ಬೋನ್ಸಾಯ್‌ನಿಂದ ಬಂಪರ್‌! 


Team Udayavani, Jan 14, 2019, 12:30 AM IST

jaivant-4.jpg

ಬೋನ್ಸಾಯ್‌ ತಯಾರಿಯಲ್ಲಿ ಗಿಡಗಳ ಆಯ್ಕೆ ಮುಖ್ಯ. ಕಾಡು ಜಾತಿಯ ಗಿಡಗಳು ಅದರಲ್ಲಿಯೂ ಎಲೆ ಅಥವಾ ಸಸ್ಯದ ಇತರ ಭಾಗಗಳನ್ನು ಕತ್ತರಿಸಿದ ಹಾಗೆಯೇ, ಬಿಳಿಯ ಹಾಲು ಹೊರಸೂಸುವ ಸಸ್ಯಗಳನ್ನು ಆಯ್ದುಕೊಂಡರೆ ಒಳಿತು.

ನಗರಗಳಲ್ಲಿನ ಬಹುಮಹಡಿ ಕಟ್ಟಡಗಳಲ್ಲಿ, ಉದ್ಯಾನವನಗಳಲ್ಲಿ, ಹೋಟೆಲ್‌ ಹಾಗೂ ವಸತಿ  ಗೃಹಗಳಲ್ಲಿ ಆ ಪ್ರದೇಶದ ಸೌಂದರ್ಯ ಹೆಚ್ಚಿಸಲೆಂದೇ ಬೋನ್ಸಾಯ್‌ಗಳನ್ನು ಬಳಸುತ್ತಾರೆ.  ಗಿಡಗಳು ಎತ್ತರಕ್ಕೆ ಬೆಳೆಯದೆ ಕುಬj ರೂಪ ತಾಳುವಂತೆ ಮಾಡುವ, ಮೂಲ ಮರದ ಪ್ರತಿಬಿಂಬವನ್ನು ಸಣ್ಣದಾದ ಮರದಲ್ಲಿ ಅರಳಿಸುವ ಕೆಲಸ ನಾಜೂಕಿನದು. ಧಾರವಾಡ ಸಮೀಪದ ಕೆಲಗೇರಿಯ ಜಗದೀಶ್‌ಗೌಡ ಭಾಕಟ್ಟಿ ಈ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಬೋನ್ಸಾಯ್‌ ಗಿಡಗಳನ್ನು ಬೆಳೆಸುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ.

ಬೋನ್ಸಾಯ್‌ ಯಾವುದಿದೆ?
ಕಾಡಿನ ಅಪರೂಪದ ಸಸ್ಯಗಳನ್ನು ಜತನದಿಂದ ಕಾಪಾಡಿ, ಬೋನ್ಸಾಯ್‌ ರೂಪ ಕೊಡಲು ಮನೆಯ ಮುಂಭಾಗದ ಪುಟ್ಟ ಸ್ಥಳವನ್ನೇ ಅವರು ನರ್ಸರಿಯನ್ನಾಗಿಸಿಕೊಂಡಿದ್ದಾರೆ.

ಅತ್ತಿ, ಆಲ, ಅರಳಿ, ಬಸರಿ, ಪಿನವಾಲ, ನಿಂಬೆ, ಪೇರಲ, ಮಾವು, ಗುಲ್‌ಮೊಹರ್‌, ಜಕ್‌ರಾಂಡ್‌, ತಪ್ಸಿ, ನಿರಂಜಿಮರ, ಟಿಕೋಮಾ, ಕ್ಯಾಶಿಯಾ ಅಲಾಟಾ, ಪೈಕಾಸ್‌ ಹೀಗೆ ಇಪ್ಪತ್ತೆ„ದಕ್ಕೂ ಅಧಿಕ ಕುಬj ಮರಗಳ ಸಂಗ್ರಹ ಇವರಲ್ಲಿದೆ. ಒಂದಕ್ಕಿಂತ ಒಂದು ಭಿನ್ನ ಮತ್ತು ಸುಂದರ. ಹುಬ್ಬೇರಿಸುವಂತೆ ಮಾಡುವ ಕುಳ್ಳನೆಯ ಗಿಡಗಳು ಸಹಜವಾಗಿಯೇ ಆಕರ್ಷಣೀಯವಾಗಿವೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಿರ್ವಹಣಾ ಮೇಲ್ವಿಚಾರಕರಾಗಿರುವ ಇವರಿಗೆ ಕಾಲೇಜಿನ ಉದ್ಯಾನವನದಲ್ಲಿರುವ ಬೋನ್ಸಾಯ್‌ ಗಿಡಗಳ ಬಗ್ಗೆ ಕುತೂಹಲವಿತ್ತು. ಅವುಗಳನ್ನು  ಈರೀತಿ  ಬೆಳೆಸಲು ಹೇಗೆ ಸಾಧ್ಯ? ಅನ್ನೋ ಆಲೋಚನೆ ಸುಳಿಯುತ್ತಿದ್ದಂತೆ ಗಿಡಗಳ ಲಭ್ಯತೆಯ ಸುಳಿವು ಅರಸಿ, ಸಿಕ್ಕಿದ ಗಿಡಗಳನ್ನು ಸಂಗ್ರಹಿಸತೊಡಗಿದರು. ಹತ್ತು ವರ್ಷದ ಹಿಂದೆ ಹವ್ಯಾಸವಾಗಿ ಆರಂಭಿಸಿದ ಬೋನ್ಸಾಯ್‌ ಗಿಡಗಳ ತಯಾರಿಯನ್ನೇ ಸ್ವ-ಉದ್ಯೋಗವಾಗಿ ಬೆಳೆಸಿಕೊಂಡರೆ ಹೇಗೆ ಎನ್ನುವ ಆಲೋಚನೆ ಇವರ ಮನಸ್ಸಿನಲ್ಲಿ ಮೊಳೆತಿದೆ. ಪ್ರಪ್ರಥಮ ಬಾರಿಗೆ ಹತ್ತಕ್ಕೂ ಅಧಿಕ ಬೋನ್ಸಾಯ್‌ ಗಿಡಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟು ಮೆಚ್ಚುಗೆ ಗಳಿಸಿದ್ದಾರೆ. 

