ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್ ವೇಳೆ ಧೂಳೆಬ್ಬಿಸಿದ ಕಾರ್‌ಗಳು
Team Udayavani, Aug 3, 2020, 3:28 PM IST
ಆಟೋಮೊಬೈಲ್ ಕ್ಷೇತ್ರವೀಗ ಮೈ ಕೊಡವಿಕೊಂಡು ಎದ್ದುನಿಂತಿದೆ. ಮಾರುಕಟ್ಟೆಗೆ ಹೊಸ ಬೈಕ್ ಮತ್ತು ಕಾರ್‌ಗಳ ಪ್ರವೇಶ ಆಗುತ್ತಿದೆ…
ಆಟೋಮೊಬೈಲ್ ಕ್ಷೇತ್ರದ ಮೇಲೆ ಕೋವಿಡ್ ಕರಿನೆರಳಿನ ಬಿಸಿ ಜೋರಾಗಿಯೇ ಇತ್ತು. ಮಾರುಕಟ್ಟೆ ಸ್ತಬ್ಧವಾಗಿದ್ದ ಕಾರಣದಿಂದಾಗಿ ಕಾರಾಗಲಿ, ಬೈಕುಗಳಾಗಲಿ ಅಷ್ಟಾಗಿ ಸೇಲಾಗುತ್ತಿರಲಿಲ್ಲ. ಅದರಲ್ಲೂ ಲಾಕ್‌ಡೌನ್ ವೇಳೆಯಲ್ಲಿ ಈ ಪ್ರಮಾಣ ಝೀರೋಗೆ ಬಂದು ಮುಟ್ಟಿತ್ತು. ಈಗ ದೇಶವಷ್ಟೇ ಅಲ್ಲ, ಜಗತ್ತಿನಾದ್ಯಂತ ನಿಧಾನಗತಿಯಲ್ಲಿ ಆರ್ಥಿಕತೆ ತೆರೆದುಕೊಳ್ಳುತ್ತಿದೆ. ಇದಕ್ಕೆ ತಕ್ಕಂತೆ, ಆಟೋಮೊಬೈಲ್ ಕ್ಷೇತ್ರವೂ ಮೈಕೊಡವಿಕೊಂಡು ಎದ್ದೇಳುತ್ತಿದೆ. ಮಾರುಕಟ್ಟೆಗೆ ಹೊಸದಾಗಿ ಕಾರು, ಬೈಕುಗಳ ಪ್ರವೇಶವೂ ಆಗುತ್ತಿದೆ. ಇತ್ತೀಚೆಗೆ ದೇಶದಲ್ಲಿ ಮಾರುತಿ, ಹುಂಡೈ, ಹೋಂಡಾ, ನಿಸಾನ್, ಕಿಯಾ ಸೇರಿದಂತೆ ಬಹಳಷ್ಟು ಕಾರು ಕಂಪನಿಗಳು ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಇವುಗಳಲ್ಲಿ ಕೆಲವೊಂದರ ಪರಿಚಯ ಇಲ್ಲಿದೆ.
ಹುಂಡೈ ವೆನ್ಯೂ
ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹುಂಡೈ ವೆನ್ಯೂ ಸರಣಿಗೆ ಮತ್ತೂಂದು ಕಾರು ಸೇರ್ಪಡೆಯಾಗಿದೆ. ಅದು ಹುಂಡೈ ವೆನ್ಯೂ ಎಸ್‌ಎಕ್ಸ್ ಪ್ಲಸ್ ಸ್ಪೋರ್ಟ್ಸ್ ಡಿಸಿಟಿ. 998ಸಿಸಿ ಎಂಜಿನ್ ಸಾಮರ್ಥ್ಯವಿರುವ ಈ ಕಾರು, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 18.15 ಕಿ.ಮೀ. ಮೈಲೇಜ್ ನೀಡಲಿದೆ ಎಂಬುದು ಕಂಪನಿಯ ಹೇಳಿಕೆ.
