ಬಾಂಡ್ ಮನ್ನಾ
ಯೆಸ್ ಬ್ಯಾಂಕ್‌ನಲ್ಲಿ ನೋ ಮನಿ?
Team Udayavani, Mar 16, 2020, 5:51 AM IST
ಯಾವುದೇ ಕಂಪನಿ ಫಂಡ್ಸನ್ನು ಕ್ರೋಢಿಕರಿಸುವ ಇತರ ಸ್ವಾಭಾವಿಕ ಮಾರ್ಗಗಳು ಇಲ್ಲದಿರುವಾಗ, ಬಾಂಡ್‌ಅನ್ನು ಬಿಡುಗಡೆ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಹೂಡಿಕೆದಾರರು ಫಂಡ್ಸ್ ಬಿಡುಗಡೆ ಮಾಡುವವರಿಗೆ ಬಾಂಡ್ ರೂಪದಲ್ಲಿ ಸಾಲ ನೀಡಿದಂತೆ. ಅದನ್ನು ಪರ್ಪ್ ಚುವಲ್ ಬಾಂಡ್ ಎಂದು ಕರೆಯುತ್ತಾರೆ. ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್ ತನ್ನ ಚೇತರಿಕೆಗಾಗಿ ಇದೇ ಹಾದಿ ಹಿಡಿದಿತ್ತು. ಆ ಬಾಂಡ್‌ಅನ್ನು ಆರ್‌ಬಿಐ ಮನ್ನಾ ಮಾಡಲು ನಿರ್ಧರಿಸಿರುವುದು ಬ್ಯಾಂಕಿಂಗ್ ವಲಯದಲ್ಲಿ ಸಂಚಲನ ಮೂಡಿಸಿದೆ.
“ಯೆಸ್ ಬ್ಯಾಂಕ್’ ಪುನಶ್ಚೇತನ ಯೋಜನೆಯ ಭಾಗವಾಗಿ ಯೆಸ್ ಬ್ಯಾಂಕ್ ಬಿಡುಗಡೆ ಮಾಡಿದ, ಪರ್ಪ್ ಚುವಲ್ (ಶಾಶ್ವತ) ಬಾಂಡ್‌ಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮನ್ನಾ ಮಾಡಲು ನಿರ್ಧರಿಸಿರುವುದು, ಹಣಕಾಸು ವಲಯದಲ್ಲಿ ಸಂಚಲನ ಮೂಡಿಸಿದೆ ಮತ್ತು ಹಲವರ ವಿರೋಧಕ್ಕೂ ಕಾರಣವಾಗಿದೆ. ಆರ್.ಬಿ.ಐ.ನ ಈ ಹೊಸ ನಿರ್ಧಾರದ ಬಗ್ಗೆ ಹೂಡಿಕೆದಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಯೆಸ್ ಬ್ಯಾಂಕ್‌ನಲ್ಲಿ ಸಾಂಸ್ಥಿಕ ಹೂಡಿಕೆದಾರರು (Institutional investors) 10,800 ಕೋಟಿ ರೂ. ಮೌಲ್ಯದ ಪಪೆìಚುವಲ್ ಬಾಂಡ್‌ಅನ್ನು ಹೊಂದಿದ್ದು, ಅವರು ರಿಸರ್ವ್ ಬ್ಯಾಂಕ್‌ನ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ ಎನ್ನಲಾಗುತ್ತಿದೆ.
