ಕ್ಯಾರೆಟ್‌ ಚಿನ್ನ

ಮಧುವನದಲಿ ಸಿಹಿಯ ಬೆಳೆದು...

Team Udayavani, Dec 23, 2019, 4:51 AM IST

wd-6

97 ವರ್ಷದ ವಲ್ಲಭಭಾಯಿ ಆಕಸ್ಮಿಕವಾಗಿ ಅಭಿವೃದ್ಧಿಪಡಿಸಿದ “ಮಧುವನ್‌’ ಕ್ಯಾರೆಟ್‌ ತಳಿ ಇಂದು ಹಲವು ಮಂದಿಗೆ ಜೀವನಾಶ್ರಯವನ್ನು ಕಲ್ಪಿಸಿದೆ.

ವಲ್ಲಭಭಾಯಿ ವಸ್ರಾಂಭಾಯಿ ಮರ್ವಾನಿಯಾ, ಗುಜರಾತಿನ ಜುನಾಗಡ್‌ ಜಿಲ್ಲೆಯ ಖಾಮ್‌ಧ್ರೋಲ್‌ ಗ್ರಾಮದವರು. 1943ರಲ್ಲಿ, ಅವರು ಕೃಷಿ ಕೆಲಸಕ್ಕೆ ಇಳಿದಾಗ ಅವರಿಗೆ 13 ವರ್ಷ ವಯಸ್ಸು! ಆಗಷ್ಟೇ 5ನೇ ತರಗತಿ ಮುಗಿಸಿದ್ದ ವಲ್ಲಭಭಾಯಿ, ತಮ್ಮ ತಂದೆಯವರಿಗೆ ಹೊಲದ ಕೆಲಸದಲ್ಲಿ ನೆರವಾಗುವ ಸಲುವಾಗಿ ವಿದ್ಯಾಭ್ಯಾಸ ತೊರೆದರು. ಈ ವರ್ಷ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ಅನಕ್ಷರಸ್ಥರಾಗಿದ್ದರೂ ಪದ್ಮಶ್ರೀ ಪಡೆಯುವಲ್ಲಿಯ ತನಕದ ಅವರ ಪಯಣ ಸುದೀರ್ಘ‌ವಾದುದು. ಬಹಳ ಹಿಂದೆ, ಅವರ 5 ಎಕರೆ ಹೊಲದಲ್ಲಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ದ್ವಿದಳಧಾನ್ಯಗಳು, ಆಹಾರಧಾನ್ಯಗಳು ಮತ್ತು ನೆಲಗಡಲೆ- ಇವನ್ನು ಫ‌ಸಲಿನ ಮಾರಾಟಕ್ಕಾಗಿ ಮತ್ತು ಜೋಳ, ಸಣ್ಣಜೋಳ, ರಾಜೊಕೋ 3 (ಇದೊಂದು ಮೇವಿನ ಹುಲ್ಲು) ಹಾಗೂ ಕ್ಯಾರೆಟ್‌- ಇವನ್ನು ಜಾನುವಾರುಗಳಿಗೆ ಆಹಾರವಾಗಿ ಬೆಳೆಯುತ್ತಿದ್ದರು. ಆಗ, ಜಾನುವಾರುಗಳಿಗಾಗಿ ಬೆಳೆಯುತ್ತಿದ್ದ ಕ್ಯಾರೆಟನ್ನು ಮನುಷ್ಯರೂ ತಿನ್ನಬಹುದೆಂಬ ಸಂಗತಿ ಗುಜರಾತಿನಲ್ಲಿ ಯಾರಿಗೂ ಗೊತ್ತಿರಲಿಲ್ಲ!

ಮೊತ್ತ ಮೊದಲ ಲಾಭ
ಅದೊಂದು ದಿನ, ಜಾನುವಾರುಗಳಿಗೆ ತಿನ್ನಲು ಹಾಕುತ್ತಿದ್ದ ಕ್ಯಾರೆಟ್‌ನ ತುಂಡೊಂದನ್ನು ವಲ್ಲಭಭಾಯಿ, ಬಾಯಿಗೆ ಹಾಕಿಕೊಂಡರು; ಅದು ಬಹಳ ರುಚಿಯಾಗಿತ್ತು. ಹಾಗಾಗಿ, ತಾವು ಬೆಳೆಯುವ ಕ್ಯಾರೆಟ್‌ನ ಒಂದು ಭಾಗವನ್ನು ಮಾರಾಟ ಮಾಡಬೇಕೆಂದು ತಂದೆಯವರಿಗೆ ಹೇಳಿದರು. ಕ್ಯಾರೆಟ್‌ಗಳನ್ನು ಮಾರುಕಟ್ಟೆಗೆ ಒಯ್ದರು. ತಮ್ಮ ಗ್ರಾಹಕರೊಬ್ಬರಿಗೆ, ಕ್ಯಾರೆಟ್‌ನ ರುಚಿ ನೋಡಲು ವಿನಂತಿಸಿದರು. ಶುರುವಿನಲ್ಲಿ ತಿನ್ನಲು ಹಿಂದೆಮುಂದೆ ನೋಡಿದ ಆ ಗ್ರಾಹಕ ರುಚಿ ನೋಡಿದ ನಂತರ 5 ಕೆ.ಜಿ. ಕ್ಯಾರೆಟ್‌ಅನ್ನು ಖರೀದಿಸಿದರು. ಅದನ್ನು ನೋಡುತ್ತಿದ್ದ ಇನ್ನೊಬ್ಬರು ಗ್ರಾಹಕರು ಒಂದಿಡೀ ಚೀಲ ಕೊಂಡೊಯ್ದರು. ತಮ್ಮ ಮೊದಲ ಬ್ಯಾಚ್‌ನ ಕ್ಯಾರೆಟ್‌ ಮಾರಾಟದಲ್ಲಿ ವಲ್ಲಭಭಾಯಿ ಗಳಿಸಿದ್ದು 8 ರೂ.

