆನಿಸಬಹುದು. ಆಗ ನಾವು ಅನಿವಾರ್ಯವಾಗಿ ಮನೆಯ ಮುಂಮುಖಕ್ಕೆ ಎಲ್ಲಿ ಬೇಕೋ ಅಲ್ಲಿ ಇಟ್ಟಿಗೆಯ ಪದರವನ್ನು ಸೇರಿಸಬಹುದು. ಬ್ಲಾಕ್ ಗೋಡೆ ಕಟ್ಟಬೇಕಾದರೇನೇ ಇಟ್ಟಿಗೆಯನ್ನೂ ಸೇರಿಸಿ ವಿನ್ಯಾಸ ಮಾಡಿದರೆ ಈ ಎರಡೂ ಭಿನ್ನ ವಸ್ತುಗಳು ಬೆಸೆಯಲು ಸುಲಭವಾದರೂ, ವಿನ್ಯಾಸ ಬೇಕು ಎಂದಾಗ ಕೆಲ ಮುಂಜಾಗರೂಕತಾ ಕ್ರಮಗಳನ್ನು ಬಳಸಿ ಕಟ್ಟಿದರೆ ತೊಂದರೆ ಏನೂ ಇಲ್ಲ. ಇಟ್ಟಿಗೆ ಕ್ಲಾಡಿಂಗ್ ಕಟ್ಟೆಯ ರೂಪದಲ್ಲಿ, ಇಲ್ಲ ವಿನ್ಯಾಸದ ಪ್ರಕಾರ ಕೆಲವೊಂದು ಕಡೆ ಕಟ್ಟಿಕೊಳ್ಳಬಹುದು. ಕೆಲವೊಮ್ಮೆ ಕಿಟಕಿ ಬಾಗಿಲಿನ ಸುತ್ತಲೂ ಸಹ ಇಟ್ಟಿಗೆಯ ಒಂದು ಸಾಲು ಡೆಕೊರೇಷನ್‌ಗಾಗಿ ಬಳಸಬಹುದು.
ಶಾಖ ತಗಲುವ ಜಾಗದಲ್ಲಿ ಇಟ್ಟಿಗೆ ಬಳಸಿ
ಬ್ಲಾಕ್‌ಗೆ ಹೋಲಿಸಿದರೆ ಇಟ್ಟಿಗೆ ಹೆಚ್ಚು ಜಡವಸ್ತು ಆಗಿದ್ದು, ಒಲೆಯ ಶಾಖ ಇಲ್ಲ ಇತರೆ ಪ್ರದೇಶಗಳಲ್ಲಿ ಶಾಖ ನೇರವಾಗಿ ಬೀಳುವಂತಿದ್ದರೂ ನಾವು ಕಾಂಬಿನೇಷನ್ ಮಾಡಿಕೊಳ್ಳಬಹುದು. ಕೆಲವೊಮ್ಮೆ ಕಾಂಕ್ರಿಟ್ ಬ್ಲಾಕ್‌ಗೆ ಟೈಲ್ಸ್ ಅನ್ನು ಅಂಟಿಸಿದರೆ, ಅದು ಬಿಸಿ ಇಂದಾಗಿ ಕಾಲಾಂತರದಲ್ಲಿ ಅಲುಗಿ, ಠೊಳ್ಳು ಶಬ್ದ ನೀಡಲು ಶುರುಮಾಡಿ, ಕೆಲವೊಮ್ಮೆ ಬಿದ್ದೂ ಹೋಗಬಹುದು. ಈ ತೊಂದರೆ ತಪ್ಪಿಸಲೂ ಕೂಡ ನಾವು ಎಲ್ಲಿ ಬೇಕೋ ಅಲ್ಲೆಲ್ಲ ಸೂಕ್ತ ಪ್ಲಾನಿಂಗ್ ಜೊತೆ ಇಟ್ಟಿಗೆ ಗೋಡೆಗಳನ್ನು ಬ್ಲಾಕ್‌ಗಳ ಜೊತೆಗಿನ ಕಾಂಬಿನೇಷನ್‌ನಲ್ಲಿ ಬಳಸಬಹುದು.
ಮನೆಯ ಪಶ್ಚಿಮದ ಗೊಡೆ ತೆರೆದಂತೆ ಇದ್ದು, ಬೇಸಿಗೆಯಲ್ಲಿ ಹೆಚ್ಚು ಬಿಸಿಯೇರಿ, ಮನೆಯೊಳಗೆ ಶಾಖವನ್ನು ಪ್ರಹರಿಸುವ ಸಾಧ್ಯತೆ ಇದ್ದರೆ, ಈ ಗೋಡೆಯನ್ನೂ ಕೂಡ ಇಟ್ಟಿಗೆಯಿಂದ ಕಟ್ಟಿಕೊಳ್ಳಬಹುದು. ಸಾಮಾನ್ಯವಾಗಿ ಬ್ಲಾಕ್ ಗೋಡೆಗೆ ಹೋಲಿಸಿದರೆ, ಇಟ್ಟಿಗೆ ಗೋಡೆ ಸ್ವಲ್ಪ ಹೆಚ್ಚು ಜಾಗವನ್ನು ತೆಗೆದುಕೊಳ್ಳುವುದರಿಂದ, ಮನೆಯ ಒಟ್ಟಾರೆ ವಿನ್ಯಾಸ ಮಾಡುವಾಗ, ಈ ಒಂದು ಅಂಶವನ್ನು ಗಮನಿಸಿ ಪ್ಲಾನ್ ಮಾಡುವುದು ಹೆಚ್ಚು ಸೂಕ್ತ.
ಮನೆ ಕಟ್ಟುವಾಗ ಹತ್ತಾರು ಮಾದರಿಯ ವಸ್ತುಗಳನ್ನು ಹೇಗಿದ್ದರೂ ಬಳಸಲೇ ಬೇಕಾಗುತ್ತದೆ. ಕೆಲವೊಮ್ಮೆ ಈ ವೈವಿಧ್ಯಮಯ ವಸ್ತುಗಳು ಒಂದಕ್ಕೊಂದು ಬೆಸೆಯುವುದೂ ಕಷ್ಟವೇ!
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್
Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು
Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