ಒಡೆಯುವುದು ಸುಲಭ ಕಟ್ಟುವುದು ಕಷ್ಟ !
Team Udayavani, Oct 15, 2018, 6:00 AM IST
ಮನೆ ಕಟ್ಟುವ ಬಹುತೇಕರಿಗೆ ಪ್ಲಾನ್ ನಲ್ಲಿ ಎಲ್ಲವೂ ಆಕರ್ಷಕವಾಗಿ ಕಂಡದ್ದು, ಪಾಯ ಅಗೆದ ಮೇಲೆ ಎಲ್ಲವೂ ಚಿಕ್ಕಚಿಕ್ಕದಾಗಿ ಕಾಣಲು ತೊಡಗುತ್ತದೆ. ಒಮ್ಮೆ ಪಾಯದ ಕಲ್ಲು ಹಾಕಿದಮೇಲೂ ಎಲ್ಲವೂ ಸಣ್ಣದಾಗೇ ಕಂಡುಬಂದು, “ಇದೊಂದಿಷ್ಟು ದೊಡ್ಡದಿದ್ದರೆ ಚೆನ್ನಾಗಿತ್ತು’ ಎಂದೆನಿಸಲು ತೊಡಗುತ್ತದೆ.
ಮನೆ ಕಟ್ಟುವಾಗ ಒಂದಷ್ಟು ಮರು ಚಿಂತನೆ ಇದ್ದದ್ದೇ. ಮೊದಲು “ಹೀಗೆ’ ಮಾಡಬೇಕು ಎಂದು ನಿರ್ಧರಿಸಿದ್ದರೆ, ನಂತರ “ಹಾಗೆ’ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅನ್ನಿಸುತ್ತದೆ. ಕಾಮಗಾರಿ ನಡೆಯುವಾಗ ಸಿಮೆಂಟ್ ಮಿಶ್ರಣ ಸರಿಯಾಗಿಲ್ಲ, ಗೋಡೆ ಪ್ಲಂಬ್- ತೂಕಕ್ಕೆ ಇಲ್ಲ ಎಂಬ ಕಾರಣಕ್ಕೆ ಕೆಲವೊಮ್ಮೆಕಟ್ಟಿದ್ದನ್ನು ತೆಗೆಸುವುದು ಉಂಟಾದರೂ ಈ ಪ್ರಕ್ರಿಯೆ ಹೆಚ್ಚಾದರೆ ಕಷ್ಟ. ಕಟ್ಟಡ ನಿರ್ಮಾಣದ ಶುರುವಿನಲ್ಲೇ ನುರಿತ ಆರ್ಕಿಟೆಕ್ಟ್ ಎಂಜಿನಿಯರ್ ಸಹಾಯ ಪಡೆದು ಅನುಭವೀ ಮೇಸ್ತ್ರಿಗಳ ನೇಮಕ ಆದರೆ, ಮನೆ ಕಟ್ಟುವುದು ಅಷ್ಟೇನೂ ಕಷ್ಟ ಎಂದೆನಿಸುವುದಿಲ್ಲ. ಪಾಯದಿಂದ ಶುರುಮಾಡಿಕೊಂಡು ಮನೆ ಮುಗಿಯುವವರೆಗೂ ಅನೇಕ ಸ್ಥರಗಳಲ್ಲಿ ಕೆಲಸದ ಬಗ್ಗೆ ಬಗೆಬಗೆಯ ಸಂಶಯಗಳು ಬರುವುದುಂಟು. ಕೆಲವೊಮ್ಮೆ ತರಾತುರಿಯಲ್ಲಿ ಕೆಲಸ ಶುರುಮಾಡಿದರೆ ತೊಂದರೆಗಳು ಎದುರಾಗಿ ಮರು ಕಟ್ಟುವ ಕೆಲಸ ಅನಿವಾರ್ಯ. ಆದರೆ ಇನ್ನೂ ಕೆಲವೊಮ್ಮೆ ತೀರಾ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಬಿರುಸಿನ ಕಾರ್ಯಾಚರಣೆ ಶುರುಮಾಡಿಕೊಂಡರೂ, ತಪ್ಪುಗಳಾಗಿ ರೀವರ್ಕ್ ಮಾಡಬೇಕಾಗುತ್ತದೆ. ಮನೆಯ ನಿರ್ಮಾಣದ ವಿವಿಧ ಹಂತಗಳಲ್ಲಿ ನಮ್ಮ ಕಾಳಜಿ ವಿವಿಧ ಬಗೆಯದ್ದಾಗಿದ್ದು, ಆಯಾ ಹಂತಕ್ಕೆ ನಾವು ಮೊದಲೇ ತಯಾರಾಗಿ ಇರಬೇಕಾಗುತ್ತದೆ. ಆಗ ತರಾತುರಿಯ ನಿರ್ಧಾರ ತಪ್ಪುವುದರ ಜೊತೆಗೆ, ಮರು ನಿರ್ಮಾಣ ಕಾರ್ಯವೂ ಕಡಿಮೆ ಆಗುತ್ತದೆ. ಒಡೆದು ಕಟ್ಟುವುದು ದುಬಾರಿ ಆಗಿರುವುದರ ಜೊತೆಗೆ ಅನಗತ್ಯ ಕಿರಿಕಿರಿಯನ್ನು ಉಂಟುಮಾಡಿ ಇತರರ ಮೇಲೆ ತಪ್ಪನ್ನು ಹೊರಿಸುವಂತಾಗಿ ಒಟ್ಟಾರೆ ಮನಃಸ್ಥಿತಿಯನ್ನು ಹಾಳುಮಾಡುತ್ತದೆ.
