ಬೋಯರ್‌ ಮೇಕೆಯಿಂದ ಭಾರೀ ಲಾಭ ಉಂಟು

Team Udayavani, Dec 10, 2018, 6:00 AM IST

goat-south-african-breed.jpg

ಬೋಯರ್‌ ತಳಿಯ ಮೇಕೆಗಳಿಗೆ ಬೇಡಿಕೆ ಹೆಚ್ಚು. ಒಂದು ವರ್ಷ ಆಗುತ್ತಿದ್ದಂತೆಯೇ ಸಂತಾನೋತ್ಪತ್ತಿಗೆ ಸಿದ್ಧವಾಗುವ ಈ ಮೇಕೆ ಕೆಲವೊಮ್ಮೆ ಮೂರು ಮರಿಗಳನ್ನು ಹಾಕುವುದು ಉಂಟು. ಈ ಮೇಕೆಗಳನ್ನು ಸಾಕುವ ಮೂಲಕ ಇಬ್ಬರು ಟೆಕ್ಕಿಗಳು ಲಕ್ಷಾಧಿಪತಿಗಳಾಗಿದ್ದಾರೆ. 

ಹೊಸ ಹೊಸ ಸಂಶೋಧನೆಗಳ ಪರಿಣಾಮವಾಗಿ ಕುರಿಸಾಕಾಣಿಕೆಯಲ್ಲಿಯೂ ಸಾಕಷ್ಟು ಪ್ರಗತಿಪರ ಬದಲಾವಣೆಗಳಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮಹಾರಾಷ್ಟ್ರದ ಫ‌ಲ್ಟಾನ್‌ನಲ್ಲಿರುವ ನಿಂಬಕರ್‌ ಸಂಶೋಧನಾ ಕೇಂದ್ರದವರು ಸಾಕಷ್ಟು ವರ್ಷಗಳ ಸಂಶೋಧನೆಯ ಫ‌ಲವಾಗಿ ಬೋಯರ್‌ ತಳಿಯ ಮೇಕೆಗಳ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.  ಅವು ವರ್ಷಕ್ಕೆ ಎರುಡು ಬಾರಿಯಂತೆ, ಒಮ್ಮೆಗೆ ಎರಡು ಮರಿಗಳಿಗೆ ಜನ್ಮನೀಡುತ್ತಿವೆ. ಒಮ್ಮೊಮ್ಮೆ ಮೂರು ಮರಿಹಾಕಿದ್ದೂ ಉಂಟು. ಸೌತ್‌ ಆಫ್ರಿಕನ್‌ ತಳಿಯ ಈ ಬೋಯರ್‌ ಮೇಕೆಗಳು ಅಮೇರಿಕಾ, ಆಸ್ಟ್ರೇಲಿಯಾ, ಕೆನಡಾಗಳಲ್ಲಿ ಮಾಂಸ‌ಕ್ಕಾಗಿ ಪ್ರಖ್ಯಾತಿ ಹೊಂದಿವೆ. 

ಸ್ವಲ್ಪ ತಡೀರಿ.  ಇಷ್ಟೆಲ್ಲಾ ಹೇಳುತ್ತಿರುವುದಕ್ಕೆ ಕಾರಣವೂ ಇದೆ. ಮೈಸೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಪ್ಟ್ವೇರ್‌ ಎಂಜಿನಿಯರ್‌ಗಳಾಗಿರುವ ಭಾನುಪ್ರಕಾಶ್‌ ಹಾಗೂ ನಜೀರ್‌ ಎಂಬ ಇಬ್ಬರು ಯುವ ಟೆಕ್ಕಿಗಳು ಕುರಿ ಸಾಕಾಣಿಕೆಯ ತರಬೇತಿ ಪಡೆದಿದ್ದಾರೆ. ನಂತರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಎಂಬಲ್ಲಿ ಮಿಹಿಕಾ ಗೋಟ್‌ಫಾರಂ ಅಂತ ಶುರು ಮಾಡಿದ್ದಾರೆ.  ಇಲ್ಲಿ ಬೋಯರ್‌ ತಳಿಯ ಸುಮಾರು 85 ಮೇಕೆಗಳಿವೆ.

