ಕೈ ಹಿಡಿವ ಕಡಲೆ


Team Udayavani, Oct 22, 2018, 12:28 PM IST

chana.jpg

ಕಡಲೆ ರೈತರ ಕೈ ಹಿಡಿಯುತ್ತೆ. ಇದು ಹಿಂಗಾರಿನ ಬೆಳೆಯಾಗಿದ್ದು ಹೆಚ್ಚು ಮಳೆಯ ಅವಶ್ಯಕತೆ ಇಲ್ಲ. ತಂಪಾದ ವಾತಾವರಣವಿದ್ದರೆ ಸಾಕು ವಾತಾವರಣದಲ್ಲಿರುವ ನೀರಿನಂಶವನ್ನೇ ಹೀರಿಕೊಂಡು ಬೆಳೆಯುತ್ತವೆ…

ನಾವು ತಿನ್ನುವ ಊಟದಲ್ಲಿ ದಿನನಿತ್ಯ ಕನಿಷ್ಠ 80 ಗ್ರಾಂ.ಗಳಷ್ಟಾದರೂ ದ್ವಿದಳ ಧಾನ್ಯದ ಕಾಳುಗಳು ಇರಲೇಬೇಕು!
ಹೌದು, ದ್ವಿದಳ ಧಾನ್ಯಗಳಿಗೆ ಇರುವ ಮಹತ್ವವೇ ಅಂಥದ್ದು. ಆಹಾರದಲ್ಲಿ ಮುಖ್ಯವಾಗಿ ಇರಬೇಕಾದ ಪ್ರೊಟೀನ್‌/ ಸಸಾರಜನಕ ಅಂಶವನ್ನು ಇವು ಒದಗಿಸುತ್ತವೆ. ಕಾಳುಗಳಲ್ಲಿ 39; ಸಿ39; ಜೀವಸತ್ವ ಹೆಚ್ಚಾಗಿದ್ದು, ಇವುಗಳನ್ನು ನಿರಂತರವಾಗಿ ಸೇವಿಸಿದರೆ ಅನಾರೋಗ್ಯ ನಿಮ್ಮ ಹತ್ತಿರವೂ ಸುಳಿಯಲ್ಲ. ಈ ಹಿನ್ನೆಲೆಯಲ್ಲಿಯೇ ಜಗತ್ತಿನಾದ್ಯಂತ ದ್ವಿದಳ ಧಾನ್ಯಗಳಿಗೆ ಅಧಿಕ ಬೇಡಿಕೆ ಇದೆ.

 ಅದರಲ್ಲೂ ಕಡಲೆ ರೈತರ ಕೈ ಹಿಡಿಯುತ್ತೆ. ಇದು ಹಿಂಗಾರಿನ ಬೆಳೆಯಾಗಿದ್ದು ಹೆಚ್ಚು ಮಳೆಯ ಅವಶ್ಯಕತೆ ಇಲ್ಲ. ತಂಪಾದ ವಾತಾವರಣವಿದ್ದರೆ ಸಾಕು ವಾತಾವರಣದಲ್ಲಿರುವ ನೀರಿನಂಶವನ್ನೇ ಹೀರಿಕೊಂಡು ಬೆಳೆಯುತ್ತವೆ. ಅಕ್ಟೋಬರ್‌, ನವೆಂಬರ್‌ನಲ್ಲಿ ಬಿತ್ತುವುದು ಸೂಕ್ತ. ಇದನ್ನು ಎಲ್ಲ ಥರದ ಮಣ್ಣಿನಲ್ಲಿಯೂ ಬೆಳೆಯಬಹುದಾದರೂ ಎರೆ (ಕಪ್ಪು) ಮಣ್ಣಿನಲ್ಲಿ ಒಳ್ಳೆಯ ಇಳುವರಿ ಬರುತ್ತದೆ. 

ಬೀಜ ಬಿತ್ತನೆ ಹೇಗೆ?
ಕಡಲೆಯಲ್ಲಿ ಕಂದು, ಹಳದಿ, ಕಪ್ಪು, ಬಿಳಿ ಹೀಗೆ ನಾಲ್ಕು ಬಣ್ಣದವುಗಳಿವೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದ ಕಡಲೆ ಬೆಳೆಯುತ್ತಾರೆ. ಆದರೂ ಅಣ್ಣಿಗೇರಿ- 1 ಕಡಲೆ ಅತ್ಯಂತ ಜನಪ್ರಿಯ ತಳಿ. ಜೊತೆಗೆ ಬಿ.ಜಿ.ಡಿ – 103 ಹಾಗೂ ಜೆ.ಜಿ – 11 ಕೂಡ ಅಧಿಕ ಇಳುವರಿ ಕೊಡುವ ತಳಿಗಳು.

ಮುಂಗಾರಿನ ಬೆಳೆಯ ನಂತರ ಜಮೀನನ್ನು ಎರಡು ಸಲ ಉಳುಮೆ ಮಾಡಿ ಕೊನೆಗೊಮ್ಮೆ ಕಪ್ಪು ಮಣ್ಣಿನಲ್ಲಿ ಜಮೀನಿನ ತುಂಬಾ ಮಡಿ ಆಗುವಂತೆ ಕುಂಟೆಯ ಸಹಾಯದಿಂದ ಮಣ್ಣು ಎತ್ತರಿಸಬೇಕು. ಬಿತ್ತನೆಗೆ ಎರಡು ವಾರ ಮೊದಲು ಎಕರೆಗೆ ಕೇವಲ 2- 3 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಿ. ಮೊದಲೇ ಹೇಳಿದಂತೆ ದ್ವಿದಳ ಧಾನ್ಯಗಳಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯ ಇಲ್ಲ. ಹೊಲ ಫ‌ಲವತ್ತಾಗಿದ್ದರೆ ಅಷ್ಟೇ ಸಾಕು, ಕೂರಿಗೆಯ ಸಹಾಯದಿಂದ ಒಂದು ಅಥವಾ ಒಂದೂವರೆ ಅಡಿ ಅಗಲದ ಸಾಲಿನಲ್ಲಿ ಅರ್ಧ ಅಡಿಗೊಂದು ಬೀಜ ಬೀಳುವಂತೆ ಬಿತ್ತನೆ ಮಾಡಿ. 

