ವಿಟಾರಾವನ್ನು ಬಿಟ್ಟಾರಾ?

ಪೆಟ್ರೋಲ್‌ ಅವತಾರದಲ್ಲಿ ಬ್ರೆಝಾ 2020

Team Udayavani, Mar 9, 2020, 5:17 AM IST

ವಿಟಾರಾವನ್ನು ಬಿಟ್ಟಾರಾ?

ಮೊದಲು ಬಂದಿದ್ದು ಕೇವಲ ಡೀಸೆಲ್‌ ವರ್ಷನ್‌. ಆಗ ಪೆಟ್ರೋಲ್‌ ಮಾದರಿಯಲ್ಲಿ ಈ ಎಸ್‌ಯುವಿ ಕಾರು ಲಭ್ಯವಿರಲಿಲ್ಲ. ಹಾಗಿದ್ದೂ ಅದು ಮಾರುಕಟ್ಟೆ ಪ್ರವೇಶಿಸಿದ ಕಡಿಮೆ ಅವಧಿಯಲ್ಲೇ ಛಾಪು ಮೂಡಿಸಿತ್ತು. ಇದೀಗ ಮಾರುತಿ ವಿಟಾರಾದ ಹೊಸ ಆವೃತ್ತಿಯನ್ನು ಹೊರತಂದಿದೆ. ಅದೂ ಪೆಟ್ರೋಲ್‌ ಮಾದರಿಯಲ್ಲಿ ಮಾತ್ರವೇ ಲಭ್ಯವಾಗಲಿದೆ.

ಹೊಸ ಲುಕ್‌ನಿಂದ ದೇಶಾದ್ಯಂತ ಮಿಂಚಿನ ಸಂಚಾರ ನಡೆಸಿದ್ದ ಮಾರುತಿ ವಿಟಾರಾ ಬ್ರೆಝಾ ಈಗ ಹೊಸ ಅವತಾರದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇತ್ತೀಚೆಗಷ್ಟೇ ಮುಗಿದ ದೆಹಲಿ ಆಟೋ ಶೋನಲ್ಲಿ ಅನಾವರಣಗೊಂಡಿರುವ ಈ ಕಾರು, ಮೊದಲ ಮಾದರಿಗಿಂತಲೂ ಹಲವು ಬದಲಾವಣೆಗಳೊಂದಿಗೆ ಬಂದಿದೆ.

ಪೆಟ್ರೋಲ್‌ ಮಾದರಿಯಲ್ಲಿ ಮಾತ್ರ
ಈ ಎಸ್‌ಯುವಿಯ ಇನ್ನೊಂದು ವಿಶೇಷವೆಂದರೆ, ಮೊದಲು ಬಂದಿದ್ದು ಕೇವಲ ಡೀಸೆಲ್‌ ವರ್ಷನ್‌. ಆಗ ಪೆಟ್ರೋಲ್‌ ಇರಲೇ ಇಲ್ಲ. ಆದರೂ, ಇದು ಮಾರುಕಟ್ಟೆಗೆ ಪ್ರವೇಶಿಸಿದ ಅತಿ ಕಡಿಮೆ ಅವಧಿಯಲ್ಲಿ ತನ್ನದೇ ಛಾಪು ಮೂಡಿಸಿತ್ತು. ಆದರೆ, ಈಗ ಡೀಸೆಲ್‌ ಗಾಡಿಯನ್ನು ಸಂಪೂರ್ಣವಾಗಿ ಬಿಟ್ಟು, ಕೇವಲ ಪೆಟ್ರೋಲ್‌ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ. ಹಳೆಯ ವಿಟಾರಾಗೆ ಹೋಲಿಸಿದರೆ ಒಳಾಂಗಣ ಮತ್ತು ಹೊರಾಂಗಣ ಎರಡರಲ್ಲೂ ಬದಲಾವಣೆ ಮಾಡಿಕೊಂಡಿದೆ. ಹೊಸ ಹೆಡ್‌ಲ್ಯಾಂಪ್‌ಗ್ಳು, ಜತೆಗೆ ಎಲ…ಇಡಿ ಪೊ›ಜೆಕ್ಟರ್‌ ಯುನಿಟ್‌ಗಳು, ಅಷ್ಟೇ ಅಲ್ಲ, ಎಲ್‌ಇಡಿ ಡಿಆರ್‌ಎಲ್‌ಗ‌ಳು ಗಮನ ಸೆಳೆಯುತ್ತಿವೆ. ಹಾಗೆಯೇ, 16 ಇಂಚಿನ ಅಲಾಯ್‌ ವೀಲ್‌ಗ‌ಳೂ ಕಾರಿಗೆ ಬೇರೆಯದ್ದೇ ರೀತಿಯ ಲುಕ್‌ ನೀಡಿವೆ.

