ನಿಮ್ಮ ಮೊಬೈಲ್‌ಗೆ ಇರಲಿ ಬಾಡಿ ಗಾರ್ಡ್‌ !


Team Udayavani, Apr 1, 2019, 6:00 AM IST

Mobile

ಸಾವಿರಾರು ರೂಪಾಯಿ ಖರ್ಚು ಮಾಡಿ ಎಲ್ಲವನ್ನೂ ಪರಿಶೀಲಿಸಿ, ಏನೇನಿದ್ದರೆ ಚೆನ್ನ ಎಂದು ವಿಮರ್ಶಿಸಿ ಒಂದು ಮೊಬೈಲ್‌ ಫೋನ್‌ ಕೊಳ್ಳುತ್ತೀರಿ. ಆದರೆ ಮೊಬೈಲ್‌ ಕೊಂಡ ಬಳಿಕ ಅದನ್ನು ರಕ್ಷಿಸಿಕೊಳ್ಳಲು ಒಂದಷ್ಟು ಎಕ್ಸ್‌ಟ್ರಾ ಅಕ್ಸೆಸರಿಗಳು ಬೇಕಾಗುತ್ತವೆ. ಬೈಕ್‌ ಕೊಂಡ ನಂತರ ಎಕ್ಸ್‌ಟ್ರಾ ಫಿಟ್ಟಿಂಗ್ಸ್‌ ಹಾಕಿಸುತ್ತೇವಲ್ಲ ಹಾಗೆ.

ಗೆಳೆಯರೊಬ್ಬರು ಹೊಸ ಮೊಬೈಲ್‌ ಕೊಂಡ ಬಳಿಕ, ಇದಕ್ಕೆ ಏನೇನು ಕೊಳ್ಳಬೇಕು? ಎಂದು ಕೇಳುತ್ತಾರೆ! ಕನಿಷ್ಟ 8 ಸಾವಿರದಿಂದ 70-80 ಸಾವಿರದವರೆಗೂ ಖರ್ಚು ಮಾಡಿ ಮೊಬೈಲ್‌ ಕೊಳ್ಳುತ್ತೇವೆ. ಮೊಬೈಲ್‌ ಕೊಂಡು ಹಾಗೇ ಬಳಸಲಾಗುವುದಿಲ್ಲ. ಅದರ ಗಾಜು ಗೀರಿ ಹೋಗದಂತೆ, ಸಣ್ಣಪುಟ್ಟದಾಗಿ ಕೆಳಗೆ ಬಿದ್ದಾಗ ಗಾಜು, ಮೊಬೈಲ್‌ನ ಹಿಂಬದಿ ಒಡೆದು ಹೋಗದಂತೆ ರಕ್ಷಣೆ ಮಾಡಿಕೊಳ್ಳಲು ಕೆಲವು ರಕ್ಷಕಗಳು ಬೇಕೇ ಬೇಕು.

ಈಗಂತೂ ಯಾರೂ ರಕ್ಷಕಗಳನ್ನು ಹಾಕಿಕೊಳ್ಳದೇ ಮೊಬೈಲ್‌ ಬಳಸುವುದಿಲ್ಲ. ತುಂಬಾ ಶ್ರೀಮಂತರು, ನನ್ನ ಮೊಬೈಲ್‌ ಒಡೆದರೂ ತೊಂದರೆಯಿಲ್ಲ, ಇನ್ನೊಂದು ಕೊಂಡೇನು ಎಂಬಂಥವರು ಯಾವ ರಕ್ಷಣಾ ಕವಚಗಳನ್ನು ಹಾಕಿಕೊಳ್ಳದೆ ಮೊಬೈಲ್‌ ಬಳಸುತ್ತಾರೆ. ಬ್ಯಾಕ್‌ ಕವರ್‌ ಬಳಸದೇ ಹಾಗೇ ಮೊಬೈಲ್‌ ಬಳಸಬೇಕೆಂಬ ಆಸೆ ನನಗೂ ಇದೆ. ಆದರೆ ಹಾಗೆ ಬಳಸಿದರೆ, ಟೇಬಲ್‌ ಮೇಲೆ, ನೆಲದ ಮೇಲೆ ಇಟ್ಟಾಗ ಮೊಬೈಲ್‌ನ ಹಿಂಬದಿಗೆ ಗೀರುಗಳಾಗಿ ಹಳೆಯದರಂತೆ ಕಾಣುತ್ತದೆ. ಅಕಸ್ಮಾತ್‌ ಬಿದ್ದರೆ ಸುಲಭದಲ್ಲಿ ಒಡೆಯುತ್ತದೆ ಎಂಬ ಕಾರಣಕ್ಕೆ ರಕ್ಷಕಗಳನ್ನು ಬಳಸಲೇಬೇಕಾಗಿದೆ.
ಹಾಗಾದರೆ ಒಂದು ಮೊಬೈಲ್‌ಗೆ ಯಾವ ರೀತಿಯ ರಕ್ಷಕಗಳನ್ನು ಬಳಸಬೇಕು?