ಗಿಡಗಳ ಆಯ್ಕೆ ಹೇಗೆ?
ಬೋನ್ಸಾಯ್‌ ತಯಾರಿಯಲ್ಲಿ ಗಿಡಗಳ ಆಯ್ಕೆ ಮುಖ್ಯ. ಕಾಡು ಜಾತಿಯ ಗಿಡಗಳು ಅದರಲ್ಲಿಯೂ ಎಲೆ ಅಥವಾ ಸಸ್ಯದ ಇತರ ಭಾಗಗಳನ್ನು ಕತ್ತರಿಸಿದ ಹಾಗೆಯೇ, ಬಿಳಿಯ ಹಾಲು ಹೊರಸೂಸುವ ಸಸ್ಯಗಳನ್ನು ಆಯ್ದುಕೊಂಡರೆ ಒಳಿತು. ಗಿಡಗಳನ್ನು ಆಯ್ದುಕೊಳ್ಳಲು ಎರಡು ರೀತಿಯ ಕ್ರಮ ಅನುಸರಿಸುತ್ತಾರೆ. ಮೊದಲನೆಯದು ಬೇರಿಳಿಸಿ ಎರಡರಿಂದ ಮೂರಡಿ ಎತ್ತರ ಬೆಳೆದ ಗಿಡಗಳನ್ನು ಆಯ್ದುಕೊಳ್ಳುವುದು. ಇಲ್ಲಿ ಭೂಮಿಯಲ್ಲಿ ಬೆಳೆದ ಗಿಡ ಒಳಿತಲ್ಲ. ಕಟ್ಟಡಗಳ ಮೇಲೆ ಬೆಳೆದ, ಬಾವಿಯ ಅಂಚಿನಲ್ಲಿ ಬೇರು ಕಾಣುವಂತೆ ಕಲ್ಲಿಗಂಟಿಕೊಂಡು ಬೆಳೆದಿರುವ, ಕಲ್ಲುಬಂಡೆಗಳ ಮೇಲೆ ಚಿಗುರಿರುವ, ಕಾಂಪೌಂಡ್‌ಗಳ ಮೇಲೆ ಬೇರಿಳಿಸಿಕೊಂಡು ಹಸಿರಾಗಿರುವ, ಸೇತುವೆಗಳ ಕೆಳ ಭಾಗದಲ್ಲಿ  ಬೆಳೆದಿರುವ ಗಿಡಗಳನ್ನು ಆಯ್ದುಕೊಳ್ಳುವುದು ಒಳಿತು. 

ಮರಗಳ ಮೇಲೆಯೇ ಬೆಳೆಯಬಲ್ಲ ಗಿಡಗಳಾದರೂ ಇದಕ್ಕಾದೀತು. ಕಾಗೆ ಮತ್ತಿತರ ಪಕ್ಷಿಗಳ ಹಿಕ್ಕೆಯ ಮೂಲಕ ಬೀಜ ಪ್ರಸರಣಗೊಂಡು, ಮರದ ಮೇಲ್ಭಾಗದಲ್ಲಿ, ಟೊಂಗೆಯ ಸಂದುಗಳಲ್ಲಿ ಬಿದ್ದ ಬೀಜಗಳಿಂದ ಗಿಡಗಳು ಹುಟ್ಟಿಕೊಳ್ಳುವುದೂ ಇದೆ. ಮರದ ಮೇಲೆಯೇ ಬೆಳೆದ ಇಂಥ ಸಸ್ಯಗಳು ತಮ್ಮ ಬೇರುಗಳನ್ನು ಭೂಮಿಯೆಡೆಗೆ ಇಳಿಸಲು ಹೊರಟಿರುತ್ತದೆ. ಅಂಥ ಗಿಡಗಳನ್ನು ದೀರ್ಘ‌ಕಾಲ ಹಾಗೆಯೇ ಬಿಟ್ಟಲ್ಲಿ ಬೇರು ಭೂಮಿಯನ್ನು ತಲುಪಿ, ಆಳಕ್ಕಿಳಿದು ತಾನು ಆಶ್ರಯಕ್ಕಾಗಿ ಅಪ್ಪಿಕೊಂಡ ಮರವನ್ನೇ ಸಾಯುವಂತೆ ಮಾಡುತ್ತದೆ. 

