ಚಾಚು ಟಿ ಸ್ಟಾಲ್‌ನಲ್ಲಿ 5 ರೂ.ಗೆ ಟಿಫಿನ್
Team Udayavani, Sep 17, 2018, 4:43 PM IST
ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಲೇ ಇದೆ. ಜೊತೆಗೆ, ಉದ್ದಿನ ಬೆಳೆ ಸೇರಿದಂತೆ ದಿನಸಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದೆ. ಹಿಗಿದ್ದರೂ ಕಳೆದ ಐದು ವರ್ಷಗಳಿಂದ ಬೆಲೆ ಏರಿಕೆ ಮಾಡದೇ ಗ್ರಾಹಕರಿಗೆ ರುಚಿಕಟ್ಟಾದ ಬಿಸಿ ಬಿಸಿ ತಿನಿಸು ನೀಡುವ ಮೂಲಕ ಕಳೆದಗ್ರಾಹಕರನ್ನು ಸೆಳೆದುಕೊಂಡಿದೆ ಧಾರವಾಡದ ಚಾಚು ಟೀ ಸ್ಟಾಲ್.
ನಗರದ ಸಂಗಮ್ ಟಾಕೀಸ್ ಎದುರಿಗೆ ಇರುವ ಚಾಚು ಟೀ ಸ್ಟಾಲ್‌ನ್ ತಿನಿಸುಗಳು ಇಲ್ಲಿ ಕಡಿಮೆ ಬೆಲೆ ಹಾಗೂ ರುಚಿಗೆ ಮಾರು ಹೋಗದವರು ಧಾರವಾಡದಲ್ಲಿ ಯಾರೂ ಇಲ್ಲ ಅನ್ನಬೇಕು. ಹೇಳಿ ಕೇಳಿ ಇದು ತುಟ್ಟಿ ಕಾಲ. ಹಾಗಿದ್ದರೂ ಇಲ್ಲಿ ಕೇವಲ 5 ರೂ.ಗೆ ರುಚಿ ರುಚಿಯಾದ ಬಿಸಿ ಬಿಸಿ ವಡೆ, ಸಾಬೂದಾನಿ ವಡೆ ಹಾಗೂ ಚಟ್ನಿ ಸಿಗುತ್ತದೆ ಅಂದರೆ ನೀವೂ ನಂಬಲೇ ಬೇಕು. 10 ರೂ. ಕೊಟ್ಟು ಎರಡು ಉದ್ದಿನ ವಡೆ ಪಡೆದು ಸವಿಯಬಹುದು.
ಈ ಹೋಟೆಲ್ ಮಾಲೀಕರಾದ ದಿಲೀಪ ಅಣ್ಣಿಗೇರಿ ಅವರು ಹೆಚ್ಚು ಲಾಭ ಬಯಸುವವರಲ್ಲ. ಕಡಿಮೆ ಲಾಭದಲ್ಲಿಯೇ ಹೆಚ್ಚು ರುಚಿಕರ ಆಹಾರ ಒದಗಿಸುವ ಒದಗಿಸಬೇಕು ಎಂಬ ಆಸೆ ಇವರದ್ದು. 1999 ರಿಂದ ಈ ಉದ್ಯಮದಲ್ಲಿರುವ ಇವರು, ಮೊದಲು ಕೇವಲ 1 ರೂ.ಗೆ ಈ ತಿಂಡಿಗಳನ್ನು ಒದಗಿಸುತ್ತಿದ್ದರು. ವರ್ಷಗಳ ಕಳೆದಂತೆ ಆ ಬೆಲೆ 2 ರೂ., 3 ರೂ., 4 ರೂ., ಗಳಿಗೆ ಏರಿಕೆಯಾಗಿತ್ತು. ಇದೀಗ 5 ರೂ. ಮಾಡಿದ್ದಾರೆ. ಐದು ವರ್ಷಗಳ ಹಿಂದೆ 5 ರೂ. ಮಾಡಿದ್ದು, ಈವರೆಗೂ ಆ ಬೆಲೆ ಏರಿಕೆ ಮಾಡಿಲ್ಲ.