ಹುಂಡೈ ಟುಸ್ಕಾನ್
ಹುಂಡೈ ಕಂಪನಿಯ ಮತ್ತೂಂದು ಎಸ್ ಯುವಿ, ಟುಸ್ಕಾನ್ ಕೂಡ ಆಟೋಮ್ಯಾಟಿಕ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. 1999ಸಿಸಿ ಎಂಜಿನ್ ಸಾಮರ್ಥ್ಯವಿರುವ ಈ ಕಾರು, 530 ಲೀ. ಬೂಟ್ ಸ್ಪೇಸ್ ಹೊಂದಿದೆ. ಇತ್ತೀಚೆಗಷ್ಟೇ ನಡೆದ ವಚ್ಯುìವಲ್ ಕಾರ್ಯಕ್ರಮದಲ್ಲಿ ಟುಸ್ಕಾನ್, ನ್ಯೂ ಕ್ರೀಟಾ ಮತ್ತು ನ್ಯೂ ವರ್ನಾ ಅನ್ನು ಬಿಡುಗಡೆ ಮಾಡಲಾಯಿತು. ಈಗಾಗಲೇ ಜಗತ್ತಿನಾದ್ಯಂತ ಯಶಸ್ವಿಯಾಗಿರುವ ಟುಸ್ಕಾನ್ ಅನ್ನು ಇನ್ನಷ್ಟು ಆಧುನಿಕ, ಪ್ರೀಮಿಯಂ ಮತ್ತು ಬೋಲ್ಡ್ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ನಿಸಾನ್ ಮ್ಯಾಗ್ನೆಟ್
ನಿಸಾನ್ ಇಂಡಿಯಾದ ಬಹು ನಿರೀಕ್ಷೆಯ ಬಿ- ಎಸ್ ಯುವಿ ಪರಿಕಲ್ಪನೆಯನ್ನು ಬಿಡುಗಡೆ ಮಾಡಲಾಗಿದೆ. ತಂತ್ರಜ್ಞಾನ ಸಿರಿವಂತಿಕೆ ಮತ್ತು ಸ್ಟೈಲಿಷ್‌ನೊಂದಿಗೆ ಈ ಹೊಸ ಎಸ್‌ಯುವಿಯನ್ನು ಈ ವರ್ಷದಲ್ಲೇ ಲಾಂಚ್ ಮಾಡಲು ನಿಸಾನ್ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಈ ಎಸ್‌ಯುವಿಗೆ ನಿಸಾನ್ ಇಂಡಿಯಾ ನಿಸಾನ್ ಮ್ಯಾಗ್ನೆಟ್ ಎಂಬ ಹೆಸರನ್ನೂ ನೀಡಿದೆ. ಅಷ್ಟೇಅಲ್ಲ, ಈ ಕಾರನ್ನು ಮೇಕ್ ಇನ್ ಇಂಡಿಯಾ ತತ್ವದ ಆಧಾರದಲ್ಲೇ ರೂಪಿಸಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೋಂಡಾ ಸಿಟಿ 5 ಜನರೇಶನ್
ಸೆಡಾನ್ ಮಾರುಕಟ್ಟೆಯಲ್ಲಿ ಬಹಳಷ್ಟು ಪ್ರಸಿದ್ಧಿಯಾಗಿರುವ ಹೋಂಡಾ ಸಿಟಿ ಕಂಪನಿ, ಇದೀಗ 5ನೇ ಜನರೇಶನ್ ಹೋಂಡಾ ಸಿಟಿ ಕಾರನ್ನು ಬಿಡುಗಡೆ ಮಾಡಿದೆ. ಅಲೆಕ್ಸಾ ರಿಮೋಟ್ ಕೆಪಬಿಲಿಟಿಯೊಂದಿಗೆ ಭಾರತಕ್ಕೆ ಪ್ರವೇಶಿಸಿರುವ ಮೊದಲ ಕಾರು ಎಂಬುದು ಇದರ ಹೆಗ್ಗಳಿಕೆ. ಟೆಲಿಮ್ಯಾಟಿಕ್ ಕಂಟ್ರೋಲ್ ಯುನಿಟ್ ಹಾಗೂ ಹೋಂಡಾ ಕನೆಕ್ಟ್ 5 ವರ್ಷಗಳ ಚಂದಾದಾರಿಕೆ ಸಿಗಲಿದೆ. ಈಗ ಬಿಎಸ್6 ಮಾದರಿಯ ಕಾರುಗಳು ಬರಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ.
ಮಾರುತಿ ಎಸ್-ಪ್ರೆಸ್ಸೋ ವಿಎಕ್ಸ್ ಐ ಒಪಿಟಿ ಸಿಎನಿ
ಮಾರುತಿ ಕಂಪನಿಯ ಹ್ಯಾಚ್‌ಪ್ಯಾಕ್‌ನಲ್ಲೊಂದಾದ ಎಸ್-ಪ್ರೆಸ್ಸೋ ಕಾರಿನ ಸಿಎನ್ಜಿ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. 998ಸಿಸಿ ಎಂಜಿನ್ ಸಾಮರ್ಥ್ಯವಿರುವ ಈ ಕಾರು, 31 ಕಿ.ಮೀ. ಮೈಲೇಜ್ ನೀಡಲಿದೆ ಎಂಬುದು ಕಂಪನಿಯ ಹೇಳಿಕೆ. ಈಗ ಮಾರುತಿ ಎಸ್-ಪ್ರೆಸ್ಸೋ ವಿಎಕ್ಸ್ ಐ ಒಪಿಟಿ ಸಿಎನ್ಜಿ ಹೆಸರಿನಲ್ಲಿ ಇದನ್ನು ಲಾಂಚ್ ಮಾಡಲಾಗಿದ್ದು, ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅನ್ನು ಹೊಂದಿದೆ. ಉಳಿದಂತೆ ಸ್ಕೋಡಾ ಕಂಪನಿಯ ನ್ಯೂ ರ್ಯಾಪಿಡ್ ರೈಡರ್ ಪ್ಲಸ್ ಎಂಬ ಕಾರನ್ನು ಬಿಡುಗಡೆ ಮಾಡಲಾಗಿದೆ. ಇದು ಬಿಎಸ್6 ಎಂಜಿನ್ ಮಾದರಿಯದ್ದಾಗಿದ್ದು, 1 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು ಆರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದೂ ಸೆಡಾನ್ ಮಾದರಿಯದ್ದಾಗಿದೆ. ಫೋರ್ಡ್ ಎಕೋನ್ಪೋರ್ಟ್ ಕಂಪನಿ ಕೂಡ ತನ್ನ ಬಹುನೆಚ್ಚಿನ ಬ್ರಾಂಡ್ ಫೋರ್ಡ್ ಎಕೋನ್ಪೋರ್ಟ್ ಟೈಟಾನಿಯಂ ಆಟೋಮ್ಯಾಟಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದು 1.5 ಲೀ. ಪೆಟ್ರೋಲ್ ಮತ್ತು 1.5 ಲೀ. ಡೀಸೆಲ್ ಎಂಜಿನ್ ಮಾದರಿಗಳನ್ನು ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.