ಟೆಂಪರ್‌ ಗ್ಲಾಸ್‌: ಮುಖ್ಯವಾಗಿ, ಮೊಬೈಲ್‌ನ ಪರದೆಯ ರಕ್ಷಣೆಗೆ ಟೆಂಪರ್‌x ಗ್ಲಾಸ್‌ ಹಾಕಿಕೊಳ್ಳುವುದು ಬಹಳ ಉಪಕಾರಿ. ಸ್ಕ್ರೀನ್‌ ಗಾರ್ಡ್‌ಗಳೇ ಬೇರೆ. ಟೆಂಪರ್‌x ಗ್ಲಾಸ್‌ಗಳೇ ಬೇರೆ. ಸ್ಕ್ರೀನ್‌ ಗಾರ್ಡ್‌ ನಿಮ್ಮ ಮೊಬೈಲ್‌ನ ಪರದೆಯ ಮೇಲೆ ಸಣ್ಣಪುಟ್ಟ ಗೀರುಗಳಾಗದಂತೆ ಅಲ್ಪಪ್ರಮಾಣದ ರಕ್ಷಣೆ ನೀಡುತ್ತದೆ ಅಷ್ಟೇ. ಟೆಂಪರ್‌x ಗ್ಲಾಸ್‌ ಹಾಕಿದರೆ ಗೀರುಗಳಾಗುವುದೇ ಇಲ್ಲ. ಉತ್ತಮ ಗುಣಮಟ್ಟದ ಟೆಂಪರ್‌x ಗ್ಲಾಸ್‌ ಅನ್ನು ಪರದೆಯ ಮೇಲೆ ಅಂಟಿಸಿದರೆ ನಿಮ್ಮ ಜೇಬಿನಲ್ಲಿನ ಕೀಗಳು, ಪೆನ್ನುಗಳು, ನಾಣ್ಯಗಳು ಮೊಬೈಲ್‌ಗೆ ತಗುಲಿ ಉಜ್ಜಿದರೂ ಆ ಟೆಂಪರ್‌x ಗಾಜಿನ ಮೇಲೆ ಸಹ ಒಂದು ಗೀರು ಸಹ ಆಗುವುದಿಲ್ಲ.

ಅಲ್ಲದೇ ನಿಮ್ಮ ಜೇಬಿನಿಂದ ಮೊಬೈಲ್‌ ಬಿದ್ದರೂ, ಬಹುತೇಕ ಸಂದರ್ಭಗಳಲ್ಲಿ ಟೆಂಪರ್‌x ಗ್ಲಾಸ್‌ಗಳು ಪರದೆಯನ್ನು ರಕ್ಷಿಸುತ್ತವೆ. ಟೆಂಪರ್‌x ಗಾಜು ಬಿರುಕು ಬಿಟ್ಟು ಒಡೆದುಹೋದರೂ, ಮೊಬೈಲ್‌ನ ಒರಿಜಿನಲ್‌ ಗಾಜು ಸುರಕ್ಷಿತವಾಗಿರುತ್ತದೆ. ಹಾಗಾದರೆ ಉತ್ತಮ ಟೆಂಪರ್‌x ಗ್ಲಾಸ್‌ ಯಾವುದು? ನಿಲ್‌ಕಿನ್‌ ಎಂಬ ಕಂಪೆನಿಯ ಟೆಂಪರ್‌x ಗಾಜುಗಳು ಬಹಳ ಉತ್ತಮ ಗುಣಮಟ್ಟದ್ದಾಗಿರುತ್ತವೆ. ಇವುಗಳ ದರ 600 ರೂ.ಗಳಿಂದ 1000 ರೂ.ಗಳವರೆಗೂ ಇರುತ್ತದೆ. ಅಮೆಜಾನ್‌.ಇನ್‌ ನಲ್ಲಿ, ಸರ್ಚ್‌ಗೆ ಹೋಗಿ, ನಿಮ್ಮ ಮೊಬೈಲ್‌ ನ ಹೆಸರು ಹಾಕಿ ನಿಲ್‌ಕಿನ್‌ ಟೆಂಪರ್‌x ಗ್ಲಾಸ್‌ ಎಂದು ಕೊಟ್ಟರೆ ಸಿಗುತ್ತದೆ.

