ಕಾರ್ಡ್‌ ಈಸ್‌ ಸೇಫ್!

ಸವಲತ್ತುಗಳ ಆನ್‌- ಆಫ್ ಸ್ವಿಚ್ಚು

Team Udayavani, Jan 27, 2020, 6:08 AM IST

card-is-safe

ಗ್ರಾಹಕರ ಮತ್ತು ಬ್ಯಾಂಕುಗಳ ನಿದ್ರೆ ಕೆಡಿಸುತ್ತಿರುವ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ವಂಚನೆ ತಡೆಯಲು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಒನ್‌ಟೈಮ್‌ ಪಾಸ್‌ವರ್ಡ್‌ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದೀಗ, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಅಂತರಿಕ (domestic- ದೇಶದೊಳಗೆ) ಮತ್ತು ಅಂತಾರಾಷ್ಟ್ರೀಯ (International) ವ್ಯವಹಾರಗಳಿಗೆ ಹೊಸ ನೀತಿ ನಿಯಮಾವಳಿಗಳನ್ನು (guidelines) ಬಿಡುಗಡೆ ಮಾಡಿದೆ.

ಬ್ಯಾಂಕುಗಳು ಗ್ರಾಹಕರಿಗೆ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ನೀಡಿದಾಗ ಅವುಗಳಲ್ಲಿ ಎಟಿಎಂ, ಪಾಯಿಂಟ್‌ ಅಫ್ ಸೇಲ್ಸ್‌ ಅನ್‌ಲೈನ್‌ ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ, ಇಂಟರ್ನೆಟ್‌- ಮೊಬೈಲ್, ಸಂಪರ್ಕ ರಹಿತ (contact less transaction), ಇ- ಕಾಮರ್ಸ್‌, ಸೌಲಭ್ಯಗಳು ಇರುತ್ತವೆ. ಸಾಮಾನ್ಯವಾಗಿ, ಗ್ರಾಹಕರು ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ್‌ಅನ್ನು ಹೆಚ್ಚು ಬಳಸುತ್ತಾರೆ. ಇಂದಿನ ಯುವಪೀಳಿಗೆ ಮತ್ತು ಸ್ವಲ್ಪ ಟೆಕ್ನಿಕಲ್‌ ತಿಳಿವಳಿಕೆ ಇದ್ದವರು ಉಳಿದ ಸವಲತ್ತುಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಈ ಕಾರ್ಡ್‌ಗಳನ್ನು ನೀಡುವಾಗ, ಹಣ ಹಿಂಪಡೆಯುವ (ಡ್ರಾ ಮಾಡುವ) ಮತ್ತು ಅವರು ನಡೆಸುವ ವ್ಯವಹಾರದ ಗರಿಷ್ಠ ಮೊತ್ತ ಕೂಡಾ ನಿಗದಿಯಾಗಿರುತ್ತದೆ.

ಈಗಿನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಬ್ಯಾಂಕುಗಳು ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ್‌ ಮುಂತಾದ ಕೇವಲ ಅಂತರಿಕ (domestic) ವಹಿವಾಟುಗಳಿಗೆ ಬಳಸುವಂತೆ ಎನೇಬಲ್‌ ಮಾಡಲಾಗುತ್ತದೆ. ಇದು ದೇಶದ ಒಳಗೆ ಮಾತ್ರ domestic ವಹಿವಾಟಿಗಷ್ಟೇ ಸೀಮಿತವಾಗಿರುತ್ತದೆ. ಗ್ರಾಹಕರು ಇದನ್ನು ಅಂತಾರಾಷ್ಟ್ರೀಯ ಮತ್ತು ಸಂಪರ್ಕ ರಹಿತ (contactless) ಆನ್‌ಲೈನ್‌, ಇಂಟರ್ನೆಟ್‌- ಮೊಬೈಲ್‌ ವ್ಯವಹಾರಗಳಿಗೆ ಬಳಸುವುದಿದ್ದರೆ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕು.

