ಕಂಚಿನ ಕಲೆಯಿಂದ ಬಾಳು ಬೆಳಗಿತು!
Team Udayavani, Oct 12, 2020, 7:37 PM IST
ಲಾಳಕಿ ಮನೆತನಕ್ಕೆ ಸೇರಿದಕಂಚುಗಾರರುಕಂಚು, ತಾಮ್ರ, ಹಿತ್ತಾಳೆ ಪಂಚಲೋಹಗಳಿಂದ ಅತ್ಯಾಕರ್ಷಕ ಮೂರ್ತಿ ತಯಾರಿಸುತ್ತಾರೆ. ಉತ್ತರಕರ್ನಾಟಕ ಭಾಗದ ಹಲವುಊರುಗಳಲ್ಲಿ ಅವರು ತಯಾರಿಸಿರುವಕಂಚಿನ ಮೂರ್ತಿಗಳಿವೆ…
ಕನ್ನಡ ನಾಡುಕಲೆ- ಕಲಾವಿದರ, ಕುಶಲಕರ್ಮಿಗಳ ತವರೂರು ಅನ್ನುವುದಕ್ಕೆ ಹೆಜ್ಜೆಹೆಜ್ಜೆಗೂ ಸಾಕ್ಷಿಗಳು ಸಿಗುತ್ತವೆ. ಈ ಮಾತಿಗೆ ಮತ್ತೂಂದು ಸಾಕ್ಷಿ ಬೇಕೆಂದರೆ, ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಹನಗಂಡಿಗೆ ಬರಬೇಕು. ಈ ಪುಟ್ಟ ಊರುಕಂಚಿನ ಮೂರ್ತಿಗಳ ತಯಾರಿಕೆಗೆ ಹೆಸರುವಾಸಿ. ಈ ಗ್ರಾಮದ ಲಾಳಕಿ ಮನೆತನದವರಾದ ಶ್ರೀಕಾಂತ ಲಾಳಕಿ, ಸಲಬಣ್ಣ ಲಾಳಕಿ ಹಾಗೂ ಆನಂದ ಲಾಳಕಿ ಎಂಬುವರು ಮೂರ್ತಿ ತಯಾರಿಕೆಯನ್ನೇ ಮೂಲ ವೃತ್ತಿಯಾಗಿಸಿಕೊಂಡಿದ್ದಾರೆ.ಕಂಚಿನಿಂದ ಮೂರ್ತಿ ತಯಾರಿಸುವಕಲೆ, ಅವರಿಗೆ ವಂಶಪಾರಂಪರ್ಯ ಬಳುವಳಿಯಾಗಿ ಬಂದಿದೆ. ತಮ್ಮ ತಾತ- ಮುತ್ತಾತರ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅವರುಕಂಚು, ತಾಮ್ರ, ಹಿತ್ತಾಳೆ ಪಂಚಲೋಹಗಳಿಂದ ಅತ್ಯಾಕರ್ಷಕ ಮೂರ್ತಿ ತಯಾರಿಸುತ್ತಾರೆ. ಗ್ರಾಮದಲ್ಲಿ ಇವರನ್ನುಕಂಚುಗಾರರು ಎಂದುಕರೆಯುತ್ತಾರೆ. ಎಲ್ಲ ತರಹದ ವಿಗ್ರಹಗಳು, ಪೂಜಾ ಸಾಮಗ್ರಿಗಳು,ಕಂಚಿನ ತಾಳ, ಜಾಗಟೆ, ಗಂಗಾಳ, ಗೋಪುರದಕಳಸ, ತೇರು… ಹೀಗೆ ಹಲವು ಸಾಮಗ್ರಿಗಳನ್ನುಕಂಚುಗಾರರು ತಯಾರಿಸುತ್ತಾರೆ.
ಮೂರ್ತಿ ತಯಾರಿಕೆ ವಿಧಾನ : ಮೊದಲು ಮಣ್ಣು ತಂದು ಹದ ಮಾಡಿ ಬೇಕಾದ ಮೂರ್ತಿಯಕಚ್ಚಾ ಆಕೃತಿ ತಯಾರಿಸುತ್ತಾರೆ. ನಂತರ ಅದರ ಮೇಲೆ ತೆಳುವಾದ ಮೇಣದ ಲೇಪನ ಮಾಡಿ, ಅದಕ್ಕೆ ಪಟ್ಟಿ ಬಿಗಿದು ತಂತಿ ಹಾಕಿ ಬಿಗಿಯಾಗಿ ಕಟ್ಟಿ ಮತ್ತೆ ಮಣ್ಣು ಬಡಿಯುವರು. ಹೀಗೆ ತಯಾರಿಸಿದಕಚ್ಚಾ ಮೂರ್ತಿಯನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಒಂದು ಮೂಸೆಯಲ್ಲಿ ಹಿತ್ತಾಳೆ ಅಥವಾ ತಾಮ್ರವನ್ನು ಕರಗಿಸಿ, ಅದನ್ನು ಕಚ್ಚಾ ಮೂರ್ತಿಯಲ್ಲಿ ಹಾಕಿದಾಗ ನಿಜವಾದ ಮೂರ್ತಿ ತಯಾರಾಗುತ್ತದೆ. ಮೇಲಿರುವ ಮಣ್ಣು ತೆಗೆದು ಉಳಿಯಿಂದ ಮೂರ್ತಿಯನ್ನುಕೆತ್ತಿ ಶುಚಿಗೊಳಿಸಿ ಪಾಲಿಶ್ ಮಾಡುತ್ತಾರೆ. ಅವಾಗ ಫಳಫಳ ಹೊಳೆಯುವ ಮೂರ್ತಿ ಸಿದ್ಧವಾಗುತ್ತದೆ.