ಅಥವಾ ನಿಮ್ಮೂರಿನಲ್ಲಿರುವ ಮೊಬೈಲ್‌ ಅಕ್ಸೆಸರಿಗಳನ್ನು ಮಾರುವ ಅಂಗಡಿಗೆ ಹೋಗಿ ಅವರಲ್ಲಿರುವ ಉತ್ತಮ ಟೆಂಪರ್‌x ಗ್ಲಾಸ್‌ಗಳನ್ನು ಹಾಕಿಸಿಕೊಂಡು ಬಳಸಬಹುದು. ಇನ್ನೊಂದು ವಿಷಯ: ಟೆಂಪರ್‌x ಗ್ಲಾಸುಗಳನ್ನು ಆನ್ಲ್„ನ್‌ನಲ್ಲ ತರಿಸಿಕೊಂಡರೂ, ನೀವು ಅದನ್ನು ಹಾಕುವ ಪ್ರಯತ್ನ ಮಾಡಬೇಡಿ. ಮೊಬೈಲ್‌ ಶಾಪ್‌ಗ್ಳಲ್ಲಿ ನುರಿತವರಿಂದ ಹಾಕಿಸಿ.

ಬ್ಯಾಕ್‌ ಕವರ್‌, ಫ್ಲಿಪ್‌ಕವರ್‌: ಪರದೆಯ ರಕ್ಷಣೆಗೆ ಟೆಂಪರ್‌x ಗ್ಲಾಸ್‌ ಆಯಿತು. ಇನ್ನು ಮೊಬೈಲ್‌ನ ದೇಹದ ರಕ್ಷಣೆಗೆ? ಇದಕ್ಕಾಗಿ ಫ್ಲಿಪ್‌ಕವರ್‌ ಅಥವಾ ಬ್ಯಾಕ್‌ ಕವರ್‌ಗಳನ್ನು ಕೊಳ್ಳಬೇಕು. ಬ್ಯಾಕ್‌ ಕವರ್‌ ಎಂದರೆ ಮೊಬೈಲ್‌ನ ಪರದೆ ಮುಚ್ಚುವುದಿಲ್ಲ. ಮೊಬೈಲ್‌ನ ಅಂದ ಕಾಣಬೇಕೆನ್ನುವವರು ಬ್ಯಾಕ್‌ ಕವರ್‌ ಬಳಸುತ್ತಾರೆ. ಮೊಬೈಲ್‌ ಅಂದ ಕಂಡು ನಮಗೇನಾಗಬೇಕು, ಅದು ಸುರಕ್ಷಿತವಾಗಿರಬೇಕು ಎನ್ನುವವರು, ಮೊಬೈಲ್‌ ಪರದೆ ಕೂಡ ಮುಚ್ಚಿಕೊಳ್ಳುವ, ಪುಸ್ತಕದಂತೆ ತೆರೆಯಬಹುದಾದ ಫ್ಲಿಪ್‌ಕವರ್‌ಗಳನ್ನು ಹಾಕಿಕೊಳ್ಳುತ್ತಾರೆ.

ಮೊಬೈಲ್‌ ಬ್ಯಾಕ್‌ ಕವರ್‌ಗಳಲ್ಲೂ ನಿಲ್‌ಕಿನ್‌ ಕಂಪೆನಿಯವು ಗುಣಮಟ್ಟದ್ದಾಗಿರುತ್ತವೆ. ಇದಲ್ಲದೇ ಸ್ಪೈಗನ್‌ ಎಂಬ ಕಂಪೆನಿಯ ಬ್ಯಾಕ್‌ ಕವರ್‌ಗಳು ಬಹಳ ಚೆನ್ನಾಗಿ ರಕ್ಷಣೆ ಮಾಡುತ್ತವೆ. ಇಷ್ಟೇ ಅಲ್ಲದೇ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಸ್ಟೋರ್‌ನಲ್ಲಿ ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಬೈ ಹೆಸರಿನಲ್ಲಿ ಮೊಬೈಲ್‌ ಬ್ಯಾಕ್‌ ಕವರ್‌ಗಳು ದೊರಕುತ್ತವೆ. ಅಮೆಜಾನ್‌.ಇನ್‌ ನಲ್ಲಿ ಸೋಲಿಮೋ ಎಂಬ ಅಮೆಜಾನ್‌ ತಯಾರಿಕೆಯ ಬ್ಯಾಕ್‌ ಕವರ್‌ಗಳು ದೊರಕುತ್ತವೆ. ನೀವು ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ ಆ್ಯಪ್‌ ತೆರೆದು ನಿಮ್ಮ ಮೊಬೈಲ್‌ ನ ಹೆಸರು ಹಾಕಿ ಬ್ಯಾಕ್‌ ಕವರ್‌ ಎಂದು ಟೈಪಿಸಿದರೆ ನೂರಾರು ಬ್ರಾಂಡ್‌ನ‌ ಹೆಸರುಗಳು ತೆರೆದುಕೊಳ್ಳುತ್ತವೆ. ಆ ಉತ್ಪನ್ನಕ್ಕೆ ಖರೀದಿದಾರರು ನೀಡಿರುವ ರೇಟಿಂಗ್‌, ವಿಮರ್ಶೆಗಳನ್ನು ಓದಿ ನಿಮಗೆ ಬೇಕಾದ್ದನ್ನು ಆರಿಸಬಹುದು. ಇನ್ನೊಂದು ವಿಷಯವೆಂದರೆ, ಈಗ ಬಹುತೇಕ ಮೊಬೈಲ್‌ಗ‌ಳಿಗೆ ಕಂಪೆನಿಗಳೇ ಪಾರದರ್ಶಕ ಬ್ಯಾಕ್‌ ಕವರ್‌ಗಳನ್ನು ನೀಡಿರುತ್ತವೆ. ಅವು ಬೇಗ ಮಾಸಿದರೂ ಚೆನ್ನಾಗಿ ರಕ್ಷಣೆ ನೀಡುತ್ತವೆ. ಶಿಯೋಮಿ ಕಂಪೆನಿಯ ಮಿ.ಸ್ಟೋರ್‌ನಲ್ಲಿ ಮೊಬೈಲ್‌ ಬ್ಯಾಕ್‌ ಕವರ್‌ಗಳು, ಫ್ಲಿಪ್‌ಕವರ್‌ಗಳು ದೊರಕುತ್ತವೆ.