ಆನ್‌ಲೈನ್‌ ಹಣಕಾಸು ವ್ಯವಹಾರ ಮಾಡಿರಲೇಬೇಕು: ಗ್ರಾಹಕರು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ, ಆನ್‌ಲೈನ್‌ ಮತ್ತು ಸಂಪರ್ಕ ರಹಿತ ವ್ಯವಹಾರಗಳಿಗೆ ಈವರೆಗೆ ಬಳಸದಿದ್ದರೆ ಈ ಕಾರ್ಡ್‌ಗಳನ್ನು ಈ ಸೇವೆಗೆ ಡಿಸೇಬಲ್‌ (ಅನರ್ಹ) ಮಾಡಲಾಗುವುದು. ರಿಸರ್ವ್‌ ಬ್ಯಾಂಕ್‌ ಈ ರೀತಿ ಡಿಸೇಬಲ್‌ ಮಾಡುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಗ್ರಾಹಕರು, ಈ ಹೆಚ್ಚಿನ ಸೌಲಭಕ್ಕಾಗಿ ಕೋರಿಕೆ ಸಲ್ಲಿಸಬೇಕಾಗುತ್ತದೆ. ಕಾರ್ಡ್‌ ಹೊಂದಿದವರ ಬಗೆಗೆ ಬ್ಯಾಂಕುಗಳು ತಮ್ಮದೇ ನಿರ್ಧಾರ ತೆಗೆದುಕೊಳ್ಳಬಹುದು. ರಿಸ್ಕ್ನ ಆಳವನ್ನು ಪರಿಶೀಲಿಸಿ ಚಾಲ್ತಿಯಲ್ಲಿರುವ ಕಾರ್ಡ್‌ಗಳನ್ನು ಡಿಆ್ಯಕ್ಟಿವೇಟ್‌ ಮಾಡಿ ಪುನಃ ಕಾರ್ಡ್‌ ಇಶ್ಯೂ ಮಾಡುವ ಸಾಧ್ಯತೆಯೂ ಇದೆ.

ಸವಲತ್ತುಗಳ ಸ್ವಿಚ್ಚು ಗ್ರಾಹಕರ ಬಳಿ: ಹೊಸ ನಿಯಮಾವಳಿ ಪ್ರಕಾರ, ಗ್ರಾಹಕರು ತಮಗೆ ಬೇಕಾದಾಗ ತಾವೇ ಆರಿಸಿದ ಸವಲತ್ತುಗಳನ್ನು ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್ ಮಾಡಬಹುದು. ಹಾಗೆಯೇ ವ್ಯವಹಾರದ ಗರಿಷ್ಠ ಮಿತಿಯನ್ನು ಬದಲಿಸಿಕೊಳ್ಳಬಹುದು. ಈ ರೀತಿ ತಮ್ಮ ಹಣಕಾಸು ವ್ಯವಹಾರಗಳನ್ನು ನಿಯತ್ರಿಸಬಹುದು ಮತ್ತು ಮಾನಿಟರ್‌ ಮಾಡಬಹುದು. ಅಂತಾರಾಷ್ಟ್ರೀಯ ವ್ಯವಹಾರಗಳನ್ನು ವಿದೇಶಕ್ಕೆ ಹೋದಾಗಷ್ಟೇ ಸ್ವಿಚ್‌ ಆನ್‌ ಮಾಡಿಕೊಳ್ಳಬಹುದು. ಇನ್ನುಮುಂದೆ, ಗ್ರಾಹಕರು ವಿದೇಶದಲ್ಲಿ ತಮ್ಮ ಕಾರ್ಡನ್ನು ದುರುಪಯೋಗ ಮಾಡಿದ್ದಾರೆ ಎಂದು ದೂರುವಂತಿಲ್ಲ.

ಗ್ರಾಹಕರಲ್ಲಿ ಕ್ರೆಡಿಟ್‌ ಕಾರ್ಡ್‌ ಇದ್ದು,ಅವರು ಅದನ್ನು ಅನ್‌ಲೈನ್‌ ಶಾಪಿಂಗ್‌ ಮತ್ತು ಇ- ಕಾಮರ್ಸ್‌ ವೆಬ್‌ಸೈಟ್‌ಗಳಾದ ಅಮೇಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಬಳಕೆ ಮಾಡುತ್ತಿದ್ದರೆ, ನಿಮ್ಮ ಕಾರ್ಡ್‌ಗಳನ್ನು ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್‌ಗ‌ಳಲ್ಲಿ ಡಿಸೇಬಲ್‌(ಆಫ್) ಮಾಡಬಹುದು. ಗ್ರಾಹಕರು ಆಯಾ ವ್ಯವಹಾರಕ್ಕೆ ತಕ್ಕಂತೆ ತಮಗೆ ಬೇಕಾದ ಬದಲಾವಣೆಯನ್ನು ಇಂಟರ್ನೆಟ್‌ ಬ್ಯಾಂಕಿಂಗ್‌ ಮೂಲಕ ಮಾಡಿಕೊಳ್ಳಬಹುದು. ಈ ಹೊಸ ಮಾರ್ಗದರ್ಶಿಯ ನಂತರ ಬಹುತೇಕ ರಿಸ್ಕ್ಗಳು ಗ್ರಾಹಕರಿಗೆ ವರ್ಗಾವಣೆ ಆಗುತ್ತಿದೆ. ಇದು, ಗ್ರಾಹಕರ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಈ ಹೊಸ ವ್ಯವಸ್ಥೆ , ಮಾರ್ಚ್‌ 16 ರಿಂದ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.