ಬೆಳಿಗ್ಗೆ ದೋಸಾ, ಫಲಾವ್, ಪುರಿ, ಬಜೆ, ಮಿರ್ಚಿ ತಯಾರಿಸುತ್ತಾರೆ. ಸಂಜೆ ಆಗುತ್ತಿದ್ದಂತೆಯೇ ನಗರದ ತಿಂಡಿ ಪ್ರಿಯರು ತಮ್ಮ ಇಷ್ಟದ ಗರಿಗರಿಯಾದ ಉದ್ದಿನ ವಡೆ, ಸಾಬೂದಾನಿ ವಡೆ ಹಾಗೂ ಪಡ್ಡು ತಿನ್ನಲು ಈ ಹೋಟೆಲಿಗೆ ಮುಗಿ ಬೀಳುತ್ತಾರೆ. ದಿನಕ್ಕೆ ಏನಿಲ್ಲವೆಂದರೂ 300 ರಿಂದ 400 ಗ್ರಾಹಕರು ಇಲ್ಲಿಗೆ ತಪ್ಪದೇ ಬರುತ್ತಾರೆ. ಈಗ ಹೋಟೆಲಿನ ಕೆಲಸದಲ್ಲಿ ದಿಲೀಪ್ ಅವರೊಂದಿಗೆ, ಅವರ ಪುತ್ರ ಆಕಾಶ ಕೂಡ ಕೈ ಜೋಡಿಸಿದ್ದು, 3 ಜನ ಕೆಲಸಗಾರರೂ ಇದ್ದಾರೆ. ರಮಜಾನ್ ಸಮಯದಲ್ಲಿ ಸಂಜೆ ಹೆಚ್ಚಿನ ಆರ್ಡರ್‌ಗಳಿರುತ್ತವೆ. ಮುಸ್ಲಿಂ ಬಾಂಧವರು ರೋಜಾ ಬಿಡುವ ಸಮಯದಲ್ಲಿ ಈ ತಿಂಡಿಗಳನ್ನು ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ.
ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳಾದ ಅಕ್ಕಿ, ಉದ್ದಿನಬೆಳೆ, ಸಾಬೂದಾನಿಯನ್ನು ಮನೆಯಲ್ಲಿಯೇ ನೆನೆ ಹಾಕಿ ಹಿಟ್ಟು ತಯಾರಿಸಲಾಗುತ್ತದೆ. ಕಲಬೆರಕೆಗಳಿಗೆ ನಮ್ಮಲ್ಲಿ ಅವಕಾಶವಿಲ್ಲ. ಉತ್ತಮ ಎಣ್ಣೆಯನ್ನೇ ಬಳಸುವುದರ ಜೊತೆಗೆ ಶುಚಿತ್ವಕ್ಕೆ ಆದ್ಯತೆ ನೀಡಿರುವ ಕಾರಣ ಎರಡು ದಶಕಗಳು ಕಳೆದರೂ ರುಚಿಯಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ ಎನ್ನುತ್ತಾರೆ ದಿಲೀಪ್.
ದಿಲೀಪ್ “ಚಾಚು’ಆದ್ರು
ಸಂಗಮ ಚಿತ್ರ ಮಂದಿರ ಇರುವ ಚಾಚು ಟೀ ಸ್ಟಾಲ್ ರವಿವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 9:00 ರಿಂದ 12:30 ಹಾಗೂ ಸಂಜೆ 4:30 ರಿಂದ 8:30 ರವರೆಗೆ ತೆರೆದಿರುತ್ತದೆ. ಈ ವೇಳೆಯಲ್ಲಿ ಟೀ ಸ್ಟಾಲ್ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಈ ಚಾಚು ಟೀ ಸ್ಟಾಲ್‌ಗೆ ಹೆಸರನ್ನೂ ಸಹ ಗ್ರಾಹಕರೇ ನೀಡಿದ್ದಾರೆ. ಮೊದಲು ಡಬ್ಟಾ ಅಂಗಡಿಯಲ್ಲಿ ಆರಂಭಗೊಂಡಿದ್ದ ಟೀ ಸ್ಟಾಲ್‌ನಲ್ಲಿ ದಿಲೀಪ ಅವರನ್ನು ಗ್ರಾಹಕರು ಚಾಚು ಅಂತ ಕರೆಯುತ್ತಿದ್ದರು. ಇದರಿಂದ ಚಾಚು ಟೀ ಸ್ಟಾಲ್ ಎಂಬ ಹೆಸರು ಬಂತು.
ಲಾಭದ ದೃಷ್ಠಿಯಿಂದ ನಾವು ಈ ಹೊಟೇಲ್ ನಡೆಸುತ್ತಿಲ್ಲ, ಬದಲಿಗೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ರುಚಿ ರುಚಿಯಾದ ತಿಂಡಿ ಒದಗಿಸುವುದೇ ನಮ್ಮ ಉದ್ದೇಶವಷ್ಟೇ. ಹೀಗಾಗಿ ಕಳೆದ ಎರಡು ದಶಕಗಳಿಂದಲೂ ಗ್ರಾಹಕರು ನಮ್ಮ ಕೈ ಹಿಡಿದಿದ್ದಾರೆ.
-ದಿಲೀಪ ಅಣ್ಣಿಗೇರಿ, ಮಾಲೀಕ, ಚಾಚು ಟೀ ಸ್ಟಾಲ್ .
ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.