ಅತ್ಯಾಧುನಿಕ ಶೆಡ್‌
ತಮ್ಮ ಜಮೀನಿನಲ್ಲಿ ಐದು ಎಕರೆಗಳಷ್ಟು ಜಾಗವನ್ನು ಮೇಕೆ ಸಾಕಾಣಿಕೆಗಾಗಿಯೇ ಮೀಸಲಿರಿಸಿದ್ದು, ಸುಮಾರು 4.5 ಲಕ್ಷ ವೆಚ್ಚದಲ್ಲಿ ವಿಶಾಲ ಜಾಗದಲ್ಲಿ (30-50)  ಆಧುನಿಕ ಶೆಡ್‌ ನಿರ್ಮಿಸಿದ್ದಾರೆ.  ಮೇಕೆಗಳಿಗೆ ನೀರು, ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ನೆಲಮಟ್ಟದಿಂದ ಸುಮಾರು ಐದು ಅಡಿಗಳಷ್ಟು ಎತ್ತರದಲ್ಲಿರುವ ಈ ಶೆಡ್‌ನ‌ಲ್ಲಿ ಮೇಕೆ¿ ಸ್ವತ್ಛತೆಗೆ ಆಧ್ಯತೆ ನೀಡಲಾಗಿದೆ. ಉಳಿದ ಜಾಗದಲ್ಲಿ ಮೇಕೆಗಳಿಗೆ ಅಗತ್ಯವಾದ ಮೇವನ್ನು ಬೆಳೆಯುತ್ತಿದ್ದು, ಮೇಕೆಗಳ ಪೋಷಣೆಗಾಗಿ ಇಬ್ಬರು ಕೆಲಸಗಾರರನ್ನು ನೇಮಿಸಿದ್ದಾರೆ. 

ಜಾಗರೂಕ ಪಾಲನೆ
ನೆರಳು ಹಾಗೂ ಗಾಳಿಮಳೆಯಿಂದ ರಕ್ಷಣೆಗಾಗಿ ನಿರ್ಮಿಸಿಕೊಂಡ ಶೆಡ್ಡಿನೊಳಗೆ ಈ ತಳಿಯ ಮೇಕೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಅಗಸೆ, ರೇಷ್ಮೆ ಸೊಪ್ಪು, ಒಣಮೇವು, ಕಡಲೆಬಳ್ಳಿ, ಮೆಕ್ಕೆಜೋಳದ ತೆನೆ – ಹೀಗೆ ಸಾಕಷ್ಟು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.

ಸಂಪೂರ್ಣ ಬಿಳಿ ಬಣ್ಣದ ದೇಹ ಮತ್ತು ಕತ್ತಿನ ಸುತ್ತಲೂ ಕಡು ಕಂದು (ಮೆಹಂದಿ) ಬಣ್ಣವನ್ನು ಹೊಂದಿರುವ ಬೋಯರ್‌ ತಳಿಯ ಮೇಕೆಯ ಸರಾಸರಿ ಜೀವಿತಾವಧಿ ಹದಿನಾಲ್ಕು ವರ್ಷ.  ಮೂರು ವರ್ಷದಲ್ಲೇ ಗಂಡು ಮೇಕೆಯು ಸರಾಸರಿ 130ಕಿ.ಲೋ ಗ್ರಾಂಗಳಷ್ಟು ತೂಕವಿರುತ್ತದೆ.  ಹೆಣ್ಣು ಮೇಕೆಯು ಸರಾಸರಿ 100ಕೆ.ಜಿಯಷ್ಟಿರುತ್ತದೆ. ತನ್ನ ಜೀವಿತಾವಧಿಯಲ್ಲಿ ಆರರಿಂದ ಎಂಟು ವರ್ಷಗಳವರೆಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಈ ಮೇಕೆಯು ಹುಟ್ಟಿದ ಎಂಟರಿಂದ ಒಂಭತ್ತು ತಿಂಗಳಲ್ಲೇ ಸಂತಾನೋತ್ಪತ್ತಿಗೆ ಸಿದ್ಧಗೊಳ್ಳುವುದರಿಂದ ಲಾಭ ಹೆಚ್ಚು.  ಗರ್ಭಧರಿಸಿದ ಐದೇ ತಿಂಗಳಲ್ಲಿ ಎರಡು ಮರಿಗಳನ್ನು ಹಾಕುತ್ತದೆ. ಒಮ್ಮೊಮ್ಮೆ ಮೂರು ಮರಿಗಳನ್ನೂ ಹಾಕುವುದುಂಟು. ಹುಟ್ಟಿದ ಮರಿಗಳು ಸುಮಾರು ನಾಲ್ಕು ಕೆ.ಜಿ ತೂಕವಿರುತ್ತವೆ. ಈ ಬೋಯರ್‌ ತಳಿಯ ಹಾಲೂ ಶ್ರೇಷ್ಠವಾಗಿದ್ದು ನಾಟಿ ಹಾಲಿಗಿಂತಲೂ ದುಪ್ಪಟ್ಟು ಕೊಬ್ಬಿನಂಶವನ್ನು ಹೊಂದಿರುತ್ತದೆಯೆಂದು ಸಂಶೋಧನೆಗಳು ದೃಢಪಡಿಸಿವೆ.

