ಎಮ್ಮೇ ನಿನಗೆ ಸಾಟಿಯಿಲ್ಲ… ಎಮ್ಮೆ ಸಾಕಿದವನ ಹೆಮ್ಮೆಯ ಮಾತು


Team Udayavani, Aug 28, 2017, 5:20 PM IST

emme.jpg

ಗದಗದ ಬಿಂಕದಕಟ್ಟಿ ಗ್ರಾಮದ ಬಸವರಡ್ಡಿ ಪಾಂಡಪ್ಪ ಹುಚ್ಚಣ್ಣವರ ಎಂಟು ವರ್ಷಗಳಿಂದ ಹರಿಯಾಣ ರಾಜ್ಯದ ಮುರ್ರಾ ತಳಿಯ ಎಮ್ಮೆಗಳನ್ನು ಸಾಕಣೆ ಮಾಡುವ ಮೂಲಕ ಹೈನೋದ್ಯಮ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಬರದಿಂದ ಬಸವಳಿದಿರುವ ರೈತರಿಗೊಂದು ಮಾದರಿ ಎನಿಸಿದ್ದಾರೆ. 

ಬಸವರಡ್ಡಿ ಅವರದು ಮೂಲತಃ ಕೃಷಿ ಕುಟುಂಬ. ಕೂಡು ಕುಟುಂಬದಲ್ಲಿ 40 ಎಕರೆ ಕೃಷಿ ಜಮೀನನ್ನೂ ಹೊಂದಿದ್ದಾರೆ.
ಹೀಗಾಗಿ ಅವರಿಗೆ ಚಿಕ್ಕಂದಿನಿಂದಲೇ ಕೃಷಿ ಜ್ಞಾನ ಬಳುವಳಿಯಾಗಿ ಬಂದಿತ್ತು. ತಂದೆ-ತಾಯಿ, ಸೋದರತ್ತೆ ಅವರು ನಡೆಸಿಕೊಂಡು ಬಂದಿದ್ದ ಹೈನುಗಾರಿಕೆಗೆ ಕೈಜೋಡಿಸಿ ಪಡೆದ ಅನುಭವ ಕೂಡ ಅವರೊಂದಿಗಿತ್ತು. ಈ ಹಿನ್ನೆಲೆಯೊಂದಿಗೆ ಹೈನುಗಾರಿಕೆ ಆರಂಭಿಸುವಾಗ ಅವರು ಹಾಕಿದ್ದು 7.50 ಲಕ್ಷ ರೂ. ಬಂಡವಾಳ.   ಹರ್ಯಾಣದ ಮುರ್ರಾ ತಳಿಗಳ ಬಗ್ಗೆ ತಿಳಿವಳಿಕೆ ಹೊಂದಿದ್ದ ಅವರು 2009ರಲ್ಲಿ ಹಾಕಿ 20 ಮುರ್ರಾ ಎಮ್ಮೆಗಳೊಂದಿಗೆ ಹೈನೋದ್ಯಮ ಆರಂಭಿಸಿದರು. ಇದೀಗ ಅವುಗಳ ಸಂಖ್ಯೆ 120ಕ್ಕೆ ಏರಿದ್ದು, ಹಾಕಿದ ಬಂಡವಾಳ ವಾಪಸು ಬಂದಿದ್ದು, ಹೈನುಗಾರಿಕೆ ಲಾಭದಾಯಕ ಉದ್ದಿಮೆ ಎನಿಸಿದೆ. 

ಸದ್ಯ ಅವರ ಬಳಿ ಸುಮಾರು 120 ಮುರ್ರಾ ಎಮ್ಮೆಗಳಿದ್ದು, ಅವುಗಳಲ್ಲಿ 80 ದೊಡ್ಡ ಎಮ್ಮೆಗಳು, 20 ಮಧ್ಯಮ ಪ್ರಮಾಣದ ಎಮ್ಮೆಗಳು ಹಾಗೂ  20 ಕರುಗಳಿವೆ. ಇವುಗಳಲ್ಲಿ 40 ಎಮ್ಮೆಗಳು ಹಾಲು ನೀಡುತ್ತವೆ. ಅವುಗಳಿಂದ ದಿನಕ್ಕೆ 250 ಲೀಟರ್‌ನಷ್ಟು ಹಾಲು ದೊರೆಯುತ್ತಿದ್ದು, ಲೀಟರ್‌ಗೆ 60 ರೂ.ಗಳಿಗೆ ಮಾರಾಟ ಮಾಡುತ್ತಾರೆ. ನಾಲ್ಕು ವರ್ಷಗಳಲ್ಲಿ ಹೈನೋದ್ಯಮಕ್ಕೆ ಹಾಕಿದ ಬಂಡವಾಳ ವಾಪಸು ಬಂದಿದೆ.

ಸ್ವತಃ ಮಾರಾಟ
ಈ ಎಮ್ಮೆಗಳ ಹಾಲನ್ನು ಅವರು ಡೈರಿಗೆ ಹಾಕುವುದಿಲ್ಲ.   ತಾವೇ ಸ್ವತಃ  ಶ್ರೀಪದ್ಮಾ ಮಿಲ್ಕ್ ಸೆಂಟರ್‌ ತೆರೆದಿದ್ದಾರೆ. 
ಸದ್ಯ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಲೀಟರ್‌ಗೆ 80 ರೂ.ಗಳಷ್ಟಿದೆ. ಆದರೆ ರೆಡ್ಡಿ ಅವರು ಪ್ರತಿ ಲೀಟರ್‌ಗೆ 60 ರೂ.ನಂತೆ, ಉಳಿದ ಹಾಲಿನಿಂದ ಕೆನೆ ಮೊಸರು ತಯಾರಿಸಿ ಕೆ.ಜಿಗೆ 70 ರೂ. ನಂತೆ ಮಾರಾಟ ಮಾಡುತ್ತಾರೆ. 