ನಿರ್ವಹಣೆ ಹೇಗೆ?
ಕಡಲೆಯ ಹೊಲದಲ್ಲಿ ಮಾಮೂಲಾಗಿ ಹೆಚ್ಚಿನ ಕಳೆಯ ಕಾಟ ಇರಲ್ಲ. ಆದರೂ ಎರಡೂರು ಸಲ ಎಡೆಕುಂಟೆ ಹೊಡೆದು ಮಣ್ಣು ಸಡಿಲ ಮಾಡಿ, ಬಿರುಕುಗಳಿದ್ದರೆ ಮುಚ್ಚುವ ಹಾಗೆ ಮಾಡಿ. ಹಾಗೆಯೇ ಕೊನೆಯ ಸಲ ಎಡೆಕುಂಟೆ ಹೊಡೆಯುವಾಗ ಮಳೆ ಬಂದರೆ ನೀರು ಸಂಗ್ರಹವಾಗುವಂತೆ ಸ್ವಲ್ಪ ಮಣ್ಣನ್ನು ಗಿಡದ ಬುಡಕ್ಕೆ ಒತ್ತಿರಿ. ಪ್ರತಿ ಸಲ ಎಡೆಕುಂಟೆ ಹೊಡೆಯುವಾಗ ತಂಪಾದ ವಾತಾವರಣದಲ್ಲಿ ಇಟ್ಟ ಒಳ್ಳೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಮುಂಗಾರಿನ ಬೆಳೆಗಾಗಿ ತಂದ ಇತರ ಸೂಕ್ಷ್ಮ ಪೋಷಕಾಂಶಗಳು ಉಳಿದಿದ್ದರೆ ಅವುಗಳನ್ನು ಮಿಕ್ಸ್‌ ಮಾಡಿ ಎರಚಬೇಕು. ತೀರ ರಾಸಾಯನಿಕ ಗೊಬ್ಬರ ಕೊಡಲೇಬೇಕು ಅನಿಸಿದರೆ ಎಕರೆಗೆ ಹೆಚ್ಚೆಂದರೆ ಹತ್ತು ಕೇಜಿಯಷ್ಟು ಡಿ.ಎ.ಪಿ ಗೊಬ್ಬರ ಮಾತ್ರ ಕೊಡಿ ಸಾಕು. ಇದರ ನಿವಾರಣೆಗಾಗಿ ಒಂದೆರಡು ಕೀಟಗಳು ಕಂಡಕೂಡಲೇ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯ ಸಿಂಪಡಿಸಬೇಕು. ಜೊತೆಗೆ ಕಡಲೆ ಬಿತ್ತುವಾಗ ಕಡಲೆ ಜೊತೆ ಒಂದಿಷ್ಟು ಸೂರ್ಯಕಾಂತಿ ಹಾಗೂ ಜೋಳದ ಬೀಜಗಳನ್ನು ಮಿಕ್ಸ್‌ ಮಾಡಿ ಬಿತ್ತಬೇಕು. ಆಗ ಪರಭಕ್ಷಕ ಪಕ್ಷಿಗಳು ಇದರ ಮೇಲೆ ಕುಳಿತು ಕೀಟಗಳನ್ನು ಹುಡುಕಿ ತಿನ್ನುತ್ತವೆ.

ರೋಗ ಬಂದಾಗ…
ಕಡಲೆ ಬೆಳೆಗೆ ಸಿಡಿರೋಗ, ಬೂದಿರೋಗ, ಗೊಡ್ಡುರೋಗ ಬರುವುದು ಸಾಮಾನ್ಯ. ಬಿತ್ತುವ ಮೊದಲು ಬೀಜಗಳಿಗೆ ಟ್ರೈಕೊಡಮಾರ್‌ ಜೈವಿಕ ಶಿಲಿಂದ್ರದಿಂದ ಬೀಜೋಪಚಾರ ಮಾಡಿ ಬಿತ್ತಿದರೆ, ಸಿಡಿ ರೋಗ ಬರುವುದಿಲ್ಲ. ಬೂದಿರೋಗ ಬಂದಾಗ, 1 ಲೀ. ನೀರಿಗೆ ಅರ್ಧ ಗ್ರಾಮ್‌ನಷ್ಟು ಕಾರ್ಬನ್‌ ಡೈಜಿಮ್‌ ಬೆರೆಸಿ ಸಿಂಪಡಿಸಬೇಕು. ಗೊಡ್ಡು ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅಂಥ ಗಿಡಗಳನ್ನು ಕಿತ್ತೆಸೆಯುವುದೇ ಸೂಕ್ತ. ಆದಷ್ಟು ಒಳ್ಳೆಯ ಬೀಜಗಳನ್ನು ನೆಟ್ಟರೆ ಇದರ ತಲೆಬಿಸಿ ಇರದು.
-ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.