“ಅಂದಿನ ದಿನಗಳಲ್ಲಿ 50 ಪೈಸೆ ಹಣವೇ ನಮಗೆ ದೊಡ್ಡ ಮೊತ್ತ. ಆ ದಿನದ ಗಳಿಕೆಯನ್ನು ತಂದೆಯವರಿಗೆ ಕೊಟ್ಟಾಗ, ಹೆಚ್ಚುವರಿ 8 ರೂ. ಕಂಡು ಅವರಿಗೆ ಅಚ್ಚರಿ. ಅದು ಕ್ಯಾರೆಟ್‌ ಮಾರಾಟದಿಂದ ಬಂದ ಹಣ ಎಂದಾಗ ಅವರಿಗೆ ನಂಬಲಿಕ್ಕೇ ಆಗಲಿಲ್ಲ. ಯಾಕೆಂದರೆ, ಕೆಲವೊಮ್ಮೆ ಇಡೀ ತಿಂಗಳು ನಮಗೆ 8 ರೂ. ಗಳಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪು ಮಾಡಿಕೊಳ್ಳುತ್ತಾರೆ ವಲ್ಲಭಭಾಯಿ.

ಮಧುವನ್‌ ಕ್ಯಾರೆಟ್‌
ತದನಂತರ ಹನಿ ನೀರಾವರಿ ಅಳವಡಿಸಿ, ಸಸಿಗಳಿಗೆ ಮುಚ್ಚಿಗೆ ಹಾಕಲು ಶುರುಮಾಡಿದ ವಲ್ಲಭಭಾಯಿ, ತನ್ನ ಕೃಷಿ ಜಮೀನನ್ನು 4 ಎಕರೆಗಳಿಂದ 40 ಎಕರೆಗಳಿಗೆ ವಿಸ್ತರಿಸಿಕೊಂಡರು. ಈ ಸುಧಾರಿತ ಕೃಷಿಕ್ರಮಗಳಿಂದಾಗಿ ಕ್ಯಾರೆಟ್‌ನ ಗುಣಮಟ್ಟವೂ ಸುಧಾರಿಸಿತು. ಅಲ್ಲಿಯ ಮಾರುಕಟ್ಟೆಯಲ್ಲಿ ಈ ಕ್ಯಾರೆಟ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇತ್ತು. ಹಾಗಾಗಿ ಇದರ ಬೀಜ ಉತ್ಪಾದಿಸಿ, ಅವನ್ನು ಇತರ ರೈತರಿಗೆ ಹಂಚಲು ನಿರ್ಧರಿಸಿದರು. ಬೀಜೋತ್ಪಾದನೆಗಾಗಿ ಅತ್ಯುತ್ತಮ ಸಸಿಗಳನ್ನೇ ಆಯ್ಕೆ ಮಾಡಿದರು. 1985ರಲ್ಲಿ ದೊಡ್ಡ ಪ್ರಮಾಣದಲ್ಲಿ ಬೀಜೋತ್ಪಾದನೆ ಶುರು ಮಾಡಿ ಈ ತಳಿಯನ್ನು “ಮಧುವನ್‌ ಕ್ಯಾರೆಟ್‌’ ಎಂದು ಕರೆದರು.

ಈಗ ಗುಜರಾತ್‌, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಬೆಳೆಯಲಾಗುವ ಮಧುವನ್‌ ಕ್ಯಾರೆಟ್‌ನ ಸರಾಸರಿ ಇಳುವರಿ ಹೆಕ್ಟೇರಿಗೆ 40- 50 ಟನ್‌. ಮುಂಗಾರು 2016- 17ರಲ್ಲಿ ಜೈಪುರದ ರಾಜಸ್ಥಾನ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಈ ತಳಿಯ ದೃಢೀಕರಣ ಪ್ರಯೋಗ ನಡೆಸಿತು. ಇದರ ಫ‌ಸಲು (ಹೆಕ್ಟೇರಿಗೆ 74.2 ಟನ್‌) ಮತ್ತು ಪ್ರತಿ ಸಸಿಯ ಒಟ್ಟು ಬೆಳೆ ಅಂದರೆ ಎಲೆ ಮತ್ತು ಬೇರಿನ ತೂಕ (275 ಗ್ರಾಂ) ಇತರ ತಳಿಗಳಿಗಿಂತ ಹೆಚ್ಚಾಗಿರುವುದು ದೃಢಪಟ್ಟಿತು. ಅನಂತರ, ಅದೇ ವರ್ಷ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಗುಜರಾತ್‌, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಈ ತಳಿ ಬೆಳೆಸಿ ಪ್ರಯೋಗ ನಡೆಸಿದಾಗಲೂ ಇದರ ಇಳುವರಿ ಅತ್ಯುತ್ತಮವೆಂಬುದು ಖಚಿತವಾಯಿತು. ಚಿಪ್ಸ್, ಜ್ಯೂಸ್‌ ಮತ್ತು ಉಪ್ಪಿನಕಾಯಿ- ಇಂತಹ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೂ, ಈ ತಳಿ ಸೂಕ್ತ.