ಇದು ಸೆಕ್ಯುರಿಟಿ ಇದ್ದಂತೆ
ಯಾವುದಾದರೂ ಕಂಪನಿಗಳು ಫಂಡ್ಸನ್ನು ಕ್ರೋಢಿಕರಿಸುವ ಇತರ ಸ್ವಾಭಾವಿಕ ಮಾರ್ಗಗಳು ಇಲ್ಲದಿರುವಾಗ, ಈ ಮಾರ್ಗವನ್ನು ಬಳಸಿಕೊಂಡು ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತವೆ. ಇದು ಒಂದು ರೀತಿಯಲ್ಲಿ ಹೂಡಿಕೆದಾರರು ಫಂಡ್ಸ್ ಬಿಡುಗಡೆ ಮಾಡುವವರಿಗೆ ಬಾಂಡ್ ರೂಪದಲ್ಲಿ ಸಾಲ ನೀಡಿದಂತೆ. ಈ ಬಾಂಡ್‌ಗಳಿಗೆ ನಿರ್ದಿಷ್ಟ ಸಮಯದ ಪರಿಮಿತಿ ಅಥವಾ ಮೆಚುರಿಟಿ ದಿನಾಂಕ ಇರುವುದಿಲ್ಲ. ಇವು ನಿರಂತರವಾಗಿ ಹೂಡಿಕೆದಾರರಿಗೆ ಒಪ್ಪಿದ ಬಡ್ಡಿಯನ್ನು ನೀಡುತ್ತವೆ. ಈ ಬಾಂಡ್ ಹೂಡಿಕೆದಾರನ ಹೆಸರಿನಲ್ಲಿ ಇರುವ ತನಕ ಆತನಿಗೆ ಬಡ್ಡಿ ದೊರಕುತ್ತದೆ. ಇವು ಒಂದು ರೀತಿಯಲ್ಲಿ ಡಿವಿಡೆಂಡ್ ನೀಡುವ ಸ್ಟಾಕ್ ಅಥವಾ ಸೆಕ್ಯುರಿಟಿಗಳಂತೆ ಕೆಲಸ ಮಾಡುತ್ತವೆ. ಕಂಪನಿಗಳು ಹಣಕಾಸು ದುಸ್ಥಿತಿಯುಲ್ಲಿರುವಾಗ, ಫಂಡ್ಸ್ ಕ್ರೋಢೀಕರಿಸುವ ಸುಲಭ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬಳಸುವ ಅಧಿಕೃತ ಮಾರ್ಗ ಎಂದು ಬಣ್ಣಿಸುತ್ತಾರೆ. ಬಾಂಡ್ ಬಿಡುಗಡೆ ಮಾಡಿದ ಕಂಪನಿಗಳು ಹಣಕಾಸು ತೊಂದರೆಯಲ್ಲಿದ್ದಾಗ ಈ ಬಾಂಡ್‌ಗಳು ಕ್ರೆಡಿಟ್ ರಿಸ್ಕನ್ನು ಕ್ಯಾರಿ ಮಾಡುತ್ತವೆ. ಇವುಗಳಿಗೆ ಬಾಂಡ್ ಎಂದೂ ಹೇಳುತ್ತಾರೆ. ಹಣಕಾಸು ಮಾರುಕಟ್ಟೆಯಲ್ಲಿ ಇದನ್ನು “ಈಕ್ವಿಟಿ’ ಎಂದು ಪರಿಗಣಿಸುತ್ತಾರೆಯೇ ವಿನಾ ಸಾಲ ಎಂದು ಪರಿಗಣಿಸುವುದಿಲ್ಲ
ಅಸಲು ಬಡ್ಡಿ ಎರಡೂ ಇಲ್ಲ
ಯೆಸ್ ಬ್ಯಾಂಕ್, 10,800 ಕೋಟಿ ರೂ. ಮೊತ್ತದ ಇಂಥ ಬಾಂಡ್‌ಗಳನ್ನು ಬಿಡುಗಡೆ ಮಾಡಿ ತನ್ನ ಮೂಲ ಬಂಡವಾಳದ ಸ್ಥಿತಿಯನ್ನು ಸುಧಾರಿಸಿಕೊಂಡಿತ್ತು. ಹಲವು ಸಾಂಸ್ಥಿಕ ಸಂಸ್ಥೆಗಳು ಈ ಬಾಂಡ್‌ಗಳನ್ನು ಖರೀದಿಸಿದ್ದವು. ಈಗ ರಿಸರ್ವ್ ಬ್ಯಾಂಕ್ ನಿಯಮಗಳ ಅಡಿಯಲ್ಲಿ ಇಂಥ ಬಾಂಡ್‌ಗಳನ್ನು ಮನ್ನಾ ಮಾಡಲು ನಿರ್ಧರಿಸಿದೆ. ಅದರಿಂದಾಗಿ ಈ ಬಾಂಡ್ ಖರೀದಿಸಿದವರಿಗೆ ಅಸಲು ಮತ್ತು ಬಡ್ಡಿ ಎರಡೂ ಕೈಬಿಡುತ್ತದೆ. ಇವುಗಳನ್ನು ಖರೀದಿಸಿದ ಸಾಂಸ್ಥಿಕ ಹೂಡಿಕೆದಾರರು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಈ ರಿಸರ್ವ್ ಬಾಂಕ್‌ನ ಈ ನಿರ್ಧಾರದ ವಿರುದ್ಧ ಈ ಸಂಸ್ಥೆಗಳು ಕಾನೂನು ಹೋರಾಟ ಮಾಡಲು ಚಿಂತನೆ ನಡೆಸಿವೆ. ಪಪೆìಚುವಲ್ ಬಾಂಡ್‌ಗಳನ್ನು ಈ ರೀತಿ ಮನ್ನಾ ಮಾಡಲು ನಿರ್ಧರಿಸಿರುವುದು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. ಫಂಡ್ಸ್ ಸಂಗ್ರಹ ಅಥವಾ ಕ್ರೋಢೀಕರಣ ಕಷ್ಟವಾದಾಗ ಹೆಚ್ಚಿನ ಲಾಭ ತೋರಿಸಿ ಇಂಥ ಬಾಂಡ್‌ಗಳನ್ನು ಬಿಡುಗಡೆ ಮಾಡಿ, ಈ ರೀತಿ ಮನ್ನಾ ಮಾಡುವುದು ಎಷ್ಟು ಸರಿ? ಎಂಬುದು ಹೂಡಿಕೆದಾರರ ಪ್ರಶ್ನೆ.