ಗಿಡದ ಆಯ್ಕೆಯಲ್ಲಿ ಗೂಟಿ ಪದ್ಧತಿಯಿಂದ ತಯಾರಿಸುವ ಇನ್ನೊಂದು ವಿಧಾನವಿದೆ. ಯಾವ ಮರದಿಂದ ಗಿಡ ತಯಾರಿಸಬೇಕೆನ್ನಿಸುತ್ತದೆಯೋ ಆ ಮರದ ಟೊಂಗೆಯ ತುದಿಯಿಂದ, ಒಂದೆರಡು ಅಡಿ ಒಳಭಾಗದಲ್ಲಿ ಅರ್ಧ ಇಂಚಿನಷ್ಟು ಸುತ್ತಲೂ ಸಣ್ಣದಾಗಿ ಟೊಂಗೆಯ ಸಿಪ್ಪೆಯನ್ನು ಸುಲಿಯಬೇಕು. ಆ ಭಾಗಕ್ಕೆ ಸ್ವಲ್ಪ ಮಣ್ಣು, ಕಟ್ಟಿಗೆ ಪುಡಿ, ಉಸುಕು, ಮರಗಳಲ್ಲಿಯೇ ಬೆಳೆದ ಪಾಚಿಯಂಥ ವಸ್ತುಗಳನ್ನು ಒಟ್ಟುಗೂಡಿಸಿ ಪ್ಲಾಸ್ಟಿಕ್‌ ಹಾಳೆಯಿಂದ ಬಿಗಿಯಾಗಿಕಟ್ಟಬೇಕು. ಕೇವಲ 40-45  ದಿನಗಳಲ್ಲಿ ಮಣ್ಣು ಮಿಶ್ರಣ ಕಟ್ಟಿದ ಆ ಭಾಗದಲ್ಲಿ ಬೇರು ಬಿಟ್ಟಿರುವುದು ಕಂಡು ಬರುತ್ತದೆ. ಮರದ ಮೇಲೆಯೇ ಬೇರು ಸೃಷ್ಟಿಸಿಕೊಂಡ ಟೊಂಗೆಯನ್ನು ಕತ್ತರಿಸಿ ಕುಂಡಗಳಲ್ಲಿ ಬೆಳೆಸಿದರೆ ಗಿಡಗಳು ಸಿದ್ದ.

ಬೋನ್ಸಾಯ್‌ ರೂಪ ಪಡೆಯುವ ಪರಿ
ಗಿಡದಿಂದ ಅರ್ಧ ಅಡಿ ಕೆಳಭಾಗದಲ್ಲಿ ಬೇರನ್ನು ಕತ್ತರಿಸಿ ತಂದ ಗಿಡಗಳನ್ನು ಕುಂಡದಲ್ಲಿರಿಸಿ ಎಲೆಗಳನ್ನು, ಟೊಂಗೆಗಳನ್ನು ಪ್ರೋನಿಂಗ್‌ ಮಾಡುತ್ತಾರೆ. ಆಗಾಗ ನೀರು ಕೊಡುತ್ತಿರುತ್ತಾರೆ. ನೆರಳಿನಲ್ಲಿಯೇ ಬೆಳೆಸುವ ಈ ಗಿಡಗಳು ಕುಂಡದಲ್ಲಿ ಬೆಳೆಯತೊಡಗುತ್ತದೆ. ತಿಂಗಳಿಗೊಮ್ಮೆ ಕಡ್ಡಾಯ ಪ್ರೋನಿಂಗ್‌ತಪ್ಪಿಸುವುದಿಲ್ಲ. ಇರುವ ಕನಿಷ್ಠ ಸ್ಥಳದಲ್ಲಿಯೇ ಬೇರನ್ನು ಹಬ್ಬಿಸಿಕೊಂಡು ಬೆಳೆಯುವ ಗಿಡಗಳು ಕುಬjವಾಗಿಯೇ ಇರುತ್ತವೆ.

ಸಾಮಾನ್ಯ ಗಿಡಗಳು ಬೋನ್ಸಾಯ್‌ರೂಪ ಪಡೆಯಬೇಕೆಂದರೆ ವಿಪರೀತ ತಾಳ್ಮೆ ಅಗತ್ಯ. ತಕ್ಷಣ ಫ‌ಲಿತಾಂಶ ಸಿಗುವುದಿಲ್ಲ. ಬೋನ್ಸಾಯ್‌ ಗಿಡಗಳು ಸಹಜವಾಗಿಯೇ ಸುಂದರವಾಗಿ ಕಾಣುತ್ತವೆ. 

– ಕೋಡಕಣಿ ಜೈವಂತ ಪಟಗಾರ
 

ಟಾಪ್ ನ್ಯೂಸ್

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.