ತಳಚರಿಯೊಂದಿಗೆ ಕ್ರಾಸಿಂಗ್‌
ಕೇರಳದಿಂದ ಕೊಂಡು ತಂದ ತಳಚರಿ ತಳಿಯೊಂದಿಗೆ ಬೋಯರ್‌ ಮೇಕೆಗಳನ್ನು ಕ್ರಾಸ್‌ ಮಾಡಿಸಿ ಸಾಕಷ್ಟು ಉತ್ತಮ ಗುಣಮಟ್ಟದ ಬೋಯರ್‌ ಮರಿಗಳನ್ನು ಅಭಿವೃದ್ಧಿಪಡಿಸುತ್ತಿರುವ ಭಾನುಪ್ರಕಾಶ್‌ ಮತ್ತು ನಜೀರ್‌ರವರು ಸುಮಾರು ಆರು ತಿಂಗಳವರೆಗೂ ಮರಿಗಳನ್ನು ಪೋಷಿಸಿ, ತದನಂತರ ಅದು ಗರ್ಭಕಟ್ಟುವ ಸಾಮರ್ಥ್ಯ ಹೊಂದುವ ಸಮಯಕ್ಕೆ ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಾರೆ. 

ಕಡಿಮೆ ಖರ್ಚು, ಅಧಿಕ ಲಾಭ
ಆರು ತಿಂಗಳ ಬೋಯರ್‌ ಮರಿಯೊಂದು 20ರಿಂದ 25 ಕೆಜಿ ತೂಗುತ್ತಿದ್ದು ಅದು ಇಂದಿನ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯಕ್ಕೆ ಮಾರಾಟಗೊಳ್ಳುತ್ತದೆ. ಈ ಮೇಕೆ ಸಾಕಾಣಿಕೆಯು ಆರ್ಥಿಕ ಹಾಗೂ ಶ್ರಮದ ದೃಷ್ಟಿಯಿಂದ ಅಷ್ಟೊಂದು ತ್ರಾಸದಾಯಕವಲ್ಲ ಎನ್ನುತ್ತಾರೆ ನಜೀರ್‌. ಇದರ ಅಂದಾಜು ವಾರ್ಷಿಕ 2 ಲಕ್ಷಗಳಷ್ಟು ವ್ಯಯಮಾಡಿ, ತಮ್ಮ ಫಾರ್ಮನಲ್ಲಿ ಪ್ರತೀ ವರ್ಷ ನೂರೈವತ್ತರಿಂದ ಇನ್ನೂರು ಮರಿಗಳನ್ನು ಮಾರಾಟ ಮಾಡುತ್ತಿದ್ದು. ತಮ್ಮೆಲ್ಲಾ ಖರ್ಚು ಕಳೆದು ಅಂದಾಜು 10 ರಿಂದ 12 ಲಕ್ಷಗಳಷ್ಟು ಲಾಭ ಪಡೆಯುತ್ತಿದ್ದಾರಂತೆ. ಇನ್ನು ಹಾಲು ಹಾಗೂ ಗೊಬ್ಬರ ಮಾರಾಟದಿಂದ ಸಿಗುವ ಲಾಭದ ಲೆಕ್ಕವೇ ಬೇರೆ.

ಈ ತಳಿಯ ಮೇಕೆಗಳ ಮರಿಗಳನ್ನು ಅವು ಸಂತಾನೋತ್ಪತ್ತಿಗೆ ಸಿದ್ಧವಾಗುವ ವೇಳೆಗೆ ಹಣತೆತ್ತು ಕೊಂಡೊಯ್ಯುವ ಸಾಕುದಾರರು, ಅವುಗಳನ್ನು ನಾಟಿ ಮೇಕೆಗಳೊಂದಿಗೆ ಕ್ರಾಸ್‌ ಮಾಡಿಸುತ್ತಾರೆ. ಹೀಗೆ ಹುಟ್ಟಿದ ನಾಟಿ ಮೇಕೆಗಳೂ ಸಹ ಸಾಕಷ್ಟು ಕಡಿಮೆ ಅವಧಿಯಲ್ಲಿಯೇ ಮರಿಗಳಿಗೆ ಜನ್ಮನೀಡಿ ಮಾಂಸೋತ್ಪಾದನೆಯು ದ್ವಿಗುಣಗೊಳ್ಳುವುದರಿಂದ ಲಾಭದಾಯಕವಂತೆ.  

ಮಾಹಿತಿಗೆ-9900204718. 

– ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.