ಹೂಡಿಕೆದಾರರು ಕೋರ್ಟಿಗೆ
1992ರಲ್ಲಿ ಪರಿಚಯಿಸಿದ ಈ ಬಾಂಡ್‌ಗಳನ್ನು , ಬ್ಯಾಂಕಿನ ಟಯರ್- 2 (Tie) ಕ್ಯಾಪಿಟಲ್ ಎಂದು ಪರಿಗಣಿಸಲಾಗುತ್ತದೆ. ನಿಶ್ಚಿತ ಆದಾಯದ ಮೂಲ ಎನ್ನುವ ಇದನ್ನು ಯೆಸ್ ಬ್ಯಾಂಕ್‌ನ restructuring schemeನಲ್ಲಿ ಹಿಂಪಡೆಯಲಾಗುತ್ತಿದೆ, ಅಥವಾ ಮನ್ನಾ ಮಾಡಲಾಗುತ್ತಿದೆ. ಇದರಿಂದ ಸಾಂಸ್ಥಿಕ ಹೂಡಿಕೆದಾರರು ಅತಂಕದಲ್ಲಿದ್ದಾರೆ. ಬ್ಯಾಂಕ್ ಮಾಡಿದ ತಪ್ಪಿಗೆ ತಾವು ದಂಡ ತೆರಬೇಕೇ ಎಂದು ಕೇಳುತ್ತಿದ್ದಾರೆ. ಈ ವಿಚಾರವಾಗಿ, ಮುಂದಿನ ದಿನಗಳಲ್ಲಿ ಸುದೀರ್ಘ ನ್ಯಾಯಾಲಯ ಸಮರ ಆಗುವುದರಲ್ಲಿ ಸಂಶಯವಿಲ್ಲ. ಈ ರೀತಿ ಮನ್ನಾ ಮಾಡುವುದರಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಕಂಪನಿಗಳಿಗೆ ಮತ್ತು ಬ್ಯಾಂಕುಗಳಿಗೆ ಫಂಡ್ಸ್ ಕ್ರೋಢೀಕರಣ ಮಾಡುವುದು ಕಷ್ಟದಾಯಕವಾಗುತ್ತದೆ ಎಂದೂ ಹೇಳಲಾಗುತ್ತದೆ.
ರಿಡೀಮ್ ಸೌಲಭ್ಯ ಇರುವುದಿಲ್ಲ
ಈ ಬಾಂಡ್‌ಗಳನ್ನು ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಖರೀದಿ ಮಾಡುತ್ತವೆ. ಈ ಬಾಂಡ್‌ಗಳನ್ನು ಬಿಡುಗಡೆ ಮಾಡಿದ ಬ್ಯಾಂಕ್‌ಗಳು ಮರುಖರೀದಿ ಮಾಡಲು ಬಯಸಿದಾಗ ಮಾತ್ರವೇ ಅವುಗಳನ್ನು ಸಂಬಂಧಪಟ್ಟ ಬ್ಯಾಂಕುಗಳಿಗೆ ಮಾರಾಟ ಮಾಡಬಹುದು. ಅಥವಾ ಶೇರುಪೇಟೆಯಲ್ಲಿ ಮಾರಾಟ ಮಾಡಬಹುದು. ಶೇರು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ರಿಡೀಮ್ ವ್ಯವಸ್ಥೆ ಇದರಲ್ಲಿ ಇರುವುದಿಲ್ಲ. ನಿರಂತರ ಅದಾಯ ಬರುತ್ತಿದ್ದರೂ ಹೂಡಿಕೆದಾರರಿಗೆ ಕಾಲಘಟ್ಟದಲ್ಲಿ ಅದರ ಮೌಲ್ಯ ಕಡಿಮೆಯಾಗುತ್ತದೆ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.