ಪಾಯದಿಂದಲೇ ಹುಶಾರಾಗಿರಿ
“ಮಣ್ಣಿನ ಕೆಲಸ ತಾನೆ’ ಎಂದು ಹೆಚೇcನೂ ದುಬಾರಿಯಲ್ಲದ ಈ ಹಂತವನ್ನು ನಿರ್ಲಕ್ಷಿಸಿದರೆ ಮುಂದೆ ತೊಂದರೆ ತಪ್ಪಿದ್ದಲ್ಲ. ಕೆಲವೊಮ್ಮೆ ಮೇಲೆ ಭರ್ತಿ ಮಾಡಿದ ಮಣ್ಣು ಒಳ್ಳೆಯ ಗುಣಮಟ್ಟ ಹೊಂದಿದ್ದು ಕೆಳಗೆ ತಾಜ್ಯದಿಂದ ತುಂಬಿದ್ದು ಆಗಿರಬಹುದು. ನಾವು ಮೇಲ್ ನೋಟ ಆಧರಿಸಿ ಮೂರೂವರೆ ಅಡಿ ಪಾಯ ಎಂದು ನಿರ್ಧರಿಸಿದರೆ, ಕೆಳಗೆ ಬರೀ ಕೊಳಕು ಪ್ಲಾಸ್ಟಿಕ್ ಚೀಲ, ಮುರಿದ ವಸ್ತು, ಗೊಬ್ಬರ ಇತ್ಯಾದಿಗಳನ್ನು ತುಂಬಿ ಭಾರ ಹೊರುವ ಸಾಮರ್ಥ್ಯ ಹೊಂದಿರುವುದಿಲ್ಲ. ಇಲ್ಲೇನಾದರೂ ನಿರ್ಲಕ್ಷಿ$ಸಿ ಬೆಡ್ ಕಾಂಕ್ರಿಟ್ ಸುರಿದರೆ, ಅಕ್ಕ ಪಕ್ಕ ಎದ್ದು ಕಾಣುವ ತಾಜ್ಯ ಒಂದು ಮಳೆಗೆ ಕುಸಿದು ನಮ್ಮ ಪಾಯ ಎಷ್ಟು ಸಡಿಲ ಎಂಬುದನ್ನು ಸಾಬೀತು ಪಡಿಸಿಬಿಡುತ್ತದೆ. ಪಾಯದ ತಾಜ್ಯ ತೆಗೆಯುವುದು ಅತಿ ಕಿರಿಕಿರಿಯ ಸಂಗತಿ. ಕೆಲವೊಮ್ಮೆ ಕಾಲಂ ಗಳಿಗೆ ಕಾಂಕ್ರಿಟ್ ಹಾಕಿದ ನಂತರವೂ ನಮಗೆ ಕೆಳಮಣ್ಣಿನ ಬಗ್ಗೆ ಸಂಶಯ ಬರಬಹುದು. ಆದುದರಿಂದ ನಾವು ಪಾಯದ ಆಳವನ್ನು ಮಣ್ಣು ಅಗೆದ ಮೇಲೆಯೇ ನಿರ್ಧರಿಸಬೇಕು.