ಪರದೆ ರಕ್ಷಕ, ಮೊಬೈಲ್‌ನ ದೇಹ ರಕ್ಷಕ ಆಯ್ತು. ಇನ್ನೇನು ಕೊಳ್ಳಬೇಕು? ಎಂದರೆ, ಒಂದು ಪವರ್‌ ಬ್ಯಾಂಕ್‌ ಕೊಂಡುಕೊಳ್ಳಿ. ನೀವು ಹೆಚ್ಚು ಮೊಬೈಲ್‌ ಬಳಸುವವರಾದರೆ, ಪ್ರಯಾಣಿಸುವವರಾದರೆ ಒಂದು ಪವರ್‌ ಬ್ಯಾಂಕ್‌ ನಿಮ್ಮ ಬಳಿ ಇದ್ದರೆ ಒಳ್ಳೆಯದು. ಕನಿಷ್ಟ 10000 ಎಂಎಎಚ್‌ ಸಾಮರ್ಥ್ಯ ಇರುವ ಒಂದು ಪವರ್‌ ಬ್ಯಾಂಕ್‌ ಪೂರ್ತಿ ಚಾರ್ಜ್‌ ಮಾಡಿಕೊಂಡಿದ್ದರೆ, ನಿಮ್ಮ ಮೊಬೈಲನ್ನು ಸರಾಸರಿ ಮೂರು ಬಾರಿ ಅದರಿಂದ ಚಾರ್ಜ್‌ ಮಾಡಿಕೊಳ್ಳಬಹುದು. ಹೊರಗೆ ಹೋದಾಗ ಮೊಬೈಲ್‌ ಬ್ಯಾಟರಿ ಖಾಲಿಯಾದರೂ, ಪವರ್‌ ಬ್ಯಾಂಕ್‌ ಮೂಲಕ ಚಾರ್ಜ್‌ ಮಾಡಿಕೊಳ್ಳಬಹುದು.

ಪವರ್‌ಬ್ಯಾಂಕ್‌ಗಳಲ್ಲಿ ಶಿಯೋಮಿ (ಎಂಐ), ಅಂಬ್ರಾನೆ, ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಬೈ, ಡುರಾಸೆಲ್‌, ಲೆನೊವೋ, ಸಿಸ್ಕಾ, ಫಿಲಿಪ್ಸ್‌ ಮತ್ತಿತರ ಬ್ರಾಂಡ್‌ಗಳಲ್ಲಿ ದೊರಕುತ್ತವೆ. ಎಗೇನ್‌ ಹೆಚ್ಚು ರೇಟಿಂಗ್‌ ಇರುವಂಥವನ್ನು ನೋಡಿ ಆರಿಸಿಕೊಳ್ಳಿ.

ಮೊಬೈಲ್‌ನ ಪರದೆಯನ್ನು, ಪ್ರತಿದಿನ ಮೃದುವಾದ ಹತ್ತಿ ಬಟ್ಟೆಯಲ್ಲಿ ಒರೆಸಿ ಇಟ್ಟುಕೊಳ್ಳಿ. ಕನಿಷ್ಟ ತಿಂಗಳಿಗೊಮ್ಮೆಯಾದರೂ, ಬ್ಯಾಕ್‌ ಕವರ್‌, ಫ್ಲಿಪ್‌ ಕವರ್‌ ತೆಗೆದು ಅದರೊಳಗಿರುವ ಧೂಳು, ಕಸ ತೆಗೆದು ಸ್ವತ್ಛಗೊಳಿಸಿಕೊಳ್ಳಿ.

–  ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.