ಕಾರ್ಡ್ ಸಾಲ, ವೈಯಕ್ತಿಕ ಸಾಲ
Team Udayavani, Jan 14, 2019, 12:30 AM IST
ಸಾಲ ಯಾವುದಾದರೇನು? ಮೊದಲು ಬಡ್ಡಿ ಎಷ್ಟು ಎನ್ನುವು ದನ್ನು ತಿಳಿಯಬೇಕು. ವೈಯಕ್ತಿಕ ಸಾಲದ ಬಡ್ಡಿದರವು ಶೇ.13 ರಿಂದ ಶೇ.22 ರಷ್ಟಿದ್ದರೆ, ಕ್ರೆಡಿಟ್ ಕಾರ್ಡ್ ಸಾಲದಲ್ಲಿನ ಬಡ್ಡಿದರವು ಶೇ. 10ರಿಂದ ಶೇ.18 ತನಕ ಇರುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಶೇ.10ರ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗುತ್ತವೆ. ಆದರೆ ಬಡ್ಡಿದರವು ಫ್ಲಾಟ್ ರೇಟ್‌ನಲ್ಲಿ ವಿಧಿಸಲ್ಪಡುವುದೇ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕು.
ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಯಾವುದು ಬೆಸ್ಟ್? ಸಂದರ್ಭ, ಹಿಂಪಾವತಿಯ ತಾಕತ್ತಿನ ಆಧಾರದ ಮೇಲೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ವ್ಯವಹರಿಸುವ ಬ್ಯಾಂಕ್ 5 ಲಕ್ಷ ರೂಪಾಯಿಗಳನ್ನು ವೈಯಕ್ತಿಕ ಸಾಲದ ರೂಪದಲ್ಲಿ ಕೊಡುವುದಾಗಿ ಭರವಸೆ ನೀಡಿದ್ದರೆ. ಅವನು ಹೊಂದಿರುವ ಕ್ರೆಡಿಟ್ ಕಾರ್ಡ್ ಲಿಮಿಟ್ ಕೇವಲ 2 ಲಕ್ಷ ರೂ. ಆಗಿರುತ್ತದೆ. ಇಂತಿಪ್ಪ ಸಮಯದಲ್ಲಿ ಉತ್ತಮ ಆಯ್ಕೆ ಯಾವುದು ಅಂದರೆ ಕಾರ್ಡಿನ ಸಾಲವಲ್ಲ. ವೈಯುಕ್ತಿಕ ಸಾಲವೇ ಒಳಿತು.
ಸಾಲದ ಪ್ರಕ್ರಿಯೆ
ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳಿಗೆ ಅರ್ಜಿ ಸಲ್ಲಿಸಿದರೆ- ಬ್ಯಾಂಕ್‌ನವರು ಇಂಚು, ಇಂಚು ಪರಿಶೀಲನೆ ನಡೆಸುತ್ತಾರೆ.
ಆದರೆ ಕ್ರೆಡಿಟ್ ಕಾರ್ಡ್ ಸಾಲ ಸುಲಭವಾಗಿ ದೊರೆಯುತ್ತದೆ. ಆನ್‌ಲೈನ್ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಮಾಸಿಕ ಸಂಬಳದ ರಸೀತಿಗಳನ್ನು (Pay slips) ಸಾಲದ ಅರ್ಜಿಯೊಂದಿಗೆ ಸಲ್ಲಿಸಬೇಕು. ಅಲ್ಲದೇ, ಸಾಲ ಒದಗಿಸುವ ಸಂಸ್ಥೆ ಕೇಳುವ ಕೆವೈಸಿ (KYC) ದಾಖಲೆಗಳನ್ನು ಒದಗಿಸಬೇಕು. ಹೀಗಾದ ನಂತರ 48 ರಿಂದ 72 ಗಂಟೆಗಳ ಒಳಗಾಗಿ (ಕೆಲವೊಮ್ಮೆ ಒಂದು ವಾರಕ್ಕೂ ಹೆಚ್ಚಿನ ಸಮಯ ಬೇಕಾಗಬಹುದು) ವೈಯಕ್ತಿಕ ಸಿಗಲಿದೆ. ಆದರೆ ಕ್ರೆಡಿಟ್ ಕಾರ್ಡ್ ಸಾಲಕ್ಕಾಗಿ ನಾವು ಕ್ರೆಡಿಟ್ ಕಾರ್ಡ್ ಒದಗಿಸಿರುವ ಸಂಸ್ಥೆಯ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ ಸಾಲದ ಮನವಿ ಸಲ್ಲಿಸಬಹುದು. ಸಾಲದ ಮೊತ್ತವು ನಮ್ಮ ಖಾತೆಗೆ ಕೇವಲ 24 ರಿಂದ 48 ಗಂಟೆಗಳ ಒಳಗಾಗಿ ಜಮೆಯಾಗುತ್ತದೆ.