ಕೃಷಿಯೇ ತಪಸ್ಸು
ಕೆಲಸಗಾರರಿಂದ ಯಾವುದೇ ಕೃಷಿ ಕೆಲಸವನ್ನು ಮಾಡಿಸುತ್ತಿಲ್ಲ ವಲ್ಲಭಭಾಯಿ ಕುಟುಂಬ. ಕ್ಯಾರೆಟ್‌ ಬಿತ್ತನೆಯಿಂದ ತೊಡಗಿ ಬೀಜಗಳನ್ನು ಪ್ಯಾಕ್‌ ಮಾಡುವವರೆಗಿನ ಎಲ್ಲ ಕೆಲಸಗಳನ್ನೂ ಕುಟುಂಬದ ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಪ್ರತಿ ಎಕರೆ ಕ್ಯಾರೆಟ್‌ ತಮ್ಮ ಕುಟುಂಬ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದೆ ಎಂದು ತಿಳಿಸುತ್ತಾರೆ ವಲ್ಲಭಭಾಯಿಯವರ ಮಗ ಅರವಿಂದ ಭಾಯಿ. 97 ವರ್ಷಗಳ ತುಂಬು ಬದುಕಿನಲ್ಲಿ ಒಂದು ತಪಸ್ಸಿನಂತೆ ಕ್ಯಾರೆಟ್‌ ಕೃಷಿ ಹಾಗೂ ಬೀಜೋತ್ಪಾದನೆ ಮುಂದುವರಿಸಿದವರು ವಲ್ಲಭಭಾಯಿ. ಈ ಜೀವಮಾನದ ಸಾಧನೆಗೆ ಪದ್ಮಶ್ರೀ ಪುರಸ್ಕೃತರಾಗಿ ಏಕಧ್ಯಾನದ ಕೃಷಿಯಿಂದ ಯಾವ ಸಾಧನೆಯ ಶಿಖರ ಏರಬಹುದೆಂದು ತೋರಿಸಿಕೊಟ್ಟಿದ್ದಾರೆ, ಅವರು.

ನವಾಬರಿಗೆ ಸರಬರಾಜು
ಅಲ್ಲಿಯವರೆಗೆ ಮನುಷ್ಯರು ತಿನ್ನದೇ ಇದ್ದ ಕ್ಯಾರೆಟ್‌ನ ರುಚಿ ಜನರಿಂದ ಜನರಿಗೆ ಹರಡುತ್ತಿದ್ದಂತೆಯೇ ಬೇಡಿಕೆ ಹೆಚ್ಚಿತು. ಕೆಲವೇ ದಿನಗಳಲ್ಲಿ ಜುನಾಗಡ್‌ನ‌ ನವಾಬ ಮೂರನೆಯ ಮಹಮ್ಮದ್‌ ಮಹಬತ್‌ ಖಾನ್‌ ಅವರಿಗೆ ಈ ವಿಶೇಷ ತರಕಾರಿಯ ಸುದ್ದಿ ಸಿಕ್ಕಿತು. ತದನಂತರ ನವಾಬರ ಅರಮನೆಯ ಭೋಜನಾಲಯಗಳಿಗೆ ವಲ್ಲಭಭಾಯಿ ಅವರಿಂದ ಕ್ಯಾರೆಟಿನ ನಿರಂತರ ಪೂರೈಕೆ. ಆದರೆ, ಭಾರತ ಸ್ವಾತಂತ್ರ್ಯ ಗಳಿಸಿದಾಗ, ಜುನಾಗಡದ ನವಾಬರು ಕರಾಚಿಗೆ ಹೋಗಿ ನೆಲೆಸಿದರು. ಅದೇನಿದ್ದರೂ. ನವಾಬರ ಅರಮನೆಗೆ ಕ್ಯಾರೆಟ್‌ ಪೂರೈಕೆ ಮಾಡಿದ ಆ ನಾಲ್ಕು ವರುಷಗಳಲ್ಲಿ ಉತ್ತಮ ಆದಾಯ ಗಳಿಸಿದರು ವಲ್ಲಭಭಾಯಿ.

-ಅಡ್ಡೂರು ಕೃಷ್ಣರಾವ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.