ಗೋಡೆ ಕಟ್ಟಿ ಒಡೆಯುವುದು
ಮನೆ ಕಟ್ಟುವ ಬಹುತೇಕರಿಗೆ ಪ್ಲಾನ್ ನಲ್ಲಿ ಎಲ್ಲವೂ ಆಕರ್ಷಕವಾಗಿ ಕಂಡದ್ದು, ಪಾಯ ಅಗೆದ ಮೇಲೆ ಎಲ್ಲವೂ ಚಿಕ್ಕಚಿಕ್ಕದಾಗಿ ಕಾಣಲು ತೊಡಗುತ್ತದೆ. ಒಮ್ಮೆ ಪಾಯದ ಕಲ್ಲು ಹಾಕಿದಮೇಲೂ ಎಲ್ಲವೂ ಸಣ್ಣದಾಗೇ ಕಂಡುಬಂದು, “ಇದೊಂದಿಷ್ಟು ದೊಡ್ಡದಿದ್ದರೆ ಚೆನ್ನಾಗಿತ್ತು’ ಎಂದೆನಿಸಲು ತೊಡಗುತ್ತದೆ. ಹೀಗೆ ಆಗಲು ಮುಖ್ಯ ಕಾರಣ ನಮ್ಮ ಮನೆಯ ಗೋಡೆಗಳು ನಾಲ್ಕೂವರೆ ಇಂಚಿನವು ಬಹುತೇಕ ಇದ್ದರೆ, ಇತ್ತೀಚಿನ ದಿನಗಳಲ್ಲಿ ಹೊರಗಿನ ಗೋಡೆಗಳೂ ಸಹ ಆರು ಇಂಚು ಕಾಂಕ್ರಿಟ್ ಬ್ಲಾಕ್ ನದ್ದಾಗಿರುತ್ತದೆ. ಆದರೆ ಪಾಯದ ಗೊಡೆಗಳು ಕನಿಷ್ಠ ಒಂದೂವರೆ ಅಡಿ ಅಗಲ ಇರುವುದರಿಂದ ಎಲ್ಲವೂ ಚಿಕ್ಕದಾಗಿ ಕಾಣುತ್ತದೆ. ಗೋಡೆಗಳನ್ನು ಕಟ್ಟುವಾಗ ನಮಗೆ ಹೆಚ್ಚಾ ಕಡಿಮೆ ಮನೆಯ ಆಯ ಅಳತೆ ನಿಖರವಾಗಿ ಕಂಡರೂ, ಕೆಲವೊಮ್ಮೆ ಬದಲಾವಣೆಗಳನ್ನು ಮಾಡಬೇಕೆನ್ನಿಸುತ್ತದೆ. ಇದು ಅಷ್ಟೇನೂ ಕಷ್ಟ ಅಲ್ಲ. ಪಾಯ ಹದಿನೆಂಟು ಇಂಚು ಅಗಲ ಇರುವುದರಿಂದ ನಾವು ಹಾಕುವ ಗೋಡೆಗಳು ಬಹುತೇಕ ಭಾರ ಹೊರುವ ಗೋಡೆಗಳು – ಲೋಡ್ ಬೇರಿಂಗ್ ಅಲ್ಲದ ಕಾರಣ, ಒಂದು ಅಡಿಯವರೆಗೂ ಬದಲಾವಣೆ ಮಾಡಿಕೊಳ್ಳುವುದು ಕಷ್ಟವಲ್ಲ. ಭಾರ ಹೊರದ ಗೋಡೆಗಳು ಪಾಯದ ಮಧ್ಯಭಾದಲ್ಲೇ ಬರಬೇಕು ಎಂದೇನೂ ಇಲ್ಲ. ಹಾಗಾಗಿ ಈ ಮುಖದಿಂದ ಮತ್ತೂಂದು ಮುಖಕ್ಕೆ ಬದಲಾಯಿಸಿ, ನಮ್ಮ ಒಂದು ಕೋಣೆಯನ್ನು ಚಿಕ್ಕದು ಮಾಡಿಕೊಂಡು ಮತ್ತೂಂದನ್ನು ವಿಸ್ತಾರ ಮಾಡಿಕೊಳ್ಳಲು ಆಸ್ಪದವಿರುತ್ತದೆ.