ಅವಧಿಗೂ ಮುನ್ನ ಸಾಲದ ಮರುಪಾವತಿ ಶುಲ್ಕ
ಈ ವಿಚಾರಕ್ಕೆ ಬಂದಾಗ ಎರಡೂ ಸಾಲಗಳಲ್ಲಿನ ಸಂಸ್ಕರಣಾ ಶುಲ್ಕವು ಶೇ.0.5 ರಿಂದ ಪ್ರಾರಂಭವಾಗಿ ಶೇ.1 ತನಕ ವಿಧಿಸುತ್ತಾರೆ. ಅಂದರೆ 2 ಲಕ್ಷ ರೂ. ಸಾಲ ಪಡೆದಾಗ ರೂ.1,000 ದಿಂದ ರೂ.2,000ದ ತನಕ ಸಂಸ್ಕರಣಾ ವೆಚ್ಚವನ್ನು ಭರಿಸಬೇಕಾಗುತ್ತದೆ. ಸಾಲ ಪಾವತಿಸುವ ಅವಧಿಗೂ ಮುನ್ನ ಅಸಲನ್ನು ಜಮಾ ಮಾಡಿ ಸಾಲದಿಂದ ಹೊರಬರಲು ಯೋಚಿಸಿದಾಗ ಶೇ.2 ರಿಂದ ಶೇ 5ರ ವರೆಗೆ ಬಾಕಿ ಅಸಲಿನ ಮೇಲೆ ಶುಲ್ಕ ಬೀಳಲೂ ಬಹುದು. ಕ್ರೆಡಿಟ್ ಕಾರ್ಡ್ ಸಾಲ ಮರುಪಾವತಿಯ ಅವಧಿಯ ವಿಷಯಕ್ಕೆ ಬಂದಾಗ ಕನಿಷ್ಠ ಅವಧಿಯಲ್ಲಿ (ಆಯಾ ಬ್ಯಾಂಕಿನ ನಿಯಮದ ಪ್ರಕಾರ 6 ತಿಂಗಳೊಳಗಾಗಿ) ಮರುಪಾವತಿಸುವ ಅವಕಾಶವುಂಟು. ಆದರೆ ಹೆಚ್ಚಿನ ಬ್ಯಾಂಕ್‌ಗಳಲ್ಲಿ ದೊರೆಯುವ ವೈಯಕ್ತಿಕ ಸಾಲ ಮರುಪಾವತಿಯ ಕನಿಷ್ಠ ಅವಧಿ 12 ರಿಂದ 24 ತಿಂಗಳುಗಳಾಗಿವೆ.
ದೊರೆಯುವ ಸಾಲದ ಮಿತಿ
ಚಿಕ್ಕ ಮೊತ್ತದ ಸಾಲದ ಅಗತ್ಯವಿದ್ದಾಗ ಕ್ರೆಡಿಟ್ ಕಾರ್ಡ್ ಸಾಲವೇ ಸೂಕ್ತ.ಹೆಚ್ಚಿನ ಹಣ ಅವಶ್ಯಕತೆ ಬಿದ್ದಾಗ ವೈಯಕ್ತಿಕ ಸಾಲಕ್ಕೆ ಮೊರೆಹೋಗಬಹುದು. ಅರ್ಜಿದಾರನ ಮಾಸಿಕ ಆದಾಯದನ್ವಯ ಸಾಲ ದೊರೆಯುವುದರಿಂದಾಗಿ ಹೆಚ್ಚಿನ ಮೊತ್ತದ ಸಾಲ ಸಿಗುತ್ತದೆ. ಆದರೆ ದೊಡ್ಡ ಮೊತ್ತದ ಸಾಲ ನೀಡಲು ಕ್ರೆಡಿಟ್ ಕಾರ್ಡ್ ಕಂಪನಿಗಳು ಮುಂದಾಗುವುದಿಲ್ಲ.
ಬಡ್ಡಿದರ
ಸಾಲ ಯಾವುದಾದರೇನು ಮೊದಲು ಬಡ್ಡಿ ಎಷ್ಟು ಎನ್ನುವುದನ್ನು ತಿಳಿಯಬೇಕು. ಶೇ.13 ರಿಂದ ಶೇ.22 ರಷ್ಟಿದ್ದರೆ, ಕ್ರೆಡಿಟ್ ಕಾರ್ಡ್ ಸಾಲದಲ್ಲಿನ ಬಡ್ಡಿದರವು ಶೇ. 10ರಿಂದ ಶೇ.18 ತನಕ ಇರುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ತನ್ನ ಗ್ರಾಹಕನಿಗೆ ಶೇ.10ರ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗುತ್ತವೆ. ಆದರೆ ಬಡ್ಡಿದರವು ಫ್ಲಾಟ್ ರೇಟ್‌ನಲ್ಲಿ ವಿಧಿಸಲ್ಪಡುವುದೇ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ. ವೈಯಕ್ತಿಕ ಸಾಲ ಪಡೆದು ಮರುಪಾವತಿಸುವ ಸಮಯದಲ್ಲಿ, ಅಂದರೆ ಮಾಸಿಕ ಮರುಪಾವತಿಗಳ ಸಮಯದಲ್ಲಿ ರೆಡ್ನೂಸಿಂಗ್ ರೇಟ್‌ನಲ್ಲಿ ದರದಲ್ಲಿ ಬಡ್ಡಿ ಇದೆಯೇ ಅನ್ನೋದನ್ನು ನೋಡಿಕೊಳ್ಳಿ. ಹೆಚ್ಚಿನ ಸಂದರ್ಭಗಳಲ್ಲಿ ವೈಯಕ್ತಿಕ ಸಾಲದಲ್ಲಿ ಹೆಚ್ಚಿನ ಬಡ್ಡಿ ದರವಿದ್ದಾಗಲೂ ಕ್ರೆಡಿಟ್ ಕಾರ್ಡ್ ಸಾಲದಲ್ಲಿನ ಕಡಿಮೆ ಬಡ್ಡಿ ದರಕ್ಕೆ ಹೋಲಿಸಿದಾಗ ವೈಯಕ್ತಿಕ ಸಾಲಕ್ಕೆ ಪಾವತಿಸುವ ಬಡ್ಡಿ ಕಡಿಮೆಯಾಗಿರುತ್ತದೆ. ಆದಾಗ್ಯೂ ಕಡಿಮೆ ಅವಧಿಗೆ ಸಾಲ ಪಡೆಯುವ ಉದ್ದೇಶ ಹೊಂದಿರುವಾಗ ಕ್ರೆಡಿಟ್ ಕಾರ್ಡ್ ಲೋನ್ ಸೂಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.