ಮುಖ್ಯಾಂಶಗಳು ಏನೇನು?
-ಈ ವ್ಯವಸ್ಥೆ ದೇಶಾದ್ಯಂತ ಮಾರ್ಚ್‌ 16ರಿಂದ ಜಾರಿಗೆ ಬರಲಿದೆ.

-ಚಾಲ್ತಿಯಲ್ಲಿರುವ ಕಾರ್ಡ್‌ನಲ್ಲಿ ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ್‌ ಬಿಟ್ಟು ಉಳಿದೆಲ್ಲ ಮಾಡ್ನೂಲ್‌ಗ‌ಳು(ಸವಲತ್ತುಗಳು) ಸ್ಥಗಿತವಾಗುತ್ತವೆ.

-ಈ ಎರಡು ಸವಲತ್ತುಗಳನ್ನು ಬಿಟ್ಟು ಬೇರೆ ಸೌಲಭ್ಯಗಳು ಬೇಕಿದ್ದರೆ, ಬ್ಯಾಂಕಿಗೆ ಕೋರಿಕೆ ಸಲ್ಲಿಸಿ ಪಡೆಯಬೇಕಾಗುತ್ತದೆ.

-ಡ್ರಾ ಮಾಡುವ ಹಣದ ಗರಿಷ್ಠ ಮಿತಿಯನ್ನು ಗ್ರಾಹಕರೇ ಬ್ಯಾಂಕಿನ ಸಹಾಯದಿಂದ ನಿಗದಿಪಡಿಸಿಕೊಳ್ಳಬೇಕು.

-ಗ್ರಾಹಕರೇ ತಮ್ಮ ಕಾರ್ಡನ್ನು ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್ ಮಾಡಿಕೊಳ್ಳಬಹುದು. ಬಳಕೆ ಮಾಡುವ ಸಮಯದಲ್ಲಿ ಮಾತ್ರ ಸ್ವಿಚ್‌ ಆನ್‌ ಮಾಡಿಕೊಳ್ಳಬಹುದು.

-ಇನ್ನು ಮೇಲೆ ಹೊಸ ಕಾರ್ಡ್‌ಗಳಲ್ಲಿ ಅಂತರಿಕ ವ್ಯವಹಾರ (domestic) ಕೇವಲ ಏಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ್‌ ಸೌಲಭ್ಯಗಳು ಮಾತ್ರ ಇರುತ್ತವೆ. ಉಳಿದ ಸೌಲಭ್ಯಗಳು ಬೇಕಿದ್ದರೆ ಕೇಳಿ ಪಡೆಯಬೇಕು.

-ಅಂತಾರಾಷ್ಟ್ರೀಯ ವ್ಯವಹಾರದ ಸೌಲಭ್ಯ ಬೇಕಿದ್ದರೆ, ವಿಶೇಷವಾಗಿ ಕೇಳಿ ಪಡೆಯಬೇಕು.

-ಯಾರಾದರೂ ಗ್ರಾಹಕರು ಈ ಮೊದಲು ಆನ್‌ಲೈನ್‌ ವ್ಯವಹಾರ,ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂಪರ್ಕ ರಹಿತ ವಹಿವಾಟುಗಳಿಗೆ ಬಳಸದಿದ್ದರೆ ಅಂಥವರ ಕಾರ್ಡ್‌ಗಳನ್ನು ಬ್ಯಾಂಕುಗಳು ಡಿಸೇಬಲ್‌ ಮಾಡಬಹುದು.

-ಗ್ರಾಹಕರು ಕಾರ್ಡ್‌ನಲ್ಲಿನ ಯಾವುದೇ ಸೌಲಭ್ಯವನ್ನು ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್ ಮಾಡಿಕೊಳ್ಳಬಹುದು.

-ಬ್ಯಾಂಕುಗಳ ಯಾವುದೇ ಕಾರ್ಡನ್ನು ಸ್ಥಗಿತಗೊಳಿಸಿ ಹೊಸ ಕಾರ್ಡನ್ನು ನೀಡಬಹುದು.

* ರಮಾನಂದ ಶರ್ಮಾ

ಟಾಪ್ ನ್ಯೂಸ್

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.