ಆದರೆ ನಾವು ಇದನ್ನು ಮೊದಲ ವರಸೆ ಇಡುವಾಗಲೇ ಮಾಡಬೇಕಾಗುತ್ತದೆ. ಇಲ್ಲೇ ಬಾಗಿಲು ಬರುತ್ತದೆ, ಅಲ್ಲೇ ಕಿಟಕಿ ಇರುತ್ತದೆ ಎಂಬ ಖಾತರಿ ಆದರೆ ಮುಂದೆ ಒಡೆದು ಕಟ್ಟುವ ತಲೇನೋವು ಇರುವುದಿಲ್ಲ! ಮನೆ ಕಟ್ಟುವಾಗ ಗಮನಿಸ ಬೇಕಾದ ಮುಖ್ಯ ಅಂಶ ಎಂದರೆ, ನಿವೇಶನ ಎಷ್ಟೇ ದೊಡ್ಡದಿದ್ದರೂ ಮತ್ತೂಂದಷ್ಟು ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸುತ್ತದೆ. ಸುತ್ತಲೂ ಸಾಕಷ್ಟು ಖಾಲಿ ಜಾಗ ಬಿಡದಿದ್ದರೆ, ಮನೆಯೊಳಗೆ ಇರಲೂ ಕೂಡ ಆಗದಷ್ಟು ಗಾಳಿ ಬೆಳಕಿನ ನ್ಯೂನತೆ ಕಾಡುತ್ತದೆ ಎಂಬುದನ್ನು ನಾವು ಮರೆಯಬಾರದು. ಆದುದರಿಂದ ನಾವು ನಮಗೆ ಯಾವುದು ಮುಖ್ಯ ಎಂದು ಮೊದಲೇ ನಿರ್ಧರಿಸಿ ಮುಂದುವರಿದರೆ, ಪ್ರತಿಹಂತದಲ್ಲೂ ಕಾಡುವ ಸಂಶಯಗಳೂ ಅದರ ಪರಿಹಾರಕ್ಕೆ ಒಡೆದು ಕಟ್ಟುವುದೂ ಕಡಿಮೆ ಆಗುತ್ತದೆ.
ಈ ಹಂತದಲ್ಲಿ ಬೇಡ
ಮನೆ ಇನ್ನೇನೂ ಮುಗಿದೇ ಹೋಯಿತು ಎನ್ನುವ ಹಂತದಲ್ಲಿ, ಗೋಡೆ ಆಯಿತು, ಸೂರು ಹಾಕಿಯಾಗಿದೆ, ಪ್ಲಾಸ್ಟರ್ ಮುಗಿಯಿತು ಎನ್ನುವಾಗಲೇ – “ಪ್ರತಿದಿನ ಮನೆ ಕಟ್ಟುವುದಿಲ್ಲ, ಏನಾದರೂ ಬದಲಾವಣೆ ಮಾಡಿದರೆ ಅದನ್ನು ಈಗಲೇ ಮಾಡಿ ತೀರಬೇಕು’ ಎಂದು ನೆಲಕ್ಕೆ ಟೈಲ್ಸ್ ಹಾಕುವವರು ಬಂದಾಗ, ಪೇಂಟರ್ ಬೇಕಾಗುವ ಸಾಮಾನುಗಳ ಪಟ್ಟಿನೀಡಿ ಹೋದಮೇಲೆ ಈ ಹಿಂದಿನ ಸಂಶಯಗಳು ಏಳುತ್ತವೆ. “ಹೊರಗಿನವರು’ ಬಂದರೆ ಕೂರಲೂ ಇದ್ದ ಸ್ಥಳ ಹಾಲಿಗೆ ಸೇರಿಸಿಕೊಂಡರೆ, ಹಾಲು ಮತ್ತೂ ದೊಡ್ಡದಾಗಿ ಕಾಣುತ್ತಲ್ಲವೆ? ಮಧ್ಯದ ಗೋಡೆ ಒಡೆದರೆ ಹೇಗೆ? ಹಾಗೆಯೇ “ಓಪನ್ ಕಿಚನ್’ ತೆರೆದ ಅಡುಗೆ ಮನೆ ಮಾಡಿಕೊಳ್ಳಲು ಇದೇ ಕಡೆಯ ಅವಕಾಶ! ಮಧ್ಯದ ಗೋಡೆ ತೆಗೆದು ಬಿಟ್ಟರೆ? ಎಂದೆಲ್ಲ ಅನ್ನಿಸಲು ತೊಡಗುತ್ತದೆ. ಹೀಗಾಗುವುದನ್ನು ತಡೆಯಲು ನಾವು ಶುರುವಿನಿಂದಲೇ ಕೆಲ ಅಗತ್ಯಗಳನ್ನು ಪಟ್ಟಿಮಾಡಿಕೊಂಡು, ಅವನ್ನು ಬದಲಾಯಿಸಬಾರದು ಎಂದು ನಿರ್ಧರಿಸಿದ್ದರೆ, ಕಟ್ಟಿದ್ದನ್ನು ಒಡೆಯುವ ಅಗತ್ಯ ಅನಿವಾರ್ಯ ಎದುರಾಗುವುದಿಲ್ಲ.
