ರತನ್ ಪ್ರಪಂಚ
Team Udayavani, Apr 27, 2020, 11:22 AM IST
ರತನ್ ಟಾಟಾ ಅವರಿಗೆ ಕಾರುಗಳೆಂದರೆ ಇಷ್ಟ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಅವರ ಬಳಿ ಯಾವ ಯಾವ ಕಾರುಗಳಿವೆ ಗೊತ್ತಾ?
ರತನ್ ಟಾಟಾ ಅವರು, ಪ್ರತಿಷ್ಠಿತ ಟಾಟಾ ಕುಟುಂಬಕ್ಕೆ ಸೇರಿದ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು, 1990ರಿಂದ 2012ರವರೆಗೆ ಅವರು ಟಾಟಾ ಉದ್ಯಮ ಸಮೂಹದ
ಅಧ್ಯಕ್ಷರಾಗಿದ್ದರು. ರತನ್ ಟಾಟಾ ಅವರ 21 ವರ್ಷಗಳ ನಾಯಕತ್ವದಲ್ಲಿ, ಟಾಟಾ ಸಂಸ್ಥೆ ತನ್ನ ಆದಾಯವನ್ನು 40 ಪಟ್ಟು ಹೆಚ್ಚಿಸಿಕೊಂಡಿತು. 2008ರಲ್ಲಿ, ಜಗತ್ತಿನ ಐಷಾರಾಮಿ ಕಾರೆಂದು ಹೆಸರಾದ ಜಾಗ್ವಾರ್ ಲ್ಯಾಂಡ್ ರೋವರ್ ಅಟೋಮೊಬೈಲ್ ಸಂಸ್ಥೆಯನ್ನು, ಟಾಟಾ ಮೋಟಾರ್ಸ್ ಖರೀದಿಸಿದ್ದರ ಹಿಂದೆ, ರತನ್ ಅವರ ದೃಢ ನಿಲುವು ಮತ್ತು ದೂರದೃಷ್ಟಿ ಕೆಲಸ ಮಾಡಿತ್ತು. ಆ ಮೂಲಕ ಟಾಟಾ ಸಮೂಹದ ಬ್ರಾಂಡ್ ವ್ಯಾಲ್ಯೂವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದರು. ಕಾರ್ ಕೊಳ್ಳಬೇಕು ಎಂಬ ಜನ ಸಾಮಾನ್ಯರ ಕನಸನ್ನು ನನಸಾಗಿಸಲು ಒಂದು ಲಕ್ಷ ರೂ. ಬೆಲೆಯ ನ್ಯಾನೋ ಕಾರು ತಯಾರಿಸುವ ಪ್ರಾಜೆಕ್ಟ್ ಆರಂಭಿಸಿದ್ದು ಕೂಡ ರತನ್ ಅವರ ಹೆಗ್ಗಳಿಕೆ. ಸರಳ ಬದುಕನ್ನು ಇಷ್ಟಪಡುವ ರತನ್ ಟಾಟಾ ಅವರಿಗೆ, ಕಾರುಗಳೆಂದರೆ ಇಷ್ಟ. ಅವರ ಬಳಿ ಇರುವ ಕಾರುಗಳ ಪಟ್ಟಿ ಇಲ್ಲಿದೆ.
ಫೆರಾರಿ ಕ್ಯಾಲಿಫೊರ್ನಿಯ
ರತನ್ ಟಾಟಾ ಅವರ ಮೆಚ್ಚಿನ ಕಾರುಗಳಲ್ಲಿ ಮೊದಲ ಸ್ಥಾನ ಈ ಕಾರಿಗೆ ಸಲ್ಲುತ್ತದೆ. 7 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಕಾರು, ಫೆರಾರಿ ಸಂಸ್ಥೆಯ ಜನಪ್ರಿಯ ಮಾಡೆಲ್ ಕೂಡ ಹೌದು.
ಮರ್ಸಿಡಿಸ್ ಬೆಂಝ್
ಎಸ್ ಕ್ಲಾಸ್ ಉದ್ಯಮಿಗಳಿಗೆ ಬಹಳ ಇಷ್ಟ ಆಗುವ ಕಾರ್‌ಗಳಲ್ಲಿ ಬೆಂಝ್ ಕಾರುಗಳ ಎಸ್ ಸರಣಿಯ ಕಾರುಗಳು ಮುಖ್ಯವಾದವು. ಕಂಫರ್ಟ್ ಬಯಸುವವರು, ಈ ಕಾರನ್ನು ಕೊಳ್ಳುತ್ತಾರೆ.
ಟಾಟಾ ನೆಕ್ಸಾನ್
ಟಾಟಾ ಹೊರ ತಂದ ಹೊಸ ಪೀಳಿಗೆಯ ಕಾರುಗಳಲ್ಲಿ ನೆಕ್ಸಾನ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹೆಚ್ಚು ಮಾರಾಟವಾದ ಎಸ್.ಯು.ವಿ ಎಂಬ ಖ್ಯಾತಿ ಇದರದ್ದು
ಲ್ಯಾಂಡ್ ರೋವರ್ ಫ್ರಿಲ್ಯಾಂಡರ್ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆ, ಈಗ ಟಾಟಾ ಅಧೀನದಲ್ಲಿದೆ. ಆದರೆ, ಅದಕ್ಕೆ ಮುಂಚಿನಿಂದಲೂ ಫ್ರಿಲ್ಯಾಂಡರ್ ಕಾರು ರತನ್ ಟಾಟಾ ಬಳಿ ಇದೆ. ಇದನ್ನು ಬಿಟ್ಟರೆ ಆ ಸಂಸ್ಥೆಯ ಬೇರೆ ಯಾವುದೇ ಕಾರೂ ಅವರ ಬಳಿಯಿಲ್ಲ.
ಟಾಟಾ ಇಂಡಿಗೊ ಮರೀನಾ
ರತನ್ ಟಾಟಾ ಅವರ ಸಂಗ್ರಹದಲ್ಲಿರುವ ಹಳೇ ಕಾರುಗಳಲ್ಲಿ ಇದೂ ಒಂದು. ಇಂಡಿಗೋ ಕಾರಿನ ದೊಡ್ಡ ಆವೃತ್ತಿ ಯಾದ ಮರೀನಾ ಮತ್ತು ಮೇಲೆ ನೀಡಿರುವ ಕಾರುಗಳ ಹೊರತಾಗಿ ಕ್ರೈಸ್ಲರ್
ಸೆಬ್ರಿಂಗ್, ಕ್ಯಾಡಿಲ್ಯಾಕ್ ಎಕ್ ಎಲ್ ಆರ್, ಬೆಂಝ್ ಡಬ್ಲ್ಯು124, ಬೆಂಝ್ 500 ಎಸ್‌ಎಲ್ ಕಾರುಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.