ಬಾಳು ಬೆಳಗಿದ  ಬದನೆ: ಕಡಿಮೆ ಅವಧಿಯಲ್ಲಿ ಉತ್ತಮ ಲಾಭ


Team Udayavani, Mar 6, 2017, 1:19 PM IST

06-ISIRI-1.jpg

ಜಮಖಂಡಿ ತಾಲೂಕಿನ ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತ ದೇವರಾಜ ರಾಠಿ ದುರ್ಗಾದೇವಿ ರಸ್ತೆಯ ಹತ್ತಿರವಿರುವ ತಮ್ಮ ಕಲ್ಲು ಗುಡ್ಡದಂತಿದ್ದ 10 ಗುಂಟೆ ಜಮೀನಿನಲ್ಲಿ ಗ್ಯಾಲನ್‌ ತಳಿಯ ಬದನೆಕಾಯಿ ಬೆಳೆದು ಮಾದರಿಯಾಗಿದ್ದಾರೆ. ತಮ್ಮ 10 ಗುಂಟೆಯಲ್ಲಿ 4 ಟ್ರಕ್‌ ತಿಪ್ಪೆಗೊಬ್ಬರ, ಎನ್‌ಪಿಕೆ ಮತ್ತು ಮೈಕ್ರೋನೂಟ್ರಿಯಂಟ್‌ ಸೇರಿ 150 ಕೆ.ಜಿ. ಸರಕಾರಿ ಗೊಬ್ಬರ, 10 ಚೀಲ ಬೇವಿನ ಹಿಂಡಿ  ಹಾಕಿ ಬೆಡ್ಡ್ ನಿರ್ಮಾಣ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ  ಮೂರೂವರೆ ಫ‌ುಟ್‌ನಂತೆ, ಸಾಲಿನಿಂದ ಸಾಲಿಗೆ  6 ಫ‌ುಟ್‌ನಂತೆ 600 ಗಿಡಗಳನ್ನು ಪ್ಲಾಸ್ಟಿಕ್‌ ಮಲಿcಂಗ್‌ ಮಾಡಿ ನಾಟಿ ಮಾಡಿದ್ದಾರೆ . ನಾಟಿ ಮಾಡಿದ 60 ರಿಂದ 70 ದಿನಕ್ಕೆ ಬೆಳೆ ಕಟಾವಿಗೆ ಬರುತ್ತದೆ. ಗಿಡಗಳು ಬಾಗದಿರಲಿ ಎಂದು ಬಳ್ಳಿಗಳನ್ನು ಮೇಲಕ್ಕೆ ಕಟ್ಟಲಾಗಿದೆ.

ನಾಟಿ ಮಾಡಿದ ನಂತರ 5 -6 ದಿನಕ್ಕೆ ಒಮ್ಮೆ ಡ್ರಿಪ್‌ ಮೂಲಕ ಜೀವಾಮೃತ ಮತ್ತು ನೀರಿನಲ್ಲಿ ಕರಗುವ ಸರಕಾರಿ ಗೊಬ್ಬರಗಳನ್ನು ಹಾಕಬೇಕು. ಇದರಿಂದ ಬೆಳೆಗಳು ಉತ್ತಮ ವಾಗಿ ಬರುತ್ತವೆ. ಅಲ್ಲದೆ ವಾತಾವರಣಕ್ಕೆ ತಕ್ಕಂತೆ ಔಷಧಿ ಯನ್ನು ಸಿಂಪಡಿಸಿ ಕಾಳಜಿ ಪೂರ್ವಕವಾಗಿ ಬೆಳೆಸಿದರೆ ಬೆಳೆ ಉತ್ತಮವಾಗಿ ಬರುತ್ತದೆ. ಕಾಯಿಗಳಿಗೆ ಉಷ್ಣತೆ ಹೆಚ್ಚಿಗೆ ತಗುಲ ಬಾರದು ಎಂದು ನೆರಳು ಮಾಡಲು ಸೀರೆಗಳನ್ನು ಕಟ್ಟಿ ನೆರಳಿನ ವ್ಯವಸ್ಥೆ ಮಾಡಿದ್ದೇನೆ  ಎನ್ನುತ್ತಾರೆ ದೇವರಾಜ ರಾಠಿ.

ಒಂದು ಬದನೆಕಾಯಿಯ ತೂಕ 900 ಗ್ರಾಂನಿಂದ  1 ಕೆ.ಜಿ.ವರೆಗೆ ಇದ್ದು, ಅಂದಾಜು 1 ಗಿಡಕ್ಕೆ 100 ಕೆ.ಜಿ. ಇಳುವರಿ ಬರುತ್ತಿದ್ದು, 8 ರಿಂದ 10 ತಿಂಗಳ ಬೆಳೆಯಾಗಿರುವ ಬದನೆಯನ್ನು 10 ಗುಂಟೆಯಲ್ಲಿ 600 ಸಸಿಗಳಿಂದ 60 ಟನ್‌ ಬದನೆಕಾಯಿಯ ಇಳುವರಿಯನ್ನು ಪಡೆಯಬಹುದು. ಈ ತಳಿಯ ಬದನೆಕಾಯಿಗೆ ಗೋವಾ, ಅಹಮದಾಬಾದ್‌, ಮುಂಬಯಿ, ಹೈದರಾಬಾದ್‌ಗಳಲ್ಲಿ ಉತ್ತಮ ಮಾರುಕಟ್ಟೆ ಇದೆ.  ಸದ್ಯ ಕೆ.ಜಿ. ಗೆ 25 ರೂ. ಮಾರಾಟವಾಗುತ್ತಿದೆ. ಅದು ಮುಂದಿನ ತಿಂಗಳಲ್ಲಿ ರೂ. 40ರ ಆಸುಪಾಸಿಗೆ ಹೋಗಬಹುದು ಎನ್ನುತ್ತಾರೆ ದೇವರಾಜ. 

ಮಹಾರಾಷ್ಟ್ರದಿಂದ ಬೀಜವನ್ನು ತರಿಸಿ ಇಲ್ಲಿಯೇ ಸಸಿಗಳನ್ನು ತಯಾರಿಸಿರುವುದರಿಂದ ಸಸಿಯ ವೆಚ್ಚ ಕಡಿಮೆಯಾಗಿದೆ. ಒಟ್ಟು ಖರ್ಚು 1.5 ಲಕ್ಷ ಆಗಿದ್ದು. ಲಕ್ಷಾಂತರ ಲಾಭ ಬಂದಿದೆ.

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.