ಮನೆ ಕಟ್ಟುವಾಗ ಪ್ರತಿಯೊಬ್ಬರಿಗೂ ತಮ್ಮ ಖಾಸಗೀತನ ಮುಖ್ಯ. ಹೀಗಾಗಿ, ಸಣ್ಣದೊಂದು ವರಾಂಡಾವನ್ನು ಲಿವಿಂಗ್ ಮುಂದೆ ಇಟ್ಟುಕೊಂಡಿದ್ದರೆ, ಅದು ನಿಜಕ್ಕೂ ಬೇಕೇ ಬೇಕು ಎಂದೇ ಇಟ್ಟಿರುತ್ತೇವೆ. ಇಲ್ಲವೇ “ನಾವೇನೂ ಅಷ್ಟೊಂದು ಖಾಸಗಿ ಅಲ್ಲ, ಎಲ್ಲವೂ ತೆರೆದ ಪುಸ್ತಕದಂತೆ’ ಎಂದರೆ ಇದನ್ನೂ ಮೊದಲೇ ನಿರ್ಧರಿಸುವುದು ಕಷ್ಟವೇನಲ್ಲ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸ ಬೇಕಾದ ಸಂಗತಿ ಏನೆಂದರೆ, ಈ ಮೊದಲು ನಿರ್ಧರಿಸಿದ್ದು ಬದಲಾಗುವುದು ಹೇಗೆ ಎಂದು! ಹೀಗಾಗಲು ಮುಖ್ಯ ಕಾರಣ, ಕಾಗದದ ಮೇಲೆ ಮಾಡಿರುವ ವಿನ್ಯಾಸದಲ್ಲಿ ನಮಗೆ ಅಷ್ಟೊಂದು ನಿಖರವಾಗಿ ಸ್ಥಳ – ಸ್ಪೇಸ್ ಹೇಗೆ ಇರುತ್ತದೆ, ಅದು ಎಷ್ಟು ಖಾಸಗಿಯಾಗಿ ಇಲ್ಲ ತೆರೆದಂತೆ ಇರುತ್ತದೆ ಎಂಬುದು ತಿಳಿಯುವುದಿಲ್ಲ. ಒಮ್ಮೆ ಮನೆ ಮುಗಿಯುವ ಹಂತ ಬಂದಾಗ ನಮಗೆ ಎಲ್ಲವೂ ಸ್ಪಷ್ಟವಾಗಲು ತೊಡಗುತ್ತದೆ. ಕಿಚನ್ ಕಟ್ಟಿದಮೇಲೆ ತೀರ ಮುಚ್ಚಿಕೊಂಡಂತೆ ಕಾಣಬಹುದು, ಆದುದರಿಂದ ನಮ್ಮ ಒಲವು ತೆರೆದ ಅಡುಗೆ ಮನೆಯತ್ತ ವಾಲಬಹುದು. ಒಮ್ಮೆ ಮನೆಗೆ ಬಣ್ಣ ಬಳಿದು, ಟೈಲ್ಸ್ ಹಾಕಿದ ನಂತರ ಕಳೆಗಟ್ಟಿ, ಅಡುಗೆ ಕೋಣೆ ಸಾಕಷ್ಟು ವಿಸ್ತಾರವಾದ ಕಿಟಕಿಗಳನ್ನು ಹೊಂದಿದ್ದರೆ ಇಕ್ಕಟ್ಟಾಗೇನೂ ಅನ್ನಿಸುವುದಿಲ್ಲ! ಅದೇ ರೀತಿಯಲ್ಲಿ ಹಾಲ್ ಕೂಡ ಫಿನಿಶ್ ಆಗಿ, ಅದರಲ್ಲೂ ಪೀಠೊಪಕರಣಗಳಿಂದ ಸಜಾjದಮೇಲೆ ಸಾಕಷ್ಟು ವಿಸ್ತಾರವಾಗಿ ಕಾಣಬಹುದು!
ಹೆಚ್ಚಿನ ಮಾಹಿತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.