ಹತ್ತೂರಿಗೆ ಹೋಗಿವೆ.. : ಶ್ರೀಕಾಂತ, ಆನಂದ ಮತ್ತು ಸಲಬಣ್ಣ ಅವರು ತುರನೂರಿಗೆ ಐದೂವರೆ ಅಡಿ ಎತ್ತರದಕಂಚಿನ ಪ್ರತಿಮೆಯನ್ನು, ಮೂರು ಅಡಿ ಎತ್ತರದ ಎರಡು ಟಗರುಗಳ ಪ್ರತಿಮೆಯನ್ನು, ಅಫಜಲಪೂರಕ್ಕೆ ಏಳೂವರೆ ಅಡಿ ಎತ್ತರದ ಕಂಚಿನ ತೇರು,ಕೊಟ್ಟಲಗಿಯ ಆರು ಅಡಿ ಎತ್ತರದ ಸೈನಿಕ ಪ್ರತಿಮೆಯನ್ನು, ಬಸನಕೊಪ್ಪಕ್ಕೆ ಆರು ಅಡಿ ಎತ್ತರದ ಹನುಮಾನ್ ಪ್ರತಿಮೆ,ಕೌಜಗೇರಿ ಲಕ್ಷ್ಮೀ ಮೂರ್ತಿ, ಬೆನಕೊಪ್ಪಕ್ಕೆ ಆರು ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳನ್ನು ಮಾಡಿಕೊಟ್ಟಿದ್ದಾರೆ. ಅನೇಕ ಶಿಲ್ಪಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ, ಪುರಸ್ಕಾರ, ಸನ್ಮಾನ, ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ರಾಷ್ಟ್ರಮಟ್ಟದಕಲಾ ಪ್ರದರ್ಶನದಲ್ಲಿ ಬಹುಮಾನ,ಕಲಾ ಪ್ರದರ್ಶನ ಮತ್ತು ಪ್ರಶಸ್ತಿ ಪುರಸ್ಕಾರ… ಹೀಗೆ, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರೋತ್ಸಾಹ ಅಗತ್ಯ… : ಹಿರಿಯರಿಂದ ಬಳುವಳಿಯಾಗಿ ಬಂದಕಾಯಕವನ್ನು ಮರೆಯಬಾರದು.ಕಂಚಿನ ಮೂರ್ತಿ ಕೆತ್ತನೆಯಕೆಲಸವನ್ನು ಕೈಬಿಡಬಾರದು ಎಂಬ ಸದಾಶಯ ಲಾಳಕಿಕುಟುಂಬದಕಂಚುಗಾರರಿಗೆ ಇದೆ. ಆದರೆ ಈ ಕಾಯಕದಿಂದ ಅವರಿಗೆ ಹೆಚ್ಚಿನ ಲಾಭವೇನೂ ಆಗುತ್ತಿಲ್ಲ. ಇವರು ತಯಾರಿಸುವ ಮೂರ್ತಿಗಳೇನೋ ಮುದ್ದಾಗಿವೆ, ಆಕರ್ಷಕವಾಗಿವೆ. ಆದರೆ, ಈ ಕಾಯಕದಿಂದ ಸಿಗುವ ಆದಾಯ, ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಮುಖ್ಯವಾಗಿ, ರಾಜ್ಯ ಮತ್ತುಕೆಂದ್ರ ಸರ್ಕಾರದ ಪೋ›ತ್ಸಾಹದಿಂದಕಂಚುಗಾರರು ವಂಚಿತರಾಗಿದ್ದಾರೆ. ಈ ಶಿಲ್ಪಿಗಳನ್ನು ಪ್ರೋತ್ಸಾಹಿಸುವಕೆಲಸ ಅಗತ್ಯವಾಗಿ ಆಗಬೇಕಿದೆ.ಕಂಚಿನಿಂದ ತಯಾರಿಸಲಾದ ವಿಗ್ರಹಗಳು ಅಥವಾ ಪೂಜಾ ಸಾಮಗ್ರಿಗಳು ಬೇಕಾದರೆ ಸಂಪರ್ಕಿಸಿ:
9740816916, 7090515335.
– ರಮೇಶ ಇಟಗೋಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.