ಯುಪಿಯ ಮೇಲ್ವಿಚಾರಕರು: 
ಮುರ್ರಾ ಎಮ್ಮೆಗಳನ್ನು ನೋಡಿಕೊಳ್ಳಲು ಉತ್ತರ ಪ್ರದೇಶದಿಂದಲೇ ನಾಲ್ವರು ಯುವಕರನ್ನು ಕರೆ ತಂದಿದ್ದಾರೆ. ಅವರಿಗೆ ತಿಂಗಳಿಗೆ 12 ಸಾವಿರ ರೂ. ಸಂಬಳ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ. ಹಾಲು ಹಿಂಡುವುದು, ಸಗಣಿ ಚೆಲ್ಲುವುದು, ಎಮ್ಮೆಗಳಿಗೆ ನೀರು, ಮೇವು ಹಾಕುವುದು ಸೇರಿದಂತೆ ಕೊಟ್ಟಿಗೆಯ ಎಲ್ಲ ಜವಾಬ್ದಾರಿಯನ್ನೂ ಅವರು  ನಿಭಾಯಿಸುತ್ತಾರೆ.
ಎಮ್ಮೆಗಳಿಗೆ ಆಹಾರಕ್ಕಾಗಿ ಒಂದೂವರೆ ಎಕರೆ ಪ್ರದೇಶದಲ್ಲಿ ಹಾತಿ ಗ್ರಾಸ್‌ ಎನ್ನುವ ಹುಲ್ಲು ಬೆಳೆಸಿದ್ದಾರೆ. ಕರ್ನಾಟಕ ಕೃಷಿ ವಿವಿಯಿಂದ ಈ ಹುಲ್ಲನ್ನು ತಂದು ಇಲ್ಲಿ ಬೆಳೆಯಲಾಗಿದೆ. ಅಲ್ಲದೇ ಒಣ ಮೇವು, ಹೊಟ್ಟು ಸೇರಿದಂತೆ ಪೌಷ್ಟಿಕಾಂಶವಿರುವ ಹಿಟ್ಟುಗಳನ್ನು ನೀಡಲಾಗುತ್ತಿದೆ.

ಎರೆಹುಳು ಗೊಬ್ಬರ 
ಎಮ್ಮೆಗಳಿಂದ ಲಭ್ಯವಾಗುವ ಸಗಣಿ ಹಾಗೂ ಮೂತ್ರವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಇದರಿಂದ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದ್ದು, ಇದಕ್ಕಾಗಿ ಐದು ಗೊಬ್ಬರ ತಯಾರಿಕೆ ಘಟಕಗಳನ್ನು ನಿರ್ಮಿಸಿದ್ದಾರೆ. ತಿಂಗಳಿಗೆ 45 ಕ್ವಿಂಟಲ್‌ ಗೊಬ್ಬರವನ್ನು ಉತ್ಪಾದಿಸುತ್ತಾರೆ. ಸಾವಿರ ರೂ.ಗೆ ಕ್ವಿಂಟಾಲ್‌ನಂತೆ ಗೊಬ್ಬರ ಮಾರಾಟ ಮಾಡುತ್ತಾರೆ.   ಸಂತಾನಾಭಿವೃದ್ಧಿಗಾಗಿ ಮುರ್ರಾ ಕೋಣವೊಂದನ್ನು ಕಟ್ಟಿದ್ದಾರೆ.   ನೈಸರ್ಗಿಕ ಕ್ರಿಯೆಯಿಂದ ಸಂತಾನೋತ್ಪತ್ತಿ ಮಾಡಿಸುತ್ತಾರೆ. ಅಗತ್ಯ ಬಿದ್ದರೆ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಾರೆ. ಎಮ್ಮೆಗಳಿಗೆ ಕಾಯಿಲೆಗಳು ಕಾಣಿಸಿಕೊಂಡರೆ ಹರಿಯಾಣದ ಪಶು ವೈದ್ಯರನ್ನೂ ಸಂಪರ್ಕಿಸಿ ಅಗತ್ಯ ಔಷಧೋಪಚಾರ ನೀಡುತ್ತಾರೆ.
ಕೊಟ್ಟಿಗೆಯಲ್ಲಿ ಎಮ್ಮೆಗಳ ಸಂಖ್ಯೆ ಹೆಚ್ಚಾಯಿತು ಎಂದೆನಿಸಿದರೆ ಅವುಗಳನ್ನು ಮುಧೋಳ ಹಾಗೂ ಜಮಖಂಡಿ ದನಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.  ಹಾಲು ನೀಡುವ ಮುರ್ರಾ ಎಮ್ಮೆಗಳಿಗೆ ಮಾರುಕಟ್ಟೆಯಲ್ಲಿ 70 ಸಾವಿರದಿಂದ 1 ಲಕ್ಷಗಳವರೆಗೂ ಬೆಲೆ ಇದೆ. ಅವುಗಳ ಬೆಳವಣಿಗೆ ಮೇಲೆ ದರ ನಿಗದಿಯಾಗುತ್ತದೆ ಎನ್ನುತ್ತಾರೆ ರಡ್ಡಿ. 

– ಪ್ರಹ್ಲಾದಗೌಡ ಬಿ. ಗೊಲ್ಲಗೌಡರ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.