ಮೈಲೇಜ್‌ ಎಷ್ಟು?
ಇದು 1.5 ಲೀ. ಕೆ ಸರಣಿಯ ಪೆಟ್ರೋಲ್‌ ಎಂಜಿನ್‌ ಕಾರು. ಮೊದಲಿನ ವರ್ಷನ್‌ನಲ್ಲಿ 1.3 ಲೀ. ಫಿಯೆಟ್‌ ಡೀಸೆಲ್‌ ಎಂಜಿನ್‌ ನೀಡಲಾಗಿತ್ತು. ಇದು 5 ಗೇರ್‌ಗಳನ್ನು ಒಳಗೊಂಡಿದೆ. ಇದು ಮ್ಯಾನುವಲ್‌ ಆಗಿದ್ದರೆ, ಆಟೋಮ್ಯಾಟಿಕ್‌ನಲ್ಲಿ 4 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ಅನ್ನು ನೀಡಲಾಗಿದೆ. ಇದು ಪ್ರತಿ ಲೀ. ಪೆಟ್ರೋಲ್‌ಗೆ 17.3 ಕಿ.ಮೀ. ಮೈಲೇಜ್‌ ನೀಡಲಿದೆ ಎಂದು ಕಂಪನಿಯೇ ಹೇಳಿದೆ. ಇನ್ನು ಆಟೋಮ್ಯಾಟಿಕ್‌ನಲ್ಲಿ 18 ಕಿ.ಮೀ. ನಿರೀಕ್ಷಿಸಬಹುದಾಗಿದೆ. ಹಾಗೆಯೇ 7 ಇಂಚಿನ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸ್ಮಾರ್ಟ್‌ ಪ್ಲೇ ಸ್ಟುಡಿಯೋ ಸಿಸ್ಟಮ್‌ ಇದೆ.

ವಿಶೇಷತೆ
ಎಂಜಿನ್‌ – 1.5 ಲೀ. ಪೆಟ್ರೋಲ್‌
ಪವರ್‌ – 103 ಬಿಎಚ್‌ಪಿ
ಟಾರ್ಕ್‌ – 138ಎನ್‌.ಎಂ
ಟ್ರಾನ್ಸ್ ಮಿಷನ್‌ – 5 ಸ್ಪೀಡ್‌(ಎಂ.ಟಿ), 4 ಸ್ಪೀಡ್‌(ಆಟೋಮ್ಯಾಟಿಕ್‌)
ವೀಲ್‌ ಬೇಸ್‌ – 2,500 ಎಂ.ಎಂ

ಹೋಂಡಾ ಆಕ್ಟಿವಾ 6ಜಿ

ಎಂಜಿನ್‌ – 109.5 ಸಿಸಿ
ಸಿಲಿಂಡರ್‌ – 1
ಎಮಿಷನ್‌ – ಬಿಎಸ್‌ 6
ಟ್ಯಾಂಕ್‌ ಸಾಮರ್ಥ್ಯ – 5.3 ಲೀ.
ಮೈಲೇಜ್‌ – 45 ಕಿ.ಮೀ.

ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಹೋಂಡಾ ಆಕ್ಟಿವಾ ಸ್ಕೂಟರ್‌, ಇನ್ನಷ್ಟು ಸುಧಾರಿತ ರೂಪದಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ. ಸದ್ಯ ಹೋಂಡಾ ಆಕ್ಟಿವಾ 5ಜಿ ಸದ್ದು ಮಾಡುತ್ತಿದ್ದು ಇದರ ನಂತರದಲ್ಲಿ 6ಜಿ ಬಂದಿದೆ. ಇದು ಬಿಎಸ್‌6 ಮಾದರಿಯಲ್ಲಿ ಬಂದಿದ್ದು, ವಿನ್ಯಾಸದಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ. ಇದು ಸಂಪೂರ್ಣವಾಗಿ ಮೆಟಾಲಿಕ್‌ ಬಾಡಿಯಾಗಿದ್ದು, ಮುಂಭಾಗದಲ್ಲಿ ಹೊಸ ವಿನ್ಯಾಸವನ್ನು ಗುರುತಿಸಬಹುದಾಗಿದೆ. ಹೆಡ್‌ಲ್ಯಾಂಪ್‌ ಹಿಂದಿನ ಮಾದರಿಯಲ್ಲಿನದ್ದೇ ಉಳಿಸಿಕೊಂಡಿದ್ದರೂ, ಎಲ್‌ಇಡಿ ಘಟಕವನ್ನು ಡಿಲಕ್ಸ್‌ ವೇರಿಯಂಟ್‌ ಮಾತ್ರ ಉಳಿಸಿಕೊಳ್ಳಲಾಗಿದೆ. ಆದರೆ, ಇದು ಹೋಂಡಾ ಆಕ್ಟೀವಾ 5ಜಿಯಲ್ಲಿ ಎಲ್ಲಾ ವೇರಿಯಂಟ್‌ಗಳಲ್ಲೂ ಇತ್ತು.
ಹಿಂದಿನ ವರ್ಷನ್‌ಗಿಂತ 72ಎಂ.ಎಂ ಉದ್ದವಿದ್ದು, ವೀಲ್‌ ಬೇಸ್‌ ಕೂಡ 22ಎಂಎಂ ನಷ್ಟು ದೊಡ್ಡದಾಗಿದೆ. ಜತೆಗೆ ಗ್ರೌಂಡ್‌ ಕ್ಲಿಯರೆನ್ಸ್ ನಲ್ಲಿ 18ಎಂ.ಎಂ.ನಷ್ಟು ಹೆಚ್ಚಳವಾಗಿದೆ.

ಪವರ್‌ ವಿಚಾರಕ್ಕೆ ಬಂದರೆ, 109 ಸಿಸಿ ಸಾಮರ್ಥ್ಯದ ಸ್ಕೂಟರ್‌ ಆಗಿದ್ದು, ಬಿಎಸ್‌6 ಎಮಿಷನ್‌ಗೆ ಒಳಪಟ್ಟಿದೆ. ಅಲ್ಲದೆ, ಮೈಲೇಜ್‌ ಸಾಮರ್ಥ್ಯವೂ ಶೇ.10ರಷ್ಟು ಹೆಚ್ಚಾಗಿದೆ. ಆದರೂ, ಇದರ ಪವರ್‌, ಹೋಂಡಾ ಆಕ್ಟಿವಾ 5ಜಿಗಿಂತ ಕೊಂಚ ಕಡಿಮೆ ಇದೆ. ಬ್ರೇಕ್‌ ಚುರುಕಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆ. ಬೆಂಗಳೂರಿನಲ್ಲಿ ಈ ಸ್ಕೂಟರ್‌ನ ಆನ್‌ ರೋಡ್‌ ದರ ಅಂದಾಜು 80,000 ರೂ.(ಡಿಲಕ್ಸ್ ಮಾದರಿ)ನಷ್ಟಿದೆ. ಹಾಗೆಯೇ ಸ್ಟಾಂಡರ್ಡ್‌ ವೇರಿಯಂಟ್‌ ಅಂದಾಜು 78,000 ರೂ. ಗಳಿಗೆ ಸಿಗಲಿದೆ.

ಟಾಪ್ ನ್ಯೂಸ್

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.